ತುರ್ತು ಸಂದರ್ಭದಲ್ಲಿ ಕಾರಿನ ಗಾಜು ಒಡೆಯುವುದು ಹೇಗೆ?

By Nagaraja

ಕಾರಿನಲ್ಲಿ ಎಷ್ಟೇ ಸುರಕ್ಷಾ ವೈಶಿಷ್ಟ್ಯಗಳನ್ನು ಆಳವಡಿಸಿದರೂ ಆಕಸ್ಮಿಕವಾಗಿ ಎದುರಾಗುವ ಅಪಾಯ ಸನ್ನಿವೇಶವನ್ನು ಎದುರಿಸದ ಹೊರತು ಅನ್ಯ ಮಾರ್ಗವಿರುವುದಿಲ್ಲ. ಕೆಲವೊಂದು ಬಾರಿ ಇದು ಸಣ್ಣ ಪುಟ್ಟ ಗಾಯಗಳಲ್ಲಿ ಕೊನೆಗೊಂಡರೆ ಇನ್ನು ಕೆಲವು ಬಾರಿ ಪ್ರಾಣಕ್ಕೆ ಕುತ್ತು ಸಂಭವಿಸುವ ಭೀತಿಯೂ ಎದುರಾಗುತ್ತದೆ.

ಉಫ್..! ಸುಡುವ ಬೇಸಗೆ, ಕಾಡುವ ಚಿಂತೆ; ಕಾರಿನ ಚಿಕಿತ್ಸೆ ಹೇಗೆ?

ಹಾಗೊಂದು ವೇಳೆ ಅಪಘಾತದಂತಹ ತುರ್ತು ಸಂದರ್ಭದಲ್ಲಿ ಕಾರಿನ ಗಾಜು ಒಡೆಯುವ ವಿಧಾನ ಹೇಗೆ ಗೊತ್ತಾ? ಇದಕ್ಕೊಂದು ಸುಲಭ ಉಪಾಯವನ್ನು ನಾವಿಂದು ಹೇಳಿಕೊಡಲಿದ್ದೇವೆ.

ತುರ್ತು ಸಂದರ್ಭದಲ್ಲಿ ಕಾರಿನ ಗಾಜು ಒಡೆಯುವುದು ಹೇಗೆ?

ನಿಮಗಿದು ತಿಳಿದಿದೆಯೋ ? ಬಹುತೇಕ ಕಾರುಗಳ ಸೀಟುಗಳಲ್ಲಿ ಉದ್ದೇಶಪೂರ್ವಕವಾಗಿಯೇ ಕಳಚಬಹುದಾದ ಹೆಡ್ ರೆಸ್ಟ್ ಗಳನ್ನು ಜೋಡಣೆ ಮಾಡಲಾಗುತ್ತದೆ. ಇದರ ಪ್ರಯೋಜನವೇನು?

ತುರ್ತು ಸಂದರ್ಭದಲ್ಲಿ ಕಾರಿನ ಗಾಜು ಒಡೆಯುವುದು ಹೇಗೆ?

ಹಾಗೊಂದು ವೇಳೆ ಅಪಘಾತ ಅಥವಾ ಆಗ್ನಿ ಆಕಸ್ಮಿಕದಂತಹ ತುರ್ತು ಸಂದರ್ಭ ಎದುರಾದ್ದಲ್ಲಿ ಕಾರಿನ ಒಳಗಿನಿಂದ ಗಾಜು ಒಡೆಯಲು ನೀವಿದರ ನೆರವನ್ನು ಪಡೆಯಬಹುದಾಗಿದೆ.

ತುರ್ತು ಸಂದರ್ಭದಲ್ಲಿ ಕಾರಿನ ಗಾಜು ಒಡೆಯುವುದು ಹೇಗೆ?

ಕಾರುಗಳ ಗಾಜುಗಳನ್ನು ಸುಲಭವಾಗಿ ಒಡೆಯುವಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹಾಗೊಂದು ವೇಳೆ ಕಾರಿನೊಳಗೆ ಸಿಕ್ಕಿಹಾಕಿಕೊಂಡ್ಡಲ್ಲಿ ಸೀಟು ಹೆಡ್ ರೆಸ್ಟ್ ಕಳಚುವ ಮೂಲಕ ಕಾರಿನ ಗಾಜನ್ನು ಒಡೆಯಬಹುದಾಗಿದೆ.

ಗಾಜು ಒಡೆಯುವ ವಿಧಾನ

ಗಾಜು ಒಡೆಯುವ ವಿಧಾನ

ಸೀಟು ಹೆಡ್ ರೆಸ್ಟ್ ಗಳನ್ನು ಕಳಚಿದ ಬಳಿಕ ಅದನ್ನು (ಚಿತ್ರದಲ್ಲಿ ತೋರಿಸಿದಂತೆಯೇ) ಕಾರಿನ ಅತ್ಯಂತ ದುರ್ಬಲವಾದ ಭಾಗವಾದ ಗಾಜು ಮತ್ತು ಡೋರ್ ಗಳ ಮಧ್ಯದಲ್ಲಿ ತುರುಕಿಸಿ ಸುಲಭವಾಗಿ ಒಡೆಯಬಹುದಾಗಿದೆ.

ಗಾಜು ಒಡೆಯುವ ವಿಧಾನ

ಗಾಜು ಒಡೆಯುವ ವಿಧಾನ

ಗಾಜು ಮತ್ತು ಡೋರ್ ಮಧ್ಯೆ ಹೆಡ್ ರೆಸ್ಟ್ ತುರುಕಿಸಿದ ಬಳಿಕ ಹೆಚ್ಚಿನ ಬಲ ಪ್ರಯೋಗಿಸಿ ನಿಮ್ಮತ್ತ ಎಳೆದಾಗ ಗಾಜುಗಳು ಪುಡಿಪುಡಿಯಾಗಲಿದೆ.

ತುರ್ತು ಸಂದರ್ಭದಲ್ಲಿ ಕಾರಿನ ಗಾಜು ಒಡೆಯುವುದು ಹೇಗೆ?

ನದಿಗೆ ಉರುಳಿದಂತಹ ತುರ್ತು ಸಂದರ್ಭದಲ್ಲಿ ನೀರಿನ ಒತ್ತಡದಿಂದಾಗಿ ಕಾರಿನೊಳನಿಂದ ಡೋರ್ ತೆಗೆಯುವುದು ಕಷ್ಟಕರವಾದ ವಿಚಾರ. ಇಂತಹ ಸಂದರ್ಭದಲ್ಲಿ ಕಾರು ಸೀಟಿನ ಹೆಡ್ ರೆಸ್ಟ್ ಗಳನ್ನು ಗಾಜನ್ನು ಒಡೆಯಲು ಬಳಕೆ ಮಾಡಬಹುದಾಗಿದೆ.

ತುರ್ತು ಸಂದರ್ಭದಲ್ಲಿ ಕಾರಿನ ಗಾಜು ಒಡೆಯುವುದು ಹೇಗೆ?

ಸಾಮಾನ್ಯವಾಗಿ ಕಾರು ಹೆಡ್ ರೆಸ್ಟ್ ಗಳನ್ನು ಪ್ರಯಾಣಿಕರ ಆರಾಮದಾಯಕ ಚಾಲನೆಗಾಗಿ ಆಳವಡಿಸಲಾಗುತ್ತದೆ. ಇದು ಅಪಘಾತದ ವೇಳೆ ಕುತ್ತಿಗೆಗೆ ಆಗುವ ಗಾಯದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ತುರ್ತು ಸಂದರ್ಭದಲ್ಲಿ ಕಾರಿನ ಗಾಜು ಒಡೆಯುವುದು ಹೇಗೆ?

ಒಟ್ಟಿನಲ್ಲಿ ಕಾರಿನೊಳಗೆ ಸಿಕ್ಕಿ ಹಾಕಿದಂತಹ ತುರ್ತು ಪರಿಸ್ಥಿತಿ ಎದುರಾದ್ದಲ್ಲಿ ಗಾಬರಿಯಾಗದೇ ಮೇಲೆ ತಿಳಿಸಿದಂತಹ ಸುಲಭ ನೀತಿಯನ್ನು ಅನುಸರಿಸಿದ್ದಲ್ಲಿ ಕೆಲವೇ ಸೆಕೆಂಡುಗಳ ಅಂತರದಲ್ಲಿ ಕಾರಿನಿಂದ ಹೊರ ಬರಬಹುದಾಗಿದೆ.

ಇವನ್ನೂ ಓದಿ...

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಅತ್ಯವಶ್ಯಕ 10 ಸಲಹೆಗಳು

ಟೈರ್ ಸ್ಪೋಟಿಸಿದರೆ ಅಪಘಾತ ಖಚಿತ? ತಡೆಗಟ್ಟುವುದು ಹೇಗೆ?

Most Read Articles

Kannada
English summary
Use Your Headrest To Break A Car Window In An Emergency
Story first published: Friday, April 15, 2016, 11:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X