ಹೊಸ ಐಷರಾಮಿ ಕಾರಿನ ಮಾಲೀಕರಾದ ಬಹುಭಾಷಾ ನಟಿ ವಿದ್ಯಾ ಬಾಲನ್
2019ರ ಪ್ರಾರಂಭದಿಂದಲೇ ಬಾಲಿವುಡ್‍ನ ತಾರೆಯರು ಹೊಸ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದಾರೆ, ಕೆಲ ದಿನಗಳ ಹಿಂದಷ್ಟೆ ಸಿದ್ಧಾರ್ಥ್ ಮಲ್ಹೋತ್ರಾ, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಸಂಜಯ್ ದತ್ ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿ ಮಾಡಿದ್ದಾರೆ. ಇದೀಗ ಡರ್ಟಿ ಪಿಕ್ಚರ್ ನಟಿ ವಿದ್ಯಾ ಬಾಲನ್ ಕೂಡಾ ಈ ಲಿಸ್ಟ್ ನಲ್ಲಿ ಸೇರಿಕೊಂಡಿದ್ದಾರೆ.

ಆದ್ರೆ ನಡಿ ವಿದ್ಯಾ ಬಾಲನ್‍ರವರು ಖರೀದಿಸಿರುವುದು ರೇಂಜ್ ರೋವರ್ ಸಂಸ್ಥೆಯ ಕಾರನಲ್ಲ..? ಹೌದು, ನಟಿ ವಿದ್ಯಾ ಬಾಲನ್‍ರವರು ಪ್ರಪಂಚದಲ್ಲಿನ ಹಲವಾರು ಐಷಾರಾಮಿ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಮರ್ಸಿಡೀಸ್ ಬೆಂಝ್ ಸಂಸ್ಥೆಯ ಇ-ಕ್ಲಾಸ್ ಸೆಡಾನ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಈಗಾಗಲೇ ವಿದ್ಯಾ ಬಾಲನ್ ಮರ್ಸಿಡೀಸ್ ಬೆಂಝ್ ಇ-ಕ್ಲಾಸ್ ಮತ್ತು ಜಿಎಲ್‍ಸಿ ಎಸ್‍ಯುವಿ ಕಾರನ್ನು ತಮ್ಮಗಾಸಿಕೊಂಡಿದ್ದು, ಖರೀದಿಸಿದ ಹೊಸ ಕಾರನ್ನು ತನ್ನ ಫೋಷರಕರಿಗೆ ಗಿಫ್ಟ್ ಆಗಿ ನೀಡುರುವ ಸೂಚನೆಗಳಿವೆ.

ಇನ್ನು ಮರ್ಸಿಡೀಸ್ ಬೆಂಝ್ ಇ-ಕ್ಲಾಸ್ ಕಾರಿನ ಬಗ್ಗೆ ಹೆಳುವುದಾದರೆ ಈ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 59.12 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಇನ್ನು ವಿದ್ಯಾ ಬಾಲನ್ ಪಡೆದ ಕಾರು ಟಾಪ್ ಎಂಡ್ ಮಾಡಲ್ ಆದ ಕಾರಣ ಇದು ರೂ. 73.21 ಲಕ್ಷಕ್ಕೆ ಮಾರಾಟವಾಗುತ್ತಿದೆ.

ಭಾರತದ ಮಾರುಕಟ್ಟೆಯಲ್ಲಿ ಇ-ಕ್ಲಾಸ್ ಪೋರ್ಟ್‍ಫೋಲಿಯೊ ಲಾಂಗ್ ವ್ಹೀಲ್‍ಬೇಸ್ (ಸ್ಟ್ಯಾಂಡರ್ಡ್ ಇ-ಕ್ಲಾಸ್ ಸೆಡಾನ್) ಸ್ಟ್ಯಾಂಡರ್ಡ್-ವ್ಹೀಲ್‍ಬೇಸ್ (ಇ63 ಎಎಂಜಿ ಸೆಡಾನ್) ಮತ್ತು ಎಸ್ಟೇಟ್ (ಆಲ್-ಟೆರ್ರೈನ್) ಎಂಬ ಮೂರು ವಿವಿಧ ಬಾಡಿ ಸ್ಟೈಲ್‍ಗಳಲ್ಲಿ ಮಾರಾಟಗೊಳ್ಳುತ್ತಿದೆ.

ಇದೀಗ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ಉತ್ತಮವಾದ ಗ್ರೌಂಡ್ ಕ್ಲಿಯರೆನ್ಸ್ ಮತ್ತು ತನ್ನ ಸ್ಟ್ಯಾಂಡರ್ಡ್ ಮಾಡಲ್‍ಗಿಂತ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ. ಕಾರಿನ ಮುಂಭಾಗದಲ್ಲೆರಡು ಸಿಲ್ವರ್ ಗ್ರಿಲ್ ಸ್ಲಾಟ್ಸ್, ಮತ್ತು ಬಂಪರ್‍ಗೆ ಸಿಲ್ವರ್ ಸ್ಕಿಡ್ ಪ್ಲೇಟ್‍ಗಳನ್ನು ಅಳವಡಿಸಲಾಗಿದೆ.

ಇ-ಕ್ಲಾಸ್ ಕಾರಿನ ಬದಿಗಳಲ್ಲಿ ವ್ಹೀಲ್ ಆರ್ಚ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ರೂಫ್‍ಲೈನ್ ಅನ್ನು ಸಿಲ್ವರ್ ರೈಲ್ಸ್ ಒಂದಿಗೆ ಜೋಡಿಸಲಾಗಿದೆ. ಆಲ್ ಟೆರ್ರೈನ್ ಮಾಡಲ್ 19 ಇಂಚಿನ 5 ಸ್ಪೋಕ್ ಅಲಾಯ್ ವ್ಹೀಲ್‍ಗಳನ್ನು ಒದಗಿಸಲಾಗಿದೆ.

ವ್ಹೀಲ್ ಆರ್ಚ್‍ನ ಮೇಲೆ ಕಪ್ಪು ಹೊದಿಕೆಯು ಹಿಂಭಾಗದ ಬಂಪರ್ಗೆ ವಿಸ್ತರಿಸಲಾಗಿದ್ದು, ಅದು ಹಿಂದಿನ ಸ್ಕಿಡ್ ಪ್ಲೇಟ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್‍ಗಳನ್ನು ತೆಳು ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕಿಸಲಾಗಿದೆ.
MOST READ: ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತೀಯ

ಇ-ಕ್ಲಾಸ್ ಕಾರು ತನ್ನ ಸ್ಟ್ಯಾಂಡರ್ಡ್ ಮಾದರಿಗಿಂತ 116ಎಂಎಂ ಉದ್ದ, 158ಎಂಎಂನಷ್ಟು ಕದಿಮೆ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿದೆ. ವಿಸ್ತರಿಸಲಾದ ಆಯಾಮಗಳೊಂದಿಗೆ 640 ಲೀಟರ್‍ನಷ್ಟು ಅಧಿಕಗೊಳಿಸಲು ಸಹಾಯಕವಾಗಿದ್ದು, ಒಟ್ಟಾರೆಯಾಗಿ 1,820 ಲೀಟರ್‍ನ ಬೂಟ್ ಸ್ಪೇಸ್ ಅನ್ನು ಒದಗಿಸಲಾಗಿದೆ.

ಹೊಸ ಕಾರಿನ ಒಳಭಾಗದಲ್ಲಿ ಕಮ್ಯಾಂಡ್ ಇನ್ಫೋಟೈನ್ಮೆಂಟ್ ಸಿಸ್ಟಂ, ಏರ್ ಸಸ್ಪೆಂಷನ್, ಪ್ಯಾನರಮಿಕ್ ಸನ್‍ರೂಫ್, ಏಂಬಿಯಂಟ್ ಲೈಟಿಂಗ್, 3 ಜೋನ್ ಕ್ಲೈಮೆತ್ ಕಂಟ್ರೋಲ್ ಮತ್ತು ವಿದ್ಯುತ್‍ನಿಂದ ಆಪರೇಟ್ ಮಾಡಬಹುದಾದ ಟೈಲ್‍ಗೇಟ್ ಹಾಗು ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.
MOST READ: ಅಪಘಾತದ ಸಮಯದಲ್ಲಿ ಪ್ರಯಾಣಿಕರನ್ನು ಕಾಪಾಡಿದ ಟಿಯಾಗೊ - ಟಾಟಾ ಮೋಟಾರ್ಸ್ ಹಾಡಿಹೊಗಳಿದ ಮಾಲೀಕ

ಎಂಜಿನ್ ಸಾಮರ್ಥ್ಯ
ಮರ್ಸಿಡೀಸ್-ಬೆಂಝ್ ಇ-ಕ್ಲಾಸ್ ಕಾರು 2.0 ಲೀಟರ್ 4 ಸಿಲೆಂಡರ್ ಎಂಜಿನ್ ಸಯಾಹದಿಂದ 194ಬಿಹೆಚ್‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದು ಎಂಜಿನ್ ಅನ್ನು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.


Click it and Unblock the Notifications








