ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ 'ಬಿಂದಾಸ್' ಬೆಡಗಿ
ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಬಹುಭಾಷೆ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚಿ ಜನಪ್ರಿಯರಾಗಿದ್ದಾರೆ. ಕನ್ನಡದಲ್ಲಿ ನಟ ಪುನೀತ್ ರಾಜ್ಕುಮಾರ್ ಜೊತೆ ಹನ್ಸಿಕಾ ಮೋಟ್ವಾನಿ ಬಿಂದಾಸ್ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಬಾಲನಟಿಯಾಗಿ ಚಿತ್ರರಂಗದಿಂದ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಹನ್ಸಿಕಾ ಮೋಟ್ವಾನಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇತ್ತೀಚೆಗೆ ನಟಿ ಹನ್ಸಿಕಾ ಅವರು ಹೊಸ ಬಿಎಂಡಬ್ಲ್ಯು 6 ಜಿಟಿ (BMW 6 GT) ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ನಟಿ ತನ್ನ ಹೊಸ ಕಾರಿನ ಚಿತ್ರವನ್ನು Instagram ನಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರಗಳು Instagram ನಲ್ಲಿ ಸಖತ್ ವೈರಲ್ ಆಗಿದೆ. ಚಿತ್ರದ ಕೆಳಗೆ ಅಬಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿ ಕಾಮೆಂಟ್ ಮಾಡಿದ್ದಾರೆ.

ನಟಿ ಹನ್ಸಿಕಾ ಅವರು ತಮ್ಮ ಹೊಸ ಬಿಎಂಡಬ್ಲ್ಯು 6 ಜಿಟಿ ಐಷಾರಾಮಿ ಕಾರಿನ ಜೊತೆಗಿನ ವೀಡಿಯೊವನ್ನು ಕಾರ್ಸ್ ಫಾರ್ ಯೂ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ವೀಡಿಯೊದಲ್ಲಿ ಕಂಡುಬರುವ ಕಾರು ಹನ್ಸಿಕಾಗೆ ಅವರ ಕುಟುಂಬದಿಂದ ಉಡುಗೊರೆಯಾಗಿ ನೀಡಲ್ಪಟ್ಟಿದೆ ಎಂದು ಹೇಳಲಾಗಿದೆ. ವರದಿಗಳು ತಪ್ಪಾಗಿರುವ ಸಾಧ್ಯತೆಯಿದೆ ಮತ್ತು ನಟಿ ಸ್ವತಃ ಹೊಚ್ಚ ಹೊಸ ಕಾರನ್ನು ಖರೀದಿಸಿದ್ದಾರೆ.
ವೀಡಿಯೋಗೆ ಬರುವುದಾದರೆ, ನಾವು ಸಾಮಾನ್ಯವಾಗಿ ನಟಿಯರನ್ನು ತಮ್ಮ ದುಬಾರಿ ಕಾರುಗಳ ಹಿಂದಿನ ಸೀಟಿನಲ್ಲಿ ನೋಡಿದ್ದೇವೆ. ಇಲ್ಲಿ ಹನ್ಸಿಕಾ ತನ್ನ ಹೊಚ್ಚ ಹೊಸ ಡ್ರೈವ್ ಮಾಡುತ್ತಿದ್ದಾರೆ. ಈ ವೀಡಿಯೊದಲ್ಲಿ, ಹನ್ಸಿಕಾ ತನ್ನ ಹೊಚ್ಚ ಹೊಸ BMW 6 GT ಐಷಾರಾಮಿ ಕಾರನ್ನು ಓಡಿಸುತ್ತಿರುವುದನ್ನು ನೋಡಬಹುದು. ಆಕೆ ತನ್ನ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾಳೆ.

ನಟಿ ಹನ್ಸಿಕಾ ಮೋಟ್ವಾನಿ ಅವರು ಖರೀದಿಸಿದ ಬಿಎಂಡಬ್ಲ್ಯು 6 GT ಮಿನರಲ್ ವೈಟ್ ಶೇಡ್‌ನಲ್ಲಿ ಬಣ್ಣದಲ್ಲಿದೆ. ಈ ಬಿಎಂಡಬ್ಲ್ಯು 6 GT ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಬಿಎಂಡಬ್ಲ್ಯು 6 GT ಕಾರಿನ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.75.90 ಲಕ್ಷವಾಗಿದೆ. ಈ ಐಷಾರಾಮಿ ಗ್ರ್ಯಾಂಡ್ ಟೂರರ್‌ನ 630i M ಸ್ಪೋರ್ಟ್ ರೂಪಾಂತರವನ್ನು ಹನ್ಸಿಕಾ ಖರೀದಿಸಿದ್ದಾರೆ.
ಬಿಎಂಡಬ್ಲ್ಯು 6 GT ಕಾರು ಗ್ರ್ಯಾಂಡ್ ಟೂರರ್‌ನ 630i M ಮಾದರಿಯು ಕಳೆದ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಅವರು M ಸ್ಪೋರ್ಟ್ ಸಿಗ್ನೇಚರ್ ರೂಪಾಂತರವನ್ನು ಖರೀದಿಸಿದ್ದಾರೆಯೇ ಅಥವಾ ಸಾಮಾನ್ಯ M ಸ್ಪೋರ್ಟ್ ರೂಪಾಂತರವನ್ನು ಖರೀದಿಸಿದ್ದಾರೆಯೇ ಎಂಬ ಮಾಹಿತಿ ಬಹಿರಂಗವಾಗಿಲ್ಲ. 630i M ಸ್ಪೋರ್ಟ್ ಸಿಗ್ನೇಚರ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.75.90 ಲಕ್ಷವಾಗಿದೆ.

ಈ ಬಿಎಂಡಬ್ಲ್ಯು 6 GT ಕಾರಿನಲ್ಲಿ ಏರ್ ಸಸ್ಪೆನ್ಷನ್, ಪ್ಯಾಡಲ್ ಶಿಫ್ಟರ್‌ಗಳು, ಎಲೆಕ್ಟ್ರೋಪ್ಲೇಟೆಡ್ ಕಂಟ್ರೋಲ್‌ಗಳು, ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ರೋಲರ್ ಸನ್‌ಬ್ಲೈಂಡ್‌ಗಳು, ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಿಕಲಿ ಅಡ್ಜೆಸ್ಟ್ ಮಾಡಬಹುದಾದ ಸೀಟುಗಳು, ಚಾಲಿತ ಟೈಲ್‌ಗೇಟ್, 7.0 ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 12.3 ಇಂಚುಗಳಂತಹ ವೈಶಿಷ್ಟ್ಯಗಳೊಂದಿಗೆ ನೀಡುತ್ತದೆ.
ಇದರೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕಂಟ್ರೋಲ್ ಡಿಸ್‌ಪ್ಲೇ, ಆರು ಏರ್‌ಬ್ಯಾಗ್‌ಗಳು, ಬ್ರೇಕ್ ಅಸಿಸ್ಟ್ ಜೊತೆಗೆ ಎಬಿಎಸ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫ್ ಲಾಕ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಹೊಂದಿದೆ. ಈ ಕಾರಿನಲ್ಲಿ 630i M ಸ್ಪೋರ್ಟ್ ರೂಪಾಂತರವು BS6 ಕಂಪ್ಲೈಂಟ್ 2.0 ಲೀಟರ್ ಟರ್ಬೋಚಾರ್ಜ್ಡ್ ಇನ್‌ಲೈನ್ 4-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








