ಕಾರು ವಿಮೆ - ನೀವು ತಿಳಿದಿರಬೇಕಾದ 10 ಅಂಶಗಳು

By Nagaraja

ದೇಶದ ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿಯಾಗಿರುವಂತೆಯೇ ನಾನಾ ಕಂಪನಿಯು ಹಲವು ರೀತಿಯ ಕಾರು ವಿಮಾ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತದೆ. ಇದರಿಂದಾಗಿ ಕಾರು ಖರೀದಿ ಸಂದರ್ಭದಲ್ಲಿ ಯಾವ ವಿಮೆ ಚೆನ್ನಾಗಿದೆ ಎಂಬುದರ ಕುರಿತು ಗ್ರಾಹಕ ಯೋಚಿಸಬೇಕಾಗುತ್ತದೆ.

ಹೇಗೆ ಕಾರು ಖರೀದಿ ಎಷ್ಟೊಂದು ಮುಖ್ಯವೋ ಅದೇ ರೀತಿ ವಿಮೆ ಮಾಡಿಸಿಕೊಳ್ಳುವುದು ಸಹ ಅಷ್ಟೊಂದು ಪ್ರಾಮುಖ್ಯತೆ ಗಿಟ್ಟಿಸಿಕೊಳ್ಳುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಕಾರು ಕಂಪನಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಉಚಿತ ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ.

ಲಕ್ಷಾ ಗಟ್ಟಲೆ ಹಣ ಸುರಿದು ವಾಹನ ವಿಮೆ ಮಾಡದಿದ್ದರೆ ಸ್ವತ: ಅಪಾಯವನ್ನು ಆಹ್ವಾನಿಸಿದಂತೆ. ಇದನ್ನೇ ಡ್ರೈವಿಂಗ್ ಭಾಷೆಯಲ್ಲಿ ಹೇಳುವುದಾದರೆ ಸ್ವಯಂಕೃತ ಅಪರಾಧ. ಅಷ್ಟಕ್ಕೂ ಕಾರು ವಿಮೆ ಎಂದರೇನು? ಅದರಿಂದ ಗ್ರಾಹಕರಿಗೇನು ಲಾಭ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ನೂತನ ಕಾರು ಖರೀದಿ ಸಂದರ್ಭದಲ್ಲಿ ಗ್ರಾಹಕರಲ್ಲಿ ಹುಟ್ಟಿಕೊಳ್ಳುತ್ತದೆ. ಇವೆಲ್ಲಕ್ಕೆ ಉತ್ತರ ಕಂಡುಹುಡುಕುವ ಪ್ರಯತ್ನವನ್ನು ನಿಮ್ ಡ್ರೈವ್ ಸ್ಪಾರ್ಕ್ ಮಾಡುತ್ತಿದೆ.

ಕಾನೂನು ಏನು ಹೇಳುತ್ತೆ?

ಕಾನೂನು ಏನು ಹೇಳುತ್ತೆ?

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕುದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಇದರಿಂದ ಮೂರನೇ ವ್ಯಕ್ತಿಗೆ ನೈಸರ್ಗಿಕ ರಕ್ಷಣೆಯೂ ಸಿಗುತ್ತದೆ.

ಕಾರು ವಿಮಾ ಪಾಲಿಸಿಯಲ್ಲಿ ಎಷ್ಟು ವಿಧ?

ಕಾರು ವಿಮಾ ಪಾಲಿಸಿಯಲ್ಲಿ ಎಷ್ಟು ವಿಧ?

ಕಾರು ವಿಮಾ ಪಾಲಿಸಿಯಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ ಮೂರನೇ ವ್ಯಕ್ತಿ ವಿಮಾ ಹಾಗೂ ಸಮಗ್ರ ಪಾಲಿಸಿ. ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ. ಎರಡನೇಯದ್ದಲ್ಲಿ ವಾಹನಕ್ಕಾಗುವ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ.

ಬಂಪರ್ ಟು ಬಂಪರ್

ಬಂಪರ್ ಟು ಬಂಪರ್

ಇವೆರಡ ಹೊರತಾಗಿ ಇನ್ನೊಂದು ಬಗೆಯ ಬಂಪರ್ ಟು ಬಂಪರ್ ಎಂಬ ಹೊಸರೂಪದ ವಿಮಾ ಸೌಲಭ್ಯ ಕೂಡಾ ಇದೆ. ಬಂಪರ್ ಟು ಬಂಪರ್ ವಿಮೆ ಏಕರೂಪದ ಪಾಲಿಸಿಯಾಗಿದ್ದು, ಸಮಗ್ರ ವಿಮೆಯಲ್ಲಿ ಪರಿಗಣಿಸಲಾಗದ ಟೈರ್, ಬೆಲ್ಟ್, ಟ್ರಾನ್ಸ್‌ಮಿಷನ್ ಮುಂತಾದ ಬಿಡಿಭಾಗಗಳನ್ನು ಹೊಂದಿರುತ್ತದೆ. ಹೊಸ ಹಾಗೂ ದುಬಾರಿ ಕಾರುಗಳಿಗೆ ಇದು ಮಾಡಿಸಿದರೆ ಉತ್ತಮ.

ಯಾವುದು ಉತ್ತಮ?

ಯಾವುದು ಉತ್ತಮ?

ಹೆಸರಲ್ಲೇ ಸೂಚಿಸಿರುವಂತೆಯೇ ಎಲ್ಲ ಬಗೆಯ ನಷ್ಟಗಳನ್ನು ಭರಿಸುವ ಸಮಗ್ರ ವಿಮಾ ಪಾಲಿಸಿ ಮಾಡಿಸುವುದು ಉತ್ತಮ. ಆದರೆ ಇದು ದುಬಾರಿಯೂ ಹೌದು. ಇದರಲ್ಲಿ ಥರ್ಡ್ ಪಾರ್ಟಿ ಜತೆಗೆ ವಾಹನಕ್ಕಾಗುವ ನಷ್ಟ ಜತೆಗೆ ಸಹ ಪ್ರಯಾಣಿಕ ಸೇರಿದಂತೆ ಮಾಲಿಕರಿಗಾಗುವ ನಷ್ಟವನ್ನು ಭರಿಸುತ್ತದೆ.

ಏನೆಲ್ಲ ಅಗತ್ಯವಿದೆ?

ಏನೆಲ್ಲ ಅಗತ್ಯವಿದೆ?

ವಿಮಾ ಪಾಲಿಸಿದಾರರಿಗೆ ಸರಿಯಾದ ಮಾಹಿತಿ ನೀಡಬೇಕು. ಅಂದರೆ ವಿಮಾ ಕಂಪನಿಗಳು ನೀಡುವ ಪಾರ್ಮ್ ನಲ್ಲಿ ನೀವಿರುವ ಜಾಗ, ಯಾವ ಉದ್ದೇಶಕ್ಕಾಗಿ ವಾಹನ ಬಳಸುತ್ತೀರಿ, ಆಫೀಸ್ ಬಳಕೆಗಾಗಿ ಅಥವಾ ವಾಣಿಜ್ಯ ಬಳಕೆಗಾಗಿ ಇವುಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದಲ್ಲಿ ಹಲವು ವಿನಾಯಿತಿಗಳು ನಿಮ್ಮ ಪಾಲಾಗುತ್ತವೆ.

ಕಂಪನಿನಿಂದ ಕಂಪನಿಗೆ ಪ್ರೀಮಿಯಂ ವಿಭಿನ್ನ

ಕಂಪನಿನಿಂದ ಕಂಪನಿಗೆ ಪ್ರೀಮಿಯಂ ವಿಭಿನ್ನ

ವಿಮಾ ಕಂಪನಿಗಳು ಗ್ರಾಹಕರಿಗೆ ನೀಡುವ ವಿಮಾರಕ್ಷಣೆ ಕಂಪನಿಯಿಂದ ಕಂಪನಿಗೆ ಭಿನ್ನವಾಗಿರುತ್ತದೆ. ಹಾಗಾಗಿ ಗ್ರಾಹಕರು ತಮ್ಮ ಕಾರುಗಳಿಗೆ ಪಡೆಯುವ ವಿಮೆಗಾಗಿ ಲಭ್ಯವಿರುವ ವಿಮಾ ಕಂಪನಿಗಳಿಂದ ತಮಗಾಗುವ ಲಾಭ ಕುರಿತು ಸಮಗ್ರ ಮಾಹಿತಿ ಹೊಂದಿರಬೇಕು.

ಯಾವೆಲ್ಲ ಅಂಶಗಳು ವಿಮಾ ಪ್ರೀಮಿಯಂ ಪ್ರಮಾಣವನ್ನು ನಿರ್ಧರಿಸುತ್ತದೆ?

ಯಾವೆಲ್ಲ ಅಂಶಗಳು ವಿಮಾ ಪ್ರೀಮಿಯಂ ಪ್ರಮಾಣವನ್ನು ನಿರ್ಧರಿಸುತ್ತದೆ?

ಕಾರಿನ ಮಾಡೆಲ್

ತಯಾರಿ ದಿನಾಂಕ, ವರ್ಷ

ರಿಜಿಸ್ಟ್ರೇಷನ್ ಪ್ರದೇಶ

ವಾಹನದ ಪ್ರಸ್ತುತ ದರ

ಪಾಲಿಸಿದಾರ ವ್ಯಕ್ತಿಗತ ಅಥವಾ ಕಾರ್ಪೋರೇಟ್

ವಿಮಾ ಅವಧಿ ನವೀಕರಣ

ವಿಮಾ ಅವಧಿ ನವೀಕರಣ

ಚಾಲ್ತಿಯಲ್ಲಿರುವ ವಿಮಾ ಅವಧಿ ವೀರುವುದರೊಳಗೆ ವಿಮೆಯನ್ನು ನವೀಕರಿಸಬೇಕು. ನೀವು ಹಳೆಯ ಕಾರಿನ ಮಾಲೀಕರಾಗುತ್ತಿದ್ದಲ್ಲಿ ಅದಕ್ಕೆ ಸಮಗ್ರವಾದ ವಿಮೆ ಮಾಡಲು ಹೋಗಬೇಡಿ. ಯಾಕೆಂದರೆ ಅದರ ದರ ನಿಮ್ಮ ಸೆಕೆಂಡ್ ಹ್ಯಾಂಡ್ ಕಾರು ದರಕ್ಕಿಂತ ಹೆಚ್ಚಾಗಬಹುದು. ಇದಕ್ಕಾಗಿ ಜನರಲ್ ಇನ್ಸುರೆನ್ಸ್ ಮಾಡಿ.

ವಿಮೆ ವರ್ಗಾವಣೆ

ವಿಮೆ ವರ್ಗಾವಣೆ

ಹೌದು, ಕಾರು ವಿಮೆ ಪಡೆಯುವ ವ್ಯಕ್ತಿ ಕಾರು ಮಾಲಿಕರೇ ಆಗಬೇಕೇಂದಿಲ್ಲ. ಬದಲಾಗಿ ನಿಮ್ಮ ಮನೆಯವರ ಪರವಾಗಿಯೂ ವಿಮೆ ಖರೀದಿಸಬಹುದು. ಒಂದು ವೇಳೆ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿದರೆ, ಅದರ ವಿಮೆಯಲ್ಲಿನ ಹೆಸರನ್ನು ಕಾರು ಖರೀದಿಸಿದವರ ಹೆಸರಿಗೆ ಬದಲಿಸಿಕೊಳ್ಳಬೇಕು. ಈ ಕುರಿತು ಮಾರಾಟಗಾರನು ಲಿಖಿತರೂಪದಲ್ಲಿ ವಿಮಾ ಸಂಸ್ಥೆಗೆ ತಿಳಿಸಿ, ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು.

ಆನ್‌ಲೈನಲ್ಲಿ ನವೀಕರಿಸಬಹುದು

ಆನ್‌ಲೈನಲ್ಲಿ ನವೀಕರಿಸಬಹುದು

ಹೌದು, ಆನ್‌ಲೈನ್ ಮುಖಾಂತರವೂ ವಿಮಾ ಸೌಲಭ್ಯ ನವೀಕರಿಸಬಹುದಾಗಿದೆ. ಅಂದರೆ ವಿಮಾ ಅವಧಿ ಮುಗಿಯುವ ಎರಡು ತಿಂಗಳ ಮೊದಲಾಗಿ ಅಥವಾ ವಿಮಾ ಅವಧಿ ಮುಗಿದ ಆರು ದಿನಗಳೊಳಾಗಿ ಪಾಲಿಸಿ ನವೀಕರಿಸಬೇಕು.

ಕಾರು ವಿಮೆ - ನೀವು ತಿಳಿದಿರಬೇಕಾದ 10 ಅಂಶಗಳು

ಕಾರು ವಿಮೆ - ನೀವು ತಿಳಿದಿರಬೇಕಾದ 10 ಅಂಶಗಳು

ಒಟ್ಟಿನಲ್ಲಿ ಅಪಘಾತ ಸಂದರ್ಭದಲ್ಲಿ ಚಾಲಕರ ಸೇರಿದಂತೆ ಸಹ ಪ್ರಯಾಣಿಕರ ಹಿತ ಕಾಪಾಡುವ ವಿಮೆಯನ್ನು ಮಾಡಿಸಿದರೆ ಉತ್ತಮ. ಕೇವಲ ಅಪಘಾತ ಮಾತ್ರವಲ್ಲ, ಕಳ್ಳತನ, ಬೆಂಕಿ ಆಕಸ್ಮಿಕ ಇತ್ಯಾದಿ ಅನಾಹುತಗಳಿಗೂ ವಿಮಾ ರಕ್ಷಣೆ ದೊರಕುತ್ತಿದೆ.

Most Read Articles

Kannada
English summary
Do you know, What is Car Insurance and why it is important? Here we are giving some important facts about Car insurance. Car Insurance provides financial protection in case you are involved in an auto accident.
Story first published: Friday, August 2, 2013, 12:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X