ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್

ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇತ್ತೀಚೆಗೆ 23 ವರ್ಷದ ಯುವ ನಟಿ ಶುಭಾಂಗಿ ಜೈಸ್ವಾಲ್ (Shubangi Jaiswal) ಹೊಸ ಕಾರು ಖರೀದಿಸಿ ಭಾವನಾತ್ಮಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರು ವಿತರಣೆ ಪಡೆದು ಬಾವುಕಾರದ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸುತ್ತಿದ್ದಂತೆ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಯುವ ನಟಿ ಖರೀದಿಸಿದ ಕಾರು ಹೊಸ ಎಂಜಿ ಹೆಕ್ಟರ್ (MG Hector) ಎಸ್‌ಯುವಿಯಾಗಿದೆ. ನಟಿ ಶುಭಾಂಗಿ ಜೈಸ್ವಾಲ್ ಅವರು ಎಂಜಿ ಹೆಕ್ಟರ್ ಎಸ್‌ಯುವಿಯ ವಿತರಣೆ ವೀಡಿಯೊಗೆ ಈ ಭಾವನೆಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್ಲ ಎಂಬ ಶೀರ್ಷಿಕೆ ನೀಡಿದ್ದಾರೆ.

Shubangi Jaiswal Buys MG Hector

23ನೇ ವಯಸ್ಸಿನ ನಟಿ ಕಾರು ಹೊಂದುವುದು ನನ್ನ ಬಹುದಿನದ ಕನಸಾಗಿತ್ತು ಎಂದು ಅವರು ಹೇಳಿದ್ದಾರೆ. ಕಾರು ಡೆಲಿವೆರಿ ತೆಗೆದುಕೊಳ್ಳುವಾಗ ಫ್ಯಾಮಿಲಿ ಮತ್ತು ಸ್ನೇಹಿತರು ಇದ್ದರು. ಶುಭಾಂಗಿ ಜೈಸ್ವಾಲ್ ಅವರು ನಟಿ, ರೂಪದರ್ಶಿ, ನೃತ್ಯ ಸಂಯೋಜಕಿ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಜನಪ್ರಿಯ ಟ್ಯಾಲೆಂಟ್ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಮೂಲಕ ಶುಭಾಂಗಿ ಹೆಚ್ಚು ಜನಪ್ರಿಯತೆಗಳಿಸಿದವರು.

ನಟಿ ಶುಭಾಂಗಿ ಜೈಸ್ವಾಲ್ ಅವರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಹೆಕ್ಟರ್ ಎಸ್‌ಯುವಿಯ ಯಾವ ರೂಪಾಂತರವು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ ಎಂಬುದು ಇನ್ನೂ ತಿಳಿದಿಲ್ಲ. ಈ ಎಂಜಿ ಹೆಕ್ಟರ್ ಎಸ್‌ಯುವಿಯ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿ ಸ್ಟೈಲ್, ಶೈನ್, ಸ್ಮಾರ್ಟ್, ಸ್ಮಾರ್ಟ್ ಪ್ರೊ, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

Shubangi Jaiswal Buys MG Hector

ಎಂಜಿ ಹೆಕ್ಟರ್ ಎಸ್‍ಯುವಿಯು ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಆರ್ಗೈಲ್-ಇನ್ಸ್ಪೈರ್ಡ್ ಗ್ರಿಲ್ ಸೇರಿದಂತೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿವೆ. ಈ ಎಸ್‍ಯುವಿಯ ಗ್ರಿಲ್ ಕೊಂಚ ದೊಡ್ಡಗಿದ್ದು, ಎಲ್ಇಡಿ ಡಿಆರ್ಎಲ್ ನೊಂದಿಗೆ ಸಂಪರ್ಕಿಸುತ್ತದೆ. ಹೆಡ್‌ಲ್ಯಾಂಪ್‌ಗಳು ಮುಂಭಾಗದ ಬಂಪರ್‌ನಲ್ಲಿ ಕೆಳಗೆ ಇದೆ. ಜೊತೆಗೆ ಹೊಸ 2023ರ ಹೆಕ್ಟರ್ ಎಸ್‌ಯುವಿ ಆಕರ್ಷಕ ಫಾಗ್ ಲ್ಯಾಂಪ್‌ ಅನ್ನು ಒಳಗೊಂಡಿದ್ದು, 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ ಗಳನ್ನು ಹೊಂದಿದೆ.

ಈ ಎಸ್‍ಯುವಿಯು ಪ್ಲಾಸ್ಟಿಕ್ ಕವರ್ಡ್ ಹಾಗೂ ಸ್ಕ್ವೇರ್-ಆಫ್ ವೀಲರ್ಚ್‌ನೊಳಗೆ ಸುತ್ತುವರಿದಿದೆ. ಈ ಎಸ್‍ಯುವಿಯ ವಿನ್ಯಾಸದ ವಿಷಯದಲ್ಲಿ ಇತರೆ ದೊಡ್ಡ ಬದಲಾವಣೆ ಎಂದರೆ, ಎಸ್‍ಯುವಿಯ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‌ಲೈಟ್‌ ಇದೆ.ಒಳಭಾಗ ಡ್ಯುಯಲ್-ಟೋನ್ ಥೀಮ್ ಅನ್ನು ಹೊಂದಿದ್ದು, ಇದು ಎಸ್‍ಯುವಿಯ ಒಳಭಾಗಕ್ಕೆ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಡ್ಯಾಶ್‌ಬೋರ್ಡ್ ಸಹ ಅತ್ಯುನ್ನತವಾಗಿದ್ದು, ಮರುವಿನ್ಯಾಸಗೊಳಿಸಲಾದ ಏರ್‌ಕಾನ್ ವೆಂಟ್‌ಗಳನ್ನು ಒಳಗೊಂಡಿದೆ.

Shubangi Jaiswal Buys MG Hector

ಈ ಎಸ್‍ಯುವಿಯ ಒಳಭಾಗದಲ್ಲಿ 14 ಇಂಚುಗಳ ಇನ್ಫೋಟೈನ್‌ಮೆಂಟ್ ಸ್ಕ್ರೀನ್, Apple CarPlay ಮತ್ತು Android Auto ಸೇರಿದಂತೆ 75ಕ್ಕೂ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಟ್ರಾಫಿಕ್ ಜಾಮ್ ಅಸಿಸ್ಟ್ ಸೇರಿದಂತೆ ಈ ಎಸ್‍ಯುವಿಯಲ್ಲಿ ಡ್ರೈವರ್ ಅಸಿಸ್ಟ್ ಸಿಸ್ಟಂ (ADAS), ಎಲೆಕ್ಟ್ರಿಕ್ ಪಾರ್ಕಿಂಗ್ ಬಟನ್, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್ ಮತ್ತು ಫಾರ್ವರ್ಡ್ ಡಿಕ್ಕಿಶನ್ ವಾರ್ನಿಂಗ್ ಅನ್ನು ಹೊಂದಿದೆ.

ಇದರೊಂದಿಗೆ 7.0-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ. ಜೊತೆಗೆ iSmart ಇನ್ಫೋಟೈನ್‌ಮೆಂಟ್ ಸಾಫ್ಟ್‌ವೇರ್ ಅನ್ನು ನವೀಕರಿಸಲಾಗಿದೆ. ಇನ್ನು ಈ ಎಸ್‍ಯುವಿಯಲ್ಲಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಸುರಕ್ಷತೆಗಾಗಿ, 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಎಚ್‌ಡಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್), ಹಿಲ್ ಅಸಿಸ್ಟ್ ಕಂಟ್ರೋಲ್ (ಎಚ್‌ಎಸಿ) ಮತ್ತು ಆಲ್ 4 ವೀಲ್ಸ್ ಡಿಸ್ಕ್ ಬ್ರೇಕ್‌ ಅನ್ನು ಒಳಗೊಂಡಿದೆ.

ಇಷ್ಟೇ ಅಲ್ಲದೆ, ಎಲ್ಲಾ ಸೀಟುಗಳಿಗೆ 3-ಪಾಯಿಂಟ್ ಸೀಟ್ ಬೆಲ್ಟ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ (EPB), ಮತ್ತು ಮುಂಭಾಗ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಪಡೆದುಕೊಂಡಿವೆ. ಈ ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ ಅದೇ 1.5 ಲೀಟರ್ ಟಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಈ ಎಸ್‍ಯುವಿಯಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

More from DriveSpark

Article Published On: Wednesday, April 24, 2024, 19:21 [IST]
English summary
Actress shubangi jaiswal bought new mg hector suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+