ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯಗಳಲ್ಲಿ ಒಂದೆಂದು ಪ್ರಶಂಸಿಸಲ್ಪಟ್ಟಿರುವ ಭಾರತೀಯ ಸಶಸ್ತ್ರ ಪಡೆಗಳು ದೇಶದ ಹೆಮ್ಮೆಯಾಗಿವೆ. ದೇಶದಲ್ಲಿ ಪ್ರತಿಯೊಬ್ಬ ಸೈನಿಕನು ಅತ್ಯಂತ ಗೌರವ, ವಿಶೇಷ ಪ್ರೀತಿಗೆ ಪಾತ್ರವಾಗಿದ್ದಾರೆ. ನಮ್ಮ ರಾಷ್ಟ್ರಕ್ಕಾಗಿ ಅವರು ಮಾಡುವ ಸೇವೆಗೆ ಗೌರವದ ಸಂಕೇತವಾಗಿ ಅವರಿಗೆ ಹಲವಾರು ಪ್ರಯೋಜನಗಳನ್ನು ನೀಡಲಾಗುತ್ತದೆ.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ಅಂತಹ ಒಂದು ಪ್ರಯೋಜನವೆಂದರೆ ಆರ್ಮಿ ಕ್ಯಾಂಟೀನ್‌ನಲ್ಲಿ ಒಬ್ಬರು ಸಬ್ಸಿಡಿ ದರದಲ್ಲಿ ಕಾರು ಸೇರಿದಂತೆ ಎಲ್ಲವನ್ನೂ ಖರೀದಿಸಬಹುದು. ಆದರೆ ಸಾಮಾನ್ಯ ವಸ್ತುಗಳಂತಲ್ಲದೆ ಕ್ಯಾಂಟೀನ್‌ನಿಂದ ಕಾರನ್ನು ಖರೀದಿಸುವುದು ಸ್ವಲ್ಪ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ, ಇದನ್ನು ನಾವು ಈ ಲೇಖನದಲ್ಲಿ ನಿಮಗಾಗಿ ಸರಳಗೊಳಿಸಿದ್ದೇವೆ.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ಕಾರು ಪಡಿಯಲು ಅರ್ಹತೆ

ಭಾರತೀಯ ಸೇನೆ, ನೌಕಾಪಡೆ, ವಾಯುಸೇನೆಗಳಲ್ಲಿ ಸೇವೆ ಸಲ್ಲಿಸುತ್ತಿರಬೇಕು

ಮೃತ ರಕ್ಷಣಾ ಅಧಿಕಾರಿಗಳ ಪತ್ನಿ ಮತ್ತು ಪೋಷಕರಾಗಿರಬೇಕು

ಉಳಿದಂತೆ ಎಲ್ಲಾ ಕಮಿಷನರ್ ಅಧಿಕಾರಿಗಳು ಮತ್ತು ಮಾಜಿ ಸೈನಿಕ ರಕ್ಷಣಾ ಸಿಬ್ಬಂದಿ ಸಿಎಸ್‌ಡಿ ಮೂಲಕ ಶ್ರೇಣಿಯನ್ನು ಲೆಕ್ಕಿಸದೆ ಕಾರುಗಳನ್ನು ಖರೀದಿಸಬಹುದು.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ಸಿಎಸ್‌ಡಿ (ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್) ಮಳಿಗೆಯು ರಕ್ಷಣಾ ಸಚಿವಾಲಯದ ಅಧೀನದಲ್ಲಿದೆ. ಈ ಸಿಎಸ್‌ಡಿ ಕ್ಯಾಂಟೀನ್‌ನಲ್ಲಿ ನೀಡಲಾಗುವ ಇತರೆ ಹೆಚ್ಚಿನ ವಸ್ತುಗಳಿಗಿಂತ ಭಿನ್ನವಾಗಿ ಕಾರುಗಳು ಸಂಸ್ಥೆಯ ಬೇಡಿಕೆಯ ಮಾರಾಟದ ಐಟಂಗಳಾಗಿವೆ.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

AFD ವಸ್ತುಗಳು CSD ಕ್ಯಾಂಟೀನ್ ಡೀಲರ್ ಮತ್ತು ಗ್ರಾಹಕರ ನಡುವೆ ಕೇವಲ ಮಧ್ಯವರ್ತಿಯಾಗಿರುತ್ತವೆ. ಆದ್ದರಿಂದ ನೀವು ಸಿಎಸ್‌ಡಿ ಕ್ಯಾಂಟೀನ್‌ನಿಂದ ಕಾರನ್ನು ಖರೀದಿಸಬೇಕಾದರೆ, ನೀವು ಒಟ್ಟು ಮೊತ್ತವನ್ನು ಸಿಎಸ್‌ಡಿಗೆ ಪಾವತಿಸಬೇಕಾಗುತ್ತದೆ. ನಂತರ ಕಾರ್ ಡೀಲರ್ ವಾಹನವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ಶ್ರೇಣಿ-ಆಧಾರಿತ ಗರಿಷ್ಠ ಕಾರು ಮೌಲ್ಯ

ಸಿಎಸ್‌ಡಿ ಕ್ಯಾಂಟೀನ್‌ನಿಂದ ಕಾರನ್ನು ಖರೀದಿಸಲು, ಪಾವತಿಯ ಮಟ್ಟಕ್ಕೆ ಅನುಗುಣವಾಗಿ ವಿಂಗಡಿಸಲಾದ ಗರಿಷ್ಠ ಕಾರ್ ಮೌಲ್ಯವನ್ನು ನೀವು ಮೊದಲು ತಿಳಿದುಕೊಳ್ಳಬೇಕು.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ಪಾವತಿ ಹಂತ 10-18

CSD ಯಿಂದ ನಿಮ್ಮ ಕಾರಿನ ಖರೀದಿಯು GST ಹೊರತುಪಡಿಸಿ 15 ಲಕ್ಷ ರೂಪಾಯಿಗಳನ್ನು ಮೀರುವಂತಿಲ್ಲ. ನೀವು ಗರಿಷ್ಠ 2500cc ಕ್ಯೂಬಿಕ್ ಸಾಮರ್ಥ್ಯದ ಕಾರನ್ನು ಖರೀದಿಸಬಹುದು. ಎರಡನೇ ಕಾರನ್ನು ಖರೀದಿಸುತ್ತಿದ್ದರೆ ಎರಡರ ನಡುವಿನ ಅಂತರ ಎಂಟು ವರ್ಷಗಳಾಗಿರಬೇಕು.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ಪಾವತಿ ಹಂತ 7-9

ಈ ಶ್ರೇಣಿಯಲ್ಲಿ, ಖರೀದಿಯು ಗರಿಷ್ಠ 7 ಲಕ್ಷ ರೂ. ಮತ್ತು ಗರಿಷ್ಠ 1400 ಸಿಸಿ ಮೀರುವಂತಿಲ್ಲ. ಇದು ಮೊದಲ ಕಾರನ್ನು ಖರೀದಿಸಲು ಅರ್ಹತೆಯಾಗಿದೆ. ಎರಡನೆಯದು JCO ಮತ್ತು ಮೂರನೆಯದು ನಿವೃತ್ತಿಯ ಸಮಯವಾಗಿದೆ. JCO (ಜೂನಿಯರ್ ಕಮಿಷನ್ ಆಫಿಸರ್) ನೇರವಾಗಿ ದಾಖಲಾಗಿದ್ದರೆ, ಅವರು ಐದು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಕಾರನ್ನು ಖರೀದಿಸಬಹುದು. ಆದರೆ ಎಲ್ಲಾ ಖರೀದಿಗಳ ನಡುವಿನ ಅಂತರವು 8 ವರ್ಷಗಳಾಗಿರಬೇಕು.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ಪಾವತಿ ಹಂತ 3A-6

ಕಾರು ಖರೀದಿಸಲು ಕನಿಷ್ಠ ಸೇವೆ ಐದು ವರ್ಷಗಳಾಗಿರುತ್ತದೆ. ಈ ಸೇವೆಗಾಗಿ ಕಾರು ರೂ. 6 ಲಕ್ಷದೊಳಗಿರಬೇಕು ಮತ್ತು 1400 ಸಿಸಿ ಎಂಜಿನ್ ಇರಬೇಕು. ಅಲ್ಲದೆ, ಒಬ್ಬರು ಮೊದಲ ವಾಹನವನ್ನು ಸೇವೆಯ ಸಮಯದಲ್ಲಿ ಮತ್ತು ಮುಂದಿನದನ್ನು ನಿವೃತ್ತಿಯ ನಂತರ ಖರೀದಿಸಬಹುದು. ಎರಡೂ ಖರೀದಿಗಳ ನಡುವಿನ ಅಂತರವು ಎಂಟು ವರ್ಷಗಳಾಗಿರಬೇಕು. ಫಲಾನುಭವಿಯು ಮೇಲಿನ ಸೌಲಭ್ಯವನ್ನು ಪಡೆಯದಿದ್ದರೆ, ಆತನ ನಿಧನದ ಬಳಿಕ ಪತ್ನಿ/ಅವಲಂಬಿತರೂ ಸಹ ಕಾರನ್ನು ಖರೀದಿಸಬಹುದು.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

CSD ಕ್ಯಾಂಟೀನ್ ಮೂಲಕ ಕಾರನ್ನು ಖರೀದಿಸಲು ಕ್ರಮಗಳು

ನೋಂದಣಿ

AFD CSD ಪೋರ್ಟಲ್‌ನಲ್ಲಿ ನೋಂದಾಯಿಸುವುದು ಮೊದಲ ಹಂತವಾಗಿದೆ. ಅದನ್ನು ಮಾಡಲು, ಉದ್ಯೋಗ ಸ್ಥಿತಿ ಮತ್ತು ಸಂಸ್ಥೆಯ ಚಿಪ್ ಸಂಖ್ಯೆ ಮುಂತಾದ ಎಲ್ಲಾ ವಿವರಗಳನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಬೇಕು. ಇದಾದ ನಂತರ, ನೋಂದಣಿಯ ದೃಢೀಕರಣಕ್ಕಾಗಿ ನಿರೀಕ್ಷಿಸಬೆಕಾಗುತ್ತದೆ. ಇದು ಸಾಮಾನ್ಯವಾಗಿ ಒಂದು ದಿನದೊಳಗೆ ಆಗುತ್ತದೆ, ಒಂದು ವೇಳೆ ಆಗದಿದ್ದರೆ ಎರಡು ಮೂರು ದಿನಗಳವರೆಗೆ ತೆಗೆದುಕೊಳ್ಳಬಹುದು.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ನೋಂದಣಿ ನಂತರ

ನೋಂದಣಿಯ ನಂತರ ನೀವು ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ನಿಮ್ಮ ಕಾರನ್ನು ಆಯ್ಕೆಮಾಡುವಂತಹ ಮುಂದಿನ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಮುಂದಿನ ಹಂತವು CSD ಡೀಲರ್ ಅನ್ನು ಕಂಡುಹಿಡಿಯುವುದು, ಇದನ್ನು ನೀವು ವೆಬ್‌ಸೈಟ್‌ನಿಂದ ಪರಿಶೀಲಿಸಬಹುದು.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

CSD ಕ್ಯಾಂಟೀನ್‌ನಲ್ಲಿ ಕಾರಿನ ಲಭ್ಯತೆಯನ್ನು ಡೀಲರ್ ಪಟ್ಟಿ ಮಾಡಿದ್ದರೆ ಅದರ ಕುರಿತು ಚರ್ಚಿಸಬಹುದು. ನಂತರ ಕಾರನ್ನು ಬುಕ್ ಮಾಡಿಕೊಂಡು ನಿಮ್ಮ ಕಾರು ನಿಮಗೆ ಅಲಾಟ್ ಆಗುವವರೆಗೆ ಕಾಯಬೇಕು. ಆ ಸಮಯದಲ್ಲಿ ನೀವು ಹಣವನ್ನು ಉಳಿಸಬಹುದು ಅಥವಾ ನಿಮ್ಮ ಸಾಲದ ಅರ್ಜಿಯನ್ನು ಪ್ರಕ್ರಿಯೆಗೊಳಿಸಬಹುದು.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ದಾಖಲೆ ಮತ್ತು ಖರೀದಿ ಆದೇಶ ನೀಡಿಕೆ

ಮುಂದಿನ ಹಂತಕ್ಕಾಗಿ ಸಿಎಸ್‌ಡಿ ಸೈಟ್‌ಗಾಗಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ನೀವು ಸಿದ್ಧವಾಗಿಟ್ಟುಕೊಳ್ಳಬೇಕು. ಡೀಲರ್‌ನಿಂದ ಲಭ್ಯತೆ ಪ್ರಮಾಣಪತ್ರ, ಬ್ಯಾಂಕ್‌ನಿಂದ ಪಾವತಿ ರಸೀದಿ, ಸಾಲ ಮಂಜೂರಾತಿ ಪತ್ರ, ಕ್ಯಾಂಟೀನ್ ದಿನಸಿ ಸಂಖ್ಯೆ ಮತ್ತು ಚಿಪ್ ಸಂಖ್ಯೆಯನ್ನು ಸಿದ್ದವಾಗಿಟ್ಟುಕೊಳ್ಳಿ.

ಆರ್ಮಿ ಕ್ಯಾಂಟೀನ್‌ನಿಂದ ಸಬ್ಸಿಡಿ ದರದಲ್ಲಿ ಕಾರು ಖರೀದಿಸುತ್ತೀರಾ? ಹಾಗಾದ್ರೆ ನಿಮ್ಮ ಅರ್ಹತೆ ತಿಳಿಯಿರಿ

ಇದಾದ ಬಳಿಕ ದಾಖಲೆಗಳ ಪರಿಶೀಲನೆ ನಡೆಯಲಿದ್ದು ಮುಂದಿನ ಎರಡು-ಮೂರು ದಿನಗಳಲ್ಲಿ ಕಾರಿನ ಸ್ಥಳೀಯ ಖರೀದಿ ಆದೇಶವನ್ನು ನೀಡಲಾಗುತ್ತದೆ. ನೀವು ಹತ್ತಿರದ ಕ್ಯಾಂಟೀನ್ ಸ್ಟೇಷನ್ ಕಚೇರಿಯಿಂದ ರಸೀದಿಯನ್ನು ಸಂಗ್ರಹಿಸಬೇಕು. ನೀವು ರಶೀದಿಯನ್ನು ವಿತರಕರಿಗೆ ಸಲ್ಲಿಸಬೇಕು, ಆ ನಂತರ ನೀವು ನಿಮ್ಮ ಕಾರನ್ನು ಪಡೆಯಬಹುದು.

Most Read Articles

Kannada
English summary
Buying a car at a subsidized rate from an army canteen So know your eligibility
Story first published: Thursday, September 22, 2022, 11:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X