ಪುಟ್ಟ ಎಂಜಿ ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ಖ್ಯಾತ ನಟ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ನಿಧಾನವಾಗಿ ಜನರು ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಜನರು ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿಸುತ್ತಿದ್ದಾರೆ. ಈ ನಡುವೆ ಜನಪ್ರಿಯ ಬಾಲಿವುಡ್ ನಟ ರೋಹಿತ್ ರಾಯ್ (Rohit Roy) ಅವರು ಹೊಚ್ಚಹೊಸ ಎಂಜಿ ಕಾಮೆಟ್ (MG Comet) ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ.

ನಟ ರೋಹಿತ್ ರಾಯ್ ಅವರು ತಮ್ಮ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನೊಂದಿಗಿನ ಫೋಟೋವನ್ನು Instagram ಪ್ರೊಫೈಲ್‌ನ ಶೇರ್ ಮಾಡಿದ್ದಾರೆ. ಈ ಫೋಟೋ ಕೆಳಗೆ ಇದು ಅಂತಿಮವಾಗಿ ಇಲ್ಲಿದೆ! ಎಂಬ ಶೀರ್ಷಿಕೆಯನ್ನು ನೀಡಿ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. ಈ ಪೋಟೋ ಕೆಳಗೆ ಅವರ ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿ ಕಾಮೆಂಟ್ ಮಾಡಿದ್ದಾರೆ. ಆದರೆ ಕಳೆದ ಬಾರಿ ಅವರ ಬೈಕ್ ಓಡಿಸುವ ವೀಡಿಯೊಗೆ ನೆಟ್ಟಿಗರು ಟೀಕಿಸಿದ್ದರು.

Rohit Roy

ನಟ ರೋಹಿತ್ ರಾಯ್ ಅವರಿಗೆ ಬೈಕ್ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಇತ್ತೀಚೆಗ ಅವರು ತಮ್ಮ 12 ಲಕ್ಷ ರೂಪಾಯಿಯ ಇಂಡಿಯನ್ ಸ್ಕೌಟ್ ಬಾಬರ್ ಬೈಕ ಅನ್ನು ಮನೆಯ ಬಳಿ ಓಡಿಸುತ್ತಿರುವ ವೀಡಿಯೊ ಸಖತ್ ವೈರಲ್ ಆಗಿತ್ತು. ಅವರು ತಮ್ಮ ಮ್ಯಾಟ್ ಬ್ಲ್ಯಾಕ್ ಇಂಡಿಯನ್ ಸ್ಕೌಟ್ ಬಾಬರ್ ಬೈಕ್ ಓಡಿಸುತ್ತಿರುವ ವೀಡಿಯೊವನ್ನು ರೋಹಿತ್ ರಾಯ್ ಅವರು Instagram ನಲ್ಲಿ ಶೇರ್ ಮಾಡಿದ್ದರು.

ಈ ವೀಡಿಯೋ ಕೆಳಗೆ ಹೆಲ್ಮೆಟ್ ಧರಿಸಿದೇ ಬೈಕ್ ಓಡಿಸಿರುವುದು ಹಲವಾರು ನೆಟ್ಟಿಗರು ಟೀಕಿಸಿದ್ದರು. ಆದರೆ ಅವರು ವೀಡಿಯೋ ಮಾಡಲು ಮಾತ್ರ ಈ ಬೈಕ್ ಅನ್ನು ಮನೆಯ ಸುತ್ತ ನಿಧಾನವಾಗಿ ರೈಡ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ನಟ ರೋಹಿತ್ ರಾಯ್ ಅವರು ಹೊಸದಾಗಿ ಖರೀದಿಸಿದ ಈ ಎಂಜಿ ಕಾಮೆಟ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ ಎರಡೂ ಡೋರಿನ, ನಾಲ್ಕು ಸೀಟರ್ ಮಿನಿ ಎಲೆಕ್ಟ್ರಿಕ್ ಕಾರು.

ಎಂಜಿ ಕಾಮೆಟ್ ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಆಗಿದೆ. ಎಂಜಿ ಕಾಮೆಟ್ ಎಂಬ ಕಾರಿನ ಹೆಸರು ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕ್‌ರಾಬರ್ಟ್‌ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ 1934 ರ ಸಾಂಪ್ರದಾಯಿಕ ಬ್ರಿಟಿಷ್ ವಿಮಾನದಿಂದ ಸ್ಫೂರ್ತಿ ಪಡೆದಿದೆ. ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಎಂಟ್ರಿ ಲೆವೆಲ್ ಪೇಸ್ ರೂಪಾಂತರದಲ್ಲಿ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕೀಲೆಸ್ ಎಂಟ್ರಿಯನ್ನು ಹೊಂದಿದೆ.

ಇದರೊಂದಿಗೆ, ಬ್ಲೂಟೂತ್ ಕನೆಕ್ಟಿವಿಟಿ ಸಿಸ್ಟಂ,ಮ್ಯಾನುಯಲ್ ಎಸಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, 2 ಸ್ಪೀಕರ್‌ಗಳು, 3 ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟ್‌ಗಳು, ಪವರ್ ಹೊಂದಾಣಿಕೆಯಂತಹ ಫೀಚರ್ಸ್ ಗಳನ್ನು ನೀಡುತ್ತದೆ. ಇನ್ನು ORVM ಗಳು, ಬ್ಲ್ಯಾಕ್ ಆಂತರಿಕ ಥೀಮ್, ಫ್ಯಾಬ್ರಿಕ್ ಅಪ್ಹೋಲ್ಸ್ಟರಿ, ಎಲೆಕ್ಟ್ರಿಕ್ ಅಡ್ಜೆಸ್ಟ್ ಮಾಡಬಹುದಾದ ವಿಂಗ್ ಮಿರರ್‌ಗಳನ್ನು ಹೊಂದಿದೆ.

ಇಷ್ಟೇ ಅಲ್ಲದೇ ರಿಮೋಟ್ ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, EBD ಜೊತೆಗೆ ABS, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ರಿವರ್ಸ್ ಪಾರ್ಕಿಂಗ್ ಸೀಟ್‌ಗಳಿವೆ. ಈ ಕಾಮೆಟ್ ರೋಟರಿ ಡ್ರೈವ್ ಸೆಲೆಕ್ಟರ್ ಅನ್ನು ಸಹ ಹೊಂದಿದೆ. ಇನ್ನು ಈ ಕಾರಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮತ್ತು ಮ್ಯಾನುಯಲ್ ಎಸಿ ಕಂಟ್ರೋಲ್ ಹೊಂದಿವೆ.

ಇದರೊಂದಿಗೆ ಕೀಲೆಸ್ ಎಂಟ್ರಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಮೂರು ಯುಎಸ್‌ಬಿ ಪೋರ್ಟ್‌ಗಳು ಮತ್ತು 55 ಕ್ಕೂ ಹೆಚ್ಚು ಕನೆಕ್ಟಿವಿಟಿಗಳನ್ನು ಪಡೆಯುತ್ತದೆ. ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆ ಫೀಚರ್ಸ್ ಗಳಿಗೆ ಹೆಚ್ಚು ಪ್ರಾಮುಖ್ಯಯತೆಯನ್ನು ನೀಡಲಾಗಿದೆ. ಈ ಎಂಜಿ ಕಾರಿನಲ್ಲಿ 3.3kW ಆನ್‌ಬೋರ್ಡ್ ಚಾರ್ಜರ್ ಅನ್ನು ಸಹ ನೀಡುತ್ತಿದೆ, ಇದು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಏಳು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಈ ಎಂಜಿ ಕಾಮೆಟ್ 42hp ಮತ್ತು 110Nm ಟಾರ್ಕ್ ಅನ್ನು ಉತ್ಪಾದಿಸುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಇದು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮೂಲಕ ಹಿಂದಿನ ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಇನ್ನು ಇದರಲ್ಲಿ 17.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67-ರೇಟ್ ಮಾಡಲ್ಪಟ್ಟಿದೆ ಮತ್ತು ARAI- ಪ್ರಮಾಣೀಕೃತ ರೇಂಜ್ 230 ಕಿ.ಮೀ ಆಗಿದೆ.

More from DriveSpark

Article Published On: Wednesday, January 10, 2024, 13:46 [IST]
English summary
Actor rohit roy buys new mg comet ev details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+