ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ..!

Written By:

"ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ" ಈ ಜನಪ್ರಿಯ ಹಾಡು ಯಾರೊಬ್ಬರು ಇಷ್ಟಪಡದೇ ಇರಲಾರರು. ಯಾಕೇಂದ್ರೆ ಪ್ರತಿಯೊಬ್ಬರೂ ಮಳೆಯನ್ನು ಪ್ರೀತಿಸುತ್ತಾರೆ. ಆದ್ರೆ ಮಳೆಗಾಲದಲ್ಲಿ ವಾಹನ ಚಾಲನೆ ಮಾತ್ರ ತುಂಬಾನೇ ಕಷ್ಟ ಎಂಬುವುದು ಅಷ್ಟೇ ಮುಖ್ಯ. ಮಳೆ ಬಂತೆದಂರೆ ಸಾಕು ರಸ್ತೆಯೆಲ್ಲ ನೀರು, ಕೆಸರಾಗಿ ಮಾರ್ಪಡುತ್ತದೆ. ಅಷ್ಟಕ್ಕೂ ಮಳೆ ಬಂದ ಮೇಲೆ ಕಾರು ಸವಾರಿಯಂತೂ ಸಾಹಸ ಮಾಡಿದ್ದಂತೆ.

ಈ ಹಿನ್ನೆಲೆ ಮಳೆಗಾಲದಲ್ಲಿ ಸುರಕ್ಷಿತ ಚಾಲನೆಗಾಗಿ ಡ್ರೈವ್ ಸ್ಪಾರ್ಕ್ 10 ಸಲಹೆಗಳು ನೀಡುತ್ತಿದ್ದು, ಪ್ರತಿಯೊಬ್ಬರು ಈ ಸಲಹೆಗಳನ್ನು ತಪ್ಪದೇ ಪಾಲಿಸಿ ಆಗಬಹುದಾದ ಅನಾಹುತಕ್ಕೆ ಬ್ರೇಕ್ ಹಾಕಿ.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ಅಂದ ಹಾಗೆ ಮಳೆಗಾಲದಲ್ಲಿ ವಾಹನ ಸಂಚಾರ ಎಷ್ಟು ಆನಂದದಾಯಕವೋ ಅಷ್ಟೇ ಸವಾಲಿನಿಂದ ಕೂಡಿರುತ್ತದೆ. ಹಾಗಾಗಿ ನಿಮ್ಮ ಸುರಕ್ಷತೆಗಾಗಿ, ಮಳೆಗಾಲದಲ್ಲಿ ಡ್ರೈವಿಂಗ್ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಿದರೆ ಒಳಿತು.

ಅದರಲ್ಲಂತೂ ಧಾರಾಕಾರ ಮಳೆಯಾಗುತ್ತಿರುವ ಸಂದರ್ಭದಲ್ಲಿ ಹಾಗೆಯೇ ರಾತ್ರಿ ವೇಳೆಯಲ್ಲಿ ದೂರ ಪ್ರಯಾಣವನ್ನು ಕೈಗೊಳ್ಳದಿರಿ. ಅಷ್ಟಕ್ಕೂ ಮಳೆಗಾಲದಲ್ಲಿ ಸುರಕ್ಷಿತ ಚಾಲನೆಗಾಗಿ ಡ್ರೈವ್ ಸ್ಪಾರ್ಕ್ 10 ಸಲಹೆಗಳನ್ನು ನಿಮ್ಮ ಮುಂದಿಡುತ್ತಿದೆ.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ಮುನ್ನೆಚ್ಚರಿಕೆ

ವಿಶೇಷವಾಗಿಯೂ ಮಳೆಗಾಲದಲ್ಲಿ ನೀವು ಸ್ವಲ್ಪನೂ ಅಚಾತುರ್ಯ ತೋರಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಕಾರು, ಬೈಕು ಚಾಲನೆಗೂ ಮುನ್ನ ಕೆಲವೊಂದು ಮುನ್ನಚ್ಚೆರಿಕೆಗಳನ್ನು ಅನುಸರಿಸಿದರೆ ಒಳಿತು.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ನಿಧಾನವಾಗಿ ಚಲಿಸಿ...

ನಿಧಾನವೇ ಪ್ರಧಾನ ಎಂಬ ಗಾದೆ ಎಲ್ಲ ಕಾಲಕ್ಕೂ ಅನ್ವಯ. ಹೀಗಾಗಿ ಅವಸರವೇ ಅಘಾತಕ್ಕೆ ಕಾರಣ ಎಂಬ ವಾಹನ ವೇದ ವ್ಯಾಕವನ್ನು ಮರೆಯದಿರಿ.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ಮುಂದಿರುವ ವಾಹನವನ್ನು ಹಿಂಬಾಲಿಸಿ

ಜೋರಾಗಿ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಮುಂದಿರುವ ವಾಹನವನ್ನು ಓವರ್ ಟೇಕ್ ಮಾಡುವ ಗೋಜಿಗೆ ಹೋಗದಿರಿ. ಅಲ್ಲದೆ ಮುಂದಿನ ವಾಹನದೊಂದಿಗೆ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳಿ. ಇದರಿಂದ ಬ್ರೇಕ್ ಒತ್ತುವಷ್ಟು ಸದಾವಕಾಶ ನಿಮಗೆ ದೊರಕಲಿದೆ.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ಮಳೆಗಾಲದಲ್ಲಿ ಕಾರು ಚಾಲನೆ

ಮಳೆಗಾಲದಲ್ಲಿ ಡ್ರೈವಿಂಗ್ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿಯೂ ರಾತ್ರಿ ವೇಳೆ ಕಾರು ಚಲಾಯಿಸುತ್ತಿರುವಾಗ ಬಹುತೇಕ ಮಾರ್ಗ ಮಧ್ಯೆ ಸಂಚರಿಸುತ್ತಿರುವುದಾಗಿ ಖಾತ್ರಿಪಡಿಸಿ. ಇದರರ್ಥ ಲೇನ್ ನಿಯಮ ಉಲ್ಲಂಘಿಸಬೇಕೇಂದಲ್ಲ. ಬದಲಾಗಿ ಬದಿಗೆ ಸರಿಯುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ಕ್ರೂಸ್ ಕಂಟ್ರೋಲ್

ಇಂದಿನ ಎಲ್ಲ ಆಧುನಿಕ ಕಾರುಗಳಲ್ಲಿ ಕ್ರೂಸ್ ಕಂಟ್ರೋಲ್‌ಗಳಿರುತ್ತದೆ. ಆದರೆ ಮಳೆಗಾಲದಲ್ಲಿ ಇದರ ಬಳಕೆ ಸೂಕ್ತವಲ್ಲ. ಯಾಕೆಂದರೆ ಸಡನ್ ಬ್ರೇಕ್ ಹಾಕಿದ ಸಂದರ್ಭದಲ್ಲಿ ಕಾರು ಸ್ಕಿಡ್ ಆಗುವ ಸಂಭವವಿದೆ.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ಬ್ರೇಕ್ ಪರೀಕ್ಷೆ

ಇನ್ನು ಮಳೆಗಾಲ ಆರಂಭಕ್ಕೂ ಮುನ್ನ ಹಾಗೆಯೇ ಮಳೆಗಾಲ ಸಂದರ್ಭದಲ್ಲಿ ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಆಗಾಗ ಪರೀಕ್ಷೆ ಮಾಡಿಸಿಕೊಳ್ಳಲು ಮರೆಯದಿರಿ. ನಿಧಾನವಾಗಿಯೇ ಬ್ರೇಕ್‌ಗಳನ್ನು ಹಾಕಿ. ಯಾಕೆಂದರೆ ರಸ್ತೆಗಳಲ್ಲಿ ತುಂಬಾ ನೀರು ತುಂಬಿಕೊಂಡಿರುವಾಗ ಬ್ರೇಕ್ ರಬ್ಬರ್‌ಗಳು ಒದ್ದೆಯಾಗುತ್ತದೆ. ಇದೂ ಬ್ರೇಕ್ ಮೇಲೆ ಪರಿಣಾಮ ಬೀರಲಿದ್ದು, ನಿಮ್ಮ ನಿಯಂತ್ರಣಕ್ಕೆ ಬರಲಿದೆ ಎಂಬುದರಲ್ಲಿ ಯಾವುದೇ ಗ್ಯಾರಂಟಿ ಇಲ್ಲ.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ರಾತ್ರಿ ಪಯಣ ಬೇಡ

ಈ ಮೊದಲೇ ತಿಳಿಸಿರುವಂತೆಯೇ ರಾತ್ರಿ ಅವಧಿಯಲ್ಲಿ ಬೈಕ್ ಅಥವಾ ಕಾರಿನಲ್ಲಿನ ಪ್ರಯಾಣವನ್ನು ಸಾಧ್ಯವಾದಷ್ಟು ತಡೆಗಟ್ಟಿರಿ.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ಗೌರವ ನೀಡಿ ಗೌರವ ಗಳಿಸಿ

ಇತರ ಹಗುರ ಹಾಗೂ ಘನ ವಾಹನಗಳಿಗೆ ಗೌರವ ನೀಡುತ್ತಾ ಡ್ರೈವಿಂಗ್ ಮುಂದುವರಿಯಿರಿ. ಇದರಿಂದ ಸಾಧ್ಯವಾದಷ್ಟು ಅಪಾಯವನ್ನು ದೂರವಿರಿಸಬಹುದು.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ಕೆಸರು ರಸ್ತೆಯಲ್ಲಿ ಪಯಣ ಬೇಡ

ಗ್ರಾಮೀಣ ಪ್ರದೇಶದಲ್ಲಿ ಕೆಸರಿನಿಂದ ಆವೃತ್ತವಾದ ಆಫ್ ರೋಡ್‌ಗಳು ಹೆಚ್ಚಾಗಿ ಕಾಣಸಿಗುತ್ತದೆ. ಇಂತಹ ಪಯಣವನ್ನು ಸಾಧ್ಯವಾದಷ್ಟು ತಪ್ಪಿಸಿದರೆ ಒಳಿತು.

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ವೈಪರ್, ಚಕ್ರ ಪರೀಕ್ಷೆ

ಮಳೆಗಾಲದಲ್ಲಿ ವಾಹನದಲ್ಲಿ ಡ್ರೈವಿಂಗ್ ಮಾಡುವ ಮುನ್ನ ವೈಪರ್ ಸಮರ್ಪಕವಾಗಿದೆಯೇ ಪರಿಶೀಲಿಸಿರಿ. ಹಾಗೆಯೇ ಟೈರ್‌ಗಳು ಸರಿಯಾದ ಟ್ರೆಡ್ ಡೆಪ್ತ್ ಹೊಂದಿದ್ದೀಯಾ ಎಂಬುದನ್ನು ಪರೀಕ್ಷಿಸಿ..

ಮಳೆಗಾಲದಲ್ಲಿ ಬೈಕ್, ಕಾರು ಸವಾರಿಗೂ ಮುನ್ನ ಈ ಸಲಹೆಗಳನ್ನು ತಪ್ಪದೇ ಓದಿ

ಈಗ ನಿಮ್ಮ ಅಮೂಲ್ಯ ಸಲಹೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

English summary
Read in kannada about Everything You Need To Know About Riding In The Rain.
Story first published: Saturday, July 15, 2017, 12:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark