ಅಯ್ಯೋ ಪಾಪ! ಪಾಪುಗಿಂತ ಗ್ಲಾಸ್ ಸಿಲಿಂಡರೇ ಹೆಚ್ಚಾಯ್ತೆ?

ಬೆಂಗಳೂರಿನ ಟ್ರಾಫಿಕ್ ಪೊಲೀಸರು ಸೇರಿದಂತೆ ಇಡೀ ಜಗತ್ತೇ ಜನರಿಗೆ ಸೀಟ್ ಬೆಲ್ಟ್ ಧರಿಸುವಂತೆ ಜಾಗೃತಿ ಮೂಡಿಸುವಲ್ಲಿ ನಿರತವಾಗಿದೆ. ಇತ್ತೀಚೆಗೆ ಅಮೆರಿಕದ ಕೊಲಾರ್ಡೊ ಟ್ರಾಫಿಕ್ ಪೊಲೀಸರು ಸೀಟ್ ಬೆಲ್ಟ್ ಜಾಗೃತಿ ಅಭಿಯಾನದಲ್ಲಿ ಜನರು ಯಾವ ರೀತಿಯಾಗಿ ಉಡಾಫೆಯಿಂದ ವರ್ತಿಸುತ್ತಾರೆ ಎಂದು ಸಾಕ್ಷಿ ಸಹಿತವಾಗಿ ವಿವರಿಸಿದ್ದಾರೆ.

ಚಿತ್ರ ನೋಡಿ. ಇದು ಅರೊರಾ ಟ್ರಾಫಿಕ್ ಪೊಲೀಸರು ನೀಡಿದ ಚಿತ್ರ. ಮಗುವಿಗೆ ಇರುವ ವಿಶೇಷ ಸುರಕ್ಷತೆಯ ಸೀಟಿನಲ್ಲಿ ಪುಟ್ಟ ಗ್ಯಾಸ್ ಸಿಲಿಂಡರ್ ಇಟ್ಟು ವಾಹನ ಚಾಲಕ ಸೀಟ್ ಬೆಲ್ಟ್ ಬಿಗಿದಿದ್ದಾನೆ. ಆದರೆ ಮಗುವಿನ ಸೀಟಿನಲ್ಲಿ ಕುಳಿತಿರಬೇಕಾದ ಮಗುವನ್ನು ಪಕ್ಕದ ಸೀಟಿನಲ್ಲಿ ಕುಳ್ಳಿರಿಸಿದ್ದಾನೆ. ಆ ಮಗುವಿಗೆ ಸೀಟ್ ಬೆಲ್ಟ್ ಕೂಡ ಹಾಕಿಲ್ಲ.

ಗ್ಯಾಸ್ ಸಿಲಿಂಡರಿಗೆ ಸೀಟ್ ಬೆಲ್ಟ್ ಹಾಕಿರುವುದು ಒಳ್ಳೆಯದೇ. ಅಪಘಾತದ ಸಂದರ್ಭದಲ್ಲಿ ಅದು ಸಿಡಿಯಬಾರದೆಂಬ ಮುಂಜಾಗ್ರತೆಯಿಂದ ಹೀಗೆ ಮಾಡಿರಬಹುದು. ಆದರೆ ಗ್ಯಾಸ್ ಸಿಲಿಂಡರನ್ನು ಮಗುವಿನ ಸೀಟಿನಲ್ಲಿಡಬೇಕಿತ್ತೇ. ಮಗುವಿಗಿಂತ ಆ ಸಿಲಿಂಡರ್ ಮುಖ್ಯವೇ? ಅದಕ್ಕೆ ಹೆಚ್ಚುವರಿಯಾಗಿ ಬೆಲ್ಟ್ ಸಹ ಹಾಕಲಾಗಿದೆ.

ಮಗುವಿಗೆ ಸೀಟ್ ಬೆಲ್ಟ್ ಹಾಕದೇ, ಗ್ಯಾಸ್ ಜಗ್ಗನ್ನು ಮಗುವಿನ ಸುರಕ್ಷತೆಯ ಸೀಟಿನಲ್ಲಿ ಇಟ್ಟಿರುವುದರ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. 'ಬರೀ ಗ್ಯಾಸ್ ಜಗ್ಗಿಗೆ ಮಾತ್ರ ಯಾಕೆ ಸೀಟ್ ಬೆಲ್ಟ್ ಹಾಕಲಾಗಿದೆ? ಮಗುವಿನ ಬಟ್ಟೆ ಯಾಕೆ ತೆಗೆಯಲಾಗಿದೆ? ಇದು ಕಾರು ಚಾಲಕನ ಮೂರ್ಖತನದ ಪರಮಾವಧಿ ಎಂದೆಲ್ಲ ಆಕ್ರೋಶದಿಂದ ಜನರು ಟೀಕಿಸಿದ್ದಾರೆ.

ಬಹುಶಃ ಗ್ಯಾಸ್ ದರ ದುಬಾರಿಯಾಗಿರುವುದರಿಂದ ಈ ರೀತಿ ಮಾಡಿರಬಹುದೆಂದು ಒಬ್ಬರು ಸ್ಮೈಲಿ ಕೊಟ್ಟು ಕಾಮೆಂಟಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮಕ್ಕಳಿಗೆ ಕಾರಿನಲ್ಲಿ ಸೀಟ್ ಬೆಲ್ಟ್ ಮತ್ತು ಚೈಲ್ಡ್ ಸೀಟ್ ಅಳವಡಿಸುವ ಕುರಿತು ಕೊಲಾರ್ಡೊ ವಿಶೇಷ ಕಾನೂನನ್ನೇ ರೂಪಿಸಿದೆ. 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರಿನಲ್ಲಿ ಚೈಲ್ಡ್ ಸೇಫ್ಟಿ ಸೀಟಿನಲ್ಲಿ ಕುಳ್ಳಿರಸಬೇಕು ಎಂದು ಅಲ್ಲಿನ ಕಾನೂನು ಹೇಳುತ್ತಿದೆ.

ಕನ್ನಡ ಡ್ರೈವ್ ಸ್ಪಾರ್ಕ್ ಓದುಗರು ಕೂಡ ತಮ್ಮ ಕಾರುಗಳಲ್ಲಿ ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ವಹಿಸಲಿ ಎಂಬ ಉದ್ದೇಶದಿಂದ ಈ ಲೇಖನವನ್ನು ಪ್ರಕಟಿಸಲಾಗಿದೆ. ಓದಿ: ವಾಹನ ಸಲಹೆ

More from DriveSpark

Article Published On: Wednesday, June 6, 2012, 16:34 [IST]
English summary
Colorado Aurora Police shocked during a recent seat-belt enforcement campaign. A toddler and gas can sharing a vehicle's back seat. The gas can is securely strapped into a child's safety seat. But car driver not Buckled Seat Belt to child.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+