ವಾಹನ ಗುರುತಿನ ಸಂಖ್ಯೆ ಡಿಕೋಡ್ ಮಾಡೋದು ಹೇಗೆ?
ಉದಾಹರಣೆಗೆ ನಿಮ್ಮ ಕಾರು ಟಾಟಾ ಮೋಟರ್ಸ್ ಕಂಪನಿಯದಾಗಿರಬಹುದು. ಎಂಎಟಿ ಇತ್ಯಾದಿ ಅಕ್ಷರಗಳಿಂದ ಆರಂಭವಾಗುವ ನಿಮ್ಮ ಕಾರಿನ ವಿಐಎನ್ 17 ಅಕ್ಷರಗಳನ್ನು ನೋಡಿಕೊಳ್ಳಿ. ಅದರಲ್ಲಿ 10ನೇ ಸ್ಥಾನದಲ್ಲಿರುವ ಅಕ್ಷರವು ಕಾರು ಉತ್ಪಾದನೆಯಾದ ವರ್ಷವನ್ನು ಸೂಚಿಸುತ್ತದೆ. 12ನೇ ಅಕ್ಷರವು ಕಾರು ಉತ್ಪಾದನೆಯಾದ ತಿಂಗಳನ್ನು ಸೂಚಿಸುತ್ತದೆ.
ಇಲ್ಲಿರುವ ಅಕ್ಷರಗಳು ಎ ಬಿ ಸಿ ಡಿ ಇ ಎಫ್ ಜಿ ಎಚ್ ಜೆ ಕೆ ಎಲ್ ಎಂ ಯಾವುದೇ ಆಗಿರಬಹುದು. ಐ, ಒ, ಕ್ಯೂ ಅಕ್ಷರಗಳನ್ನು ವಿಐಎನ್ ಅಕ್ಷರಗಳಾಗಿ ಬಳಸಲಾಗುವುದಿಲ್ಲ. ಇದನ್ನು ನೋಡಿ ತಿಂಗಳು ವರ್ಷ ತಿಳಿದುಕೊಳ್ಳುವುದು ಹೇಗೆ? ಅದಕ್ಕೆ ನಮ್ಮಲ್ಲೊಂದು ಪುಟ್ಟ ಚಾರ್ಟ್ ಇದೆ. ನಿಮ್ಮ ಟಾಟಾ ಕಾರಿನ 12ನೇ ಅಕ್ಷರ ಬಿ ಆಗಿದ್ದರೆ ಅದು ಫೆಬ್ರವರಿ ತಿಂಗಳಲ್ಲಿ ಉತ್ಪಾದನೆಯಾದ ಕಾರು. ಹತ್ತನೇ ಅಕ್ಷರ ಬಿ ಆಗಿದ್ದರೆ ಅದು 2011ರಲ್ಲಿ ಉತ್ಪಾದನೆಯಾದ ಕಾರು.
ತಿಂಗಳು ತಿಳಿಸುವ ಅಕ್ಷರ: ಎ ಜನವರಿ, ಬಿ ಫೆಬ್ರವರಿ, ಸಿ ಮಾರ್ಚ್, ಡಿ ಏಪ್ರಿಲ್, ಇ ಮೇ, ಎಫ್ ಜೂನ್, ಜಿ ಜುಲೈ, ಎಚ್ ಆಗಸ್ಟ್, ಜೆ ಸೆಪ್ಟಂಬರ್, ಕೆ ಅಕ್ಟೋಬರ್, ಎಲ್ ನವೆಂಬರ್, ಎಂ ಡಿಸೆಂಬರ್. ನಿಮ್ಮ ಕಾರಿನ 12ನೇ ವಿಐಎನ್ ನಂಬರ್ ಯಾವುದು ಎಂದು ತಿಳಿದುಕೊಂಡು ಇಲ್ಲಿ ಪರಿಶೀಲಿಸಿ.
ವರ್ಷ ತಿಳಿಸುವ ಅಕ್ಷರ: ಎ 2010, ಬಿ 2011, ಸಿ 2012, ಡಿ 2013, ಇ 2014, ಎಫ್ 2015, ಜಿ 2016, ಎಚ್ 2017, ಜೆ 2018, ಕೆ 2019. ನಿಮ್ಮ ಕಾರಿನ ವಿಐಎನ್ 17ನೇ ಅಕ್ಷರವನ್ನು ಇಲ್ಲಿ ಪರಿಶೀಲಿಸಿ ಯಾವ ವರ್ಷವೆಂದು ತಿಳಿದುಕೊಳ್ಳಿ. 2010ಕ್ಕಿಂತ ನಂತರದ ಕಾರುಗಳಿಗೆ ಮಾತ್ರ ಇದು ಅನ್ವಯವಾಗುತ್ತಿದೆ.
ಉಳಿದ ಕಾರು ಕಂಪನಿಗಳ ಮಾಹಿತಿಗಾಗಿ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ. ಕಾರು ಖರೀದಿಸುವಾಗ ಕಾರಿನ ಬಗ್ಗೆ ತಿಳಿದುಕೊಳ್ಳುವ ಈ ಐಡಿಯಾವನ್ನು ನಿಮ್ಮ ಸ್ನೇಹಿತರು, ಬಳಗದೊಂದಿಗೆ ಹಂಚಿಕೊಳ್ಳಿ.


Click it and Unblock the Notifications









