Just In
- 56 min ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 15 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 15 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 16 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
Don't Miss!
- News
ವೆಂಟಿಲೇಟರ್ನಲ್ಲಿರುವ ಸಲ್ಮಾನ್ ರಶ್ದಿ, ದೃಷ್ಟಿ ಕಳೆದುಕೊಳ್ಳುವ ಅಪಾಯ!
- Lifestyle
ಕಿಡ್ನಿಗೆ ಅಪಾಯವಿದೆ ಎಂದು ಸೂಚಿಸುವ ಲಕ್ಷಣಗಳಿವು!
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ರಸ್ತೆ ಅಪಘಾತವಾದ ಕೂಡಲೇ ನೀವು ಮಾಡಬೇಕಾದ ಪ್ರಮುಖ ಕೆಲಸಗಳು
ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸಹ ಒಂದು. ಅಪಘಾತ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಪ್ರಾಣ ನಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಅಪಘಾತ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ರಸ್ತೆ ಅಪಘಾತಗಳು ಸಂಭವಿಸುತ್ತವೆ. ರಸ್ತೆಗಳ ಕಳಪೆ ಸ್ಥಿತಿ ಮತ್ತು ಮೂಲಸೌಕರ್ಯ ಕೊರತೆಯಿಂದಾಗಿ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ಕಾರುಗಳಲ್ಲಿನ ಭದ್ರತಾ ವೈಶಿಷ್ಟ್ಯಗಳಿಂದ ಅಪಘಾತಗಳಲ್ಲಿ ಪ್ರಯಾಣಿಕರೆನೋ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಆದರೆ ಹೆಚ್ಚಿನ ಹಾನಿ ಮಾತ್ರ ವಾಹನಗಳಿಗೆ ಸಂಭವಿಸುತ್ತದೆ.

ಅನೇಕ ಸಂದರ್ಭಗಳಲ್ಲಿ ಚಾಲಕ ಅಥವಾ ಪ್ರಯಾಣಿಕರು ಸಹ ಗಾಯಗೊಳ್ಳುತ್ತಾರೆ. ಕೆಲವೊಮ್ಮೆ ಇತರರಿಗೆ ಡಿಕ್ಕಿ ಹೊಡೆದು ಪರಾರಿಯಾಗುವವರು ಇರುತ್ತಾರೆ. ಇಂತಹ ಸಮಯದಲ್ಲಿ ಪರಾರಿಯಾಗಬಾರದು, ಅದು ಮುಂದೆ ತುಂಬಾ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಹಲವರಿಗೆ ತಿಳಿದೇ ಇಲ್ಲ.

ಇಂತಹ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕು ಹಾಗೂ ಅಪಘಾತವಾದ ಕೂಡಲೇ ಏನು ಮಾಡಬೇಕು, ಅಪಘಾತವಾದ ಬಳಿಕ ಯಾವೆಲ್ಲ ನಿಯಮಗಳನ್ನು ಪಾಲನೆ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

1. ಚಾಲನೆ ನಿಲ್ಲಿಸಿ
ನಿಮ್ಮ ಕಾರನ್ನು ಚಾಲನೆ ಮಾಡುವಾಗ ನಿಮಗೆ ರಸ್ತೆ ಅಪಘಾತ ಸಂಭವಿಸಿದಲ್ಲಿ, ನೀವು ಮೊದಲು ಮಾಡಬೇಕಾಗಿರುವುದು ಡ್ರೈವಿಂಗ್ ಅನ್ನು ತಕ್ಷಣವೇ ನಿಲ್ಲಿಸುವುದು, ಏಕೆಂದರೆ ಅದು ಅನುಸರಿಸಬೇಕಾದ ಕಾನೂನು ಜವಾಬ್ದಾರಿಯಾಗಿದೆ. ಸಣ್ಣಪುಟ್ಟ ಅಪಘಾತ ಸಂಭವಿಸಿದರೂ ಸ್ಥಳದಿಂದ ಓಡಿ ಹೋಗಬಾರದು, ಹಾಗೆ ಮಾಡಿದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು.

2. ಎಲ್ಲರೂ ಸುರಕ್ಷಿತವಾಗಿದ್ದಾರೆಯೇ ಖಚಿತಪಡಿಸಿಕೊಳ್ಳಿ
ಅಪಘಾತವಾದ ಬಳಿಕ ನಿಮ್ಮ ಕಾರಿನೊಳಗಿರುವ ಎಲ್ಲರೂ ಸುರಕ್ಷಿತವಾಗಿದ್ದಾರೆಯೇ ಅಥವಾ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿ. ಇದರ ನಂತರ ನಿಮಗೆ ಡಿಕ್ಕಿ ಹೊಡೆದ ಅಥವಾ ನೀವು ಡಿಕ್ಕಿ ಹೊಡೆ ವಾಹನ ಸವಾರರು, ಪಾದಾಚಾರಿಗಳನ್ನು ವಿಚಾರಿಸಿ ಧೈರ್ಯ ಹೇಳಬೇಕು. ನಾನು ಇಲ್ಲೇ ಇದ್ದೇನೆ ನಿಮಗೆ ನೆರವಾಗುತ್ತೇನೆ ಎಂದು ತಿಳಿಸಬೇಕು.

3. ವೈದ್ಯಕೀಯ ಸಹಾಯ ಪಡೆಯಿರಿ
ಯಾರಿಗಾದರೂ ಸಣ್ಣಪುಟ್ಟ ಗಾಯಗಳಾಗಿದ್ದರೆ, ನಿಮ್ಮ ಕಾರಿನಲ್ಲಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಬಳಸಿ ನೀವೇ ಪ್ರಥಮ ಚಿಕಿತ್ಸೆ ನೀಡಿ. ಪ್ರತಿ ಕಾರು ಪ್ರಾಥಮಿಕ ಪ್ರಥಮ ಚಿಕಿತ್ಸಾ ಸೌಲಭ್ಯವನ್ನು ಹೊಂದಿದೆ, ಇದನ್ನು ಸಣ್ಣ ಗಾಯಗಳಿಗೆ ಬಳಸಬಹುದು. ಯಾರಾದರೂ ಗಂಭೀರವಾಗಿ ಗಾಯಗೊಂಡರೆ ಅಥವಾ ಪ್ರತಿಕ್ರಿಯಿಸದಿದ್ದರೆ, ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ.

4. ನಿಮ್ಮ ವಿಮಾ ಕಂಪನಿಗೆ ತಿಳಿಸಿ
ನಿಮ್ಮ ಸ್ವಂತ ಅಥವಾ ನಿಮ್ಮ ಪ್ರಯಾಣಿಕರ ಗಾಯಗಳನ್ನು ಆರೈಕೆ ಮಾಡಿದ ನಂತರ ನಿಮ್ಮ ವಿಮಾ ಕಂಪನಿಗೆ ನೀವು ತಿಳಿಸಬೇಕು. ನಿಮ್ಮ ವಿಮಾ ಪಾಲಿಸಿಯನ್ನು ನೀವು ಖರೀದಿಸಿದ ವಿಮಾ ಕಂಪನಿಗೆ ಕರೆ ಮಾಡಿ ಇದರಿಂದ ನೀವು ಸಾಧ್ಯವಾದಷ್ಟು ಬೇಗ ನಿಮ್ಮ ಕ್ಲೈಮ್ ಅನ್ನು ನೋಂದಾಯಿಸಬಹುದು. ನಿಮ್ಮ ವಾಹನ ಮತ್ತು ಮೂರನೇ ವ್ಯಕ್ತಿಯ ವಾಹನಕ್ಕೆ ಉಂಟಾದ ಹಾನಿಯ ಬಗ್ಗೆ ಅವರಿಗೆ ತಿಳಿಸಬೇಕು.

5. ಫೋಟೋಗಳನ್ನು ತೆಗೆದುಕೊಳ್ಳಿ
ನಿಮ್ಮ ಕಾರು ಮತ್ತು ಅಪಘಾತವಾದ ಸ್ಥಳದ ಚಿತ್ರಗಳನ್ನು ಸಹ ನೀವು ತೆಗೆದುಕೊಳ್ಳಬೇಕು, ಇದರಿಂದ ನೀವು ಅದನ್ನು ನಿಮ್ಮ ವಿಮಾ ಕಂಪನಿಗೆ ತೋರಿಸಬಹುದು. ಮೂರನೇ ವ್ಯಕ್ತಿಯ ಕಾರು ಮತ್ತು ಅಪಘಾತದ ಸೈಟ್‌ನ ಹಾನಿಯ ಚಿತ್ರಗಳನ್ನು ತೆಗೆದುಕೊಳ್ಳಿ, ಹಾಗೆಯೇ ನಿಮ್ಮ ಕಾರಿಗೆ ಆದ ಹಾನಿಯನ್ನು ಸ್ಪಷ್ಟವಾಗಿ ತೋರಿಸಲು ನೀವು ವಿವಿಧ ಕೋನಗಳಿಂದ ಚಿತ್ರಗಳನ್ನು ತೆಗೆದುಕೊಳ್ಳಬೇಕು.

6. ನಿಮ್ಮ ಕಾರನ್ನು ಸರಿಪಡಿಸಿ
ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ನಂತರ ನಿಮ್ಮ ಕಾರನ್ನು ರಿಪೇರಿ ಮಾಡಿಸಲು ಮುಂದಾಗಿ. ರಿಪೇರಿಗಾಗಿ ನೀವು ನಿಮ್ಮ ವಾಹನವನ್ನು ಸರ್ವಿಸ್ ಸೆಂಟರ್‌ಗೆ ತೆಗೆದುಕೊಂಡು ಹೋಗುವ ಮೊದಲು, ನಿಮಗೆ ಅಗತ್ಯವಿರುವ ಅಂದಾಜು ಮೊತ್ತದ ರಿಪೇರಿಗಳನ್ನು ಒದಗಿಸಲು ನಿಮ್ಮ ವಿಮಾ ಕಂಪನಿಯಿಂದ ಸರ್ವೇಯರ್ ಅನ್ನು ಕಳುಹಿಸಲಾಗುತ್ತದೆ.

ನಂತರ, ನಿಮ್ಮ ಕಾರನ್ನು ನೀವು ವಿಮಾ ಕಂಪನಿಯ ಅಧಿಕೃತ ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಬಹುದು, ಇದರಿಂದ ನಿಮ್ಮ ಕಾರನ್ನು ರಿಪೇರಿ ಮಾಡಬಹುದು. ವಿಮಾ ಕಂಪನಿಯು ನಿಮಗೆ ಟೋಯಿಂಗ್ ಸೌಲಭ್ಯವನ್ನು ಒದಗಿಸುತ್ತದೆ ಇದರಿಂದ ನಿಮ್ಮ ಕಾರು ಸರ್ವಿಸ್ ಸೆಂಟರ್‌ಗೆ ಖರ್ಚಿಲ್ಲದೇ ತಲುಪುತ್ತದೆ.

ಡ್ರೈವ್‌ಸ್ಪಾರ್ಕ ಅಭಿಪ್ರಾಯ
ಭಾರತದಲ್ಲಿ ಎಷ್ಟೋ ಮಂದಿಗೆ ಅಪಘಾತಗಳಾದಾಗ ಏನು ಮಾಡಬೇಕು ಎಂಬುದು ತಿಳಿಯದೇ ಗಾಬರಿಯಲ್ಲಿ ಪರಾರಿಯಾಗುವುದನ್ನು ಮಾಡುತ್ತಾರೆ. ಆದರೆ ಇದನ್ನು ಮಾಡಬಾರದು ಲೇಖನದಲ್ಲಿ ತಿಳಿಸಿದಂತೆ ಕಾನೂನು ನಿಯಮಗಳನ್ನು ಪಾಲಿಸಿದರೆ ಯಾವುದೇ ಸಮಸ್ಯಗಳು ನಿಮಗೆ ಇರುವುದಿಲ್ಲ. ಅಪಘಾತಗಳು ಎಂಬುದು ಸರ್ವೇ ಸಾಮಾನ್ಯ ಎಲ್ಲರಿಗೂ ನಡೆಯುವಂತಹ ವಿಷಯವೇ, ಇದನ್ನು ಸರ್ಕಾರ ಕೂಡ ಮನಗಂಡಿದೆ. ಹಾಗಾಗಿ ಭಯಪಡೆದೆ ಅಲ್ಲಿ ಇದ್ದು ಆಗಬಹುದಾದ ಖರ್ಚು ವೆಚ್ಚಗಳನ್ನು ನಿಭಾಯಿಸಿದರೆ ನೀವು ಕೂಡಲೇ ಸಮಸ್ಯೆಯಿಂದ ಹೊರಬರಬಹುದು.