ದಿನಕ್ಕೊಂದು ಟಿಪ್ಸ್: ಬ್ರೇಕ್ ಫೈಲ್ಯೂರ್ ಆದ್ರೆ ಏನ್ಮಾಡ್ಬೆಕು?

ಈಗಿನ ಹೈಎಂಡ್ ಕಾರುಗಳಲ್ಲಿ ಅಡ್ವಾನ್ಸಡ್ ಬ್ರೇಕಿಂಗ್ ಸಿಸ್ಟಮ್ಸ್ ಇರುತ್ತವೆ. ಇವು ಬ್ರೇಕ್ ಫೈಲ್ಯೂರ್ ಆಗುವ ಮುನ್ಸೂಚನೆ ನೀಡುತ್ತವೆ. ಇದರಲ್ಲಿ ಸೇಫ್ ಆಗಿ ಪ್ರಯಾಣಿಸಬಹುದು. ಆದರೆ ಮಧ್ಯಮ ಮತ್ತು ಸಾಮಾನ್ಯ ಕಾರುಗಳಲ್ಲಿ ಇಂತಹ ಯಾವುದೇ ಸಿಸ್ಟಮ್ ಗಳಿರುವುದಿಲ್ಲ. ಬ್ರೇಕ್ ಎಷ್ಟೇ ಅದುಮಿದರೂ ಗಾಡಿ ನಿಲ್ಲದಿದ್ದಾಗ ಓಹ್, ಬ್ರೇಕ್ ಫೈಲ್ಯೂರ್ ಆಗಿದೆ ಎಂದು ತಿಳಿಯುತ್ತದೆ. ಬದುಕು ಅಥವಾ ಸಾವು ಆಯ್ಕೆಗೆ ಕೆಲವೇ ಸಮಯ ಉಳಿದಿರುತ್ತದೆ.
ಇಂದಿನ ಸಲಹೆ: ಬ್ರೇಕ್ ಅದುಮಿದ್ದು ಪ್ರಯೋಜನವಾಗುತ್ತಿಲ್ಲವೆಂದು ಅನಿಸಿದ ತಕ್ಷಣ ಗಾಬರಿಯಾಗದಿರಿ. ಏಕಾಗೃತೆ ತಂದುಕೊಳ್ಳಿ, ಅಕ್ಕಪಕ್ಕದಲ್ಲಿರುವರಿಗೆ ಗಾಬರಿಯಾಗದಂತೆ ತಿಳಿಸಿ. ತಕ್ಷಣ ಹೆಡ್ ಲೈಟ್ ಸೇರಿದಂತೆ ಕಾರಿನ ಎಲ್ಲಾ ಲೈಟುಗಳನ್ನು ಉರಿಸಿ. ಇದರಿಂದ ಅಕ್ಕಪಕ್ಕದಲ್ಲಿದ್ದ ವಾಹನ ಸವಾರರು ದೂರ ಸರಿಯಬಹುದು. ಜಾಗರೂಕತೆಯಿಂದ ಮಿರರ್ ನೋಡಿಕೊಳ್ಳುತ್ತ, ನಿಮ್ಮ ಸುತ್ತಮುತ್ತವಿರುವ ವಾಹನಗಳನ್ನು ನೋಡುತ್ತ ವಾಹನ ಚಲಾಯಿಸಿ.
ಇಂತಹ ಸಮಯದಲ್ಲಿ ಬ್ರೇಕ್ ಫೈಲ್ಯೂರ್ ಆಗಿರೋ ಕಾರನ್ನು ನಿಲ್ಲಿಸುವುದು ಹೇಗೆ? ಈ ಸಲಹೆಗಾಗಿ ನಾಳೆವರೆಗೆ ಕಾಯಿರಿ. (ಓದಿ: ದಿನಕ್ಕೊಂದು ಸಲಹೆ )


Click it and Unblock the Notifications








