ನಿಮ್ಮ ಹೊಸ ವಾಹನ ಮೈಲೇಜ್ ಕೊಡುತ್ತಿಲ್ಲವೇ?...ಈ ಸತ್ಯವನ್ನು ಯಾರೂ ಹೇಳುವುದಿಲ್ಲ

ನಮ್ಮಲ್ಲಿ ಹಲವರು ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿಸಿದ ಬಳಿಕ ಜೋಷ್‌ನಲ್ಲಿ ಅದರ ಪರ್ಫಾಮೆನ್ಸ್ ನೋಡಲು ಹೆಚ್ಚು ವೇಗದಲ್ಲಿ ಓಡಿಸುತ್ತಾರೆ. ಆದರೆ ಇದು ಸರಿಯಾದ ವಿಧಾನವಲ್ಲ. ವಾಹನ ಡೆಲಿವರಿ ಬಳಿಕ ಶೋರೂಂಗಳಲ್ಲೂ ಇದನ್ನು ಮೊದಲೇ ಹೇಳುತ್ತಾರೆ. ಮೊದಲ ಸರ್ವೀಸ್‌ವರೆಗೂ ಇಂತಿಷ್ಟೇ ವೇಗದಲ್ಲಿ ಓಡಿಸಬೇಕು ಬೇಕು ಎಂದು ಎಚ್ಚರಿಸುತ್ತಾರೆ.

ಸಾಮಾನ್ಯವಾಗಿ ಹೊಸ ಬೈಕ್‌ಗಳು ಮತ್ತು ಸ್ಕೂಟರ್‌ಗಳಲ್ಲಿ ಬಿಡಿ ಭಾಗಗಳು ಹೊಸದಾಗಿರುವುದರಿಂದ ಅವುಗಳ ಕಾರ್ಯಾಚರಣೆ ವೇಳೆ ಅವುಗಳ ನಿರ್ವಹಣೆಗೆ ಹೆಚ್ಚಿನ ಇಂಧನ ವ್ಯಯವಾಗುತ್ತದೆ. ಇದೇ ಕಾರಣಕ್ಕೆ ಮೊದಲ 800-1200 ಕಿ.ಮೀ ಸಮಯದಲ್ಲಿ ಕಡಿಮೆ ಮೈಲೇಜ್ ನೀಡುವುದನ್ನು ನೀವು ಗಮನಿಸಿರಬಹುದು. ನಂತರ ವಾಹನದಲ್ಲಿನ ಭಾಗಗಳು ಸವಿಯುತ್ತಾ ಮೈಲೇಜ್ ಕೂಡ ಹೆಚ್ಚಾಗುತ್ತದೆ. ಈ ಯಾಂತ್ರಿಕ ಭಾಗಗಳು ಯಾವುವು, ಅವು ಹೇಗೆ ಸವಿಯುತ್ತವೆ ಎಂಬುದರ ಹಿಂದಿನ ತಾಂತ್ರಿಕ ಕಾರಣಗಳನ್ನು ತಿಳಿದುಕೊಕೊಳ್ಳೋಣ.

ನಿಮ್ಮ ಹೊಸ ವಾಹನ ಮೈಲೇಜ್ ಕೊಡುತ್ತಿಲ್ಲವೇ?...ಈ ಸತ್ಯವನ್ನು ಯಾರೂ ಹೇಳುವುದಿಲ್ಲ

ಎಲ್ಲಾ ದ್ವಿಚಕ್ರ ವಾಹನಗಳಲ್ಲಿನ ಎಂಜಿನ್‌ನಲ್ಲಿ ಪಿಸ್ಟನ್, ಕ್ಯಾಮ್‌ಶಾಫ್ಟ್, ಕ್ರ್ಯಾಂಕ್‌ಶಾಫ್ಟ್, ಮುಂತಾದ ಸಾಕಷ್ಟು ಚಲಿಸುವ ಭಾಗಗಳಿವೆ. ಈ ಭಾಗಗಳನ್ನು ತಯಾರಿಸಿ ಎಂಜಿನ್‌ನೊಳಗೆ ಅಳವಡಿಸಿದಾಗ ಚಲಿಸುವ ಭಾಗಗಳ ಮೇಲ್ಮೈಯಲ್ಲಿ ಕೆಲವು ಕಲ್ಮಶಗಳು ಏರ್ಪಡುತ್ತವೆ. ನೀವು ಹೊಸ ಬೈಕು ಕೆಲಸ ಮಾಡಲು ಪ್ರಾರಂಭಿಸಿದಾಗ ಎಂಜಿನ್ ಒಳಗೆ ಚಲಿಸುವ ಭಾಗಗಳ ನಡುವೆ ಹೆಚ್ಚು ಘರ್ಷಣೆ ಇರುತ್ತದೆ. ಚಲಿಸುವ ಭಾಗಗಳ ಮೇಲ್ಮೈಯಲ್ಲಿ ಕಲ್ಮಶಗಳ ಕಾರಣ ಬಿಡಿ ಭಾಗಗಳ ಹೆಚ್ಚು ಸವೆತವಾಗುತ್ತದೆ.

ಈ ಭಾರೀ ಘರ್ಷಣೆ ಮತ್ತು ಚಲಿಸುವ ಭಾಗಗಳ ಸವೆತದ ಕಾರಣ, ಔಟ್‌ಪುಟ್ ಶಕ್ತಿಯನ್ನು ಉತ್ಪಾದಿಸಲು ಎಂಜಿನ್‌ಗೆ ಹೆಚ್ಚಿನ ಇಂಧನ ಬೇಕಾಗುತ್ತದೆ. ಈಗ, ಎಂಜಿನ್‌ನ ನಿರಂತರ ಕೆಲಸವು ಎಂಜಿನ್ ಭಾಗಗಳಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಈ ಕಲ್ಮಶಗಳು ಎಂಜಿನ್ ಆಯಿಲ್‌ನೊಂದಿಗೆ ಬೆರೆತು ಬೈಕ್‌ನ ಮೊದಲ ಸರ್ವಿಸಿಂಗ್ ಸಮಯದಲ್ಲಿ ಸಣ್ಣ ಲೋಹದ ಸ್ಫಟಿಕದಂತಹ ಕಲ್ಮಶಗಳಾಗಿ ಹೊರಬರುತ್ತವೆ. ಇದೇ ಕಾರಣಕ್ಕೆ ಹೊಸ ವಾಹನ ಕಡಿಮೆ ದೂರ ಕ್ರಮಿಸಿದರೂ ಎಂಜಿನ್ ಆಯಿಲ್ ಅನ್ನು ಬದಲಿಸಲಾಗುತ್ತದೆ.

ಬೈಕಿನ ತಯಾರಕರು ಇದೇ ಕಾರಣಕ್ಕೆ ಮೊದಲ 1000 ಕಿ.ಮೀ ಓಡುವ ಒಳಗೆ ಬೈಕ್‌ನ ಮೊದಲ ಸರ್ವಿಸಿಂಗ್ ಅನ್ನು ಶಿಫಾರಸು ಮಾಡುತ್ತಾರೆ. ಮೊದಲ ಸರ್ವಿಸಿಂಗ್ ಸಮಯದಲ್ಲಿ ನೀವು ಎಂಜಿನ್ ತೈಲವನ್ನು ಬದಲಾಯಿಸಿದಾಗ ಎಂಜಿನ್ ಎಣ್ಣೆಯಲ್ಲಿ ಮಿಶ್ರಣವಾಗಿರುವ ಎಲ್ಲಾ ಕಲ್ಮಶಗಳನ್ನು ತೆಗೆದುಹಾಕಲಾಗುತ್ತದೆ. ಈ ಮೂಲಕ ಎಂಜಿನ್ ಮೊದಲ ಸರ್ವಿಸಿಂಗ್ ನಂತರ ಉತ್ತಮ ಪರ್ಫಾಮೆನ್ಸ್ ಮತ್ತು ಮೈಲೇಜ್ ನೀಡುತ್ತದೆ. ಹೊಸ ವಾಹನದ ಮೊದಲ ಸರ್ವೀಸ್ ನಂತರ ಇದನ್ನು ಹಲವರು ಗಮನಿಸಿರಬಹುದು.

ಎಂಜಿನ್‌ನಲ್ಲಿನ ಚಲಿಸುವ ಭಾಗಗಳ ಹೆಚ್ಚುವರಿ ಸವೆತವನ್ನು ತಪ್ಪಿಸಲು ಹೊಸ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಕಡಿಮೆ ವೇಗದಲ್ಲಿ ಓಡಿಸಲು ಸಹ ಸಲಹೆ ನೀಡಲಾಗುತ್ತದೆ. ಬೈಕ್‌ನ ಮೊದಲ ಅಥವಾ ಎರಡನೆಯ ಸರ್ವಿಸಿಂಗ್ ನಂತರ, ನೀವು ಬಯಸಿದ ವೇಗದಲ್ಲಿ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಓಡಿಸಬಹುದು. ಈ ವಿಧಾನವು ನಿಮ್ಮ ಹೊಸ ವಾಹನಗಳ ಮೈಲೇಜ್ ಹೆಚ್ಚಿಸಲು ಸಹಕಾರಿಯಾಗಿದೆ. ಒಂದು ವೇಳೆ ಹಲವರಿಗೆ ತಮ್ಮ ಹೊಸ ವಾಹಗಳು ಮೈಲೇಜ್ ನಿಡುತ್ತಿಲ್ಲವೆಂದರೆ ಮೇಲೆ ತಿಳಿಸಲಾದ ಯಾವುದೇ ವಿಧಾನವನ್ನು ಅನುಸರಿಸಿಲ್ಲ ಎಂದರ್ಥ.

ಹೊಸ ವಾಹನದಾರರು ಮೊದಲ ಸರ್ವಿಸ್‌ಗೂ ಮುನ್ನ ಕೆಲವೊಮ್ಮೆ ಹೆಚ್ಚಿನ ವೇಗವನ್ನು ಹೊಂದುವ ಅನಿವಾರ್ಯತೆ ಎದುರಾದರೆ ಏನೂ ಸಮಸ್ಯೆಯಿಲ್ಲ. ಆದರೆ ವಾಹನ ಬಳಸಿದಾಗಲೆಲ್ಲಾ ಅತಿಯಾದ ವೇಗವನ್ನು ತಲುಪಿದರೆ ಮೈಲೇಜ್ ಕಡಿಮೆಯಾಗುತ್ತದೆ. ಜೊತೆಗೆ ನಿಮ್ಮ ವಾಹನದ ಪರ್ಫಾಮೆನ್ಸ್ ಆರಂಭದಲ್ಲೇ ಕುಸಿತವಾದ ಅನುಭವವಾಗುತ್ತದೆ. ಹಾಗಾಗಿ ಹೊಸ ವಾಹನಗಳನ್ನು ಮೊದಲ ಸರ್ವಿಸ್‌ವರೆಗು ತಾಳ್ಮೆಯಿಂದ ನೋಡಿಕೊಳ್ಳುವುದು ಉತ್ತಮ. ನಂತರ ಎಲ್ಲಾ ವಿಧಗಳಲ್ಲೂ ನಿಮ್ಮ ವಾಹನ ನಿಮಗೆ ಸಹಕರಿಸುತ್ತದೆ ಎಂಬುದು ನೆನಪಿರಲಿ.

ನಮ್ಮ ಡ್ರೈವ್‌ಸ್ಪಾರ್ಕ್ ವೆಬ್ ತಾಣವು ಇಂತಹ ಪ್ರತಿಯೊಂದು ಸುದ್ದಿಯನ್ನು ಬಹಳ ಆಸಕ್ತಿದಾಯಕವಾಗಿ ವಿವರಿಸುತ್ತದೆ. ಕರ್ನಾಟಕದ ಬಹುತೇಕ ಆಟೋ ಪ್ರಿಯರು ನಮ್ಮ ಎಲ್ಲಾ ಸೋಷಿಯಲ್ ಮೀಡಿಯಾಗಳನ್ನು ಫಾಲೋ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಇಂತಹ ಇನ್ನೂ ಹಲವು ಅಡ್ವೆಂಚರ್ ಕುರಿತ ಸುದ್ದಿಗಳನ್ನು ಓದಲು ನಿಮಗೆ ಆಸಕ್ತಿ ಇದ್ದಲ್ಲಿ ನಮ್ಮ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ನಮ್ಮ ಸುದ್ದಿಗಳಿಗೆ ಕಮೆಂಟ್ ಮಾಡಿ ತಿಳಿಸಿ. ಇಂತಹ ಇನ್ನು ಹಲವು ಸುದ್ದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.

Most Read Articles

Kannada
English summary
Is your new vehicle not giving mileage nobody tells this truth
Story first published: Monday, January 2, 2023, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X