ಬೈಕ್ ಖರೀದಿಸುವರಿಗೆ ಉಪಯುಕ್ತ ಸಲಹೆಗಳು
ನಿಮ್ಮ ಬಜೆಟ್: ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂತಾರಲ್ಲ. ಹಾಗೆ ಮೊದಲನೆಯದಾಗಿ ನಿಮ್ಮ ಬಜೆಟ್ ಮಿತಿಯನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮ ಬಜೆಟ್ 60 ಸಾವಿರ ರು. ಆಗಿದ್ರೆ ಆ ದರದ ಆಸುಪಾಸಿನಲ್ಲಿರುವ ಬೈಕ್ ಖರೀದಿಸಿ. ನಿಮಗೆ 80 ಸಾವಿರ ರು.ನ ಪಲ್ಸರ್ ಬೇಕಾಂದ್ರೆ ಒಂದೆರಡು ತಿಂಗಳು ಕಾದು ಹಣ ಹೊಂದಿಸಿ ನಿಮ್ಮ ಕನಸಿನ ಬೈಕ್ ಖರೀದಿಸಬೇಕು. ಅಥವಾ 45 ಸಾವಿರ ರು. ನ ಬೈಕ್ ಸಾಕೆಂದು ನಿರ್ಧರಿಸಿದ್ರೆ ಅದೇ ರೇಂಜಿನ ಬೈಕ್ ಪರಿಶೀಲಿಸಿ.
ರಿಸರ್ಚ್: ನೀವು ಸುಮಾರು 10 ಬೈಕನ್ನು ಪಟ್ಟಿಮಾಡಿಕೊಳ್ಳುತ್ತೀರಿ. ಅದರಲ್ಲಿ ನಿಮಗೆ ಇಷ್ಟವಾಗದ ಬೈಕುಗಳನ್ನು ಡಿಲಿಟ್ ಮಾಡುತ್ತ ಬನ್ನಿ. ಹತ್ತು ಬೈಕುಗಳಲ್ಲಿ ಅಂತಿಮವಾಗಿ ಎರಡು ಅಥವಾ ಮೂರು ಬೈಕ್ ಉಳಿಸಿ. ಇದರಲ್ಲಿ ಯಾವುದನ್ನು ಖರೀದಿಸಬಹುದು ಎಂದು ಸಾವಧಾನವಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿರಿ.
ಟೆಸ್ಟ್ ಡ್ರೈವ್: ನೀವು ಅಂತಿಮವಾಗಿ ಆಯ್ಕೆ ಮಾಡಿಟ್ಟುಕೊಂಡ ಕೆಲವು ಬೈಕುಗಳಿವೆಯಲ್ವ? ನಿಮ್ಮ ಹತ್ತಿರದ ಶೋರೂಂಗೆ ಹೋಗಿ ಆ ಬೈಕುಗಳ ಬಗ್ಗೆ ಮಾತನಾಡಿ. ಟೆಸ್ಟ್ ಡ್ರೈವ್ ಮಾಡಿ. ಹೀಗೆ ಒಂದೆರಡು ಬೈಕ್ ಟೆಸ್ಟ್ ಡ್ರೈವ್ ಮಾಡಿನೋಡಿ. ಇದರಲ್ಲಿ ಯಾವುದು ಇಷ್ಟವಾಗುತ್ತೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು.
ಸ್ನೇಹಿತರು ಅಥವಾ ಪರಿಚಿತರಲ್ಲಿ ಮಾತನಾಡಿ: ನೀವು ಖರೀದಿಸಲಿರುವ ಬೈಕ್ ಬಗ್ಗೆ ನಿಮ್ಮ ಸ್ನೇಹಿತರು, ಸಂಬಂಧಿಕರು ಅಥವಾ ಪರಿಚಿತರಲ್ಲಿ ಅಭಿಪ್ರಾಯ ಪಡೆಯಿರಿ. ಅವರಿಗೆ ಆ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಬಹುದು. ಅಥವಾ ಯಾವ ಬೈಕ್ ಸೂಕ್ತವೆಂದು ಅವರಲ್ಲಿ ಕೇಳಿರಿ.
ಮೈಲೇಜ್ ತಲೆಕೆಡಿಸಕೊಳ್ಳಬೇಡಿ: ಒಂದೆರಡು ಕಿ.ಮೀ. ಮೈಲೇಜ್ ಅಂತರದ ಕುರಿತು ತಲೆಕೆಡಿಸಿಕೊಳ್ಳಬೇಡಿ. ಕೆಲವೊಮ್ಮೆ ಮೈಲೇಜ್ ಹೆಚ್ಚು ನೀಡುವ ಬೈಕಿನ ಶಕ್ತಿ ಕಡಿಮೆ ಇರಬಹುದು. ಹಾಗಂತ ಮೈಲೇಜ್ ಬಗ್ಗೆ ಕಡೆಗಣನೆಯೂ ಬೇಡ.
ಒಳ್ಳೆ ಕಂಪನಿಯನ್ನು ಆಯ್ಕೆ ಮಾಡಿ: ಹೆಚ್ಚು ನೆಟ್ವರ್ಕ್ ಇಲ್ಲದ, ಹೆಚ್ಚು ಸರ್ವಿಸ್ ಕೇಂದ್ರಗಳಿಲ್ಲದ, ಹೆಚ್ಚು ಗ್ರಾಹಕ ಸ್ನೇಹಿಯಾಗಿರದ ಕಂಪನಿಗಳಿಂದ ಬೈಕ್ ಖರೀದಿಸಬೇಡಿ. ಆದಷ್ಟು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಕಂಪನಿಯಿಂದಲೇ ಬೈಕ್ ಖರೀದಿಸಿರಿ.
ಹೀಗೆ ಬೈಕ್ ಖರೀದಿಸಲು ನಿಮಗೆ ಹಲವು ಸಲಹೆಗಳನ್ನು ನೀಡಬಹುದು. ಆದರೆ ಅಂತಿಮ ಆಯ್ಕೆ ನಿಮ್ಮದೇ. ನಿಮಗೆ ಯಾವ ಬೈಕ್ ಇಷ್ಟವಾಗುತ್ತೋ ಅದನ್ನೇ ಖರೀದಿಸಿ. ಅವನು ಹೇಳಿ ಇದನ್ನು ಖರೀದಿಸಿದೆ ಅಂತೆಲ್ಲ ಆಮೇಲೆ ಕೊರಗಬೇಡಿ. ಹ್ಯಾಪಿಯಾಗಿ ಬೈಕ್ ರೈಡ್ ಮಾಡಿ. ಆಲ್ ದಿ ಬೆಸ್ಟ್.


Click it and Unblock the Notifications









