Just In
- 1 hr ago
ಇಂದಿನಿಂದ ಸ್ಕಾರ್ಪಿಯೋ-ಎನ್ ಕಾರು ಮಾದರಿಯ ಟೆಸ್ಟ್ ಡ್ರೈವ್ ಆರಂಭಿಸಿದ ಮಹೀಂದ್ರಾ
- 2 hrs ago
ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್
- 2 hrs ago
ನೀವು ಖರೀದಿಸಬಹುದಾದ ಅತ್ಯುತ್ತಮ ಸೆಕೆಂಡ್ ಹ್ಯಾಂಡ್ ಆಟೋಮ್ಯಾಟಿಕ್ ಹ್ಯಾಚ್ಬ್ಯಾಕ್ ಕಾರುಗಳಿವು...
- 3 hrs ago
ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಪ್ರಮುಖ ವೆರಿಯೆಂಟ್ಗಳನ್ನು ತೆಗೆದುಹಾಕಿದ ನಿಸ್ಸಾನ್
Don't Miss!
- Sports
ಈತನ ಹುಚ್ಚುತನದಿಂದ ನಾಲ್ಕನೇ ದಿನ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮಂಕಾಯಿತು ಎಂದ ಪೀಟರ್ಸನ್!
- Education
SSC CGL Tier 1 2022 Result : ಎಸ್ಎಸ್ಸಿ ಸಿಜಿಎಲ್ ಟಯರ್ 1 ಫಲಿತಾಂಶ ವೀಕ್ಷಿಸುವುದು ಹೇಗೆ ?
- Lifestyle
ನೀವು ಯಾವ ಭಂಗಿಯಲ್ಲಿ ಮಲಗುತ್ತೀರಾ ಅದೇ ಹೇಳುತ್ತೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತಾ!
- News
ಐಎಎಸ್, ಐಪಿಎಸ್ ಅಧಿಕಾರಿಗಳ ಬಂಧನದ ಹಿಂದೆ ಒಂದೇ ಕಾರಣ?
- Movies
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Technology
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ವಾಹನ ಕೊಂಡರು ಬಳಸಲಾಗದ ದುಸ್ಥಿತಿ...ನೋಂದಣಿ ಸಂಖ್ಯೆಗಾಗಿ 3 ಲಕ್ಷ ಜನರ ಪರದಾಟ !
ವಾಹನ ಕೊಳ್ಳುವ ಗ್ರಾಹಕರು ತಮ್ಮ ಹೊಸ ಕಾರು ಅಥವ ಬೈಕ್‌ಗಳಲ್ಲಿ ಪ್ರಯಾಣಿಸಲು ತುಂಬಾ ಉತ್ಸುಕರಾಗಿರುತ್ತಾರೆ. ಇದಕ್ಕಾಗಿಯೇ ವಾಹನಕ್ಕೆ ಅಧಿಕೃತ ನೋಂದಣಿ ಸಂಖ್ಯೆ ಬರುವವರೆಗು ಕಾಯುತ್ತಾರೆ. ಆದರೆ ಇಲ್ಲೊಂದು ಪ್ರದೇಶದಲ್ಲಿ ವಾಹನಗಳನ್ನು ಕೊಂಡು 5 ವರ್ಷಗಳಾದರೂ ನೋಂದಣಿಯಾಗದ 3 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿವೆ.

ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ನಂಬರ್ ಪ್ಲೇಟ್‌ಗಾಗಿ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಮಾಲೀಕರು ತಮ್ಮ ಹೊಸ ವಾಹನವನ್ನು ಬಳಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಇಷ್ಟಕ್ಕು ಇಂತಹ ಪ್ರದೇಶವಾದರೂ ಯಾವುದು ಅಂತೀರಾ? ಅದೇ ನೆರೆಯ ಪಾಕಿಸ್ತಾನ.

ಹೌದು..ಇಲ್ಲಿನ ಕರಡಿ ರಾಜ್ಯದ ಸಿಂಧ್ ಎಂಬ ಪ್ರದೇಶದಲ್ಲಿ ಹೊಸ ವಾಹನಕ್ಕೆ ನೋಂದಣಿಯನ್ನು ಖರೀದಿಸುವುದು ತುಂಬಾ ಕಷ್ಟವಾಗಿದೆ. ಇದಕ್ಕೆ ಕಾರಣ ಕೆಲ ಮಾಲೀಕರು ಫ್ಯಾನ್ಸಿ ನಂಬರ್ ಬಯಸುತ್ತಿರುವುದು. ಇದರಿಂದ ಇತರರಿಗೂ ಸಮಸ್ಯೆಯಾಗುತ್ತಿದೆ ಎಂದು ವರದಿಯಾಗಿದೆ.

2016ರಿಂದ ಇಲ್ಲಿಯವರೆಗೂ ಸುಮಾರು 3 ಲಕ್ಷ ಜನರು ಇಂತಹ ತೊಂದರೆ ಎದುರಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಕಾರು ವಿತರಕರು, ಆಮದುದಾರರು, ಅಬಕಾರಿ ಮತ್ತು ತೆರಿಗೆ ಅಧಿಕಾರಿಗಳ ಇತ್ತೀಚಿನ ಸಭೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಈ ಸಭೆಯ ಮೂಲಕವೇ ವಾಹನ ನೋಂದಣಿಗಾಗಿ ಕಾಯುತ್ತಿರುವ ಸುಮಾರು 3 ಲಕ್ಷ ಜನರ ಮಾಹಿತಿ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಪಾಕಿಸ್ತಾನದ ಪ್ರತಿಯೊಂದು ಹೊಸ ವಾಹನದ ಮಾಲೀಕರಿಂದ 1000 ರೂ. ಸಂಗ್ರಹಿಸಲಾಗಿದೆ. ನಂಬರ್ ಪ್ಲೇಟ್ ಪಡೆಯುವ ಮೊದಲೇ ಸರ್ಕಾರ ಎಲ್ಲರಿಂದಲೂ ಹಣ ಸಂಗ್ರಹಿಸಿದೆ. ಇದರಿಂದಾಗಿ ಪಾಕಿಸ್ತಾನ ಸರ್ಕಾರಕ್ಕೆ 300 ಮಿಲಿಯನ್ ರೂ.ಗಳ ಆದಾಯ ಬಂದಿದೆ. ಆದರೆ ಐದು ವರ್ಷ ಕಳೆದಿದ್ದರೂ ವಾಹನ ಕೊಂಡವರಿಗೆ ನೋಂದಣಿಯಾಗಿಲ್ಲ.

ಇದರಿಂದಾಗಿ ವಾಹನ ಮಾಲೀಕರು ತಮ್ಮ ವಾಹನ ಬಳಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ಆಡಳಿತ ನೀಡುತ್ತಿರುವ ಕಾರಣವೆಂದರೆ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪ್ರಸ್ತುತವಿರುವ ವಾಹನ ನೋಂದಣಿಯ ಬಯೋಮೆಟ್ರಿಕ್ ವ್ಯವಸ್ಥೆ ಸರಿಯಿಲ್ಲ. ಹಾಗಾಗಿ ವಾಹನಗಳ ನೋಂದಣಿಗಾಗಿ ಹೊಸ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪರಿಚಯಿಸಲು ಪ್ರಸ್ತಾಪಿಸಿದೆ.

ಆದರೆ ಪ್ರಸ್ತುತ ಕೆಲವು ಸಮಸ್ಯೆಗಳಿದ್ದು, ಅದನ್ನು ಕಾರ್ಯರೂಪಕ್ಕೆ ತರಲು ತಡವಾಗಬಹುದು. ಪ್ರಸಕ್ತ ವರ್ಷದ ಮಾರ್ಚ್‌ನಿಂದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದೆ. ಹೊಸ ನೋಂದಣಿ ವ್ಯವಸ್ಥೆ ಜಾರಿಯಾದರೆ ನೋಂದಣಿ ಶುಲ್ಕದ ಮೊತ್ತವು ಹೆಚ್ಚಾಗಲಿದೆ.

ಹೊಸ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಾದ ನಂತರ ಶುಲ್ಕವನ್ನು ರೂ.1000 ದಿಂದ 1,800ಕ್ಕೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಈ ನಡುವೆ ಸಿಂಧ್ ಪ್ರಾಂತ್ಯದ ಜನರು ಶುಲ್ಕ ಎಷ್ಟೇ ಆದರು ನೀಡಲು ಸಿದ್ದರಿದ್ದೇವೆ, ಆದರೆ ನೋಂದಣಿಯನ್ನು ತ್ವರಿತವಾಗಿ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.