ಬ್ರೇಕ್ ಕೈಕೊಟ್ಟಾಗ ಮರಕ್ಕೆ ಡಿಕ್ಕಿ ಹೊಡೆಯಬಹುದೇ?
ಬ್ರೇಕ್ ಫೈಲ್ಯೂರ್ ಆದ ಸಮಯದಲ್ಲಿ ಸಾದ್ಯವಾದರೆ ಕಾರನ್ನು ಮಣ್ಣಿನ ರಸ್ತೆಗೆ, ಕೊರಕಲು ರಸ್ತೆಗೆ ತಿರುಗಿಸಿ(ಅಲ್ಲಿ ಹೆಚ್ಚು ಜನಸಂಖ್ಯೆ ಇಲ್ಲವೆಂಬುದನ್ನು ಗಮನಿಸಿ). ಕಾರು ನಿಲ್ಲುವುದು ಕಷ್ಟವೆಂದು ಅನಿಸಿದರೆ ರಸ್ತೆ ಪಕ್ಕದಲ್ಲಿರುವ ಸಿಮೆಂಟ್ ಗ್ರಿಲ್ಲುಗಳಿಗೆ ಒರೆಸಿಕೊಂಡು ಗಾಡಿ ಚಲಾಯಿಸಬಹುದು(ಎದುರಿನಿಂದ ಗುದ್ದಬೇಡಿ).
ಸಣ್ಣ ಮರಗಳು ಕಂಡರೆ ಕಾರನ್ನು ಗುದ್ದಿಸಿಬಿಡಿ. ದೊಡ್ಡ ಮರಗಳಿಗೆ ಡಿಕ್ಕಿ ಹೊಡೆಯುವುದು ಅಪಾಯ. ಅಥವಾ ಬೇರೊಂದು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಯಬಹುದು. ಈ ರೀತಿ ಮಾಡುವುದಾದರೆ ಮುಂಭಾಗದಲ್ಲಿರುವ ವಾಹನದಾತನಿಗೆ ಮೊದಲೇ ತಿಳಿಸಿ. ಆದರೆ ಅನಿವಾರ್ಯವಾದರೆ ಮಾತ್ರ ಅಂತಿಮವಾಗಿ ಡಿಕ್ಕಿ ಹೊಡೆಯಿರಿ. ಎರಡು ವಾಹನಗಳು ಒಂದೇ ವೇಗದಲ್ಲಿ ಸಾಗುತ್ತಿದ್ದಾಗ ಡಿಕ್ಕಿ ಹೊಡೆಯಬಹುದು. ಈ ರೀತಿ ಡಿಕ್ಕಿ ಹೊಡೆದು ಕಾರು ನಿಂತರೆ ಮುಂಭಾಗದಲ್ಲಿದ್ದ ಕಾರಿನವನಿಗೆ ಪರಿಹಾರ ನೀಡುವುದನ್ನು ಮರೆಯಬೇಡಿ.
ಬ್ರೇಕ್ ಫೈಲ್ಯೂರ್ ಸಲಹೆಗಳು ಮುಗಿದಿವೆ. ದಿನಕ್ಕೊಂದು ಸಲಹೆ ಮಾಲಿಕೆಯಲ್ಲಿ ನಾಳೆ ಹೊಸ ವಿಷಯದೊಂದಿಗೆ ಭೇಟಿಯಾಗೋಣ.


Click it and Unblock the Notifications









