ಕೋಟಿ-ಕೋಟಿ ಬೆಲೆಯ ರೇಂಜ್ ರೋವರ್ ಖರೀದಿಸಿದ ನಟ ಹೃತಿಕ್ ರೋಷನ್: ಈ ಕಾರಿನ ವಿಶೇಷತೆಗಳೇನು?

ಬಾಲಿವುಡ್ ಮಂದಿಗೆ 'ರೇಂಜ್ ರೋವರ್' ಇಷ್ಟದ ಕಾರಾಗಿ ಮಾರ್ಪಟಿದ್ದು, ಒಬ್ಬರಾದ ಮೇಲೆ ಒಬ್ಬ ಸ್ಟಾರ್‌ಗಳು ತಾಮುಂದು, ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಖ್ಯಾತ ನಟ ಹೃತಿಕ್ ರೋಷನ್ (Hrithik Roshan) ಕೂಡ ರೇಂಜ್ ರೋವರ್ (Range Rover) ಎಸ್‌ಯುವಿಯನ್ನು ಕೊಂಡುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ನಟ ಹೃತಿಕ್ ರೋಷನ್ ಅವರು, ತಮ್ಮ ಕುಟುಂಬ ಸದಸ್ಯರೊಂದಿಗೆ ನೂತನ ರೇಂಜ್ ರೋವರ್ 3.0 ಆಟೋಬಯೋಗ್ರಫಿ ಎಲ್‍ಡಬ್ಲ್ಯೂಬಿ ಕಾರಿನಲ್ಲಿ ಬಾಲಿವುಡ್ ನಿರ್ದೇಶಕಿ ಫರಾ ಖಾನ್ ಆಯೋಜಿಸಿದ್ದ ಪಾರ್ಟಿಗೆ ಆಗಮಿಸಿದ್ದರು. ಈ ವಿಡಿಯೋವನ್ನು ಬಾಲಿವುಡ್ ಮಿರ್ಚಿ (Bollywood Mirchii) ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ, ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

Actor Hrithik Roshan Buys New Range Rover Car Price Rs 3 1 Crore

ಹೃತಿಕ್ ರೋಷನ್ ಖರೀದಿಸಿದ್ದಾರೆ ಎನ್ನಲಾಗಿರುವ ರೇಂಜ್ ರೋವರ್ 3.0 ಆಟೋಬಯೋಗ್ರಫಿ ಎಲ್‍ಡಬ್ಲ್ಯೂಬಿ (Range Rover 3.0 Autobiography LWB) ಮಾದರಿ ಸರಿ ಸುಮಾರು ರೂ.3.1 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಹೃತಿಕ್ ಅವರ ಈ ಕಾರು ಕ್ಲಾಸಿ ಸ್ಯಾಂಟೋರಿನಿ ಬ್ಲ್ಯಾಕ್ ಬಣ್ಣದ ಆಯ್ಕೆಯೊಂದಿಗೆ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರಿನಲ್ಲಿ 3.0-ಲೀಟರ್ ಡೀಸೆಲ್ ಹೈಬ್ರಿಡ್ ಎಂಜಿನ್ ಬಳಕೆ ಮಾಡಲಾಗಿದ್ದು, 346 ಬಿಹೆಚ್‍ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 700 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 8-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಹಾಗೂ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 13.16 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

Actor Hrithik Roshan Buys New Range Rover Car Price Rs 3 1 Crore

ನಟ ಹೃತಿಕ್ ರೋಷನ್ ಹಲವು ದುಬಾರಿ ಐಷಾರಾಮಿ ಕಾರುಗಳ ಮಾಲೀಕರು ಆಗಿದ್ದಾರೆ. ಅವರ ಗ್ಯಾರೇಜ್‌ನಲ್ಲಿರುವ ಮರ್ಸಿಡಿಸ್-ಬೆಂಜ್ ವಿ-ಕ್ಲಾಸ್ (Mercedes-Benz V-Class) ಸಹ ಇದೆ. ದೇಶೀಯ ಮಾರುಕಟ್ಟೆಯಲ್ಲಿ 2022ರಲ್ಲಿಯೇ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಆಗ ರೂ.71.10 ಲಕ್ಷದಿಂದ ರೂ.1.46 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿತ್ತು. ಗಂಟೆಗೆ 195 ಕೆಎಂಪಿಹೆಚ್ ಗರಿಷ್ಠ ವೇಗವನ್ನು ಪಡೆಯುತ್ತದೆ.

ಹೃತಿಕ್ ರೋಷನ್ ಅವರು ದುಬಾರಿ ಬೆಲೆಯ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ (Aston Martin Rapide S) ಕಾರನ್ನು ಸಹ ಹೊಂದಿದ್ದಾರೆ. ಇದು ರೂ.4.40 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿದಾರರಿಗೆ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಪಡೆದಿರುವ ಈ ಕಾರು 10.9 ಕೆಎಂಪಿಎಲ್ ಮೈಲೇಜ್ ನೀಡಲಿದ್ದು, 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಮತ್ತು RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.

Actor Hrithik Roshan Buys New Range Rover Car Price Rs 3 1 Crore

ಮಿನಿ ಕೂಪರ್ ಎಸ್ ಕನ್ವರ್ಟಿಬಲ್ (mini cooper s convertible) ಕಾರು ಸಹ ಹೃತಿಕ್ ರೋಷನ್ ಅವರ ಗ್ಯಾರೇಜ್‌ನಲ್ಲಿದೆ. ಇದು ರೂ.Rs.44.90 ಲಕ್ಷದಿಂದ ರೂ.51.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ಈ ಕಾರು, 16.72 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಜೊತೆಗೆ 4 ಆಸನದೊಂದಿಗೂ ಲಭ್ಯವಿದೆ.

ಹೃತಿಕ್ ರೋಷನ್ ಅವರು ರೋಲ್ಸ್ ರಾಯ್ಸ್ ಘೋಸ್ಟ್ (Rolls-Royce Ghost) ಕಾರಿನ ಮಾಲೀಕರು ಆಗಿದ್ದಾರೆ. ಇದು ರೂ.6.95 ಕೋಟಿಯಿಂದ ರೂ.7.95 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 6.75-ಲೀಟರ್ ಟ್ವಿನ್ ಟರ್ಬೊ ವಿ12 ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು, 571 ಪಿಎಸ್ ಗರಿಷ್ಠ ಪವರ್ ಮತ್ತು 850 ಎಂಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 8-ಸ್ವೀಡ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, March 21, 2024, 12:26 [IST]
English summary
Actor hrithik roshan buy new range rover car price rs 3 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+