ವಾಹನದ ಜಾತಕ ಬಿಚ್ಚಿಡುವ ವಿಶಿಷ್ಟ ಗುರುತಿನ ಸಂಖ್ಯೆ

ವಾಹನ ಗುರುತಿನ ಸಂಖ್ಯೆ(ವಿಐಎನ್) ಅಂದ್ರೆ ವಾಹನದ ಗುರುತು ಹಿಡಿಯುವ ವೈಶಿಷ್ಟ್ಯ ಪೂರ್ಣವಾದ ಸರಣಿ ಅಕ್ಷರಗಳಾಗಿವೆ. 1954ರಲ್ಲಿ ಪ್ರಪ್ರಥಮವಾಗಿ ವಿಐಎನ್ ಬಳಕೆ ಆರಂಭವಾಯಿತು. ರಸ್ತೆಯಲ್ಲಿ ಸಾಗುವ ಎಲ್ಲಾ ವಾಹನಗಳಲ್ಲೂ ಇಂತಹ ಗುರುತಿನ ಸಂಖ್ಯೆ ಇರುವುದು ಕಡ್ಡಾಯ.

ವಾಹನದ ವಿಐಎನ್ ಸಂಖ್ಯೆ ಮೂಲಕ ನಿಮ್ಮ ವಾಹನದ ಇತಿಹಾಸ ತಿಳಿದುಕೊಳ್ಳುವ ಬಯಕೆ ನಿಮಗೀಗ ಆಗಿರಬಹುದು. ನೀವು ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಾರು ಯಾವ ವರ್ಷದ ಮಾಡೆಲ್ ಎನ್ನುವುದನ್ನು ತಿಳಿದುಕೊಳ್ಳುವ ತವಕ ನಿಮಗಿರಬಹುದು.

ಮೊದಲನೆಯದಾಗಿ ಈ ವಿಐಎನ್ ನಂಬರ್ ಕಾರಿನಲ್ಲಿ ಎಲ್ಲಿರುತ್ತದೆ ಎಂಬ ಸಂಶಯ ನಿಮಗಿರಬಹುದು. ಕೆಲವು ಕಾರುಗಳಲ್ಲಿ ವಿಐಎನ್ ನಂಬರ್ ಎಂಜಿನ್ ಗೋಡೆಗಳಲ್ಲಿರುತ್ತದೆ. ಪ್ರಯಾಣಿಕರ ಸೀಟಿನ ಸಮೀಪದ ಗೋಡೆಯ ಮೇಲಿರಬಹುದು. ಅಥವಾ ಕಾರಿನ ಚಾಸೀ ಮೇಲೆ ಬರೆದಿರಬಹುದು. ಹದಿನೇಳು ಅಕ್ಷರಗಳ ವಿಐಎನ್ ನಂಬರ್ ಎಲ್ಲಿದೆ ಎಂದು ನೀವೇ ಹುಡುಕಿಕೊಳ್ಳಿ.

ಅಯ್ಯೋ ವಾಹನದೊಳಗೆ ಇರುವ ಪುಟ್ಟ ವಿಐಎನ್ ನಂಬರ್ ಹುಡುಕೋದು ಕಷ್ಟ ಎನ್ನುತ್ತಿದ್ದೀರಾ? ಕೆಲವೊಮ್ಮೆ ಕಾರಿನಲ್ಲಿ ಇಂತಹ ನಂಬರುಗಳ ಪ್ಲೇಟ್ ಒಂದು ಅಳವಡಿಸಿರುತ್ತಾರೆ. ಅದರಲ್ಲಿ ಮೇಡ್ ಇನ್ ಇತ್ಯಾದಿ ಮಾಹಿತಿಗಳೊಂದಿಗೆ ಹದಿನೇಳು ಅಕ್ಷರಗಳ ಮಾಹಿತಿ ಇರುತ್ತದೆ.

ವಾಹನ ರಿಜಿಸ್ಟ್ರೇಷನ್ ದಾಖಲೆಗಳಲ್ಲೂ ಕಾರಿನ ವಿಐಎನ್ ನಂಬರ್ ಇರುತ್ತದೆ. ರಿಜಿಸ್ಟ್ರೇಷನ್ ಪ್ರೂಫಿನಲ್ಲಿ ಯಾವ ಕಡೆ ಇರುತ್ತದೆ ಎನ್ನುವುದನ್ನು ಹೇಳೋದು ಕಷ್ಟ. ನೀವೇ ಎಲ್ಲಾ ದಾಖಲೆ ಓದಿ ನೋಡಬೇಕಷ್ಟೇ.

ನಿಮ್ಮಲ್ಲಿ ವಾಹನ ವಿಮೆ ಐಡೆಂಟಿಫಿಕೇಷನ್ ಕಾರ್ಡ್ ಇರಬಹುದು. ಅದರಲ್ಲಿ ವಾಹನ ಗುರುತಿನ ಸಂಖ್ಯೆಯೂ ಇರುತ್ತದೆ.

ಕೊನೆಗೂ ನಿಮ್ಮ ವಾಹನದ ಹದಿನೇಳು ಅಕ್ಷರಗಳ ವಾಹನ ಗುರುತಿನ ಸಂಖ್ಯೆ ಕಂಡು ಹಿಡಿಯಲು ಯಶಸ್ವಿಯಾಗಿದ್ದೀರಿ ಎಂದಿಟ್ಟುಕೊಳ್ಳಿ. ವಿಐಎನ್ ಅಂಕಿಗಳನ್ನು ಡಿಕೋಡ್ ಮಾಡಿ ಕಾರು ಉತ್ಪಾದನೆಯಾದ ವರ್ಷ ಮತ್ತು ತಿಂಗಳು ತಿಳಿಯುವುದು ಹೇಗೆ ಎಂಬ ಮಾಹಿತಿಗಾಗಿ ಮುಂದಿನ ಪುಟ ನೋಡಿ.

More from DriveSpark

Article Published On: Wednesday, April 25, 2012, 11:04 [IST]
English summary
How to find your Vehicle Identification Number? VIN number written in vehicle Certificate of Title, vehicle's proof of registration, Insurance Id Card contains VIN. Find VIN at Vehicle inside.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+