ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಸಿನಿಮಾ ರಂಗದಲ್ಲಿರುವ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರು ಕ್ರೇಜ್ ಹೆಚ್ಚು ಇರುತ್ತದೆ. ಸಿನಿಮಾ ನಟಿಯರು ಕೂಡ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ನಟಿಯರು ತಮ್ಮ ಮೆಚ್ಚಿನ ಐಷಾರಾಮಿ ಬ್ರ್ಯಾಂಡ್‌ನ ಕಾರುಗಳನ್ನು ಖರೀದಿಸುತ್ತಾರೆ.

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಇತ್ತೀಚೆಗೆ ಅದಿತಿ ರಾವ್ ಹೈದರಿ ಅವರು ಐಷಾರಾಮಿ ಆಡಿ ಕ್ಯೂ7 ಎಸ್‌ಯುವಿಯನ್ನು ಖರೀದಿಸಿದ್ದಾರೆ. ಈ ಎಸ್‍ಯುವಿಯ ಬೆಲೆಯು ಎಕ್ಸ್-ಶೋರೂಂ ಪ್ರಕಾರ ರೂ.88.33 ಲಕ್ಷವಾಗಿದೆ. ನಟಿ ಐಷಾರಾಮಿ ಜರ್ಮನ್ ಕಾರುಗಳನ್ನು ಹೊಂದಿರುವ ಬಾಲಿವುಡ್ ಸೆಲಬ್ರಿಟಿಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ರಣವೀರ್ ಸಿಂಗ್ ಜೊತೆ 'ಪದ್ಮಾವತಿ' ಸಿನಿಮಾದಲ್ಲಿ ಮೆಹರ್ ಉನ್ನೀಸಾ ಪಾತ್ರದಲ್ಲಿ ಗಮನ ಸೆಳೆದ ನಟಿ ಅದಿತಿ ರಾವ್ ಹೈದರಿ ಅಕ್ಟೋಬರ್ 28, 1986 ರಂದು, ಹೈದರಾಬಾದ್‌ನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು.

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ನಟಿ ಅದಿತಿ ರಾವ್ ಹೈದರಿ ಅವರು 2006 ರಲ್ಲಿ ಮಲಯಾಳಂ ಚಿತ್ರ 'ಪ್ರಜಾಪತಿ' ನಿಂದ ವೃತ್ತಿಜೀವನವನ್ನು ಆರಂಭಿಸಿದರು. ಅದಿತಿ ಮೊದಲ ಹಿಂದಿ ಚಿತ್ರ 'ದೆಹಲಿ 6' ಆಗಿತ್ತು. ಈ ಚಿತ್ರದ ನಂತರ, ಅದಿತಿ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ನಟಿ ಅದಿತಿ ರಾವ್ ಹೈದರಿ ಖರೀದಿಸಿದ ಆಡಿ ಕ್ಯೂ7 ಕಾರಿನ ಬಗ್ಗೆ ಹೇಳುವುದಾದರೆ, ಆಡಿ ಕ್ಯೂ7 ಅನ್ನು ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಸೇರಿದಂತೆ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಇದು ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಯುನಿಟ್ ಆಗಿ ಭಾರತಕ್ಕೆ ಬರುತ್ತದೆ ಮತ್ತು ಇದನ್ನು ಔರಂಗಾಬಾದ್‌ನಲ್ಲಿರುವ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸ್ಥಾವರದಲ್ಲಿ ತಯಾರಿಸಲಾಗುವುದು.

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಈ ಎರಡು ರೂಪಾಂತರಗಳಲ್ಲಿ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ. ನವೀಕರಿಸಿದ ಆಡಿ ಕ್ಯೂ7 ಎಸ್‍ಯುವಿಯಲ್ಲಿ 3.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಕ್ಯೂ5 ನಂತೆ ಕ್ಯೂ7 ಕೂಡ ಮೈಲ್ಡ್ -ಹೈಬ್ರಿಡ್ ಸಿಸ್ಟಂ ಅನ್ನು ಪಡೆಯುತ್ತದೆ, ಇದು 48-ವೋಲ್ಟ್ ಎಲೆಕ್ಟ್ರಿಕ್ ಮೋಟಾರು, ಲಿಥಿಯಂ-ಐಯಾನ್ ಬ್ಯಾಟರಿ ಮತ್ತು ಬೆಲ್ಟ್ ಆಲ್ಟರ್ನೇಟರ್ ಸ್ಟಾರ್ಟರ್ (BAS) ಅನ್ನು ಒಳಗೊಂಡಿರುತ್ತದೆ. ಇನ್ನು ಈ ಹೊಸ ಆಡಿ ಕ್ಯೂ7 ಎಸ್‍ಯುವಿಯು 250 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ,

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಬ್ರ್ಯಾಂಡ್‌ನ ಕ್ವಾಟ್ರೊ ಆಲ್-ವೀಲ್-ಡ್ರೈವ್ ಸಿಸ್ಟಂ ಸಹ ಈ ಎಸ್‍ಯುವಿಯಲ್ಲಿ ನೀಡಿದೆ. ಈ ಹೊಸ ಆಡಿ ಕ್ಯೂ7 ಎಸ್‍ಯುವಿಯ ಎಂಟ್ರಿ ಲೆವೆಲ್ ಪ್ರೀಮಿಯಂ ಪ್ಲಸ್ ರೂಪಾಂತರವು 19-ಇಂಚಿನ ಅಲಾಯ್ ವ್ಹೀಲ್ ಗಳು, ಎಂಟು ಏರ್‌ಬ್ಯಾಗ್‌ಗಳು, ಪನರೋಮಿಕ್ ಸನ್‌ರೂಫ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಅಡಾಪ್ಟಿವ್ ಏರ್ ಸಸ್ಪೆನ್ಷನ್, ಆಂಬಿಯೆಂಟ್ ಲೈಟಿಂಗ್ ಮತ್ತು ಎಲೆಕ್ಟ್ರಿಕಲಿ-ಹೊಂದಾಣಿಕೆ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ..

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಇದರೊಂದಿಗೆ ನಾಲ್ಕು- ಮುಂಭಾಗದ ಸೀಟುಗಳಿಗೆ ಲಂಬೂರ್ ಸಂಪೂರ್ಟ್, ಪಾರ್ಕಿಂಗ್ ಅಸಿಸ್ಟ್ ಜೊತೆಗೆ ಕ್ರೂಸ್ ಕಂಟ್ರೋಲ್, ಫ್ಹೋರ್ ಜೋನ್ ಕಂಟ್ರೋಲ್, ಪವರ್-ಹೊಂದಾಣಿಕೆ ಮುಂಭಾಗದ ಸೀಟುಗಳು ಮತ್ತು ಡ್ರೈವರ್ ಸೀಟ್‌ಗಾಗಿ ಮೆಮೊರಿ ಫಂಕ್ಷನ್, ವರ್ಚುವಲ್ ಕಾಕ್‌ಪಿಟ್ ಮತ್ತು ಲೇನ್ ಡಿಪರ್ಚರ್ ಎಕ್ಸಿಟ್ ಅನ್ನು ಹೊಂದಿದೆ.

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಇದರೊಂದಿಗೆ ಡ್ಯುಯಲ್-ಸ್ಕ್ರೀನ್ ಎಂಎಂಐ ಪ್ಲಸ್, ಆಡಿ ಡ್ರೈವ್ ಆಯ್ಕೆ, ಆಡಿ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಆಡಿ ಫೋನ್ ಬಾಕ್ಸ್ ಮತ್ತು ಆಡಿ ಸ್ಮಾರ್ಟ್‌ಫೋನ್ ಇಂಟರ್ಫೇಸ್ ಅನ್ನು ಒಳಗೊಂಡಿದೆ. ಮೇಲೆ ತಿಳಿಸಲಾದ ವೈಶಿಷ್ಟ್ಯಗಳ ಜೊತೆಗೆ, ಆಡಿ ಕ್ಯೂ7 ಫೇಸ್‌ಲಿಫ್ಟ್ ಟೆಕ್ನಾಲಜಿ ರೂಪಾಂತರವು ಅಡಾಪ್ಟಿವ್ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಪಡೆಯುತ್ತದೆ, ಇನ್ನು ಸೆನ್ಸರ್-ಕಂಟ್ರೋಲ್ಡ್ ಲಗೇಜ್ ಕಂಪಾರ್ಟ್‌ಮೆಂಟ್ ರೀಲಿಸ್ ಕಂಫರ್ಟ್ ಕೀ, ಹಿಂಭಾಗದಲ್ಲಿ ಚಾರ್ಜಿಂಗ್ ಫಂಕ್ಷನ್ ನೊಂದಿಗೆ USB ಪೋರ್ಟ್‌ಗಳು, ಆಡಿ ಪಾರ್ಕ್ ಅಸಿಸ್ಟ್ ಜೊತೆಗೆ 3D ಸರೌಂಡ್ ಕ್ಯಾಮೆರಾಗಳು, 730W ಬ್ಯಾಂಗ್ ಮತ್ತು ಒಲುಫ್‌ಸೆನ್ ಮೂಲದ ಸರೌಂಡ್ ಸೌಂಡ್ ಸಿಸ್ಟಮ್, ಮತ್ತು ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಅನ್ನು ಒಳಗೊಂಡಿದೆ.

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಈ ಎಸ್‍ಯುವಿಯು ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ, ಈ ಹೊಸ ಎಸ್‍ಯುವಿಯಲ್ಲಿ ದೊಡ್ಡದಾದ, ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಹೊಂದಿದ್ದು, ನೇರವಾದ ಸ್ಲ್ಯಾಟ್‌ಗಳು, ಸ್ಪೋರ್ಟಿಯರ್ ಬಂಪರ್ ಎರಡು ಭಾಗಗಳ ಸೈಡ್ ಏರ್ ಇನ್‌ಲೆಟ್‌ಗಳು, ದಪ್ಪ ಕ್ಲಾಡಿಂಗ್ ಮತ್ತು ಎಲ್-ಆಕಾರದ ಏರ್ ಸ್ಪ್ಲಿಟರ್ ಅನ್ನು ಹೊಂದಿದೆ. ಈ ಆಡಿ ಲೇಸರ್ ಲೈಟ್ ನೊಂದಿಗೆ HD ಮ್ಯಾಟ್ರಿಕ್ಸ್ ಎಲ್ಇಡಿ ಒಂದು ಆಯ್ಕೆಯಾಗಿ ಬರುತ್ತದೆ.

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಅದರ ಕೆಲವು ಇತರೆ ವಿನ್ಯಾಸಗಳು ಹೊಸದಾಗಿ ವಿನ್ಯಾಸಗೊಳಿಸಲಾದ 19-ಇಂಚಿನ ಅಲಾಯ್ ವ್ಹೀಲ್ ನೊಂದಿಗೆ ಕ್ರೋಮ್ ಸ್ಟ್ರಿಪ್ ಮೂಲಕ ಕನೆಕ್ಟ್ ಆಗಿರುವ ಹೊಸ ಟೈಲ್‌ಲ್ಯಾಂಪ್‌ಗಳು ಮತ್ತು ನವೀಕರಿಸಿದ ರೇರ್ ಬಂಪರ್ ಅನ್ನು ಒಳಗೊಂಡಿರುತ್ತದೆ.

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಈ ಎಸ್‍ಯುವಿ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯು 11 ಎಂಎಂ ಹೆಚ್ಚುವರಿ ಸ್ಥಳಾವಕಾಶದೊಂದಿಗೆ 5063 ಎಂಎಂ ಉದ್ದ ಹೊಂದಿದೆ. ಇದು 1970 ಎಂಎಂ ಅಗಲ ಮತ್ತು 1741 ಎಂಎಂ ಎತ್ತರವನ್ನು ಹೊಂದಿದೆ. ಕ್ಯಾಬಿನ್ ಒಳಗೂ ಆಡಿ ಕಂಪನಿಯು ಸಮಗ್ರವಾಗಿ ನವೀಕರಣಗಳನ್ನು ಪರಿಚಯಿಸಿದೆ. ಇದು ಪಿಯಾನೋ ಬ್ಲಾಕ್, ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಹೈಲೈಟ್‌ಗಳ ಜೊತೆಗೆ ಸಾಕಷ್ಟು ಸುಧಾರಿಸಿದೆ.

ದುಬಾರಿ ಬೆಲೆಯ ಆಡಿ ಕ್ಯೂ7 ಎಸ್‍ಯುವಿ ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ಈ ಹೊಸ ಆಡಿ ಕ್ಯೂ7 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಕ್ಯು ಎಕ್ಸ್5, ಮರ್ಸಿಡಿಸ್ ಬೆಂಝ್ ಜಿಎಲ್ಇ, ವೊಲ್ವೊ ಎಕ್ಸ್‌ಸಿ90 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, May 4, 2022, 20:17 [IST]
English summary
Actress aditi rao hydari buys new audi q7 luxury suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+