ಸರಣಿ ಲೇಖನ: ಕುಬೇರ ಧಣಿಗಳ ದುಬಾರಿ ಕಾರುಲೋಕ

ಹೀಗೆ ಕನಸುಗಳಿಗೆ ಎಲ್ಲೆಯೆಂಬುದು ಇಲ್ಲವೇ ಇಲ್ಲ.
ಅದೇ ರೀತಿ ಕೆಲವರ ವೇತನಕ್ಕೂ ಇತಿಮಿತಿ ಇರುವುದಿಲ್ಲ. ಅದರಲ್ಲೂ ನಮ್ಮ ದೇಶದ ಕೆಲವು ಕಾರ್ಪೋರೆಟ್ ಕಂಪನಿಗಳ ಸಿಇಒಗಳು, ಮುಖ್ಯಸ್ಥರು, ಚೇರ್ಮನ್ ಗಳು ಪಡೆಯೋ ತಿಂಗಳ ಸಂಬಳ ಇದೆಯಲ್ಲ. ಅದು ಹಲವು ಕೋಟಿ ರುಪಾಯಿ ಲೆಕ್ಕದಲ್ಲಿರುತ್ತದೆ. ಅವರ ಜೀವನಶೈಲಿಯೂ ಅದಕ್ಕೆ ತಕ್ಕಂತೆ ಇರುವುದು ಸಾಮಾನ್ಯ.
ಕಂಪನಿಯ ಮುಂಭಾಗದಲ್ಲಿ ಅಥವಾ ಪಾರ್ಕಿಂಗ್ ಸ್ಥಳದಲ್ಲಿ ಸಾಲಾಗಿ ಕಾರು ನಿಂತಿರುತ್ತದೆ. ಅದರಲ್ಲಿ ಕಂಪನಿಯ ಪ್ರಮುಖರ ಕಾರು ಯಾವುದೆಂದು ಎಲ್ಲರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಯಾಕೆಂದರೆ ಹೆಚ್ಚಾಗಿ ಅಲ್ಲಿರುವ ಕಾರುಗಳಲ್ಲಿ ಸಿಇಒ, ಚೇರ್ಮನ್ ಕಾರು ಹೆಚ್ಚು ದುಬಾರಿಯದ್ದಾಗಿರುತ್ತದೆ.
ಯಾವ ಸಿಇಒ ಯಾವ ಕಾರು ಬಳಸುತ್ತಾರೆ ಎಂಬ ಕುತೂಹಲವೂ ಹೆಚ್ಚಿವರಿಗಿರುತ್ತದೆ. ರತನ್ ಟಾಟಾ, ಮುಖೇಶ್ ಅಂಬಾನಿ, ಸುನಿಲ್ ಮಿತ್ತಲ್, ಅಜೀಂ ಪ್ರೇಮ್ ಜಿ ಮುಂತಾದವರು ದೇಶದ ಟಾಪ್ ಲಿಸ್ಟ್ ನಲ್ಲಿರುವ ಪ್ರಮುಖ ಸಿಇಒ ಅಥವಾ ಚೇರ್ಮನ್ ಗಳು.
ಇವರು ಮಾತ್ರವಲ್ಲದೇ ಅನಿಲ್ ಅಂಬಾನಿ, ವಿಜಯ್ ಮಲ್ಯ, ಕುಮಾರಮಂಗಳಂ ಬಿರ್ಲಾ, ಸುನಿಲ್ ಭಾರ್ತಿ ಮಿತ್ತಲ್ ಸೇರಿದಂತೆ ಹೆಚ್ಚಿನ ಸಿಇಒಗಳು ಐಷಾರಾಮಿ ಕಾರುಗಳನ್ನು ಬಳಸುತ್ತಾರೆ. ಸುಮ್ಮನೆ ಅವರ ಕಾರುಲೋಕದತ್ತ ಒಂದು ಸುತ್ತು ಹೊಡೆಯೋಣ ಬನ್ನಿರಿ.


Click it and Unblock the Notifications








