ಬ್ರೇಕ್ ಫೈಲ್ಯೂರ್ ಆದಾಗ ಹ್ಯಾಂಡ್ ಬ್ರೇಕೆಂಬ ಆಪತ್ಬಾಂಧವ

ಬ್ರೆಕ್ ಸ್ವಲ್ಪವಾದರೂ ಕೆಲಸ ಮಾಡುತ್ತೋ ನೋಡಿ. ಸುಮ್ಮನೆ ಬ್ರೇಕ್ ತುಳಿಯುತ್ತ ಇರಿ. ಈ ರೀತಿ ಬ್ರೇಕ್ ಪಂಪ್ ಮಾಡುತ್ತಿದ್ದರೆ ವಾಹನ ನಿಧಾನವಾಗುವ ಸಾಧ್ಯತೆಯೂ ಇದೆ. ಬ್ರೇಕ್ ಪೆಡಲ್ ಗಟ್ಟಿಯಾಗಿದ್ದರೆ ಕಷ್ಟಪಟ್ಟು ಅದುಮಲು ಪ್ರಯತ್ನಿಸಿರಿ. ಎಬಿಎಸ್ ಇದ್ದರೂ, ಇಲ್ಲದಿದ್ದರೂ ಬ್ರೇಕ್ ಪಂಪ್ ಮಾಡೋದನ್ನು ಮುಂದುವರೆಸಿರಿ. ರಸ್ತೆ ಮೇಲೆ ನಿಗಾ ಇಟ್ಟುಕೊಂಡು ಸ್ಟಿಯರಿಂಗ್ ಬಳಸಿರಿ.
ಒಂದು ವಿಷ್ಯ ಮರೆಯಬೇಡಿ. ಬ್ರೇಕ್ ಫೈಲ್ಯೂರ್ ಆದ ತಕ್ಷಣ ಕಾರನ್ನು ಲೋ ಗೇರ್ ಗೆ ತಂದುಬಿಡಿ. ಫಸ್ಟ್ ಗೇರಿನಲ್ಲಿ ಕಾರು ನಿಧಾನವಾಗುತ್ತದೆ. ನಿಮ್ಮ ಕಾರು ಮ್ಯಾನುಯಲ್ ಗೇರ್ ಹೊಂದಿದ್ದರೆ ಅರ್ಜೆಂಟಾಗಿ ಟಾಪ್ ಗೇರಿನಿಂದ ಲೋಗೇರಿಗೆ ಬದಲಾಯಿಸಬೇಡಿ. ರಸ್ತೆಯ ಮೇಲೆ ಎಚ್ಚರಿಕೆಯಿಂದ ರೈಡ್ ಮಾಡುತ್ತ ನಿಧಾನವಾಗಿ ಫಸ್ಟ್ ಗೇರಿಗೆ ತಲುಪಿ. ಆಟೋಮ್ಯಾಟಿಕ್ ಗೇರ್ ಹೊಂದಿದ್ದರೆ ಫಸ್ಟ್ ಗೇರಿಗೆ ಸುಲಭವಾಗಿ ಪ್ರವೇಶಿಸಬಹುದು.
ಇಂತಹ ತುರ್ತು ಸಮಯದಲ್ಲಿ ಹ್ಯಾಂಡ್ ಬ್ರೇಕ್ ಅಥವಾ ಪಾರ್ಕಿಂಗ್ ಬ್ರೇಕು ಆಪದ್ಬಾಂಧವ. ಆದರೆ ಗೇರುಗಳ ಮುಖಾಂತರವೇ ಕಾರನ್ನು ನಿಲ್ಲಿಸಲು ಯತ್ನಿಸಿ. ಕಾರನ್ನು ನಿಲ್ಲಿಸಲು ಆಗೋದೇ ಇಲ್ಲವೆಂದಾದರೆ ಹ್ಯಾಂಡ್ ಬ್ರೇಕ್ ಬಳಸಿರಿ.
ಹ್ಯಾಂಡ್ ಬ್ರೇಕನ್ನು ನಿಧಾನವಾಗಿ ಮತ್ತು ದೃಢತೆಯಿಂದ ಹಾಕಿಬಿಡಿ. ಕಾರು ವೇಗವಾಗಿ ಹೋಗುತ್ತಿದ್ದಾಗ ನೀವು ಹ್ಯಾಂಡ್ ಬ್ರೇಕನ್ನು ವೇಗವಾಗಿ ಬಳಸಿದರೆ ಒಮ್ಮೆಗೆ ಟೈರ್ ಲಾಕ್ ಆಗಿ ವಾಹನದ ಮೇಲಿನ ನಿಮ್ಮ ಹಿಡಿತ ತಪ್ಪುವ ಸಾಧ್ಯತೆಯಿದೆ. ಬ್ರೇಕ್ ಫೈಲ್ಯೂರ್ ಸಮಯದಲ್ಲಿ ಪಾಲಿಸಬೇಕಾದ ಇನ್ನಷ್ಟು ಸಲಹೆಗಳಿವೆ. ನಾಳೆಯ ದಿನಕ್ಕೊಂದು ಸಲಹೆ ಅಂಕಣಕ್ಕಾಗಿ ಕಾಯಿರಿ.


Click it and Unblock the Notifications








