ಟರ್ಬೊಜೆಟ್ ಎಂಜಿನ್ ನಿಯಂತ್ರಿತ 1970ರ ದಶಕದ ವೇಗದೂತ ರೈಲು
1970ರ ದಶಕದಲ್ಲೇ ವಿಮಾನಗಳಲ್ಲಿ ಆಳವಡಿಸಲಾಗುವ ಟರ್ಜೊ ಜೆಟ್ ಎಂಜಿನ್ ಗಳನ್ನು ರೈಲಿನಲ್ಲಿ ಜೋಡಿಸಲಾಗಿರುವುದು ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಐದು ದಶಕಗಳಷ್ಟು ಹಿಂದೆಯೇ ರೈಲು ತಂತ್ರಜ್ಞಾನ ಎಷ್ಟೊಂದು ಪ್ರಗತಿ ಸಾಧಿಸಿತ್ತು ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. 1970ರ ದಶಕದಲ್ಲಿ ನಿರ್ಮಿತ ವೇಗದೂತ ರೈಲೊಂದನ್ನು ಪತ್ತೆ ಹಚ್ಚಲಾಗಿದ್ದು, ತಜ್ಞರಲ್ಲಿ ಬಹಳಷ್ಟು ಕುತೂಹಲವನ್ನು ಮೂಡಿಸಿದೆ.

ಭವಿಷ್ಯತ್ತಿನ ರೈಲು ಎಂದೇ ಈ ಟರ್ಬೊಜೈಟ್ ರೈಲ್ ಕಾರನ್ನು ವಿಶ್ಲೇಷಿಸಲಾಗುತ್ತಿದ್ದು, ಗಂಟೆಗೆ 257 ಕೀ.ಮೀ. (160 ಮೈಲು) ವೇಗದಲ್ಲಿ ಸಂಚರಿಸುವಷ್ಟು ಸಾಮರ್ಥ್ಯವನ್ನು ಹೊಂದಿತ್ತು.

ಸದ್ಯ ಈ ಸೋವಿಯತ್ ಜೆಟ್ ರೈಲು ಹೇಳುವವರು ಕೇಳುವವರಿಲ್ಲದೆ ರೈಲು ಹಳಿಯಲ್ಲಿ ತುಕ್ಕು ಹಿಡಿದು ಪಾಳು ಬಿದ್ದಿರುವುದು ಬೇಸರದ ಸಂಗತಿಯಾಗಿದೆ.

ಇಲ್ಲಿ ಕಂಡುಬಂದಿರುವ ಆಸಕ್ತಿದಾಯಕ ವಿಚಾರವೆಂದರೆ ರೈಲಿನ ಮುಂಭಾಗದಲ್ಲಿ ರೂಫ್ ಟಾಪಲ್ಲಿ ದೊಡ್ಡದಾದ ಜೆಟ್ ಎಂಜಿನ್ ಗಳನ್ನು ಲಗತ್ತಿಸಲಾಗಿದೆ.

ಆದರೆ ಈ ಯೋಜನೆ ಮಹಾ ವೈಫ್ಯಲಕ್ಕೆ ಎಡೆ ಮಾಡಿಕೊಟ್ಟಿತ್ತು ಎಂಬುದನ್ನು ವಿಶ್ಲೇಷಕರು ವಿವರಿಸುತ್ತಾರೆ. ಯಾಕೆಂದರೆ ಈ ಯೋಜನೆಯಿಂದ ಭಾರಿ ಪ್ರಮಾಣದ ಇಂಧನ ಪೋಲಾಗುತ್ತಿತ್ತು.

ಇತಿಹಾಸದತ್ತ ಗಮನ ಹಾಯಿಸಿದಾಗ ನ್ಯೂಯಾರ್ಕ್ ಸೆಂಟ್ರಲ್ ರೈಲ್ ರೋಡ್ ಗಾಗಿ ಅಮೆರಿಕದ ಎಂಜಿನಿಯರ್ ಡಾನ್ ವೆಟ್ಜೆಲ್ ಎಂಬವರು ಮೊದಲ ಟರ್ಬೊಜೆಟ್ ನಿಯಂತ್ರಿತ ರೈಲುಗಳನ್ನು ಅಭಿವೃದ್ಧಿಪಡಿಸಿದ್ದರು.

ರೈಲುಗಳು ಹೆಚ್ಚು ವೇಗವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಸುರಕ್ಷಿತವಾಗಿ ತಲುಪುವ ನಿಟ್ಟಿನಲ್ಲಿ ಟರ್ಬೊಜೆಟ್ ರೈಲುಗಳನ್ನು ವಿನ್ಯಾಸಗೊಳಿಸಲಾಗಿತ್ತು.

ಅಮೆರಿಕ ಮಾದರಿಯ ಟರ್ಬೊ ಜೆಟ್ ನಿಯಂತ್ರಿತ ರೈಲು ಇಂದಿಗೂ ಅತಿ ವೇಗವಾಗಿ ಓಡುವ ರೈಲೆಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಗಂಟೆಗೆ 294 ಕೀ.ಮೀ. (183 ಮೈಲು) ವೇಗದಲ್ಲಿ ಸಂಚರಿಸುವಷ್ಟು ಸಾಮರ್ಥ್ಯ ಹೊಂದಿದೆ.

ವಿಮಾನಗಳಲ್ಲಿ ಬಳಕೆ ಮಾಡುವುದಕ್ಕೆ ಸಮಾನವಾದ ಟರ್ಬೊಜೆಟ್ ಗಳನ್ನು ಸೋವಿಯತ್ ಟರ್ಬೊ ಜೆಟ್ ರೈಲಿನಲ್ಲಿ ಬಳಕೆ ಮಾಡಲಾಗಿದೆ.


Click it and Unblock the Notifications








