ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ಟಯರ್‌ಗಳು ವಾಹನದ ಪ್ರಮುಖ ಭಾಗಗಳಲ್ಲಿ ಒಂದಾಗಿವೆ. ವಾಹನಗಳನ್ನು ಹೊರ ತೆಗೆಯುವ ಮುನ್ನ ಟಯರ್‌ಗಳು ಸುಸ್ಥಿತಿಯಲ್ಲಿದ್ದು, ಸಂಚಾರಕ್ಕೆ ಯೋಗ್ಯವಾಗಿವೆ ಎಂಬುದನ್ನು ವಾಹನ ಸವಾರರು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ಟಯರ್‌ಗಳಲ್ಲಿ ನಿಧಾನವಾಗಿ ಗಾಳಿ ಹೊರ ಹೊಗುತ್ತಿದ್ದರೆ ಟಯರ್ ನಿಧಾನ ಪಂಕ್ಚರ್ ಅಂದರೆ ಸ್ಲೋ ಪಂಕ್ಚರ್ ಆಗಿದೆ ಎಂದರ್ಥ. ವಾಹನದ ಟಯರ್ ನಿಧಾನಕ್ಕೆ ಗಾಳಿಯ ಒತ್ತಡವನ್ನು ಕಳೆದುಕೊಂಡಾಗ ನಿಧಾನ ಪಂಕ್ಚರ್ ಆಗಿರುತ್ತದೆ.

ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ಸಮಸ್ಯೆ ಇದೇ ಎಂದು ತಿಳಿಯುವ ಮೊದಲೇ ವಾಹನವು ಸಾಕಷ್ಟು ದೂರ ಚಲಿಸಿದೆ ಎಂದರ್ಥ. ಟಯರ್‌ನಿಂದ ಗಾಳಿಯು ಹೊರಬರುತ್ತಿದೆ ಎಂದು ವಾಹನ ಸವಾರರಿಗೆ ತಿಳಿಯದೇ ಹೋದರೆ ಅಂತಹ ವಾಹನಗಳು ಅಪಘಾತಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ.

ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ಸ್ಲೋ ಪಂಕ್ಚರ್ ಸಮಸ್ಯೆ ಇದ್ದಾಗ ವಾಹನವನ್ನು ಹೆಚ್ಚು ದೂರ ಚಾಲನೆ ಮಾಡದೇ ಇರುವುದು ಒಳ್ಳೆಯದು. ಸ್ಲೋ ಪಂಕ್ಚರ್ ಸಮಸ್ಯೆಯನ್ನು ಕೆಲವು ಲಕ್ಷಣಗಳಿಂದಗುರುತಿಸಬಹುದು.

ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ಟಯರ್‌ನಲ್ಲಿ ಗಾಳಿ ಕಡಿಮೆಯಾದಾಗ ವಾಹನವು ಒಂದು ಬದಿಗೆ ಎಳೆದಂತಾಗುತ್ತದೆ. ಜೊತೆಗೆ ಕೆಲವು ರೀತಿಯ ಶಬ್ದಗಳನ್ನು ಕೇಳಬಹುದು. ರಸ್ತೆ ಮೇಲೆ ಬಿದ್ದಿರುವ ಯಾವುದಾದರೂ ವಸ್ತು ಟಯರ್‌ನಲ್ಲಿ ಸಿಲುಕಿಕೊಂಡರೆ ಈ ರೀತಿಯ ಶಬ್ದವನ್ನು ಕೇಳಬಹುದು.

ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳಲ್ಲಿ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅಳವಡಿಸಲಾಗಿರುತ್ತದೆ. ಈ ಸಿಸ್ಟಂ ಟಯರ್‌ನಲ್ಲಿನ ಗಾಳಿಯ ಒತ್ತಡದಲ್ಲಿ ಇಳಿಕೆ ಕಂಡುಬಂದಲ್ಲಿ ವಾಹನ ಸವಾರರನ್ನು ಎಚ್ಚರಿಸುತ್ತದೆ.

ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ಆದರೆ ಎಲ್ಲಾ ಕಾರುಗಳು ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಹೊಂದಿರುವುದಿಲ್ಲ. ಆದ್ದರಿಂದ ಟಯರ್ ಪಂಕ್ಚರ್ ಆಗಿರುವುದರನ್ನು ಪರೀಕ್ಷಿಸಲು ಈ ತಂತ್ರಜ್ಞಾನವನ್ನು ಮಾತ್ರ ಅವಲಂಬಿಸುವುದು ಒಳ್ಳೆಯದಲ್ಲ.

ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ಸ್ಲೋ ಪಂಕ್ಚರ್ ಸಮಸ್ಯೆಯನ್ನು ಮುಂಚಿತವಾಗಿ ಪತ್ತೆ ಮಾಡಿದರೆ, ಗಾಳಿಯನ್ನು ಟಯರ್‌ನಲ್ಲಿ ಇರಿಸಿಕೊಳ್ಳುವ ಮೂಲಕ ಸ್ವಲ್ಪ ದೂರ ಸುರಕ್ಷಿತವಾಗಿ ಪ್ರಯಾಣಿಸಬಹುದು. ಪ್ರಯಾಣ ಅತ್ಯಗತ್ಯವಾಗಿದ್ದರೆ ಮಾತ್ರ ಮುಂದುವರೆಯುವುದು ಸೂಕ್ತ.

ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ವಾಹನದ ಇತರ ಟಯರ್‌ಗಳಿಗೆ ಹೋಲಿಸಿದರೆ ಸ್ಲೋ ಪಂಕ್ಚರ್ ಆಗಿರುವ ಟಯರ್‌ನ ಆಕಾರ ಸ್ವಲ್ಪ ಬದಲಾಗಿರುತ್ತದೆ. ಇದು ಟಯರ್'ನಲ್ಲಿ ಸ್ಲೋ ಪಂಕ್ಚರ್ ಆಗಿದೆ ಎಂಬುದರ ಸಂಕೇತವಾಗಿದೆ.

ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ಸ್ಲೋ ಪಂಕ್ಚರ್ ಆಗಿದ್ದರೆ ವಾಹನವು ಒಂದು ಬದಿಗೆ ಎಳೆಯುತ್ತದೆ. ಈ ಲಕ್ಷಣ ಕಂಡುಬಂದರೆ ತಕ್ಷಣ ವಾಹನವನ್ನು ನಿಲ್ಲಿಸಿ ಟಯರ್ ಅನ್ನು ಪರೀಕ್ಷಿಸುವುದು ಒಳ್ಳೆಯದು. ಕಾಲಕಾಲಕ್ಕೆ ಟಯರ್‌ನ ಏರ್ ಪ್ರೆಷರ್ ಪರೀಕ್ಷಿಸುವುದು ಸಹ ಒಳ್ಳೆಯದು.

ಟಯರ್‌ಗಳಲ್ಲಿ ಸ್ಲೋ ಪಂಕ್ಚರ್ ಆಗಿರುವುದನ್ನು ತಿಳಿಯುವ ಸರಳ ವಿಧಾನಗಳಿವು

ಮನೆಯಿಂದ ಹೊರಡುವಾಗ ಟಯರ್'ನಲ್ಲಿ ಏರ್ ಪ್ರೆಷರ್ ಪರೀಕ್ಷಿಸಿ ಕೊಂಡರೆ ಪ್ರಯಾಣದ ಮಧ್ಯದಲ್ಲಿ ಅನಗತ್ಯ ಸಮಸ್ಯೆ ಉಂಟಾಗುವುದನ್ನು ತಪ್ಪಿಸಬಹುದು. ನಿರ್ಲಕ್ಷ್ಯ ವಹಿಸಿದರೆ ಅಪಾಯ ಸಂಭವಿಸುವ ಸಾಧ್ಯತೆಗಳೇ ಹೆಚ್ಚು.

Most Read Articles

Kannada
English summary
Tips to know about slow puncture in tyres. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X