ದುಬಾರಿ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಿದ ಕನ್ನಡಿಗ ಖ್ಯಾತ ನಟ ‘ಸಿಐಡಿ’ ದಯಾ

ಹಿಂದಿ ಕಿರುತೆರೆಯ 'ಸಿಐಡಿ' ಸೀರಿಯಲ್‌ನಲ್ಲಿ ಇನ್ಸ್‌ಪೆಕ್ಟರ್ ದಯಾ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. 25 ವರ್ಷಕ್ಕೂ ಅಧಿಕ ಸಮಯದಿಂದ ಬಾಲಿವುಡ್‌ ಸಿನಿಮಾ ಮತ್ತು ಕಿರುತೆರೆಯಲ್ಲಿ ಕೆಲಸ ಮಾಡಿದ್ದಾರೆ. ಇದೀಗ ನಟ ದಯಾನಂದ್ ಶೆಟ್ಟಿ (Dayanand Shetty) ಅವರು ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕ್ ಅನ್ನು ಖರೀದಿಸಿದ್ದಾರೆ.

ನಟ ದಯಾನಂದ್ ಶೆಟ್ಟಿ ಅವರು ಖರೀದಿಸಿದ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 (Royal Enfield Super Meteor 650) ಬೈಕಿನ ಚಿತ್ರಗಳು ಮತ್ತು ವೀಡಿಯೊಗಳನ್ನು Instagram ನಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಸಿಐಡಿ ಖ್ಯಾತಿಯ ನಟ ಶೋರೂಮ್‌ಗೆ ಆಗಮಿಸಿ ಮಾರಾಟ ಪ್ರತಿನಿಧಿಗಳಿಂದ ಸ್ವಾಗತಿಸುತ್ತಿರುವುದು ಕಂಡುಬರುತ್ತದೆ. ಮೊದಲು ಕೆಲವು ಅಗತ್ಯ ದಾಖಲೆಗಳಿಗೆ ಸಹಿ ಮಾಡಿದರು ಮತ್ತು ಅಂತಿಮವಾಗಿ ತಮ್ಮ ಹೊಸ ಬೈಕಿನ ಕವರ್‌ ತೆಗೆದರು.

Dayanand Shetty

ನಟ ದಯಾನಂದ್ ಶೆಟ್ಟಿ ಅವರು ಮೂಲತಃ ಉಡುಪಿಯ ಶಿರ್ವದವರಾಗಿದ್ದಾರೆ. ಅಜಯ್ ದೇವ್‌ಗನ್ ಅವರ 'ದಿಲ್‌ಜಾಲೆ' ಸಿನಿಮಾದಲ್ಲಿ ಮೊದಲ ಬಾರಿಗೆ ದಯಾನಂದ್ ಬಣ್ಣ ಹಚ್ಚಿದರು. ನಂತರ ಜಾನಿ ಗದ್ದರ್, ರನ್‌ವೇ, ಗೋವಿಂದ ನಾಮ್ ಮೇರಾ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿದರು. 1998 ರಿಂದ 2018 ರವರೆಗೆ ಒಟ್ಟು 20 ವರ್ಷಗಳ ಕಾಲ ಪ್ರಸಾರವಾದ 'ಸಿಐಡಿ' ಧಾರಾವಾಹಿಯಲ್ಲಿ 'ಇನ್ಸ್‌ಪೆಕ್ಟರ್ ದಯಾ' ಎಂಬ ಪಾತ್ರದಲ್ಲಿ ನಟಿಸಿದ್ದ ಅವರು, ಅನೇಕ ಧಾರಾವಾಹಿಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರಗಳನ್ನೇ ಮಾಡಿದ್ದಾರೆ.

ನಟ ದಯಾನಂದ್ ಶೆಟ್ಟಿ ಖರೀದಿಸಿದ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 648cc, ಏರ್ ಮತ್ತು ಆಯಿಲ್-ಕೂಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದೇ ಎಂಜಿನ್ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ ಗಳಲ್ಲಿ ನೀಡಲಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಸೂಪರ್ ಮಿಟಿಯೊರ್‌ನ ಎಂಜಿನ್ ಮತ್ತು ಅದರ ಗೇರಿಂಗ್ ಅನ್ನು ನವೀಕರಿಸಿದೆ.

Dayanand Shetty

ಈ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕಿನಲ್ಲಿರುವ ಅದೇ 648 cc,ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 46.2 ಬಿಹೆಚ್‍ಪಿ ಪವರ್ ಮತ್ತು 52 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಬೈಕ್ ಒಟ್ಟು 241 ಕೆಜಿ ತೂಕದ ಅತ್ಯಂತ ಭಾರವಾದ ರಾಯಲ್ ಎನ್‌ಫೀಲ್ಡ್ ಬೈಕ್ ಆಗಿದೆ.

ಇನ್ನು ಆಯಾಮದಲ್ಲಿ ವಿಷಯದಲ್ಲಿ, ಹೊಸ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ 2260 mm ಉದ್ದ, 890 mm ಅಗಲ ಮತ್ತು 1155 mm ಎತ್ತರವನ್ನು ಹೊಂದಿದೆ. ಇನ್ನು ಈ ಹೊಸ ಬೈಕ್ 1500 mm ವ್ಹೀಲ್ ಬೇಸ್ ಮತ್ತು 135 mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಈ ಮಿಟಿಯೊರ್ 650 ಬೈಕ್ ಸೀಟ್ 740 ಎಂಎಂ ಎತ್ತರವನ್ನು ಹೊಂದಿದೆ.

Dayanand Shetty

ಈ ಬೈಕ್ ಸಂಪೂರ್ಣ ಎಲ್‌ಇಡಿ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿರುವ ಕಂಪನಿಯ ಮೊದಲ ಬೈಕ್ ಆಗಿದೆ. ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕಿನ ಬಣ್ಣಗಳ ಆಯ್ಕೆಯ ಬಗ್ಗೆ ಹೇಳುವುದಾದರೆ, ಈ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರವು ಆಸ್ಟ್ರಲ್ ಬ್ಲೂ, ಆಸ್ಟ್ರಲ್ ಬ್ಲಾಕ್, ಆಸ್ಟ್ರಲ್ ಗ್ರೀನ್, ಇಂಟರ್ ಸ್ಟೆಲ್ಲರ್ ಗ್ರೀನ್ ಮತ್ತು ಇಂಟರ್ ಸ್ಟೆಲ್ಲರ್ ಗೆರಿ.ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು 300 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಸ್ಟ್ಯಾಂಡರ್ಡ್ ಫಿಟ್ಮೆಂಟ್ ಆಗಿ ಪಡೆಯುತ್ತದೆ. ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕ್ ಯುಎಸ್‌ಡಿ ಫೋರ್ಕ್ ಸಸ್ಪೆಕ್ಷನ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Wednesday, November 15, 2023, 19:00 [IST]
English summary
Actor dayanand shetty buys new royal enfield super meteor 650 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+