ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡಿದ ಜನಪ್ರಿಯ ನಟ: ನೆಟ್ಟಿಗರಿಂದ ಭಾರೀ ತರಾಟೆ

ಸಿನಿಮಾ ರಂಗ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿ ಇರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಇದರಲ್ಲಿ ಬಹುತೇಕ ನಟ, ನಟಿಯರಿಗೆ ಕಾರು ಹಾಗೂ ಬೈಕ್ ಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಇತ್ತೀಚೆಗೆ ನಟರು ಮಾತ್ರವಲ್ಲದೇ ನಟಿಯರು ಕೂಡ ಬೈಕ್ ಗಳನ್ನು ಖರೀದಿಸುತ್ತಿದ್ದಾರೆ. ಇದೇ ರೀತಿ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರಿಗೆ ಬೈಕ್ ಮೇಲೆ ಹೆಚ್ಚು ಕ್ರೇಜ್ ಹೊಂದಿದ್ದಾರೆ.

ಜನಪ್ರಿಯ ಟಿವಿ ಮತ್ತು ಚಲನಚಿತ್ರ ನಟ ರೋಹಿತ್ ರಾಯ್ (Rohit Roy) ಒಬ್ಬರು, ಇವರು ಹೆಚ್ಚು ಬೈಕ್ ಕ್ರೇಜ್ ಹೊಂದಿದ್ದಾರೆ. ಇತ್ತೀಚೆಗಷ್ಟೇ, ಅವರು ತಮ್ಮ 12 ಲಕ್ಷ ರೂಪಾಯಿಯ ಇಂಡಿಯನ್ ಸ್ಕೌಟ್ ಬಾಬರ್ ಬೈಕ ಅನ್ನು ಮನೆಯ ಬಳಿ ಓಡಿಸುತ್ತಿರುವ ವೀಡಿಯೊ ಸಖತ್ ವೈರಲ್ ಆಗಿದೆ. ಅವರು ತಮ್ಮ ಮ್ಯಾಟ್ ಬ್ಲ್ಯಾಕ್ ಇಂಡಿಯನ್ ಸ್ಕೌಟ್ ಬಾಬರ್ ಬೈಕ್ ಓಡಿಸುತ್ತಿರುವ ವೀಡಿಯೊವನ್ನು ರೋಹಿತ್ ರಾಯ್ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ.

 Rohit Roy

ವೀಡಿಯೊವು ರಣಬೀರ್ ಕಪೂರ್ ಅವರ ಸೂಪರ್ ಹಿಟ್ ಚಿತ್ರದ ಸಾಂಗ್ ಅನ್ನು ಒಳಗೊಂಡಿದೆ. ಈ ವೀಡಿಯೋದಲ್ಲಿ ರೋಹಿತ್ ರಾಯ್ ತನ್ನ ಮನೆಯ ಸುತ್ತ ನಿಧಾನವಾಗಿ ಬೈಕ್ ಓಡಿಸುತ್ತಿದ್ದಾರೆ. ಆದರೆ ವೀಡಿಯೊ ಮಾಡಲು ವಾರಿ ಮಾಡಿದ್ದೇನೆ, ನಾನು ಯಾವತ್ತೂ ಸರಿಯಾದ ಗೇರ್ ಇಲ್ಲದೆ, ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಹೋಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ನಟ ಹೆಲ್ಮೆಟ್ ಮತ್ತು ಸರಿಯಾದ ರೈಡಿಂಗ್ ಗೇರ್ ಧರಿಸದೇ ಬೈಕ್ ಓಡಿಸಿ ವೀಡಿಯೋ ಶೇರ್ ಮಾಡಿದ್ದಾರೆ.

ಈ ವೀಡಿಯೋ ಕೆಳಗಡೆ ಹಲವಾರು ನೆಟಿಜನ್‌ಗಳು ಟೀಕಿಸಿದ್ದಾರೆ. ಇದು ತಪ್ಪು ಎಂದು ನೆಟ್ಟಿಗರು ಟೇಕೆ ಮಾಡಿದ್ದಾರೆ. ನಟ ರೋಹಿತ್ ರಾಯ್ ಅವರು ಓಡಿಸಿದ ಬೈಕ್ ಬಗ್ಗೆ ಹೇಳುವುದಾದರೆ, ಇದು ಡಿಯನ್ ಸ್ಕೌಟ್ ಬಾಬರ್ ಆಗಿದೆ. ಈ ಬೈಕ್ ಅನ್ನು 2018 ರಲ್ಲಿ ಅವರು ಖರೀದಿಸಿದ್ದಾರೆ. ಈ ಇಂಡಿಯನ್ ಸ್ಕೌಟ್ ಬಾಬರ್ ಬೈಕಿನ ಬೆಲೆಯು ರೂ.11.99 ಲಕ್ಷವಾಗಿದೆ.

 Rohit Roy

ಇಂಡಿಯನ್ ಸ್ಕೌಟ್ ಬಾಬರ್ ಒಂದು ಕ್ರೂಸರ್ ಮೋಟಾರ್‌ಸೈಕಲ್ ಆಗಿದ್ದು, ಇದು ನಟರಿಂದ ಆಯ್ಕೆಯಾದ ಸುಂದರ ಮತ್ತು ಭಯಂಕರವಾಗಿ ಕಾಣುವ ಮ್ಯಾಟ್ ಬ್ಲ್ಯಾಕ್ ಪೇಂಟ್ ಕೆಲಸವನ್ನು ಒಳಗೊಂಡಿದೆ. ಈ ಇಂಡಿಯನ್ ಸ್ಕೌಟ್ ಬಾಬರ್ ಬೈಕಿನಲ್ಲಿ 1311-ಸಿಸಿ, ವಿ-ಟ್ವಿನ್ ಎಂಜಿನ್‌ ಅನ್ನು ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಸ್ಕೌಟ್‌ಗೆ ಪವರ್ ನೀಡುತ್ತದೆ. ಈ ಎಂಜಿನ್ 99 bhp ಪವರ್ ಜೊತೆಗೆ 98 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿಸಲ್ಪಟ್ಟಿದೆ. ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಹೊಸ ಟೆಲಿಸ್ಕೋಪಿಕ್ ಫೋರ್ಕ್‌ಗಳ ಮತ್ತು ಹಿಂಭಾಗದಲ್ಲಿ ಸಸ್ಪೆನ್ಶನ್ ಅನ್ನು 25 ಎಂಎಂ ಕಡಿಮೆ ಮಾಡಲಾಗಿದೆ. ಎರಡೂ ವ್ಹೀಲ್ ಗಳು ಡಿಸ್ಕ್ ಬ್ರೇಕ್ ಗಳನ್ನು ಪಡೆಯುತ್ತವೆ. ಇದರ ಜೊತೆಗೆ ABS ಅನ್ನು ಸ್ಟ್ಯಾಂಡರ್ಡ್ ನೀಡಲಾಗುತ್ತದೆ.

 Rohit Roy

ಈ ಬೃಹತ್ ಕ್ರೂಸರ್ ಬೈಕ್ ಹೊರತಾಗಿ, ನಟ ಇತ್ತೀಚೆಗೆ ಭಾರತದ ಅತ್ಯಂತ ವೇಗದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಲ್ಲಿ ಒಂದಾದ ಅಲ್ಟ್ರಾವೈಲೆಟ್ F77 ಅನ್ನು ಖರೀದಿಸಿದ್ದಾರೆ. ಅವರು ಹೊಚ್ಚಹೊಸ ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿಸಿದ್ದಾರೆ. ಅಲ್ಟ್ರಾವೈಲೆಟ್ ಎಫ್77 ಒಂದೇ ಚಾರ್ಜ್‌ನಲ್ಲಿ 130 - 150 ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡುವ ಭರವಸೆ ನೀಡಿತು. ಈಗ ಬ್ರ್ಯಾಂಡ್ 200 ಕಿಲೋಮೀಟರ್ ಮಾರ್ಕ್ ಅನ್ನು ನೋಡುತ್ತಿದೆ.

ಅಲ್ಟ್ರಾವೈಲೆಟ್‌ನ ಎಫ್77 BLDC ಮೋಟಾರ್ ನಿಂದ ಚಾಲಿತವಾಗಿದ್ದು ಅದು ಸುಮಾರು 33 ಬಿಹೆಚ್‍ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಔಟ್‌ಪುಟ್‌ನೊಂದಿಗೆ ಎಫ್77 ಕೇವಲ 150 ಕಿ.ಮೀ ಗಿಂರ ಕಡಿಮೆ ವೇಗವನ್ನು ಹೊಂದಿದೆ. 0-60 ಕಿ.ಮೀ ವೇಗವನ್ನು ಪಡೆಯಲ್ಲಿ ಕೇವಲ 2.8 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಆದರೆ 0-100 ಕಿ.ಮೀ ವೇಗವನ್ನು ಪಡೆಯಲು 7.5 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.

ನವೀಕರಿಸಿದ ಹೊಸ ಅಲ್ಟ್ರಾವೈಲೆಟ್ ಎಫ್77 ದೇಶದ ಬಹುನಿರೀಕ್ಷಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ವಾಹನ ಪ್ರಿಯರು ಬ್ರ್ಯಾಂಡ್‌ನ ಬೆಳವಣಿಗೆಗಳನ್ನು ನಿಕಟವಾಗಿ ವೀಕ್ಷಿಸುತ್ತಿದ್ದಾರೆ. ಈ ಅಲ್ಟ್ರಾವೈಲೆಟ್ ಎಫ್77 ಹೊಸ ನವೀಕರಣಗಳೊಂದಿಗೆ ಹೆಚ್ಚಿನ ರೇಂಜ್ ಮತ್ತು ಹೆಚ್ಚಿನ ಪರ್ಫಾಮೆನ್ಸ್ ನೊಂದಿಗೆ ಬಿಡುಗಡೆಯಾಗಲಿದೆ. ಹೆಚ್ಚಿನ ರೇಂಜ್ ಮತ್ತು ಪರ್ಫಾಮೆನ್ಸ್ ಮೂಲಕ ಈ ಎಲೆಕ್ಟ್ರಿಕ್ ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Saturday, January 6, 2024, 8:30 [IST]
English summary
Actor rohit roy rides indian scout bobber bike details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+