ವಾಹನಲೋಕದ ಇಂಗ್ಲಿಷ್ ಕನ್ನಡ ಪದಕೋಶ

Posted By:
English Kannada Online Automobiles Dictionary Forum
ಕೆಲವೊಂದು ಇಂಗ್ಲಿಷ್ ಪದಗಳಿಗೆ ಎಷ್ಟೇ ತಿಣುಕಿದರೂ ಕನ್ನಡ ಪದ ದೊರಕುವುದೇ ಇಲ್ಲ. ಕೆಲವರು ನೀಡುವ ಕನ್ನಡ ಪದಗಳು ಚೆನ್ನಾಗಿದೆ ಅನಿಸಿದರೂ ಓದೋದು ಕಷ್ಟ. ಮುಖ್ಯವಾಗಿ ತಂತ್ರಜ್ಞಾನ ಲೋಕದ ಕೆಲವು ಪದಗಳಿಗೆ ಪರ್ಯಾಯ ಕನ್ನಡ ಪದಗಳನ್ನು ಬಳಸುವುದು ಕಷ್ಟ.

ಮೊಬೈಲ್ ಫೋನಿಗೆ ಜಂಗಮವಾಣಿ ಅಂದರೆ ಕೆಲವರು ಮಂಗನ ಮುಖ ಮಾಡುತ್ತಾರೆ. ಬ್ಲೂಟೂಥ್ ಗೆ ನಿಸ್ತಂತು ಅಂತ ಬಳಸಬಹುದು. ಬಸ್ಸು ಲಾರಿಗಳ ಚಕ್ರಗಳಿಗೆ ಅನುಗುಣವಾಗಿ ಷಟ್ಚಕ್ರ ಅನ್ನುವಾಗ ಮುಖದಲ್ಲಿ ಅಷ್ಟ ವಕ್ರಗಳು ಕಾಣಬಹುದು. ಹೀಗಾಗಿ ಪದಕೋಶದಲ್ಲೂ ಬಸ್ ಅನ್ನೋ ಇಂಗ್ಲಿಷ್ ಪದಕ್ಕೆ ಬಸ್ಸು ಅನ್ನೋ ಅರ್ಥವೇ ದೊರಕುತ್ತದೆ.

ರೂಢಿಯಲ್ಲಿರುವ ಕೆಲವು ಇಂಗ್ಲಿಷ್ ಪದಗಳನ್ನು ಬಿಟ್ಟುಬಿಡಬಹುದು. ಅಥವಾ ಅದಕ್ಕೆ ಸುಂದರವಾದ ಕನ್ನಡ ಪದ ಬಳಸಿ ಚಾಲ್ತಿಗೊಳಿಸಬಹುದು. ಹಾಡಿಹಾಡಿ ರಾಗ ಎಂಬಂತೆ ನಾವು ನಿತ್ಯ ಬಳಸಿದರೆ ಅದು ಪರ್ಮನೆಂಟ್.. ಅಲ್ಲಲ್ಲ ಖಾಯಂ ಆಗಬಹುದು.

ವಾಹನೋದ್ಯಮಕ್ಕೆ ಸಂಬಂಧಿಸಿದ ಕೆಲವು ಇಂಗ್ಲಿಷ್ ಪದಗಳಿಗೆ ಕನ್ನಡ ಅರ್ಥದ ಪದ ಬಳಕೆ ಕಷ್ಟ. ಆದರೂ ಕೆಲವು ಪದಗಳನ್ನು ವಾಹನ ಬರಹಗಾರರು ಬಳಸುತ್ತಾರೆ. ಕಾರು, ಬೈಕು, ಬಸ್, ಸ್ಕೂಟರ್, ಸೈಕಲ್ ಪದಗಳಿಗೆ ಹೊಸ ಕನ್ನಡ ಪದ ಹುಡುಕಿದರೂ ಅದನ್ನು ಚಾಲ್ತಿಗೆ ತರುವುದು ಕಷ್ಟ.

ವಾಹನಲೋಕದಲ್ಲಿ ಬಳಸುವ ಕೆಲವು ಇಂಗ್ಲಿಷ್ ಪದಗಳಿಗೆ ಕನ್ನಡ ಹೆಸರು ಇಲ್ಲಿದೆ. ಅದರಲ್ಲಿ ಕೆಲವು ಇಷ್ಟವಾಗುವಂತದ್ದು. ಕೆಲವು ಓದಲು ಕಷ್ಟವಾಗುವಂತದ್ದು. ಈ ಪದ ಸೂಕ್ತವೇ? ಸೂಕ್ತವಲ್ಲವೇ? ಅಂತ ತಿಳಿಸಿ. ಅಥವಾ ನಿಮಗೆ ತಿಳಿದಿರುವ ವಾಹನಲೋಕದ ಇಂಗ್ಲಿಷ್ ಪದಗಳಿಗೆ ಕನ್ನಡ ಅರ್ಥ/ಪದಗಳನ್ನು ತಿಳಿಸಲು ಮರೆಯದಿರಿ.

ಈ ಮುಂದಿನ ಕನ್ನಡ ವಾಹನ ಪದಕೋಶದಲ್ಲಿ ಕೆಲವು ಇಂಗ್ಲಿಷ್ ಪದಗಳ ಮುಂದೆ ಖಾಲಿ ಜಾಗ ಬಿಟ್ಟಿದೆ. ಅಲ್ಲಿಗೆ ಸೂಕ್ತ ಪದ ಹುಡುಕಲು ಮರೆಯದಿರಿ. ಜೊತೆಗೆ ನಾವು ಬರೆದಿರುವ ಕನ್ನಡ ಅರ್ಥ ಸರಿಹೊಂದದಿದ್ದರೂ ತಿಳಿಸಿ. ಸರಿತಪ್ಪುಗಳ ಚರ್ಚೆಗೆ ಸ್ವಾಗತ.

ಕನ್ನಡ ವಾಹನ ಪದಕೋಶ

ಆಟೋ ಇಂಡಸ್ಟ್ರಿ: ವಾಹನೋದ್ಯಮ

ಆಟೋಮೊಬೈಲ್ಸ್: ವಾಹನಲೋಕ

ಕಂಪೇರ್ ಕಾರ್: ಕಾರುಗಳ ಹೋಲಿಕೆ

ಕಾರ್ ರಿವ್ಯೂ: ಕಾರು ವಿಮರ್ಶೆ

ಅಲಾಯ್ ವೀಲ್: ಲೋಹದ ಚಕ್ರ/ರಿಮ್

ಬೈಸಿಕಲ್: ಸೈಕಲ್

ಮೈಲೇಜ್: ಇಂಧನ ದಕ್ಷತೆ

ಟ್ಯೂಬ್ ಲೆಸ್ ಟೈರ್: ಟ್ಯೂಬ್ ಇಲ್ಲದ ಚಕ್ರ

ಲೆದರ್ ಸೀಟ್: ಚರ್ಮದ ಸೀಟು

ಹಾರ್ಸ್ ಪವರ್: ಅಶ್ವಶಕ್ತಿ

ಕಾರ್: ಕಾರು

ಏರ್ ಬ್ಯಾಗ್: ಗಾಳಿ ಚೀಲ

ಬಸ್: ಬಸ್ಸು

ಡೋರ್: ಬಾಗಿಲು

ಆನ್ ರೋಡ್ ದರ: ?

ಎಕ್ಸ್ ಶೋರೂಂ ದರ: ?

ಪವರ್ ವಿಂಡೋಸ್:

ಪವರ್ ಸ್ಟಿಯರಿಂಗ್:

ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್:

ಟ್ರಾನ್ಸ್ ಮಿಷನ್:

ಎಂಜಿನ್:

ಗೇರ್:

ಟಾರ್ಕ್:

ಟೈರ್: ಚಕ್ರ

ಸನ್ ರೂಫ್/ಮೂನ್ ರೂಫ್:

ಫಾಗ್ ಲೈಟ್ಸ್:

ವೈಪರ್:

ಫ್ಯೂಯಲ್ ಲಿಡ್:

ಟೆಕ್ನೊಮೀಟರ್:

ಡೀಫಾಗರ್:

ನಂಬರ್ ಪ್ಲೇಟ್:

ಇಲ್ಲಿ ನೀಡಿರುವ ಕನ್ನಡ ಅರ್ಥ ಸರಿಯೇ? ಖಾಲಿ ಬಿಟ್ಟ ಜಾಗಗಳಲ್ಲಿ ಯಾವ ಕನ್ನಡ ಪದ ಬರೆಯಬಹುದು. ನೀವು ಯಾವ ಪದ ನೀಡುವಿರಿ. ವಾಹನಲೋಕದ ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳನ್ನು ಹುಡುಕಲು ಆರಂಭಿಸಿ. (ನಿಮಗೆ ಸಹಾಯ ನೀಡಲು ಬರಹ ನಿಘಂಟು ಉಂಟು)

English summary
English-Kannada Automobiles Online dictionary Forum: Here is Dictionary of words and expressions related to automobiles, motorcycles, bicycles and engines etc. Please Join this forum on Karnataka Formation Day. Happy Kannada Rajyotsava.
Story first published: Tuesday, November 1, 2011, 13:45 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more