ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ!

By Manoj Bk

ದೀರ್ಘಕಾಲದವರೆಗೆ ಕಾರುಗಳನ್ನು ಹೊಂದಿದ್ದರೆ, ಅವುಗಳ ಜೊತೆಗೆ ಮರೆಯಲಾಗದ ನೆನಪುಗಳಿರುತ್ತವೆ. ಈ ಕಾರಣಕ್ಕೆ ಬಹುತೇಕ ಜನರು ಆ ಕಾರುಗಳನ್ನು ಮಾರಾಟ ಮಾಡಲು ಇಚ್ಛಿಸುವುದಿಲ್ಲ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಆದರೆ ಹಳೆಯ ಕಾರುಗಳಲ್ಲಿ ಕಂಡು ಬರುವ ಕೆಲವು ಲಕ್ಷಣಗಳು ಆ ಕಾರುಗಳನ್ನು ಮಾರಾಟ ಮಾಡಿ ಹೊಸ ಖರೀದಿಸುವುದು ಉತ್ತಮ ಎಂಬುದನ್ನು ಸೂಚಿಸುತ್ತವೆ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಹಳೆಯ ಕಾರು ಅಂದಾಕ್ಷಣ ಅದು ಬಳಕೆಗೆ ಯೋಗ್ಯವಿಲ್ಲ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಆದರೆ ಬಳಕೆಯ ಯೋಗ್ಯವಾದ ಮಾನದಂಡಗಳಿದ್ದಲ್ಲಿ ಮುಂದುವರಿಸಬಹುದು. ಒಂದು ವೇಳೆ ಈ ಕೆಳಗಿನ ಲಕ್ಷಣಗಳು ಕಂಡುಬಂದಲ್ಲಿ ಹೊಸ ಕಾರು ಖರೀದಿಗೆ ಖರೀದಿಸುವುದು ಒಳಿತು.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಆಗಾಗ್ಗೆ ರಿಪೇರಿಗೆ ಬರುವುದು

ಕೆಲವೊಮ್ಮೆ ಹಳೆಯ ಕಾರುಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತವೆ. ಹಳೆಯ ಕಾರುಗಳಲ್ಲಿರುವ ಸಸ್ಪೆಂಷನ್ ಅಥವಾ ಟ್ರಾನ್ಸ್ ಮಿಷನ್ ಸೆಟಪ್'ಗಳನ್ನು ಸರಿಪಡಿಸಲು ದುಬಾರಿ ಬೆಲೆ ತೆರಬೇಕಾಗುತ್ತದೆ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಈ ಸಂದರ್ಭಗಳಲ್ಲಿ ಹಳೆ ಕಾರುಗಳ ಸರಿಪಡಿಸಲು ಪದೇ ಪದೇ ಖರ್ಚು ಮಾಡುವುದಕ್ಕಿಂತ ಎಕ್ಸ್‌ಚೆಂಜ್ ಆಫರ್‌ಗಳಲ್ಲಿ ಹೊಸ ಕಾರು ಖರೀದಿಸುವುದು ಸೂಕ್ತ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಇಂತಹ ಸಮಸ್ಯೆಗಳನ್ನು ತಕ್ಷಣವೇ ಪತ್ತೆ ಹಚ್ಚಿ ಸರಿಪಡಿಸಬೇಕು. ಕೆಲವೊಮ್ಮೆ ಈ ಭಾಗಗಳನ್ನು ಸರಿಪಡಿಸಲು ಕಾರಿನ ಮೌಲ್ಯಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಇಲ್ಲದಿದ್ದರೆ ಹಳೆಯ ಕಾರಿಗೆ ಹೆಚ್ಚು ಹಣ ಖರ್ಚು ಮಾಡುತ್ತಲೇ ಇರಬೇಕಾಗುತ್ತದೆ. ಈ ರೀತಿ ಖರ್ಚು ಮಾಡುವುದಕ್ಕಿಂತ ಹೊಸ ಕಾರು ಖರೀದಿಸುವುದು ಉತ್ತಮ. ಅನಗತ್ಯ ಖರ್ಚು ತಪ್ಪಿಸಲು ಇದರಿಂದ ಸಹಾಯವಾಗುತ್ತದೆ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ವಿಶ್ವಾಸಾರ್ಹತೆ

ಕೆಲವೊಮ್ಮೆ ಕಾರುಗಳು ಎಂಜಿನ್ ಹೊಂದಿರುತ್ತವೆ ಎಂಬುದನ್ನು ಮರೆಯುತ್ತೇವೆ. ಕಾರುಗಳನ್ನು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಾಗಿ ಸತತವಾಗಿ ಚಾಲನೆ ಮಾಡಲು ಸಾಧ್ಯವಿಲ್ಲ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಧೀರ್ಘಕಾಲದ ಎಂಜಿನ್ ಬಳಕೆಯು ಕೆಲವೊಮ್ಮೆ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಮತ್ತು ಹೆಚ್ಚು ಸುರಕ್ಷಿತವಾಗಿ ವಾಹನಗಳಿಗೆ ಅಪ್‌ಗ್ರೇಡ್ ಹೊಂದುವುದರಿಂದ ಹಲವಾರು ಪ್ರಯೋಜನಗಳಿವೆ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಕಾರುಗಳನ್ನು ಯಾವುದೇ ಸಮಯದಲ್ಲಿ ರಿಪೇರಿ ಮಾಡಬಹುದು. ಆದರೆ ಪದೇ ಪದೇ ರಿಪೇರಿಗೆ ಬರುವ ಕಾರುಗಳನ್ನು ಹೊರಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಹೊಸ ಕಾರು ಖರೀದಿಸುವುದು ಉತ್ತಮ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಭದ್ರತೆ

ಕಾರಿನ ಸುರಕ್ಷತೆಯ ಜೊತೆಗೆ ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಕಾರು ಪ್ರಯಾಣಕ್ಕೆ ಸುರಕ್ಷಿತವಲ್ಲ ಎಂಬುದು ಕಂಡು ಬಂದರೆ ಅದನ್ನು ಲಘುವಾಗಿ ಪರಿಗಣಿಸದೇ ಹೊಸ ಕಾರು ಖರೀದಿಸುವುದು ಒಳ್ಳೆಯದು.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಇಂಧನ

ಕಾರು ನಿಗದಿಗಿಂತ ಹೆಚ್ಚಿನ ಇಂಧನವನ್ನು ಬಳಸುತ್ತಿದ್ದರೆ, ಹೊಸ ಕಾರಿಗೆ ಬದಲಿಸುವುದು ಒಳ್ಳೆಯದು. ಕಾರು ಅನಗತ್ಯವಾಗಿ ಹೆಚ್ಚು ಇಂಧನ ಬಳಸುತ್ತಿದ್ದರೆ ಅದು ಹೊಸ ಕಾರಿಗೆ ಬದಲಿಸುವುದರ ಸಂಕೇತವಾಗಿದೆ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಕಾರಿನ ಮೈಲೇಜ್ ಕ್ಷೀಣಿಸುತ್ತಿದ್ದರೆ, ಅದನ್ನು ಸರಿಪಡಿಸಲು ಕಷ್ಟವಾಗುತ್ತದೆ. ಏಕೆಂದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ದಿನೇ ದಿನೇ ಹೆಚ್ಚುತ್ತಿವೆ. ಈಗಾಗಲೇ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಭಾರತದಂತಹ ದೇಶಗಳಲ್ಲಿ ನಾವು ಇಂಧನ ಆರ್ಥಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ. ಮೈಲೇಜ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಹೊಸ ಕಾರು ಖರೀದಿಸುವುದು ಒಳ್ಳೆಯದು. ಇಲ್ಲದಿದ್ದರೆ ಇಂಧನಕ್ಕಾಗಿಯೇ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಇಂಟಿರಿಯರ್

ಕಾರಿನ ಇಂಟಿರಿಯರ್ ಕಾರು ಬದಲಿಸುವ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಇಂಟಿರಿಯರ್ ಕಾರಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಕಾರಿನ ಇಂಟಿರಿಯರ್ಶಿಥಿಲಗೊಳ್ಳುವುದು ಕಾರು ಹಳೆಯದಾಗುತ್ತಿದೆ ಎಂಬುದರ ಸಂಕೇತವಾಗಿದೆ.

ಹಳೆಯ ಕಾರುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಾರು ಬದಲಿಸಿ

ಸುಧಾರಿತ ತಂತ್ರಜ್ಞಾನ ಹೊಂದಿರುವ ಆರಾಮದಾಯಕ ಆಸನ ಸೌಲಭ್ಯದ ಜೊತೆಗೆ ಅಪಘಾತದಂತಹ ಸಂದರ್ಭದಲ್ಲಿ ಹೆಚ್ಚಿನ ಮಟ್ಟದ ಸುರಕ್ಷತೆಯನ್ನು ಖಾತ್ರಿಪಡಿಸುವ ವಾಹನಗಳನ್ನು ಸಾಧ್ಯವಿದ್ದಷ್ಟು ಬಳಕೆ ಮಾಡಿ.

More from DriveSpark

Article Published On: Monday, May 31, 2021, 11:43 [IST]
English summary
Signs which indicates to change a old car to new car. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+