ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

50-60ರ ದಶಕದಲ್ಲಿ ಬಾಲಿವುಡ್‌ ತೆರೆಯನ್ನು ಆಳಿದ ಹಿಂದಿ ನಟಿಯರಲ್ಲಿ ವಹೀದಾ ರೆಹಮಾನ್ ಅವರು ಕೂಡ ಒಬ್ಬರು. ಅಂದು ರೇಖಾ, ಜಯಾ, ನರ್ಗಿಸ್, ಜೀನತ್ ಅಮಾನ್, ಹೇಮಾಮಾಲಿನಿ ಮುಂತಾದ ನಟಿಯರ ಪೈಪೋಟಿ ಎದುರಿಸಿ ಈಕೆ ಮಿಂಚಿದರು.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಈ ಹಿರಿಯ ನಟಿ ವಹೀದಾ ರೆಹಮಾನ್ ಇತ್ತೀಚೆಗೆ ಹೊಸ ಬಿಎಂಡಬ್ಲ್ಯು 5 ಸೀರಿಸ್ ಕಾರನ್ನು ಖರೀದಿಸಿದ್ದಾರೆ. ಕಳೆದ ವರ್ಷ ಭಾರತದಲ್ಲಿ ಐಷಾರಾಮಿ ಸೆಡಾನ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸಲಾಯಿತು. ನಟಿ ವಹೀದಾ ರೆಹಮಾನ್ ಅವರು 1938 ಫೆಬ್ರವರಿ 3 ರಂದು ತಮಿಳುನಾಡಿನಲ್ಲಿ ಜನಿಸಿದರು. ಹಿಂದಿ ಚಿತ್ರರಂಗದ 'ಪ್ಯಾಸ', ಗೈಡ್' ಚಿತ್ರಗಳ ಮೂಲಕ ಇವರು ಮಿಂಚಿ ಸಿನಿಪ್ರಿಯರ ಎಂದೆಂದೂ ಮರೆಯದ ನಟಿಯಾದರು. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿ, 1972ರ ಪದ್ಮಶ್ರೀ, 2011ರ ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಹಿರಿಯ ನಟಿ ವಹೀದಾ ರೆಹಮಾನ್ ಅವರು ಖರೀದಿಸಿದ ಬಿಎಂಡಬ್ಲ್ಯು 5 ಸೀರಿಸ್ ಕಾರು ಬ್ಲೂಸ್ಟೋನ್ ಮೆಟಾಲಿಕ್ ಶೇಡ್ ಫಿನಿಶಿಂಗ್ ಹೊಂದಿದೆ. ಇದು 530i M ಸ್ಪೋರ್ಟ್ ರೂಪಾಂತರವಾಗಿದ್ದು ಇದರ ಬೆಲೆಯು ಎಕ್ಸ್ ಶೋ ರೂಂ.ಪ್ರಕಾರ ರೂ.64.50 ಲಕ್ಷವಾಗಿದೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಬಿಎಂಡಬ್ಲ್ಯು 5 ಸೀರಿಸ್ ಎರಡು ರೂಪಾಂತರಗಳನ್ನು ನೀಡುತ್ತದೆ. 520ಡಿ ಐಷಾರಾಮಿ ಲೈನ್ ಇದೆ, ಇದರ ಬೆಲೆ ರೂ.65.90 ಲಕ್ಷಗಳಾದರೆ, 530ಡಿ ಎಂ ಸ್ಪೋರ್ಟ್ ಬೆಲೆ ರೂ.74.50 ಲಕ್ಷವಾಗಿದೆ. ಈ ಎರಡೂ ಬೆಲೆಗಳು ಎಕ್ಸ್ ಶೋ ರೂಂ ಪ್ರಕಾರವಾಗಿದೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಬ್ಲೂಸ್ಟೋನ್ ಮೆಟಾಲಿಕ್ ಹೊರತುಪಡಿಸಿ, ನೀವು ಕಾರ್ಬನ್ ಬ್ಲಾಕ್, ಆಲ್ಪೈನ್ ವೈಟ್ ಮತ್ತು ಫೈಟೋನಿಕ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ 5 ಸೀರಿಸ್ ಮಾದರಿಯನ್ನು ಖರೀದಿಸಬಹುದು.. ಬಿಎಂಡಬ್ಲ್ಯು 5 ಸೀರಿಸ್ ಪ್ರತಿಯೊಂದು ರೂಪಾಂತರವು ವಿಭಿನ್ನ ಎಂಜಿನ್ ಅನ್ನು ಪಡೆಯುತ್ತದೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

530i ಟ್ವಿನ್-ಟರ್ಬೋಚಾರ್ಜ್ಡ್ ಮಾಡಿದ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು 252 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆಯನ್ನು ಉತ್ಪಾದಿಸುತ್ತದೆ. ಇದು ಗಂಟೆಗೆ 250 ಕಿಮೀ ವೇಗವನ್ನು ಹೊಂದಿದೆ ಮತ್ತು ಈ ಕಾರು ಕೇವಲ 6.1 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಇನ್ನು 520ಡಿ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆಯುತ್ತದೆ. ಇದು 190 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಕೇವಲ 7.5 ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದು 235 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಈ ಟಾಪ್-ಎಂಡ್ 530ಡಿ ರೂಪಾಂತರವು ಟರ್ಬೋಚಾರ್ಜ್ಡ್ ಆರು-ಸಿಲಿಂಡರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 265 ಬಿಹೆಚ್‌ಪಿ ಪವರ್ ಮತ್ತು 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮಾದರಿಯು 5.7 ಸೆಕೆಂಡ್‌ಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಮಾದರಿ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಎಲ್ಲಾ ಇಂಜಿನ್‌ಗಳು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲ್ಪಟ್ಟಿವೆ. ಬಹು ಡ್ರೈವ್ ಮೋಡ್‌ಗಳು, ಡೈನಾಮಿಕ್ ಡ್ಯಾಂಪರ್ ಕಂಟ್ರೋಲ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಇಂಜಿನ್‌ಗಾಗಿ ಸಕ್ರಿಯ ಕೂಲಿಂಗ್, ಸ್ಟಾರ್ಟ್/ಸ್ಟಾಪ್ ಕ್ರಿಯಾತ್ಮಕತೆ ಮತ್ತು ಹೆಚ್ಚಿನವುಗಳಿವೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಹೊಸ ಬಿಎಂಡಬ್ಲ್ಯು 5-ಸೀರೀಸ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಹೊಸ ಗ್ರಿಲ್ ಮತ್ತು ಹೊಸ ಸ್ಲೀಕ್ ಹೆಡ್ ಲೈಟ್ ಅನ್ನು ಅಳವಡಿಸಿದ್ದಾರೆ. ಈ ಹೊಸ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು ಹಿಂದಿನ ಮಾದರಿಗಿಂತ ಆಕರ್ಷಕವಾಗಿದೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಈ ಹೊಸ ಬಿಎಂಡಬ್ಲ್ಯು 5-ಸೀರಿಸ್ ಕಾರಿನ ಬಂಪರ್ ಗಳೊಂದಿಗೆ ಆಗ್ರೆಸಿವ್ ವಿನ್ಯಾಸಗೊಳಿಸಿದ ಏರ್ ಡ್ಯಮ್ ಗಳನ್ನು ಹೊಂದಿದೆ, ಇನ್ನು ಈ ಕಾರಿನಲ್ಲಿ ಮರುವಿನ್ಯಾಸಗೊಳಿಸಿದ ಡ್ಯುಯಲ್ ಟೋನ್ ಅಲಾಯ್ ವ್ಜೀಲ್ ಗಳನ್ನು ಅಳವಡಿಸಲಾಗಿದೆ. ಈ ಐಷಾರಾಮಿ ಕಾರಿನ ಮುಂಭಾಗ ಹೊಸ ಆಕಾರದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಹೊಸ ತೆಳ್ಳನೆಯ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇದನ್ನು ಹೊರತುಪಡಿಸಿದರೆ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲುತ್ತದೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಈ ಐಷಾರಾಮಿ ಕಾರಿನ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೇಲ್ ಲ್ಯಾಂಪ್ ಮತ್ತು ಕ್ವಾಡ್-ಎಕ್ಸಾಸ್ಟ್ ಗಳೊಂದಿಗೆ ಸ್ಪೋರ್ಟಿಯರ್ ಬಂಪರ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು 5-ಸೀರಿಸ್ ಕಾರಿನ ಇಂಟಿರಿಯರ್ ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಬಿಎಂಡಬ್ಲ್ಯು 5 ಸೀರಿಸ್ ಕಾರಿನ ಒಳಭಾಗದಲ್ಲಿ ಆಕರ್ಷಕ ಕ್ಯಾಬಿನ್‌ನೊಂದಿಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಡ್ಯಾಶ್‌ಬೋರ್ಡ್ ಸೌಲಭ್ಯಗಳನ್ನು ಒಳಗೊಂಡಿದೆ.ಇದರಲ್ಲಿ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೇ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ ಕನೆಕ್ಟಿವಿಟಿ, ಸ್ಪೋರ್ಟ್ ಸ್ಟ್ರೀರಿಂಗ್ ಮೌಂಟೆಡ್ ಕಂಟ್ರೋಲ್ ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಇದರೊಂದಿಗೆ ಹೊಸ ಕಾರಿನಲ್ಲಿ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಪನರೊಮಿಕ್ ಸನ್‌ರೂಫ್, ವೆಂಟಿಲೆಟೆಡ್ ಆಸನಗಳು, ರಿಯರ್ ಎಸಿ ವೆಂಟ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ ಮತ್ತು ಬಿಎಂಡಬ್ಲ್ಯು ವರ್ಚುವಲ್ ಕಂಟ್ರೋಲ್ ಅಸಿಸ್ಟ್ ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಬಿಎಂಡಬ್ಲ್ಯು ಕಂಪನಿಯು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫ್ರಂಟ್ ಕೂಲಿಷನ್ ವಾರ್ನಿಂಗ್, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಕೂಲಿಷನ್ ವಾರ್ನಿಂಗ್, 360 ಡಿಗ್ರಿ ಕ್ಯಾಮೆರಾ, 8 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ಸ್ ಗಳಾಗಿವೆ.

ಐಷಾರಾಮಿ ಬಿಎಂಡಬ್ಲ್ಯು 5 ಸೀರಿಸ್ ಕಾರು ಖರೀದಿಸಿದ 84 ವರ್ಷದ ಹಿರಿಯ ನಟಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹಿರಿಯ ನಟಿ ವಹೀದಾ ರೆಹಮಾನ್ ಇತ್ತೀಚೆಗೆ ಜನಪ್ರಿಯ ಬಿಎಂಡಬ್ಲ್ಯು 5 ಸೀರಿಸ್ ಕಾರನ್ನು ಖರೀದಿಸಿದ್ದಾರೆ. ಈ ಬಿಎಂಡಬ್ಲ್ಯು 5-ಸೀರಿಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಆಡಿ ಎ6, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್, ಜಾಗ್ವಾರ್ ಎಕ್ಸ್‌ಎಫ್ ಮತ್ತು ವೋಲ್ವೋ ಎಸ್90 ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Tuesday, June 14, 2022, 10:42 [IST]
English summary
Actress waheeda rehman buys new bmw 5 series facelift details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+