ಶ್ರೀಮಂತರ ಕಾರು ಕೊಳಕು, ಬಡವರ ಕಾರು ಶುಭ್ರ

AA Survey says richer men drive dirty cars
ಲಂಡನ್, ಜು 10: ಎಎ ಎಂಬ ಸಂಸ್ಥೆಯೊಂದು ನಡೆಸಿದ ನೂತನ ಸಮೀಕ್ಷೆಯಲ್ಲಿ ಶ್ರೀಮಂತರ ಕಾರುಗಳ ಡರ್ಟಿ ಪಿಕ್ಚರ್ ಹೊರಬಿದ್ದಿದೆ. ಕಡಿಮೆ ಆದಾಯ ಹೊಂದಿರುವ ಕಾರು ಮಾಲಿಕರಿಗೆ ಹೋಲಿಸಿದರೆ ಶ್ರೀಮಂತರ ಕಾರುಗಳು ಹೆಚ್ಚು ಗಲೀಜಾಗಿರುತ್ತದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಹೋಲಿಸಿದರೆ ಐಷಾರಾಮಿ ಕಾರು ಮಾಲಿಕರು ತಮ್ಮ ಕಾರುಗಳನ್ನು ಸ್ವಚ್ಛವಾಗಿ, ಶುಭ್ರವಾಗಿ ಇಟ್ಟುಕೊಳ್ಳುವುದಿಲ್ಲವೆನ್ನುವುದು ಸಮೀಕ್ಷೆಯ ಒಟ್ಟು ಸಾರವಾಗಿದೆ. ಕಾರು ತೊಳೆಯುವುದರಲ್ಲಿ ಮಹಿಳೆಯರು ಹೆಚ್ಚು ಸೋಮಾರಿಗಳು ಎಂದು ಎಎ ಸಮೀಕ್ಷೆಯನ್ನು ಡೈಲಿ ಮೈಲ್ ವರದಿ ಮಾಡಿದೆ.

ಸರಾಸರಿ 17 ಜನರಲ್ಲಿ ಒಬ್ಬ ಶ್ರೀಮಂತ ವ್ಯಕ್ತಿ ಮಾತ್ರ ತನ್ನ ಕಾರನ್ನು ವಾರಕೊಮ್ಮೆ ವಾಷ್ ಮಾಡುತ್ತಾನೆ. ಆದರೆ ಕಡಿಮೆ ಆದಾಯದ 12 ವ್ಯಕ್ತಿಗಳಲ್ಲಿ ಒಬ್ಬ ತನ್ನ ಕಾರನ್ನು ವಾರಕ್ಕೊಮ್ಮೆ ವಾಷ್ ಮಾಡುತ್ತಾನೆ ಎಂದು ಸಮೀಕ್ಷೆ ಹೇಳಿದೆ.

ಹದಿನೈದು ದಿನಕ್ಕೊಮ್ಮೆ ಕಾರಿಗೆ ಜಳಕ ಮಾಡುವುದರಲ್ಲಿ ಬಡವ ಮತ್ತು ಬಲ್ಲಿದರ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಿದೆ. ಕಡಿಮೆ ಆದಾಯದ ಶೇಕಡ 16ರಷ್ಟು ಜನರು ಹದಿನೈದು ದಿನಕ್ಕೊಮ್ಮೆ ಕಾರು ವಾಷ್ ಮಾಡುತ್ತಾರೆ. ಆದರೆ ಶೇಕಡ 11.5ರಷ್ಟು ಶ್ರೀಮಂತರು ಮಾತ್ರ ತಮ್ಮ ಕಾರುಗಳನ್ನು 15 ದಿನಕ್ಕೊಮ್ಮೆ ವಾಷ್ ಮಾಡುತ್ತಾರೆ. ವೃತ್ತಿಪರರು ಮತ್ತು ಮ್ಯಾನೆಜರುಗಳು ತಮ್ಮ ಕಾರುಗಳನ್ನು ಕೆಲವು ತಿಂಗಳಿಗೊಮ್ಮೆ ವಾಷ್ ಮಾಡುವುದೇ ಹೆಚ್ಚಂತೆ!

ಸುಮಾರು 18,080 ಕಾರು ಮಾಲಿಕರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇಷ್ಟು ಜನರಲ್ಲಿ ಶೇಕಡ 3ರಷ್ಟು ಜನರು ವರ್ಷಕ್ಕೊಮ್ಮೆ ಕಾರು ತೊಳೆಯುವುದೇ ಅಪರೂಪವಂತೆ. ಮಹಿಳಾ ಕಾರು ಮಾಲಕಿಯರಲ್ಲಿ ಈ ಸಂಖ್ಯೆ ಡಬಲ್ ಅಂತೆ. ಅಂದ್ರೆ ಶೇಕಡ 6ರಷ್ಟು ಮಹಿಳೆಯರು ವರ್ಷಕ್ಕೊಮ್ಮೆ ಕಾರು ವಾಷ್ ಮಾಡುತ್ತಾರೆ ಎಂದು ಎಎ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಓದಿ: ಮಲ್ಲಿಕಾ ಶೆರಾವತ್ ಕಾರ್ ವಾಷ್ ಸ್ಟೋರಿ

ಸ್ಕಾಟ್ ಲ್ಯಾಂಡ್ ನಲ್ಲಿ ಶೇಕಡ 11ರಷ್ಟು ಜನರು ತಮ್ಮ ಕಾರುಗಳನ್ನು ಶುಭ್ರವಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ. ಶೇಕಡ 22ರಷ್ಟು ಯುವಕರು ತಮ್ಮ ಕಾರುಗಳನ್ನು ಹದಿನೈದು ದಿನಕ್ಕೊಮ್ಮೆ ವಾಷ್ ಮಾಡುತ್ತಾರೆ.

ಎಎ ಸದಸ್ಯರಲ್ಲಿ ಶೇಕಡ 3ರಷ್ಟು ಜನರು ತಮ್ಮ ಕಾರುಗಳನ್ನು ವರ್ಷಕ್ಕೊಮ್ಮೆ ವಾಷ್ ಮಾಡುವುದೇ ಹೆಚ್ಚಂತೆ. ವರ್ಷಕ್ಕೊಮ್ಮೆ ಕಾರ್ ವಾಷ್ ಮಾಡುವುದರಲ್ಲಿ ಮಹಿಳಾ ಚಾಲಕಿಯರ ಪಾಲು ಶೇಕಡ 6ರಷ್ಟಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಓದಿ: ಬೇಸಿಗೆಯಲ್ಲಿ ಕಾರು ತೊಳೆಯೋದು ಹೀಗೆ ಕಣ್ರಿ

"ಕಾರನ್ನು ನಿಯಮಿತವಾಗಿ ವಾಷ್ ಮಾಡುವ ಮೂಲಕ ಸ್ವಚ್ಛವಾಗಿ ಇಟ್ಟುಕೊಂಡರೆ ಕಾರಿನ ಆಯಸ್ಸೂ ವೃದ್ಧಿಸುತ್ತದೆ. ಉಪ್ಪಿನಾಂಶ ಇತ್ಯಾದಿಗಳು ಕಾರಿನ ಬಾಳಿಕೆಗೆ ತಡೆಯೊಡ್ಡುತ್ತವೆ. ಕಾರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಹತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕು" ಎಂದು ಎಎ ಅಧ್ಯಕ್ಷ ಎಡ್ಮುಂಡ್ ಕಿಂಗ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. (ಓದಿ: ಕಾರು ತೊಳೆಯಲು ಸಲಹೆ )

ಅಂದ ಹಾಗೆ ನೀವು ನಿಮ್ಮ ಕಾರನ್ನು ಎಷ್ಟು ದಿನಕ್ಕೊಮ್ಮೆ ವಾಷ್ ಮಾಡುತ್ತೀರಿ?

Most Read Articles

Kannada
English summary
According to the AA survey, wealthier motorists are 'too posh to wash' their cars. Rich are more willing to drive dirtier cars for longer than poorer. Low income people prefer to keep their cars clean and tidy Daily Mail Reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X