ಖದೀಮರಿಂದ ನಿಮ್ಮ ಬೈಕ್ ಅನ್ನು ಕಾಪಾಡಿಕೊಳ್ಳುವುದು ಹೇಗೆ.?

ಯವಕರಿಂದ ಮುದುಕರ ವರೆಗು ಬೈಕ್ ಅಂದ್ರೇ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ.? ಎಷ್ಟೊ ಆಸೆಯಿಂದ ಖರೀದಿಸಿದ ಬೈಕ್ ಅನ್ನು ರಾತ್ರೊ ರಾತಿ ಕಳ್ಳರು ಬಂದು ನಿಮ್ಮ ಇಷ್ಟವಾದ ಬೈಕ್ ಅನ್ನು ಕಳ್ಳತನ ಮಾಡಿದರೆ ನಿಮಗೆ ಬೇಜಾರಾಗುತ್ತದೆ ಅಲ್ಲವೇ.?

By Rahul Ts

ಯವಕರಿಂದ ಮುದುಕರ ವರೆಗು ಬೈಕ್ ಅಂದ್ರೇ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ.? ಎಷ್ಟೊ ಆಸೆಯಿಂದ ಖರೀದಿಸಿದ ಬೈಕ್ ಅನ್ನು ರಾತ್ರೊ ರಾತಿ ಕಳ್ಳರು ಬಂದು ನಿಮ್ಮ ಇಷ್ಟವಾದ ಬೈಕ್ ಅನ್ನು ಕಳ್ಳತನ ಮಾಡಿದರೆ ನಿಮಗೆ ಬೇಜಾರಾಗುತ್ತದೆ ಅಲ್ಲವೇ.? ಮತ್ತೆ ನಿಮ್ಮ ಬೈಕ್ ಅನ್ನು ಸುರಕ್ಷಿತವಾಗಿ ಕಳ್ಳತನವಾಗದಿರುವ ಹಾಗೆ ಮಾಡಲು ಈ ಟಿಪ್ಸ್ ಅನ್ನು ಅನುಸರಿಸಿ.

ಖದೀಮರಿಂದ ನಿಮ್ಮ ಬೈಕ್ ಅನ್ನು ಕಾಪಾಡಿಕೊಳ್ಳುವುದು ಹೇಗೆ.?

ಕೀ ಇಂದ ಬೈಕ್ ಲಾಕ್ ಮಾಡಿ, ಹ್ಯಾಂಡಲ್ ಲಾಕ್ ಮಾಡಿರುವ ಬೈಕ್‍‍ಗಳನ್ನು ಕದಿಯುವುದು ಖದೀಮರಿಗೆ ಬೆಣ್ಣೆ ತಿಂದಷ್ಟೆ ಸುಲಭ ಎನ್ನಬಹುದು. ಬಹಳಷ್ಟು ಬೈಕ್ ಕಳ್ಳರು ಕೀ ಇಲ್ಲದೆ ಬೈಕ್ ಅನ್ನು ಸ್ಟಾರ್ಟ್ ಮಾಡಲು ಕೇಬಲ್‍‍ಗಳನ್ನು ಡೈರೆಕ್ಟ್ ಮಾಡುತ್ತಾರೆ. ಮತ್ತು ಹ್ಯಾಂಡಲ್ ಲಾಕ್ ಬಲವಾಗಿ ಎಳೆದು ಲಾಕ್ ಆನ್ ಮಾಡಿಬಿಡುತ್ತಾರೆ.

ಖದೀಮರಿಂದ ನಿಮ್ಮ ಬೈಕ್ ಅನ್ನು ಕಾಪಾಡಿಕೊಳ್ಳುವುದು ಹೇಗೆ.?

ಕೀ ಇಂದ ಬೈಕ್ ಅನ್ನು ಪೂರ್ತಿಯಾಗಿ ಲಾಕ್ ಮಾದಿ, ಹ್ಯಾಂಡಲ್ ಲಾಕ್ ಮಾಡಿದ್ದೇವೆ ಎಂದು ತಿಳಿದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಆದರೆ ಈ ಎರಡರಿಂದ ಬೈಕ್ ಸುರಕ್ಷಿತವಾಗಿ ಇರುತ್ತದೆ ಎಂದು ಗ್ಯಾರೆಂಟಿ ಇಲ್ಲ. ಆದ್ದರಿಂದ ಬೈಕ್ ಅನ್ನು ಸುರಕ್ಷಿತವಾಗಿ ಕಳ್ಳರಿಂದ ಕಾಪಾಡಿಕೊಳ್ಳಲು ಕೆಲವು ಲಾಕ್‍‍ಗಳಿವೆ. ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

ಖದೀಮರಿಂದ ನಿಮ್ಮ ಬೈಕ್ ಅನ್ನು ಕಾಪಾಡಿಕೊಳ್ಳುವುದು ಹೇಗೆ.?

ಡಿಸ್ಕ್ ಲಾಕ್ :

ಡಿಸ್ಕ್ ಲಾಕ್ ಒಂದು ಚಿಕ್ಕ ಯಾಂತ್ರಿಕತೆ. ಇದನ್ನು ಡಿಸ್ಕ್ ಬ್ರೇಕ್ ಹೋಲ್ಸ್ ಮುಖಾಂತರ ಲಾಕ್ ಮಾಡಬಹುದಾಗಿದೆ. ಹೀಗೆ ಮಾಡಿದ್ದಲ್ಲಿ ಚಕ್ರವು ಮುಂದಕ್ಕೆ ಸರಿಸಲು ಆಗುವುದ್ಲಿಲ್ಲ. ಇದನ್ನು ದ್ವಂಸ ಮಾಡಲು ಅಲೋಚಿಸಿದರು ಅದಕ್ಕೆ ತುಂಬಾ ಸಮಯ ಬೇಕಾಗುತ್ತದೆ.

ಖದೀಮರಿಂದ ನಿಮ್ಮ ಬೈಕ್ ಅನ್ನು ಕಾಪಾಡಿಕೊಳ್ಳುವುದು ಹೇಗೆ.?

ಟೈರ್ ಲಾಕ್ :

ಡಿಸ್ಕ್ ಬ್ರೇಕ್ ಇಲ್ಲದ ಬೈಕ್‍‍ಗಳನ್ನು ಟೈರ್ ಲಾಕ್ ಅನ್ನು ಬಳಸಬಹುದಾಗಿದೆ. ಇದು ಕೂಡಾ ಬೀಗದ ಹಾಗೆಯೆ ಇರುತ್ತದೆ. ಮುಂಭಾಗದ ಚಕ್ರಗಳ ಫ್ರಂಟ್ ಫೋರ್ಕ್‍‍ನ ಮೇಲೆ ಅಟಾಚ್ ಮಾಡಲಾಗುತ್ತದೆ. ಬೈಕ್ ಪಾರ್ಕ್ ಮಾಡಿದ್ದಲಿ ಟೈರ್ ಲಾಕ್ ಮಾಡಬಹುದಾಗಿದೆ.

ಖದೀಮರಿಂದ ನಿಮ್ಮ ಬೈಕ್ ಅನ್ನು ಕಾಪಾಡಿಕೊಳ್ಳುವುದು ಹೇಗೆ.?

ಬ್ರೇಕ್ ಲಾಕ್ :

ಒಂದು ವಿಧವಾಗಿ ಹೇಳಬೇಕೆಂದರೆ ಕಾರಿನಲ್ಲಿನ ಹ್ಯಾಂಡ್ ಬ್ರೇಕ್ ತರಹವೇ ಇದು ಕೂಡ ಕಾರ್ಯ ನಿರ್ವಹಿಸುತ್ತದೆ. ಅಂದರೇ ಬೈಕ್ ಪಾರ್ಕ್ ಮಾಡಿದಾಗ ಬ್ರೇಕ್ ಲಾಕ್ ಮಾದಿದರೆ, ಬ್ರೇಕ್‍‍ಗಳು ಚಕ್ರಗಳನ್ನು ಗಟ್ಟಿಯಾಗಿ ಬಿಗಿದುಕೊಂಡಿರುತ್ತದೆ. ಆದ್ದರಿಂದ ಹ್ಯಾಂಡಲ್ ಬಾರ್ ಅನ್ನು ತೊಲಗಿಸಿದರು.. ಬೈಕ್ ಸ್ಟಾರ್ಟ್ ಮಾಡಿದರೂ ಈ ಲಾಕ್‍‍ಗಳಿಂದ ಭದ್ರವಾಗಿರಿಕೊಂಡರೆ ಖದೀಮರಿಂದ ನಿಮ್ಮ ಬೈಕ್ ಅನ್ನು ಕಾಪಾಡಿಕೊಳ್ಳಬಹುದು.

ಖದೀಮರಿಂದ ನಿಮ್ಮ ಬೈಕ್ ಅನ್ನು ಕಾಪಾಡಿಕೊಳ್ಳುವುದು ಹೇಗೆ.?

ಜಿಪ್ಎಸ್ ಡಿವೈಸ್ :

ನಿಮ್ಮ ಬೈಕ್ ರಹಸ್ಯ ಪ್ರದೇಶದಲ್ಲಿ ಜಿಪಿಎಸ್ ಡಿವೈಸ್ ಅನ್ನು ಅಳವಡಿಸುವುದರಿಂದ ಬೈಕ್ ಕಳ್ಳತನವಾದರೂ, ಅದು ಯಾವ ಲೊಕೇಶನ್‍‍ನಲ್ಲಿರುತ್ತದೆ ಎಂದು ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಆದರೇ ಮಾರುಕಟ್ಟೆಯಲ್ಲಿ ಕಳಪೇ ಗುಣಮಟ್ಟದ ಜಿಪಿಎಸ್ ಡಿವೈಸ್‍‍ಗಳನ್ನು ಮಾರುತ್ತಿರುತ್ತಾರೆ. ಬೈಕ್ ಸರಿಯಾಗಿ ಕಳ್ಳತನಕ್ಕೆ ಗುರಿಯಾಗುವಾಗ ಅವುಗಳು ಸರಿಯಾಗಿ ಕೆಲಸ ಮಾಡದಿದ್ದರೆ ಕಷ್ಟ. ಆದ್ದರಿಂದ ಒಳ್ಳೆಯ ಗುಣಮಟ್ಟದ ಜಿಪಿಎಸ್ ಡಿವೈಸ್ ಅನ್ನು ಖರೀದಿಸಿರಿ.

Most Read Articles

Kannada
Read more on auto tips two wheeler tips
English summary
How to protect bike from theft.
Story first published: Friday, August 10, 2018, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X