45 ಲೀಟರ್ ಫ್ಯೂಯಲ್ ಟ್ಯಾಂಕಿಗೆ 48 ಲೀಟರ್ ಪೆಟ್ರೋಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಕಾಂಚೀಪುರಂನ ಪೆಟ್ರೋಲ್ ಬಂಕ್'ನಲ್ಲಿ ಪೆಟ್ರೋಲ್ ತುಂಬಿಸುವ ಬಗ್ಗೆ ಸಮಸ್ಯೆ ಉದ್ಭವಿಸಿ ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೆಟ್ರೋಲ್ ಬಂಕ್ ಉದ್ಯೋಗಿ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯಕ್ಕಿಂತ ಹೆಚ್ಚು ಪೆಟ್ರೋಲ್ ತುಂಬಿಸಿರುವುದಾಗಿ ಹೇಳಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣ.

45 ಲೀಟರ್ ಫ್ಯೂಯಲ್ ಟ್ಯಾಂಕಿಗೆ 48 ಲೀಟರ್ ಪೆಟ್ರೋಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪೆಟ್ರೋಲ್ ತುಂಬಿಸಲು ಹೇಗೆ ಸಾಧ್ಯ ಎಂಬ ಬಗ್ಗೆ ಗ್ರಾಹಕರು ಹಾಗೂ ಪೆಟ್ರೋಲ್ ಬಂಕ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಪೆಟ್ರೋಲ್ ಬಂಕ್'ಗಳಲ್ಲಿ ಗ್ರಾಹಕರು ಹಾಗೂ ಅಲ್ಲಿನ ಸಿಬ್ಬಂದಿ ನಡುವೆ ಜಟಾಪಟಿ ನಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಕೆಲವೊಮ್ಮೆ ತಪ್ಪುಗ್ರಹಿಕೆಯಿಂದಾಗಿ ಪೆಟ್ರೋಲ್ ಬಂಕ್'ಗಳಲ್ಲಿ ಅಚಾತುರ್ಯ ಸಂಭವಿಸುತ್ತದೆ.

45 ಲೀಟರ್ ಫ್ಯೂಯಲ್ ಟ್ಯಾಂಕಿಗೆ 48 ಲೀಟರ್ ಪೆಟ್ರೋಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಇದೇ ರೀತಿಯ ಘಟನೆಯು ಕಾಂಚೀಪುರಂ ಪೆಟ್ರೋಲ್ ಬಂಕ್'ನಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

45 ಲೀಟರ್ ಫ್ಯೂಯಲ್ ಟ್ಯಾಂಕಿಗೆ 48 ಲೀಟರ್ ಪೆಟ್ರೋಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಗ್ರಾಹಕರೊಬ್ಬರು ತಮ್ಮ ಫೋರ್ಡ್ ಐಕಾನ್ ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ದಾರೆ. ಈ ಕಾರಿನ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ 45 ಲೀಟರ್'ಗಳಾಗಿದೆ. ಆದರೆ ಪೆಟ್ರೋಲ್ ಬಂಕ್ ಸಿಬ್ಬಂದಿ 48 ಲೀಟರ್ ಪೆಟ್ರೋಲ್ ತುಂಬಿಸಿರುವುದಾಗಿ ಹೇಳಿರುವುದು ಸಮಸ್ಯೆ ಸೃಷ್ಟಿಸಿದೆ.

45 ಲೀಟರ್ ಫ್ಯೂಯಲ್ ಟ್ಯಾಂಕಿಗೆ 48 ಲೀಟರ್ ಪೆಟ್ರೋಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಫ್ಯೂಯಲ್ ಟ್ಯಾಂಕ್‌ಗಳನ್ನು ಸಾಮಾನ್ಯವಾಗಿ ಕಾರು ತಯಾರಕ ಕಂಪನಿಗಳು ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಪ್ರಮಾಣದ ಇಂಧನ ತುಂಬಿಸುವ ರೀತಿಯಲ್ಲಿವಿನ್ಯಾಸಗೊಳಿಸಲಾಗಿರುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

45 ಲೀಟರ್ ಫ್ಯೂಯಲ್ ಟ್ಯಾಂಕಿಗೆ 48 ಲೀಟರ್ ಪೆಟ್ರೋಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಈ ಕಾರಣಕ್ಕೆ ಹಲವು ಕಾರುಗಳಲ್ಲಿರುವ ಫ್ಯೂಯಲ್ ಟ್ಯಾಂಕ್'ಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಇಂಧನ ಹೊಂದುವ ಸಾಮರ್ಥ್ಯವನ್ನು ಹೊಂದಿರುತ್ತವೆ.ಇದರ ಜೊತೆಗೆ ಪೆಟ್ರೋಲ್ ಹಾಕುವ ಪೈಪ್'ನಲ್ಲಿರುವ ಸೆನ್ಸಾರ್ ಫ್ಯೂಯಲ್ ಟ್ಯಾಂಕ್ ಭರ್ತಿಯಾದಾಗ ಆಟೋಮ್ಯಾಟಿಕ್ ಆಗಿ ಆಫ್ ಆಗುತ್ತದೆ.

45 ಲೀಟರ್ ಫ್ಯೂಯಲ್ ಟ್ಯಾಂಕಿಗೆ 48 ಲೀಟರ್ ಪೆಟ್ರೋಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಆದರೆ ಕೆಲವೊಮ್ಮೆ ಈ ಟಾಪ್-ಅಪ್ ಫ್ಯೂಯಲ್ ಪೈಪ್ ಅನ್ನು ಹೊರತೆಗೆದು ಇಂಧನ ತುಂಬಿದಾಗ ಪ್ರಮಾಣವು ಹೆಚ್ಚಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ವಾಹನ ತಯಾರಕ ಕಂಪನಿಗಳು ತಮ್ಮ ಮ್ಯಾನುವಲ್'ಗಳಲ್ಲಿ ಫ್ಯೂಯಲ್ ಟ್ಯಾಂಕ್ ಬಗ್ಗೆ ಹೇಳಿರುವುದನ್ನೇ ಅಂತಿಮವೆಂಬ ತೀರ್ಮಾನಕ್ಕೆ ಬರಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

45 ಲೀಟರ್ ಫ್ಯೂಯಲ್ ಟ್ಯಾಂಕಿಗೆ 48 ಲೀಟರ್ ಪೆಟ್ರೋಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಆದರೆ ಕೆಲವು ಕಾರುಗಳಲ್ಲಿರುವ ಫ್ಯೂಯಲ್ ಟ್ಯಾಂಕ್'ಗಳು ನಿಗದಿಗಿಂತ ಹೆಚ್ಚುವರಿ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೆಚ್ಚುವರಿ ಸಾಮರ್ಥ್ಯದವಿದ್ದರೂ ವಾಹನ ತಯಾರಕ ಕಂಪನಿಗಳು ಶಿಫಾರಸು ಮಾಡಿರುವ ಪ್ರಮಾಣಕ್ಕೆ ಇಂಧನ ತುಂಬಿಸಿದರೆ ಒಳ್ಳೆಯದು.

45 ಲೀಟರ್ ಫ್ಯೂಯಲ್ ಟ್ಯಾಂಕಿಗೆ 48 ಲೀಟರ್ ಪೆಟ್ರೋಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಹೆಚ್ಚುವರಿಯಾಗಿ ಇಂಧನ ಭರ್ತಿ ಮಾಡುವುದರಿಂದ ಫ್ಯೂಯಲ್ ಟ್ಯಾಂಕ್ ಒಳಗಿರುವ ಸೆನ್ಸಾರ್'ಗಳಿಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಅದರಿಂದ ಅಸಮರ್ಪಕ ಕಾರ್ಯಕ್ಕೆ ಕಾರಣವಾಗಬಹುದು. ಇದರ ಜೊತೆಗೆ ಇಂಧನವು ತಾಪಮಾನಕ್ಕೆ ಅನುಗುಣವಾಗಿ ವಿಸ್ತರಿಸುವ ಸಾಧ್ಯತೆಯಿರುವುದರಿಂದ ಇಂಧನ ಟ್ಯಾಂಕ್‌ನಲ್ಲಿ ಹೆಚ್ಚುವರಿ ಜಾಗವಿರುವುದು ಅವಶ್ಯಕ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

45 ಲೀಟರ್ ಫ್ಯೂಯಲ್ ಟ್ಯಾಂಕಿಗೆ 48 ಲೀಟರ್ ಪೆಟ್ರೋಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಈ ಕಾರಣಕ್ಕೆ ಫ್ಯೂಯಲ್ ಟ್ಯಾಂಕಿನಲ್ಲಿ ಹೆಚ್ಚುವರಿ ಸ್ಥಳಾವಕಾಶವಿರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಸಮಸ್ಯೆಗಳು ಎದುರಾಗುವುದನ್ನು ತಪ್ಪಿಸಲು ವಾಹನ ಸವಾರರು ಇಂಧನ ತುಂಬಿಸುವಾಗ ಹೆಚ್ಚು ಜಾಗರೂಕರಾಗಿರಬೇಕು.

Most Read Articles

Kannada
English summary
Clarification about fuel tank capacity in vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X