ವಾಹನಗಳಿಗೆ ಸಂಬಂಧಿಸಿದ 10 ರೋಚಕ ಸತ್ಯಗಳು!
ಮಾನವರ ಹಾಗೆಯೇ ವಾಹನಗಳು ಸಹ ಆಸಕ್ತಿದಾಯಕ ವಿಚಾರಗಳನ್ನು ಹೊಂದಿರುತ್ತದೆ. ಕಾರು ಪ್ರೇಮಿಗಳಂತೂ ಇಂತಹ ಸತ್ಯಾಂಶಗಳನ್ನು ತಿಳಿದುಕೊಳ್ಳಲು ತುಂಬಾನೇ ಉತ್ಸುಕರಾಗಿರುತ್ತಾರೆ.
ನಿರಂಕುಶ ಪ್ರಭುಗಳ ನಿರ್ಭೀತಿಯ ಕಾರುಗಳು
ನಮ್ಮ ಇಂದಿನ ಲೇಖನಗಳಲ್ಲಿ ಕೆಲವೊಂದು ಕಟ್ಟುಕಥೆ ಹಾಗೂ ನಿಜಾಂಶಗಳ ಬಗ್ಗೆ ಪಟ್ಟಿ ಮಾಡಿಕೊಡಲಿದ್ದೇವೆ. ಇಲ್ಲಿ ಅಶ್ವಶಕ್ತಿದಿಂದ ಹಿಡಿದು ಜರ್ಮನಿಯ ನಿರಂಕುಶ ಪ್ರಭು ಅಡಾಲ್ಫ್ ಹಿಟ್ಲರ್ ವರೆಗಿನ ವಿಚಾರಗಳನ್ನು ಕೊಡಲಾಗಿದೆ.

ಮುಂದಿನ ಒಂದೊಂದೇ ಸ್ಲೈಡ್ ಕ್ಲಿಕ್ಕಿಸುತ್ತಾ ವಾಹನಗಳ ಬಗೆಗಿನ ಆಸಕ್ತಿದಾಯಕ ವಿಚಾರಗಳನ್ನು ತಿಳಿದುಕೊಳ್ಳಿರಿ

ಅಶ್ವಶಕ್ತಿ ಎಂದರೆ ಕುದುರೆ ಬಲಕ್ಕೆ ಸಮಾನ ಅಂದುಕೊಂಡಲ್ಲಿ ನಿಮ್ಮ ಊಹೆ ತಪ್ಪಾದೀತು. ಯಾಕೆಂದರೆ ಅಶ್ವಶಕ್ತಿ ಎಂಬುದು ಯಂತ್ರದ ಶಕ್ತಿಯನ್ನಳೆಯುವ ಘಟಕದ (ಸೆಕೆಂಡಿಗೆ 550 ಪೌಂಡ್‌ಫುಟ್) ಮಾಪನವಾಗಿದೆ.

ನೀವು ವಾಹನಗಳಲ್ಲಿರುವ ಫ್ಯೂಯಲ್ ಗೇಜ್ (ಇಂಧನ ಮಾಪನ) ಗಮನಿಸಿರಬಹುದು. ಆಧುನಿಕ ಕಾರುಗಳಲ್ಲಿ ಯಾವ ಬದಿಯಲ್ಲಿ ಇಂಧನ ಟ್ಯಾಂಕ್ ಲಗತ್ತಿಸಲಾಗಿದೆ ಎಂಬುದನ್ನು ಏರೋ (ಚಿತ್ರದಲ್ಲಿ ತೋರಿಸಿರುವಂತೆಯೇ) ಸಂಕೇತದ ಮೂಲಕ ಗುರುತಿಸಿಕೊಳ್ಳಬಹುದಾಗಿದೆ.

ಕಾರಿನಲ್ಲಿರುವ ಡ್ಯಾಶ್‌ಬೋರ್ಡ್ ಪ್ರಮುಖವಾದ ಘಟಕ. ಆದರೆ ಡ್ಯಾಶ್‌ಬೋರ್ಡ್ ಹೇಗಾಯಿತು? ಹಿಂದಿನ ಕಾಲದಲ್ಲಿ ಕುದುರೆಗಾಡಿಯ ಮುಂಭಾಗದಲ್ಲಿ ಕೆಸರು ಚಿಮ್ಮದಿರಲು ಮರದ ಹಲಗೆಯನ್ನು ಜೋಡಣೆ ಮಾಡಲಾಗುತ್ತಿತ್ತು. ಇದೇ ಥಿಯರಿ ಡ್ಯಾಶ್‌ಬೋರ್ಡ್ ಉಗಮಕ್ಕೆ ನಾಂದಿ ಹಾಡಿದೆ.

ಅಮಿತ ವೇಗದಲ್ಲಿ ಕಾರು ಚಲಾಯಿಸಿದರೆ ದಂಡ ಖಚಿತ. ಆದರೆ ಗರಿಷ್ಠ ಎಷ್ಟು ರುಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ ಗೊತ್ತೇ? 100, 200, 500? ಅಲ್ಲಲ್ಲ ಸ್ವೀಡನ್‌ನ ವ್ಯಕ್ತಿಯೊಬ್ಬರ ಮೇಲೆ ಬರೋಬ್ಬರಿ 1 ಮಿಲಿಯನ್ ಅಮೆರಿಕನ್ ಡಾಲರ್ ದಂಡ ಹೇರಲಾಗಿತ್ತು. ಸ್ವಿಜರ್ಲೆಂಡ್‌ನಲ್ಲಿ ಗಂಟೆಗೆ 180 ಮೈಲ್ ವೇಗಗಿಂತಲೂ ಹೆಚ್ಚು ವೇಗದಲ್ಲಿ ಚಲಿಸಿದ ಅವರಿಗೆ ಇಂತಹದೊಂದು ತೊಂದರೆ ಎದುರಾಗಿತ್ತು.

ರಿಮೋಟ್ ಕಾರು ಕೀಯನ್ನು ತಲೆಯ ಮೇಲಿಂದ ಹಿಡಿಯುವುದರಿಂದ ಅದರ ರೇಂಜ್ ಹೆಚ್ಚುತ್ತದೆಯಂತೆ!. ವಿಜ್ಞಾನಿಗಳ ಪ್ರಕಾರ ಇಲ್ಲಿ ಮಾನವನ ತಲೆಬುರುಡೆ ಆಂಪ್ಲೀರ್ (ಧ್ವನಿವರ್ಧಕ) ಆಗಿ ಕೆಲಸ ಮಾಡುತ್ತದೆಯಂತೆ! ಅಷ್ಟಕ್ಕೂ ನೀವೊಮ್ಮೆ ಟ್ರೈ ಮಾಡಿ ನೋಡ್ತೀರಾ?

ಆಧುನಿಕ ಕಾರುಗಳು ತನ್ನದೇ ವಿಶಿಷ್ಟ ಸ್ವಭಾವವನ್ನು ಹೊಂದಿದ್ದು, ವರದಿಯೊಂದರ ಪ್ರಕಾರ ವರ್ಷಂಪ್ರತಿ ಶೇಕಡಾ 95ರಷ್ಟು ವಾಹನಗಳನ್ನು ಮರು ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಫ್ಲೂರ್ ಮ್ಯಾಟ್ಸ್‌ನಿಂದ ಹಿಡಿದು ಇನ್ಸ್ಟ್ರುಮೆಂಟ್ ಪ್ಯಾನೆಲ್, ಸ್ಟೀಲ್, ಅಲ್ಯೂಮಿನಿಯಂ ಬಿಡಿಭಾಗಗಳನ್ನು ಮರು ಬಳಕೆ ಮಾಡಲಾಗುತ್ತಿದೆ.

1924ನೇ ಇಸವಿಯಲ್ಲಿ ಜರ್ಮನಿಯ ನಿರಂಕುಶ ಪ್ರಭು ಅಡಾಲ್ಫ್ ಹಿಟ್ಲರ್, 11/40 ಲಿಮೊಸಿನ್ ಕಾರಿಗಾಗಿ ಮರ್ಸಿಡಿಸ್ ಬಳಿ ಸಾಲವನ್ನು ಯಾಚಿಸಿದ್ದರು. ಅಲ್ಲದೆ ತಮ್ಮ ಆತ್ಮಕಥೆಯಿಂದ ದೊರಕುವ ರಾಯಲ್ಟಿ ಹಣದಿಂದ ಸಾಲ ಮರು ಪಾವತಿ ಮಾಡುವುದಾಗಿ ವಿನಂತಿಸಿದ್ದರಂತೆ.

ಜಗತ್ತಿನ ಮೊದಲ ವಾಹನ ಅಪಘಾತ 1771ನೇ ಇಸವಿಯಲ್ಲಿ ಸಂಭವಿಸಿತ್ತು. ಅಂದು ನಿಕೊಲಾಸ್ ಜೋಸೆಫ್ ಕುಗ್ನಾಟ್ ಎಂಬವರ ತಾನೇ ಮುಂದೂಡಿಕೊಳ್ಳುವ ಸ್ಟೀಮ್ ನಿಯಂತ್ರಿತ ಸ್ಟೀಮ್ ಡ್ರೇ ತನ್ನ ನಿಯಂತ್ರಣ ಕಳೆದುಕೊಂಡು ಗೋಡೆಯೊಂದಕ್ಕೆ ಢಿಕ್ಕಿಯಾಗಿತ್ತು. ಪ್ರಸ್ತುತ ಪ್ಯಾರಿಸ್ ನ್ಯಾಷನಲ್ ಡೆಸ್ ಆರ್ಟ್‌ನಲ್ಲಿ ಅವಘಡಕ್ಕೀಡಾದ ವಾಹನವನ್ನು ಸಂರಕ್ಷಿಸಲಾಗಿದೆ.

ವಿಶ್ವದ ಮೊದಲ ದೀರ್ಘ ಪಯಣವನ್ನು ಕಾರ್ಲ್ ಬೆಂಝ್ ಪತ್ನಿ ಬೆರ್ತಾ ಬೆಂಝ್ ಕೈಗೊಂಡಿದ್ದರು. ಅವರು 1888 ಆಗಸ್ಟ್ 12ರಂದು ತಮ್ಮ ಬೆಂಝ್ ಪೇಟೆಂಟ್ ಮೋಟಾರುವ್ಯಾಗನ್ ಕಾರಿನಲ್ಲಿ ದಕ್ಷಿಣ ಜರ್ಮನಿಯ ಮನೇಮ್‌ನಿಂದ ಫಾರ್ಜೆಮ್‌ಗೆ ಪಯಣ ಬೆಳೆಸಿದ್ದರು. ಎರಡು ದಿನಗಳಲ್ಲೇ ಪಯಣ ಮುಗಿಸಿದ ಈಕೆ ದಿನವೊಂದರಲ್ಲಿ 106 ಕೀ.ಮೀ. ದೂರ ಕ್ರಮಿಸಿದ್ದರು. ಆಂತರಿಕ ದಹನ ಎಂಜಿನ್ ಹೊಂದಿದ ಮೊದಲ ಕಾರೆಂಬ ಹೆಗ್ಗಳಿಕೆಗೂ ಬೆಂಝ್ ಪೇಟೆಂಟ್ ಮೋಟಾರುವ್ಯಾಗನ್ ಪಾತ್ರವಾಗಿದೆ.

ಅತ್ಯಂತ ಹೆಚ್ಚು ಕಾಲ ಕಾರು ಮಾಲಿಕತ್ವ ಹಾಗೂ ಚಾಲನೆ ಮಾಡಿದ ದಾಖಲೆಯನ್ನು ಅಲೆನ್ ಸ್ವಿಫ್ಟ್ ಹೊಂದಿದ್ದಾರೆ. ಅವರು ತಮ್ಮ ರೋಲ್ಸ್ ರಾಯ್ಸ್ ಪಿಕ್ಕಡಿಲ್ಲಿ ಪಿ1 ರೋಡ್‌ಸ್ಟರ್ ಕಾರನ್ನು ದಾಖಲೆಯ 82 ವರ್ಷ ಮಾಲಿಕತ್ವ ಹೊಂದಿದ್ದರಲ್ಲದೆ ಸಾಯುವ ವರೆಗೂ (102) ಅದನ್ನೇ ಚಲಾಯಿಸಿದ್ದರು. ಇಲ್ಲಿ ಗಮನಾರ್ಹ ವಿಷಯ ಏನೆಂದರೆ ಸ್ವಿಫ್ಟ್ ಅವರಿಗೆ 1928ನೇ ಇಸವಿಯಲ್ಲಿ ಪದವಿ ತೇರ್ಗಡೆ ಹೊಂದಿದ್ದಾಗ ತಂದೆಯವರು ಉಡುಗೊರೆಯಾಗಿ ನೀಡಿದ್ದರು. ಅಂದು 10,900 ಅಮೆರಿಕನ್ ಡಾಲರ್‌ನಷ್ಟಿದ್ದ ಕಾರಿನ ದರ 2010ರಲ್ಲಿ 141700 ಅಮೆರಿಕನ್ ಡಾಲರ್‌ಗೆ ವೃದ್ಧಿಯಾಗಿತ್ತು ಎಂಬುದು ಸಹ ಅಷ್ಟೇ ಗಮನಾರ್ಹ.

ಇದೀನ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...


Click it and Unblock the Notifications








