ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ಒಂದಿಲ್ಲಾ ಒಂದು ಸುದ್ದಿಯಲ್ಲಿರುವುದು ಹೊಸ ವಿಚಾರ ಅಲ್ಲವೇ ಅಲ್ಲ. ಸಿನಿಮಾ ಇದ್ದರೂ ಸರಿ ಇಲ್ಲದೆ ಇದ್ದರೂ ಸರಿ ಊರ್ವಶಿ ರೌಟೇಲಾ ಕುರಿತಾದ ಸುದ್ದಿಗಳು ಮಾತ್ರ ಸಾಮಾಜಿಕ ತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿ ಇದ್ದೆ ಇರುತ್ತವೆ. ಆದರೆ ಪ್ರತಿ ಬಾರಿಯೂ ಅಭಿಯನ, ಗಾಸಿಪ್ ಕುರಿತಂತೆ ಸುದ್ದಿಯಲ್ಲಿರುತ್ತಿದ್ದ ನಟಿ ಊ ಈ ಬಾರಿ ತುಸು ಭಿನ್ನವಾದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಹೌದು, ನಟಿ ಊರ್ವಶಿ ರೌಟೇಲಾ ದುಬಾರಿ ಬೆಲೆಯ ಹಾರ್ಲೆ ಡೇವಿಡ್ಸನ್ ಬೈಕ್ ಖರೀದಿಸಿ ಸುದ್ದಿಯಲ್ಲಿದ್ದಾರೆ. ಆದ್ರೆ ಅದು ಖರೀದಿದ್ದು ಅವರಿಗಾಗಿ ಅಲ್ಲ. ಬದಲಾಗಿ ತಮ್ಮ ಪ್ರೀತಿಯ ಸಹೋದರನಿಗೆ ಎನ್ನುವುದೇ ವಿಶೇಷ. ಉತ್ತರ ಭಾರತದಲ್ಲಿ ಹೆಚ್ಚು ಆಚರಣೆಯಲ್ಲಿರುವ ಭಾಯಿ ದೋಜ್ ವಿಶೇಷತೆ ಹಿನ್ನಲೆಯಲ್ಲಿ ನಟಿ ಊರ್ವಶಿ ರೌಟೇಲಾ ತಮ್ಮ ಪ್ರೀತಿಯ ಸಹೋದರನಿಗೆ ಈ ದುಬಾರಿ ಉಡುಗೊರೆ ನೀಡಿದ್ದು, ಅಕ್ಕ ನೀಡಿದ ವಿಶೇಷ ಉಡುಗೊರೆಗೆ ಯಶರಾಜ್ ರೌಟೇಲಾ ಹರ್ಷ ವ್ಯಕ್ತಪಡಿಸಿದ್ದಾರೆ.

ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ವೃತ್ತಿಯಲ್ಲಿ ಪೈಲೆಟ್ ಆಗಿ ಯಶರಾಜ್ ರೌಟೇಲಾ ಅವರು ಕಳೆದ ಕೆಲ ವರ್ಷಗಳಿಂದ ಪೋರ್ಚುಗಲ್‌ನಲ್ಲಿ ನೆಲೆಸಿದ್ದು, ಭಾಯಿ ದೋಜ್ ಆಚರಣೆಗಾಗಿ ವರ್ಷಕ್ಕೊಮ್ಮೆ ಭಾರತಕ್ಕೆ ಬರುವ ಯಶರಾಜ್ ಅವರಿಗೆ ಈ ಬಾರಿ ಅಕ್ಕನ ಕಡೆಯಿಂದ ದುಬಾರಿ ಬೆಲೆಯ ಬೈಕ್ ಉಡುಗೊರೆಯಾಗಿ ಸಿಕ್ಕಿದೆ.

ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಚಿತ್ರರಂಗಕ್ಕೆ ಬಂದಾಗಿನಿಂದಲೂ ಪ್ರತಿ ವರ್ಷವು ಸಹೋದರನಿಗೆ ಹಲವಾರು ದುಬಾರಿ ಉಡುಗೊರೆಗಳನ್ನು ನೀಡಿರುವ ನಟಿ ಊರ್ವಶಿ ರೌಟೇಲಾ ಅವರು ಈ ಬಾರಿ ಯಶರಾಜ್ ಕನಸಿನ ಬೈಕ್ ಮಾದರಿಯಾದ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಬ್ ಬೈಕ್ ಮಾದರಿಯನ್ನು0ಉಡುಗೊರೆಯಾಗಿ ನೀಡಿದ್ದಾರೆ.

ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಬ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.69 ಲಕ್ಷ ಬೆಲೆ ಹೊಂದಿದ್ದು, ಹಾರ್ಲೆ ಡೇವಿಡ್ಸನ್ ಉತ್ಪಾದನೆಯ ಬಲಿಷ್ಠ ಎಂಜಿನ್ ಸಾಮಾರ್ಥ್ಯದ ಪ್ರಮುಖ ಬೈಕ್‌ಗಳ ಮಾರಾಟದಲ್ಲಿ ಫ್ಯಾಟ್ ಬಾಬ್ ಮುಂಚೂಣಿಯಲ್ಲಿದೆ. 1,745 ಸಿಸಿ ಸಾಮಾರ್ಥ್ಯದ ವಿ-ಟ್ವಿನ್ ಎಂಜಿನ್ ಹೊಂದಿರುವ ಫ್ಯಾಟ್ ಬಾಬ್ ಬೈಕ್ ಮಾದರಿಯು 6-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 80-ಬಿಎಚ್‌ಪಿ, 145-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಈ ಮೂಲಕ ಪವರ್‌ಫುಲ್ ಕ್ರೂಸರ್ ಬೈಕ್ ಮಾದರಿಗಳಲ್ಲಿ ಅಗ್ರಸ್ಥಾನದಲ್ಲಿರುವ ಫ್ಯಾಟ್ ಬಾಬ್ ಬೈಕ್ ಬಬೋಬ್ಬರಿ 309 ಕೆ.ಜಿ ತೂಕವನ್ನು ಹೊಂದಿದ್ದು, ಹತ್ತಾರು ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಜೊತೆಗೆ ಹಾರಿಜೆಂಟಲ್ ಆಲ್ ಎಲ್‌ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್, ಡಿಜಿಟಲ್ ಸ್ಪೀಡೋ ಮೀಟರ್, ಅನಲಾಗ್ ಟ್ಯಾಚೊಮೀಟರ್, ಡಿಜಿಟಲ್ ಟ್ರಿಪ್ ಮೀಟರ್ ಸೇರಿದಂತೆ 16-ಇಂಚಿನ ಅಲಾಯ್ ಚಕ್ರಗಳು, ವಿಶೇಷ ವಿನ್ಯಾಸವುಳ್ಳ ಡ್ಯಯಲ್ ಎಕ್ಸಾಸ್ಟ್ ಸೌಲಭ್ಯವು ಫ್ಯಾಟ್ ಬಾಬ್ ಬೈಕ್ ಬಲಿಷ್ಠತೆಗೆ ಮತ್ತಷ್ಟು ಮೆರಗು ತಂದಿವೆ.

MOST READ: ಸ್ಟಾರ್ ನಟಿಗೆ ಸಿಕ್ತು ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಹಾಗೆಯೇ ಹೊಸ ಬೈಕಿನಲ್ಲಿ 300-ಎಂಎಂ ಫ್ರಂಟ್ ಡಿಸ್ಕ್, 292-ಎಂಎಂ ರಿಯರ್ ಡಿಸ್ಕ್ ಸೌಲಭ್ಯವನ್ನು ಪಡೆದುಕೊಂಡಿದ್ದು, ಡ್ಯುಯಲ್ ಚಾನಲ್ ಎಬಿಎಸ್, ಕಾರ್ನರ್ ಸ್ಟಾಬಿಲಿಟಿ, ಟರ್ನ್ ಬೈ ಟರ್ನ್ ನ್ಯಾವಿಗೆಟರ್ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

MOST READ: ಬರೋಬ್ಬರಿ 12 ಕೋಟಿ ಮೌಲ್ಯದ ಬೆಂಟ್ಲಿ ಮೊಜಾನ್ ಕಾರು ಖರೀದಿಸಿದ ಬೆಂಗಳೂರು ಉದ್ಯಮಿ

ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಇದರೊಂದಿಗೆ ಫ್ಯಾಟ್ ಬಾಬ್ ಬೈಕ್ ಮಾದರಿಯು 14.1 ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯದೊಂದಿಗೆ 211ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಪ್ರತಿ ಲೀಟರ್ ಇಂಧನಕ್ಕೆ ಸರಾಸರಿಯಾಗಿ ಕೇವಲ 15 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು.

MOST READ: ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಇಳಿಕೆ- ಹೆಚ್ಚಳಗೊಂಡ ಹೊಸ ವಾಹನಗಳ ಮಾರಾಟ..!

ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಇನ್ನು 2013ರಲ್ಲಿ ಹಿಂದಿ ಚಿತ್ರರಂಗವನ್ನು ಪ್ರವೇಶಿಸುವ ಮೂಲಕ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಊರ್ವಶಿ ರೌಟೇಲಾ ಕನ್ನಡದಲ್ಲೂ ಅಭಿನಯಿಸಿದ್ದಾರೆ. ಹಲವಾರು ಹಿಟ್ ಚಿತ್ರಗಳ ಮೂಲಕ ಉತ್ತಮ ಸಂಭಾವನೆ ಹೊಂದಿರುವವರ ಪೈಕಿ ಒಬ್ಬರಾಗಿರುವ ಊರ್ವಶಿ ರೌಟೀಲಾ ಬಳಿ ಈಗಗಲೇ ಲ್ಯಾಂಡ್ ರೋವರ್ ಡಿಸ್ಕವರಿ ಮತ್ತು ಮರ್ಸಿಡಿಸ್ ಬಿ-ಕ್ಲಾಸ್ ಸೇರಿದಂತೆ ಹಲವು ಐಷಾರಾಮಿ ಕಾರುಗಳ ಸಂಗ್ರಹ ಕೂಡಾ ಇದೆ.

More from DriveSpark

Article Published On: Monday, November 4, 2019, 17:44 [IST]
English summary
Bollywood actress Urvashi Rautela buys Harley Davidson Fat Bob worth Rs 14.69 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+