ದಿನಕ್ಕೊಂದು ಸಲಹೆ: ಓವರ್ ಟೇಕ್ ಜೋಪಾನ
ವಾಹನ ಓವರ್ ಟೇಕ್ ಮಾಡೋದು ಒಳ್ಳೆದಲ್ಲ. ಆದ್ರೆ ಕೆಲವೊಮ್ಮೆ ಓವರ್ ಟೇಕ್ ಅನಿವಾರ್ಯ. ಆದ್ರೆ ತಿರುವು, ಬೆಟ್ಟದ ಹಾದಿಗಳಲ್ಲಿ, ಸೇತುವೆಗಳಲ್ಲಿ, ರಸ್ತೆ ಕೂಡುವಲ್ಲಿ ಓವರ್ ಟೇಕ್ ಯಾವತ್ತಿಗೂ ರಿಸ್ಕ್. ಮುಂದೆ ಅಪಾಯಕಾರಿ ತಿರುವು ಇದೆ ಇತ್ಯಾದಿ ಸೂಚನೆ ಇರುವಲ್ಲಿ ಎಚ್ಚರಿಕೆಯಿಂದ ಪ್ರಯಾಣಿಸಿ. ಅಂತಹ ಕಡೆ ಓವರ್ ಟೇಕ್ ಸಾಹಸಗಳನ್ನು ಮಾಡದಿರಿ.
ಸುರಕ್ಷಿತವಾಗಿ ಓವರ್ ಟೇಕ್ ಮಾಡುವುದು ಹೇಗೆ?
* ಓವರ್ ಟೇಕ್ ಮಾಡಲು ಸಾಕಷ್ಟು ಸ್ಥಳಾವಕಾಶವಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಸುರಕ್ಷಿತವಾಗಿ ಓವರ್ ಟೇಕ್ ಮಾಡುವುದು ಹೇಗೆ?
* ಓವರ್ ಟೇಕ್ ಮಾಡಲು ಸಾಕಷ್ಟು ಸ್ಥಳಾವಕಾಶವಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
* ಮಿರರ್ ನೋಡಿಕೊಳ್ಳಿ. ನಿಮ್ಮ ವಾಹನದ ಹಿಂದೆ ಮತ್ತೊಂದು ವಾಹನ ಓವರ್ ಟೇಕ್ ಮಾಡಲು ಪ್ರಯತ್ನಿಸಬಹುದು. ಸಿಗ್ನಲ್ ನೀಡಿ ಓವರ್ ಟೇಕ್ ಮಾಡಿ.
* ರಸ್ತೆ ಕ್ಲೀಯರ್ ಆಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
* ಉದ್ದವಾದ ವಾಹನ ಮುಂದಿದ್ದರೆ(ಬೃಹತ್ ಲಾರಿಗಳು) ಹೆಚ್ಚು ಜಾಗೃತೆಯಿಂದ ಓವರ್ ಟೇಕ್ ಮಾಡಿ. ಯಾಕೆಂದರೆ ಉದ್ದವಾದ ವಾಹನವಿದ್ದಲ್ಲಿ ಓವರ್ ಟೇಕ್ ಮಾಡುವುದು ಕಷ್ಟ. ಆ ಸಮಯದಲ್ಲಿ ಮುಂಭಾಗದಿಂದ ವಾಹನ ಬಂದರೆ ಪಾರಾಗಲು ಹೆಚ್ಚು ಅವಕಾಶ ಇರುವುದಿಲ್ಲ.
* ಓವರ್ ಟೇಕ್ ಮಾಡುವಾಗ ಸ್ಪೀಡ್ ಲಿಮಿಟ್ ಗಮನದಲ್ಲಿರಲಿ.
ಓವರ್ ಟೆಕ್ ಬಗೆಗಿನ ಇನ್ನಷ್ಟು ವಿಷ್ಯಗಳು ಮುಂದಿನ ದಿನಕ್ಕೊಂದು ಸಲಹೆ ಮಾಲಿಕೆಯಲ್ಲಿ ಮೂಡಿಬರಲಿದೆ.(ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









