ಕಾರ್ ಮೆಕಾನಿಕ್ ಮೋಸ ಮಾಡ್ತಾರೆ ಜೋಕೆ!

ನೀವು ಕಾರು ರಿಪೇರಿಗೆ ಕೊಟ್ಟಾಗ ರಿಪೇರಿ ಮತ್ತು ಮೇಟೆಂನ್ಸ್ ಸಂಬಂಧಿಸಿದ ಹೆಚ್ಚುವರಿ ರಿಪೇರಿ ಮಾಡಿಸಿಕೊಳ್ಳುವಂತೆ ನಿಮಗೆ ಸೂಚಿಸುತ್ತಾನೆ. ಅಂದರೆ ಹೇರ್ ಕಟ್ಟಿಂಗ್ ಗೆ ಹೋದಾಗ ಬಾರ್ಬರ್ ಆಯಿಲ್ ಮಸಾಜ್ ಮಾಡಬೇಕೆ ಅಂತ ಕೇಳುವ ಹಾಗೇ.
ಇಂತಹ ಸಮಯದಲ್ಲಿ ಎಕ್ಸ್ಟ್ರಾ ಕೆಲಸಕ್ಕೆ ಎಷ್ಟು ಸಮಯ ಹಿಡಿಯುತ್ತೆ ಮತ್ತು ಎಷ್ಟು ರುಪಾಯಿ ಖರ್ಚಾಗುತ್ತೆ ಅಂತ ಮೆಕಾನಿಕ್ ಬಳಿ ವಿಚಾರಿಸಿರಿ. ಉದಾಹರಣೆಗೆ ಕಾರಿನ ವಾಟರ್ ಪಂಪ್ ಅಥವಾ ಬೆಲ್ಟ್ ಬದಲಾಯಿಸಬೇಕು ಎಂದು ಹೇಳಬಹುದು. ಎಷ್ಟು ಸಮಯ ಬೇಕು ಮತ್ತು ಲೇಬರ್ ಚಾರ್ಜ್ ಎಷ್ಟು ಅಂತ ಕೇಳಿ.
ಯಾಕೆಂದರೆ ಕಾರಿನ ಬೆಲ್ಟ್ ಬಿಚ್ಚಿಸೋದು ಸುಲಭ. ನಂತರ ಇನ್ನೊಂದು ಸಮಸ್ಯೆ ಕಂಡುಬರಬಹುದು. ಅಥವಾ ಬೆಲ್ಟ್ ಸಂಬಂಧಿಸಿದ ಇನ್ನೊಂದು ಪಾರ್ಟ್ ಬದಲಾಯಿಸಿದೆ ಅಂತ ಆತ ಆಮೇಲೆ ಹೇಳಬಹುದು.
ರಿಪೇರಿ ಮುಗಿಸಿದ ನಂತರ ಹಳೆಯ ಬಿಡಿಭಾಗಗಳನ್ನು ಕೇಳಿ ಪಡೆಯಲು ಮರೆಯಬೇಡಿ. ಹೊಸತರ ಅವಶ್ಯಕತೆ ಇತ್ತೇ ಎಂದು ಹಳೆಯದನ್ನು ಪಡೆದಾಗ ನಿಮಗೆ ಅರಿವಾಗಬಹುದು.
ಕಾರು ಖರೀದಿಸುವಾಗ ಟೈರ್ ಗೆ ಎಷ್ಟು ದಿನ ಗ್ಯಾರಂಟಿ ನೀಡಿದ್ದಾರೆ ತಿಳಿದುಕೊಳ್ಳಿ. ಕೆಲವೊಮ್ಮೆ ಡೀಲರುಗಳು ನಿಮಗೆ ಉಚಿತ ಟೈರ್ ಅಥವಾ ವಿಶೇಷ ಆಫರ್ ನೀಡಬಹುದು. ಮೆಕಾನಿಕ್ ಬಳಿ ಹೋಗುವಾಗ ವಾರೆಂಟಿ ಮುಗಿಯದ ಟೈರ್ ಇತ್ಯಾದಿಗಳನ್ನು ಅನಗತ್ಯವಾಗಿ ಬದಲಾಯಿಸಬೇಡಿ.
ಬ್ರೇಕ್ ರಿಪೇರಿಗೆ ಹೆಚ್ಚಿನ ಅಸ್ಥೆ ವಹಿಸಿರಿ. ಪ್ರತಿಕಾರು ಕೂಡ ವಿಭಿನ್ನ ಬ್ರೇಕ್ ವ್ಯವಸ್ಥೆ ಹೊಂದಿರುತ್ತದೆ. ಕೆಲವೊಮ್ಮೆ ಮೆಕಾನಿಕ್ ಗಳು ಅಗ್ಗದ ಬಿಡಿಭಾಗಗಳನ್ನು ಬ್ರೇಕ್ ರಿಪೇರಿಗೆ ಬಳಸಬಹುದು. ಇದು ಅಪಾಯಕಾರಿ.
ಕಾರಿನಲ್ಲಿ ಸವಾರಿ ಮಾಡುವಾಗ ನಿಮಗೆ ಅರಿವಾಗಬಹುದು. ಇದಕ್ಕೆ ರಿಪೇರಿ ಅಗತ್ಯವಿದೆಯೇ, ಬ್ರೇಕ್ ಪ್ಯಾಡ್ ಬದಲಾಯಿಸುವ ಅಗತ್ಯವಿದೆಯೇ ಇತ್ಯಾದಿ. ಅಗತ್ಯವಿದಲ್ಲಿ ಬದಲಾಯಿಸಿ. ಕೆಲವೊಮ್ಮೆ ಮೆಕಾನಿಕ್ ಗಳು ಸರಿಯಾಗಿ ಕಾರ್ಯನಿರ್ವಹಿಸುವ ಬಿಡಿಭಾಗಗಳನ್ನು ತೆಗೆದು ಹೊಸದು ಹಾಕಿಕೊಳ್ಳುವಂತೆ ಸೂಚಿಸಬಹುದು.
ಕೊನೆಯದಾಗಿ ಒಬ್ಬ ಒಳ್ಳೆಯ ಮೆಕಾನಿಕ್ ಬಳಿ ಹೋಗಿರಿ. ಹಾಗಂತ ಗಣಿಯಲ್ಲಿ ವಜ್ರ ಪತ್ತೆ ಮಾಡುವಷ್ಟು ಪರಿಣತ ಬೇಕಂತ ಹೇಳುತ್ತಿಲ್ಲ. ನಿಮ್ಮ ವಾಹನ ರಿಪೇರಿ ಸಂದರ್ಭದಲ್ಲಿ ಸರಿಯಾದ ಮಾಹಿತಿ, ಸಲಹೆ ನೀಡುವವ, ಪರ್ಯಾಯ ಆಯ್ಕೆಗೆ ಅವಕಾಶ ನೀಡುವವನನ್ನು ಆಯ್ಕೆ ಮಾಡಿ. ಮೆಕಾನಿಕ್ ಮುಖ ನೋಡಿದಾಗ ಇವ ಕಳ್ಳನೋ, ಮಲ್ಲನೋ, ಸುಳ್ಳನೋ ಎಂಬುದನ್ನು ಗುರುತಿಸುವ ಛಾತಿ ನಿಮ್ಮಲ್ಲಿರಲಿ.


Click it and Unblock the Notifications








