ಸಡನ್ ಆಗಿ ಭೂಮಿ ಕಂಪಿಸಿದರೆ ಏನ್ ಮಾಡೋದು?

By Nagaraja

ನೆರೆಯ ಪಾಕಿಸ್ತಾನ ಸೇರಿದಂತೆ ಉತ್ತರ ಭಾರತದ ಹಲೆವೆಡೆಗಳಲ್ಲಿ ಮತ್ತೆ ಪ್ರಬಲ ಭೂಕಂಪನದ ಅನುಭವವಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮುಂಚಿತವಾಗಿ ಪ್ರಕೃತಿ ವಿಕೋಪಗಳ ಕುರಿತಾಗಿ ನಿಖರವಾಗಿ ಅರಿಯುವುದು ಕಷ್ಟಕರ. ಅಧ್ಯಯನ ವರದಿಯೊಂದರ ಪ್ರಕಾರ ಪ್ರಾಣಿ, ಪಕ್ಷಿಗಳಿಗೆ ಮಾತ್ರ ಭೂಕಂಪನದ ಅನುಭವವನ್ನು ಮುಂಚಿತವಾಗಿ ಅರಿಯಲು ಸಾಧ್ಯವಂತೆ!

ಹಾಗೊಂದು ವೇಳೆ ನೀವು ಚಾಲನೆ ಮಾಡುತ್ತಿರುವ ಸಡನ್ ಆಗಿ ಭೂಮಿ ಕಂಪಿಸಿದರೆ ಏನ್ ಮಾಡೋದು? ಗಾಬರಿಯಾಗದಿರಿ. ವಿಚಲಿತರಾಗದಿರಿ. ಬನ್ನಿ ನಾವಿಂದು ಹೇಳಿಕೊಡುವ ಕೆಲವು ಅಂಶಗಳನ್ನು ಓದಿ ಇಂತಹ ಪರಿಸ್ಥಿತಿಗಳಿಂದ ಪಾರಾಗಲು ಪ್ರಯತ್ನಿಸಿರಿ.

01. ಕಟ್ಟಡದಿಂದ ದೂರ ಸರಿಯಿರಿ

01. ಕಟ್ಟಡದಿಂದ ದೂರ ಸರಿಯಿರಿ

ಹಾಗೊಂದು ವೇಳೆ ಭೂಕಂಪನದ ಅನುಭವಾದ್ದಲ್ಲಿ ಆದಷ್ಟು ಬೇಗ ನಿಮ್ಮ ಕಾರನ್ನು ಕಟ್ಟಡದ ಅಡಿಯಲ್ಲಿ ಪಾರ್ಕ್ ಮಾಡಿದ್ದರೆ ತಕ್ಷಣ ದೂರ ಸರಿಯಿರಿ. ಇನ್ನು ಮರಗಳು, ಸೇತುವೆಗಳ ಅಡಿಯಲ್ಲೂ ವಾಹನ ಸಂಚಾರದ ಗೋಜಿಗೆ ಹೋಗಬೇಡಿ.

02. ಗಾಡಿ ನಿಧಾನಗೊಳಿಸಿ

02. ಗಾಡಿ ನಿಧಾನಗೊಳಿಸಿ

ಬಳಿಕ ಗಾಡಿಯನ್ನು ತಕ್ಷಣ ನಿಧಾನೆಗೂಳಿಸಿ ಖಾಲಿ ಜಾಗದಲ್ಲಿ ಸುರಕ್ಷಿತವಾಗಿ ವಾಹನ ನಿಲುಗಡೆಗೊಳಿಸಿರಿ.

03. ಎಂಜಿನ್ ಆಫ್ ಮಾಡಿ ಹ್ಯಾಂಡ್ ಬ್ರೇಕ್ ಹಾಕಿ

03. ಎಂಜಿನ್ ಆಫ್ ಮಾಡಿ ಹ್ಯಾಂಡ್ ಬ್ರೇಕ್ ಹಾಕಿ

ತದಾ ಬಳಿಕ ಎಂಜಿನ್ ಆಫ್ ಮಾಡಿಟ್ಟು ಹ್ಯಾಂಡ್ ಬ್ರೇಕ್ ಹಾಕಲು ಮರೆಯದಿರಿ.

04. ಕಾರಿನಲ್ಲೇ ಉಳಿದುಕೊಳ್ಳಿ

04. ಕಾರಿನಲ್ಲೇ ಉಳಿದುಕೊಳ್ಳಿ

ಭೂಮಿ ಕಂಪನವಾಗುತ್ತಿದ್ದಲ್ಲಿ ಕಾರಿನಲ್ಲೇ ಉಳಿದುಕೊಳ್ಳುವುದು ಉತ್ತಮ. ನಿಮ್ಮ ಸಹ ಪ್ರಯಾಣಿಕರು ಸಹ ಸುರಕ್ಷಿತವಾಗಿದ್ದರೆ ಎಂಬುದನ್ನು ಖಾತ್ರಿಪಡಿಸಿ.

05. ರೇಡಿಯೊ ಆಲಿಸಿ

05. ರೇಡಿಯೊ ಆಲಿಸಿ

ಕಾರಿನಲ್ಲಿರುವ ರೇಡಿಯೋ ಆನ್ ಮಾಡಿಟ್ಟು ಅಧಿಕೃತ ಸಂದೇಶ ಅಥವಾ ಎಚ್ಚರಿಕಾ ಸೂಚನೆಗಳಿಂದ ಅಧಿಕೃತ ಮಾಹಿತಿಯನ್ನು ಪಡೆಯಿರಿ.

06. ಫೋನ್ ಸಂಭಾಷಣೆ ಬೇಡ

06. ಫೋನ್ ಸಂಭಾಷಣೆ ಬೇಡ

ತೀವ್ರ ತರಹದ ಗಾಯವಾಗಿಲ್ಲವಾದರೆ ಫೋನ್ ಸಂಭಾಷಣೆಯಿಂದ ದೂರವಿರಿ. ಇದು ಭೂಕಂಪ ಪೀಡಿತ ಪ್ರದೇಶದಲ್ಲಿ ಅತಿ ಹೆಚ್ಚು ಮೊಬೈಲ್ ಟ್ರಾಫಿಕ್ ಇರುವುದರಿಂದ ಅಗತ್ಯ ಜನರಿಗೆ ಇದರ ನೆರವು ಬರಲಿದೆ.

07. ನಿಧಾನವಾಗಿ ಮುಂದೆ ಸಾಗಿ

07. ನಿಧಾನವಾಗಿ ಮುಂದೆ ಸಾಗಿ

ಎಲ್ಲವೂ ಸುರಕ್ಷಿತ ಅಂದ ಮೇಲೆ ಸ್ವಲ್ಪ ಸಮಯ ಆದ ಮೇಲೆ ನಿಧಾನವಾಗಿ ಮುಂದಕ್ಕೆ ಸಾಗಿ. ಯಾಕೆಂದರೆ ಭೂಮಿಯ ಆಂತರಿಕ ವಲಯದ ಪ್ಲೇಟ್ ಚಲನೆಯಿಂದ ಪದೇ ಪದೇ ಭೂಮಿ ಕಂಪಿಸುವ ಭೀತಿಯಿರುತ್ತದೆ.

08. ರಸ್ತೆಯನ್ನು ಗಮನಿಸಿ

08. ರಸ್ತೆಯನ್ನು ಗಮನಿಸಿ

ಭೂಮಿ ಕಂಪನದಿಂದ ರಸ್ತೆಯಲ್ಲಿ ಬಿರುಕು ಬಿಟ್ಟಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಅತ್ಯಂತ ಸೂಕ್ಷ್ಮತೆಯಿಂದ ಚಾಲನೆ ಮಾಡಿ.

09. ವಿದ್ಯುತ್ ಕೇಬಲ್

09. ವಿದ್ಯುತ್ ಕೇಬಲ್

ಇನ್ನು ಭೂಮಿ ಕಂಪನದಿಂದ ವಿದ್ಯುತ್ ಕೇಬಲ್ ರಸ್ತೆಯ ಮೇಲೆ ಬಿದ್ದು ಹೋಗಿರುವ ಸಾಧ್ಯತೆಯಿರುತ್ತದೆ. ಇದನ್ನು ಗಮನಿಸಲು ಮರೆಯದಿರಿ.

10. ಸುನಾಮಿ ಎಚ್ಚರಿಕೆ

10. ಸುನಾಮಿ ಎಚ್ಚರಿಕೆ

ಹಾಗೊಂದು ವೇಳೆ ನೀವು ತೀರಾ ಪ್ರದೇಶದಲ್ಲಿ ವಾಹನ ಚಾಲನೆ ಮಾಡುತ್ತಿದ್ದಲ್ಲಿ ಭೂಕಂಪದ ಬೆನ್ನಲ್ಲೇ ಸುನಾಮಿ ಭೀತಿಯಿರುವ ಸಾಧ್ಯತೆಯಿದ್ದು, ಹಾಗಾಗಿ ತಕ್ಷಣ ಅಲ್ಲಿಂದ ಸುರಕ್ಷಿತ ತಾಣಕ್ಕೆ ತೆರಳಬೇಕಾಗುತ್ತದೆ.

More from DriveSpark

Article Published On: Tuesday, May 12, 2015, 15:45 [IST]
English summary
How to Survive an Earthquake while driving a car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+