ಇಂತಹ ತಪ್ಪುಗಳೇ ಕಾರುಗಳಲ್ಲಿ ಇಂಧನ ಬಳಕೆ ಹೆಚ್ಚಲು ಪ್ರಮುಖ ಕಾರಣ!

By Drivespark Bureau

ಭಾರತದಲ್ಲಿ ವಾಹನ ಖರೀದಿಗೂ ಮುನ್ನ ಆ ವಾಹನವು ಎಷ್ಟು ಮೈಲೇಜ್ ನೀಡುತ್ತದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಇಂಧನ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಅಥವಾ ಪ್ರತಿ ಲೀಟರ್ ಡೀಸೆಲ್'ಗೆ ಹೆಚ್ಚು ಮೈಲೇಜ್ ನೀಡುವ ಹಲವಾರು ಕಾರುಗಳಿವೆ. ಆದರೆ ಕೆಲವು ಕಾರುಗಳು ಹೆಚ್ಚು ಇಂಧನ ಬಳಸುತ್ತವೆ. ಕಾರುಗಳು ಈ ರೀತಿ ಹೆಚ್ಚು ಇಂಧನ ಬಳಸುವುದಕ್ಕೆ ಕಾರಣಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಎಂಜಿನ್ ತೊಂದರೆ

ದೋಷಯುಕ್ತ ಎಂಜಿನ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಈ ರೀತಿಯ ಎಂಜಿನ್'ಗಳು ಹೆಚ್ಚು ಇಂಧನವನ್ನು ಬಳಸುತ್ತವೆ. ಕೆಲವೊಮ್ಮೆ ಎಂಜಿನ್‌ನಲ್ಲಿ ಯಾವುದೇ ತೊಂದರೆ ಇಲ್ಲದಿದ್ದಲ್ಲಿ ಇತರ ಪ್ರಮುಖ ಭಾಗಗಳಲ್ಲಿ ಸಮಸ್ಯೆಗಳಿರುವ ಸಾಧ್ಯತೆಗಳಿರುತ್ತವೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಪೆಟ್ರೋಲ್ ಎಂಜಿನ್‌ಗಳಲ್ಲಿ ಸ್ಪಾರ್ಕ್ ಪ್ಲಗ್‌ಗಳು ಅಥವಾ ಒ 2 ಸೆನ್ಸಾರ್'ಗಳ ದುರಸ್ತಿ ಅಥವಾ ಡೀಸೆಲ್ ಎಂಜಿನ್‌ಗಳಲ್ಲಿ ಫ್ಯೂಯಲ್ ಇಂಜೆಕ್ಟರ್‌ ಮೇಲೆ ಕೊಳೆಯಿದ್ದರೆ ಹೆಚ್ಚು ಇಂಧನ ಬಳಕೆಗೆ ಕಾರಣವಾಗಬಹುದು. ಇದರಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತದೆ. ಕಾರು ಹೆಚ್ಚು ಇಂಧನ ಬಳಸುತ್ತಿದ್ದರೆ ಈ ಸಮಸ್ಯೆಗಳನ್ನು ಪರಿಶೀಲಿಸಿ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ತಪ್ಪಾದ ಎಂಜಿನ್ ಆಯಿಲ್

ತಪ್ಪಾದ ಎಂಜಿನ್ ಆಯಿಲ್ ಸಹ ಕಾರುಗಳು ಹೆಚ್ಚು ಇಂಧನ ಬಳಸಲು ಕಾರಣವಾಗುತ್ತದೆ. ಎಂಜಿನ್‌ನ ಸರಿಯಾದ ಕಾರ್ಯನಿರ್ವಹಣೆಗೆ ಎಂಜಿನ್ ಆಯಿಲ್ ಅತ್ಯಗತ್ಯ. ಎಂಜಿನ್ ಆಯಿಲ್'ನಲ್ಲಿ ವಿಭಿನ್ನ ಸರಣಿಗಳಿವೆ. ಕಾರಿಗೆ ಎಂಜಿನ್ ಆಯಿಲ್ ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕತೆ ವಹಿಸುವುದು ಬಹಳ ಮುಖ್ಯ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ನಿಗದಿಪಡಿಸಿರುವುದಕ್ಕಿಂತ ಹೆಚ್ಚು ದಪ್ಪವಿರುವ ಎಂಜಿನ್ ಆಯಿಲ್ ಬಳಸುತ್ತಿದ್ದರೆ ಚಾಲನೆಯಲ್ಲಿರುವ ಪಿಸ್ಟನ್‌ಗಳಿಗೆ ತೊಂದರೆಯಾಗುತ್ತದೆ. ಇದರಿಂದ ಕಾರಿನ ಎಂಜಿನ್ ಹೆಚ್ಚು ಬಿಸಿಯಾಗಿ ಹೆಚ್ಚು ಇಂಧನವನ್ನು ಬಳಸುತ್ತದೆ. ಆದ್ದರಿಂದ ಸರಿಯಾದ ಎಂಜಿನ್ ಆಯಿಲ್ ಬಳಸುವುದು ಒಳ್ಳೆಯದು.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಅನಗತ್ಯ ಐಡ್ಲಿಂಗ್

ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳನ್ನು ಸ್ಟಾರ್ಟ್ ಮಾಡುವ ಮುನ್ನ ಬೆಚ್ಚಗಾಗಿಸುವ ಅಗತ್ಯವಿಲ್ಲ. ಎಂಜಿನ್ ಆನ್ ಆದ ತಕ್ಷಣ ಚಲಿಸಬಹುದು. ಕಾರನ್ನು ಅನಗತ್ಯವಾಗಿ ಬೆಚ್ಚಗಾಗಿಸುತ್ತಿದ್ದರೆ, ಕಾರು ಹೆಚ್ಚು ಇಂಧನವನ್ನು ಬಳಸುವ ಸಾಧ್ಯತೆಗಳಿರುತ್ತವೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಕಾರು ಚಾಲನೆ ವೇಳೆ ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ನಿಲ್ಲಬೇಕಾದಾಗ ಕಾರಿನ ಎಂಜಿನ್ ಆಫ್ ಮಾಡುವುದು ಒಳಿತು. ಇದರಿಂದ ಇಂಧನವನ್ನು ಉಳಿಸಬಹುದು. ಉದಾಹರಣೆಗೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಒಂದು ನಿಮಿಷಕ್ಕಿಂತ ಹೆಚ್ಚು ಕಾಯಬೇಕಾದರೆ ಕಾರ್ ಅನ್ನು ಐಡ್ಲಿಂಗ್'ನಲ್ಲಿಡುವ ಬದಲು ಎಂಜಿನ್ ಅನ್ನು ಆಫ್ ಮಾಡಬಹುದು.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಕಾರ್ ಅನ್ನು ಐಡ್ಲಿಂಗ್'ನಲ್ಲಿಡುವುದಕ್ಕಿಂತ ಕಾರ್ ಅನ್ನು ಸ್ಟಾರ್ಟ್ ಮಾಡಲು ಕಡಿಮೆ ಇಂಧನ ಖರ್ಚಾಗುತ್ತದೆ. ಆದ್ದರಿಂದ ಕಾರ್ ಅನ್ನು ಅನಗತ್ಯವಾಗಿಐಡ್ಲಿಂಗ್'ನಲ್ಲಿ ಇಡದೇ ಇರುವುದು ಒಳಿತು. ಇದರಿಂದ ಕಾರಿನ ಮೈಲೇಜ್ ಹೆಚ್ಚುತ್ತದೆ. ಜೊತೆಗೆ ಪರಿಸರಕ್ಕೆ ಹಾನಿಯಾಗುವುದು ತಪ್ಪುತ್ತದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಕಳಪೆ ಇಂಧನ

ಇಂಧನದ ಗುಣಮಟ್ಟ ಕಳಪೆಯಾಗಿದ್ದರೆ ಅದು ಕಾರಿನ ಎಂಜಿನ್‌ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಎಂಜಿನ್‌ನ ಜೀವಿತಾವಧಿಯನ್ನು ಕಡಿಮೆಗೊಳಿಸುತ್ತದೆ. ಪೆಟ್ರೋಲ್ ಜೊತೆಗೆ ಕೆಲವು ಅಡಿಟಿವ್'ಗಳನ್ನು ಬಳಸಲಾಗುತ್ತದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಇವುಗಳನ್ನು ಇಂಧನದೊಂದಿಗೆ ಬೆರೆಸಿದಾಗ ಕಾರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಯಾವುದೇ ಅಡಿಟಿವ್ ಆರಿಸುವಾಗ ಜಾಗರೂಕರಾಗಿರುವುದು ಒಳ್ಳೆಯದು. ತಪ್ಪು ಅಥವಾ ನಕಲಿ ಅಡಿಟಿವ್'ಗಳು ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತವೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಓವರ್ ಲೋಡ್

ಕಾರುಗಳ ಮೇಲೆ ಹೆಚ್ಚಿನ ತೂಕವನ್ನು ಇಡುವುದರಿಂದ ಇಂಧನದ ಬಳಕೆ ಹೆಚ್ಚಾಗುತ್ತದೆ. ಪರಿಣಾಮವಾಗಿ ಮೈಲೇಜ್ ಕಡಿಮೆಯಾಗುತ್ತದೆ. ಕಾರಿನ ಮ್ಯಾನುಯಲ್ ಮೂಲಕ ಕಾರಿನಲ್ಲಿ ಎಷ್ಟು ತೂಕವನ್ನು ಸಾಗಿಸಬಹುದು ಎಂಬುದನ್ನು ತಿಳಿಯಬಹುದು.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ವಿವಿಧ ಪರೀಕ್ಷೆಗಳ ನಂತರ ಎಷ್ಟು ತೂಕವನ್ನು ಕೊಂಡೊಯ್ಯಬಹುದು ಎಂಬುದನ್ನು ಕಾರು ತಯಾರಕ ಕಂಪನಿಗಳು ಶಿಫಾರಸು ಮಾಡುತ್ತವೆ. ಶಿಫಾರಸು ಮಾಡಿದ ಪ್ರಮಾಣದ ತೂಕವನ್ನು ಕೊಂಡೊಯ್ದರೆ ಪರ್ಫಾಮೆನ್ಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ತೂಕವನ್ನು ಕೊಂಡೊಯ್ದರೆ ಕಾರಿನಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಕಾರಿನ ಮೈಲೇಜ್ ಮೇಲೆ ಪರಿಣಾಮ ಬೀರುವುದರ ಜೊತೆಗೆ ಕಾರಿನ ಸಸ್ಪೆಂಷನ್, ಟಯರ್, ಟ್ರಾನ್ಸ್'ಮಿಷನ್ ಹಾಗೂ ಎಂಜಿನ್‌ಗೆ ಹಾನಿಯುಂಟಾಗುತ್ತದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಆದ್ದರಿಂದ ಕಾರು ಅನಗತ್ಯ ವಸ್ತುಗಳಿಂದ ತುಂಬಿ ಹೋಗಿದ್ದರೆ, ಅವುಗಳನ್ನು ತಕ್ಷಣವೇ ತೆಗೆದು ಹಾಕಿ. ಭಾರತದಲ್ಲಿ ಇಂಧನ ಬೆಲೆಗಳು ಗಗನಕ್ಕೇರಿವೆ. ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರು ಇಂಧನಕ್ಕಾಗಿ ಪ್ರತಿ ತಿಂಗಳು ದೊಡ್ಡ ಮೊತ್ತವನ್ನು ಮೀಸಲಿಡ ಬೇಕಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಇವುಗಳ ಜೊತೆಗೆ ಸಮಯಕ್ಕೆ ಸರಿಯಾಗಿ ಕಾರ್‌ಗೆ ಸರ್ವೀಸ್ ಮಾಡಿಸುವ ಮೂಲಕ, ಗುಣಮಟ್ಟದ ಇಂಧನವನ್ನು ಬಳಸುವ ಮೂಲಕ, ಕಾರುಗಳು ಉತ್ತಮ ಮೈಲೇಜ್ ಪಡೆಯುವಂತೆ ಮಾಡಬಹುದು. ಇದರಿಂದ ಕಾರುಗಳ ಜೀವಿತಾವಧಿ ಸಹ ಹೆಚ್ಚುತ್ತದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಇನ್ನು ಸಾರ್ವಕಾಲಿಕ ದಾಖಲೆ ಕಾಣುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ವಾಹನ ಸವಾರರು ಹೈರಾಣಾಗಿ ಹೋಗಿದ್ದು, ನಿಯಂತ್ರಣ ತಪ್ಪಿರುವ ಪೆಟ್ರೋಲ್ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರವು ಹೊಸ ನಿರ್ಣಯ ಕೈಗೊಂಡಿದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಕೇಂದ್ರ ಸರ್ಕಾರವು 2023ರ ವೇಳೆಗೆ ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣವನ್ನು 20%ನಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ಈ ಮೊದಲು 2030ರ ವೇಳೆಗೆ ಪೆಟ್ರೋಲ್‌ನಲ್ಲಿ ಬೆರೆಸಿದ ಎಥೆನಾಲ್ ಪ್ರಮಾಣವನ್ನು 20%ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿತ್ತು.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಆದರೆ ನಿಯಂತ್ರಣ ತಪ್ಪಿರುವ ಪೆಟ್ರೋಲ್ ಬೆಲೆಗೆ ಕಡಿವಾಣ ಹಾಕಲು ಎಥೆನಾಲ್ ಮಿಶ್ರಣ ಪ್ರಮಾಣವನ್ನು ನಿಗದಿತ ಅವಧಿಯೊಳಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಪೆಟ್ರೋಲ್ ಬೆಲೆ ಇಳಿಕೆ ಹೊಸ ಯೋಜನೆಯು ಸಾಕಷ್ಟು ಸಹಕಾರಿಯಾಗಿದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಪ್ರಸಕ್ತ ವರ್ಷದ ಎಥೆನಾಲ್ ಪೂರೈಕೆಯಲ್ಲಿ ಭಾರತ ಸರ್ಕಾರವು ಶೇಕಡಾ 10ರಷ್ಟು ಸಂಯೋಜಿತ ಎಥೆನಾಲ್ ಪೆಟ್ರೋಲ್ ಪೂರೈಕೆ ಮಾಡುವ ಗುರಿ ಹೊಂದಿದ್ದು, ಸಂಯೋಜಿತ ಇಂಧನಕ್ಕಾಗಿ ಕನಿಷ್ಠ 4 ಬಿಲಿಯನ್ ಲೀಟರ್ ಎಥೆನಾಲ್ ಅಗತ್ಯವಿದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಸಾಮಾನ್ಯವಾಗಿ ಎಥೆನಾಲ್‌ ತೈಲಕ್ಕೆ ಬೃಹತ್‌ ಕೈಗಾರಿಕೆಗಳಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚುವರಿ ಸಕ್ಕರೆ ಉತ್ಪಾದನೆಯಿಂದಾಗಿ ನಷ್ಟವಾಗುವುದನ್ನು ತಪ್ಪಿಸಲು ಹೆಚ್ಚುವರಿಯಾಗಿ ಉತ್ಪಾದನೆಯಿಂದ ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳನ್ನು ಎಥೆನಾಲ್‌ ಆಗಿ ಪರಿವರ್ತಿಸಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಕರ್ನಾಟಕ ರಾಜ್ಯದಲ್ಲಿಯೇ ಸುಮಾರು 50 ಕ್ಕಿಂತ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಪ್ರತಿ ನಿತ್ಯ ಈ ಕಾರ್ಖಾನೆಗಳ ಮೂಲಕ ಸಕ್ಕರೆಯನ್ನು ಉತ್ಪಾದಿಸಲು ಅವಶ್ಯಕವಿರುವ ಕಬ್ಬನ್ನು ಪ್ರತ್ಯೇಕಿಸಿ ನೇರವಾಗಿ ಎಥೆನಾಲ್‌ನ್ನು ಉತ್ಪಾದಿಸಿ 400 ಮಿಲಿಯನ್‌ ಲೀಟರ್‌ ಎಥೆನಾಲ್‌ ಸಂಗ್ರಹಿಸಬಹುದಾಗಿದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಪ್ರಸ್ತುತ ಕರ್ನಾಟಕ ಒಂದರಲ್ಲೇ 30-35 ಮಿಲಿಯನ್‌ ಲೀಟರ್‌(ಶೇ.5)ರಷ್ಟು ಎಥೆನಾಲ್‌ನ್ನು ಮಾತ್ರ ಪೆಟ್ರೋಲ್‌ ಮಿಶ್ರಣಕ್ಕೆ ಬಳಕೆಯಾಗುತ್ತಿದ್ದು, ಉಳಿದಂತೆ ಉತ್ಪಾದನೆಯು ನೆರೆ ರಾಜ್ಯಗಳಲ್ಲಿ ತೈಲ ಮಿಶ್ರಣಕ್ಕೆ ಉಪಯೋಗವಾಗುತ್ತಿದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಶರ್ಕರಾಂಶವಿರುವ ಸಸ್ಯಗಳು, ಕೃಷಿತ್ಯಾಜ್ಯಗಳು, ಕಬ್ಬಿನ ಸಿಪ್ಪೆ (ಕಾಕಂಬಿ), ಬೆಳೆ ತ್ಯಾಜ್ಯಗಳು, ಭತ್ತದ ಹುಲ್ಲು, ನಿರುಪಯುಕ್ತ ಹಣ್ಣುಗಳು, ಗೇರು ಹಣ್ಣು ಇತ್ಯಾದಿಗಳಿಂದ ಜೈವಿಕ ಎಥೆನಾಲ್‌ ಉತ್ಪಾದಿಸಲು ಸಾಧ್ಯವಿದ್ದು, ವಿವಿಧ ರಾಜ್ಯಗಳಲ್ಲಿನ ಸಕ್ಕರೆ ಕಾರ್ಖಾನೆಗಳ ಮೂಲಕ ಅಗತ್ಯವಿರುವ 4 ಬಿಲಿಯನ್ ಲೀಟರ್ ಎಥೆನಾಲ್ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವುದರಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ವಾಯುಮಾಲಿನ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಈ ಎರಡೂ ಸಮಸ್ಯೆಗಳು ಭಾರತಕ್ಕೆ ತಲೆನೋವಾಗಿ ಪರಿಣಮಿಸಿವೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಪರ್ಯಾಯ ಇಂಧನಗಳ ಮೂಲಕ ಚಲಿಸುವ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆಗಳನ್ನು ಕೊನೆಗಾಣಿಸಲು ಮುಂದಾಗಿದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಎಥೆನಾಲ್ ಬಳಕೆಯನ್ನು ಹೆಚ್ಚಿಸುವುದರಿಂದ ರೈತರಿಗೆ ಸಹ ಪ್ರಯೋಜನವಾಗಲಿದೆ ಎಂಬುದು ಗಮನಾರ್ಹ. ಎಥೆನಾಲ್ ಜೊತೆಗೆ ಕೇಂದ್ರ ಸರ್ಕಾರವು ಪರಿಸರ ಸ್ನೇಹಿ ಇಂಧನಗಳಾದ ಸಿಎನ್‌ಜಿ ಹಾಗೂ ಎಲ್‌ಎನ್‌ಜಿ ಬಳಕೆಯನ್ನು ಸಹ ಉತ್ತೇಜಿಸುತ್ತಿದೆ.

ಕಾರುಗಳು ಹೆಚ್ಚು ಇಂಧನ ಬಳಸಲು ಪ್ರಮುಖ ಕಾರಣಗಳಿವು

ಇವುಗಳ ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ನಿಧಾನವಾಗಿ ಹೆಚ್ಚಾಗುತ್ತಿದೆ. ಕಚ್ಚಾ ತೈಲ ಆಮದು ಹಾಗೂ ವಾಯುಮಾಲಿನ್ಯ ಕಡಿತಗೊಳಿಸಲು ಎಲೆಕ್ಟ್ರಿಕ್ ವಾಹನಗಳು ನೆರವಾಗಲಿವೆ. ಕೇಂದ್ರ ಸರ್ಕಾರ ಮಾತ್ರವಲ್ಲದೇ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ.

Most Read Articles

Kannada
English summary
Reasons for car consuming more fuel than usual. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X