ಅಯ್ಯೋಯ್ಯೋ ಕಾರಿನ ಬ್ರೇಕ್ ಫೈಲ್ಯೂರ್ ಆಗಿದೆ!

 Car Brake Failure Tips
ಕಾರು ಬ್ರೇಕ್ ಫೈಲ್ಯೂರ್ ಆದಾಗ ಏನು ಮಾಡಬೇಕೆಂಬುದರ ಕುರಿತು ದಿನಕ್ಕೊಂದು ಸಲಹೆಯಲ್ಲಿ ಚರ್ಚಿಸುತ್ತಿದ್ದೇವು. ಭಯಬೀಳದೆ ಧೈರ್ಯವಾಗಿ ಇಂತಹ ಸಮಯದಲ್ಲಿ ವರ್ತಿಸಬೇಕು. ಫಸ್ಟ್ ಗೇರಿಗೆ ತರಬೇಕು. ಅನಿವಾರ್ಯವಾದರೆ ಹ್ಯಾಂಡ್ ಬ್ರೇಕ್ ಬಳಸಬೇಕು ಎಂದು ತಿಳಿಸಿದ್ದೇವು.

ಬ್ರೇಕ್ ಫೈಲ್ಯೂರ್ ಆದಾಗ ವಾಹನದಲ್ಲಿದ್ದರಿಗೆ ಮಾತ್ರವಲ್ಲದೇ ರಸ್ತೆಯ ಆಸುಪಾಸಿನಲ್ಲಿರುವ ಪಾದಚಾರಿಗಳಿಗೆ, ಇತರ ವಾಹನ ಸವಾರರಿಗೂ ಅಪಾಯವಾಗುವ ಸಂಭವವಿರುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ನಿಮ್ಮ ಗಮನ ರಸ್ತೆ ಮೇಲೆ ಇರಬೇಕು. ಹಾರ್ನ್ ಹಾಕಿ, ಸಾಧ್ಯವಾದರೆ ಬೊಬ್ಬೆ ಹಾಕಿ, ಅಥವಾ ಕೈ ಸನ್ನೆಯ ಮೂಲಕ ಜನರನ್ನು ಪಕ್ಕಕ್ಕೆ ಸರಿಯುವಂತೆ ತಿಳಿಸಬೇಕು. ಹೆಡ್ ಲೈಟ್ಸ್ ಆನ್ ಮಾಡಬೇಕು.

ಇದೇ ಸಮಯದಲ್ಲಿ ಸ್ಟಿಯರಿಂಗ್ ಮೇಲೆ ಗಮನವಿಟ್ಟುಕೊಂಡು ಕಾರಿನ ಗಾಜು ಕೆಳಗಿಳಿಸಿ. ಕಾರಿನೊಳಗೆ ಗಾಳಿ ಹೋದಂತೆ ವಾಹನದ ವೇಗವೂ ಕಡಿಮೆಯಾಗುತ್ತದೆ. ಕಾರಿನಲ್ಲಿ ಇತರ ಪ್ರಯಾಣಿಕರಿದ್ದರೆ ಅವರಲ್ಲಿ ಬೊಬ್ಬೆ ಹಾಕಲು ತಿಳಿಸಿ(ಕೆಲವೊಮ್ಮೆ ನೀವು ತಿಳಿಸುವ ಮುನ್ನ ಅವರೇ ಜೀವ ಭಯದಿಂದ ಕಿರುಚಿಕೊಳ್ಳಬಹುದು. ಆದರೆ ಅವರಿಗೆ ದೈರ್ಯ ಕಳೆದುಕೊಳ್ಳದಂತೆ ತಿಳಿಸಿ).

ಕಾರು ಬ್ರೇಕ್ ಫೈಲ್ಯೂರ್ ಆದ ಸಮಯದಲ್ಲಿ ಕಾರನ್ನು ಸ್ಲೋ ಮಾಡಲು ಹಲವು ಉಪಾಯಗಳಿವೆ. ನಾಳೆಯ ಸಲಹೆಯಲ್ಲಿ ಆ ಕುರಿತು ಚರ್ಚಿಸೋಣ.

More from DriveSpark

Article Published On: Thursday, February 16, 2012, 11:22 [IST]
English summary
In case of brake failure of your car, immediately switch on the hazard lights and warn the opposite vehicle drivers. Then bring back the car into first gear and slowly pull the emergency brake lever between the seats (or under the dashboard) or push down the parking brake pedal, it should stiffen up quickly and ratchet audibly, whether or not it provides much braking force. And drive carefully left side in road.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+