ಎಲ್ಲೆಡೆ 'ಕಬಾಲಿ'ಮಯ; ಬೆಂಗಳೂರಿನಿಂದ 'ಸೂಪರ್ ಸ್ಟಾರ್' ತರಹನೇ ಹಾರಾಡಿ!

By Nagaraja

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಮುಂದಿನ ಚಿತ್ರ 'ಕಬಾಲಿ' ಬಿಡುಗಡೆ ಸಮೀಪಿಸುತ್ತಿರುವಂತೆಯೇ ಎಲ್ಲೆಡೆಗಳಿಂದ ಅಮೋಘ ಪ್ರಚಾರ ಆರಂಭವಾಗಿದೆ. ಈಗ ಕಬಾಲಿ ಚಿತ್ರದ ಅಧಿಕೃತ ಪ್ರಚಾರ ಪಾಲುದಾರಿ ಆಗಿರುವ ಮಲೇಷ್ಯಾ ಮೂಲದ ವಿಮಾನ ಸಂಸ್ಥೆ ಏರ್ ಏಷ್ಯಾ ರಜನಿ ಅಭಿಮಾನಿಗಳಿಗಾಗಿ ವಿನೂತನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಮುಂಬರುವ ಕಬಾಲಿ ಚಿತ್ರ ಹಾಗೂ ಚಿತ್ರತಂಡಕ್ಕೆ ಶುಭಕೋರುವ ಹಿನ್ನಲೆಯಲ್ಲಿ ಪ್ರಚಾರಕ್ಕೆ ಮುಂದಾಗಿರುವ ಏರ್ ಏಷ್ಯಾ ವಿಮಾನದಲ್ಲಿ ಬೃಹತ್ ಕಬಾಲಿ ಪೋಸ್ಟರ್ ಗಳನ್ನು ಲಗತ್ತಿಸಿದ್ದು, ಅಭಿಮಾನಿಗಳಿಗೆ ಭಾರಿ ಆಫರ್ ಗಳನ್ನು ಮುಂದಿಟ್ಟಿದೆ.

ಎಲ್ಲೆಡೆ 'ಕಬಾಲಿ'ಮಯ; ಬೆಂಗಳೂರಿನಿಂದ 'ಸೂಪರ್ ಸ್ಟಾರ್' ತರಹನೇ ಹಾರಾಡಿ!

ಮಲೇಷ್ಯಾ ಮೂಲದ ಅತಿ ಅಗ್ಗದ ವಿಮಾನ ಸೇವೆ ಸಂಸ್ಥೆಯಾಗಿರುವ ಏರ್ ಏಷ್ಯಾ, ಕಬಾಲಿ ಬಿಡುಗಡೆ ದಿನದ ಮೊದಲ ಶೋ ವನ್ನು ಚೆನ್ನೈನಲ್ಲಿ ನೋಡಲಿಚ್ಛಿಸುವ ಬೆಂಗಳೂರು ಅಭಿಮಾನಿಗಳಿಗಾಗಿ ವಿಶೇಷ ವಿಮಾನವನ್ನು ಸಿದ್ಧಗೊಳಿಸುತ್ತಿದೆ.

ಎಲ್ಲೆಡೆ 'ಕಬಾಲಿ'ಮಯ; ಬೆಂಗಳೂರಿನಿಂದ 'ಸೂಪರ್ ಸ್ಟಾರ್' ತರಹನೇ ಹಾರಾಡಿ!

ರಜನಿ ಅಲೆ ದೇಶದ್ಯಾಂತ ವ್ಯಾಪಿಸುತ್ತಿರುವಂತೆಯೇ ಅಭಿಮಾನಿಗಳಿಗಾಗಿ ವಿಶೇಷ ತಿಂಡಿ, ತಿನಿಸುಗಳ ಮೆನು ಸಿದ್ಧಪಡಿಸಲಾಗುತ್ತಿದೆ. ಇದರ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮದೇ ಶೈಲಿಯ ಕಬಾಲಿ ವಿಡಿಯೋ ಹಂಚಿಕೊಳ್ಳುವಂತೆ ಅಭಿಮಾನಿಗಳನ್ನು ಕೋರಲಾಗಿದೆ. ಅದೃಷ್ಟ ವಿಜೇತರಿಗೆ ಮೊದಲ ದಿನದ ಮೊದಲ ಶೋ ನೋಡುವ ಅವಕಾಶ ದೊರಕಲಿದೆ.

ಎಲ್ಲೆಡೆ 'ಕಬಾಲಿ'ಮಯ; ಬೆಂಗಳೂರಿನಿಂದ 'ಸೂಪರ್ ಸ್ಟಾರ್' ತರಹನೇ ಹಾರಾಡಿ!

ಕಬಾಲಿ ಅಭಿಯಾನಕ್ಕಾಗಿ ಆರು ವಿಮಾನಗಳನ್ನು ಏರ್ ಏಷ್ಯಾ ಮೀಸಲಿಟ್ಟಿದೆ. ಇದು ಮುಂದಿನ ದಿನಗಳಲ್ಲಿ ಬೆಂಗಳೂರು, ನವದೆಹಲಿ, ಗೋವಾ, ಪುಣೆ, ಚಂಡೀಗಡ, ಜೈಪುರ, ಗುವಾಹಟಿ, ಇಂಪಾಲ, ವಿಝಾಗ್ ಮತ್ತು ಕೊಚ್ಚಿ ನಗರಗಳನ್ನು ಸಂಪರ್ಕಿಸಲಿದೆ.

ಎಲ್ಲೆಡೆ 'ಕಬಾಲಿ'ಮಯ; ಬೆಂಗಳೂರಿನಿಂದ 'ಸೂಪರ್ ಸ್ಟಾರ್' ತರಹನೇ ಹಾರಾಡಿ!

'ಫ್ಲೈ ಲೈಕ್ ಸೂಪರ್ ಸ್ಟಾರ್' ಎಂಬ ಟ್ಯಾಗ್ ಲೈನ್ ನೊಂದಿಗೆ ಕಬಾಲಿ ಚಿತ್ರದ ನಿಮಿತ್ತ ವಿಶೇಷ ಆಫರುಗಳನ್ನು ಏರ್ ಏಷ್ಯಾ ಮುಂದಿಟ್ಟಿದೆ.

ಎಲ್ಲೆಡೆ 'ಕಬಾಲಿ'ಮಯ; ಬೆಂಗಳೂರಿನಿಂದ 'ಸೂಪರ್ ಸ್ಟಾರ್' ತರಹನೇ ಹಾರಾಡಿ!

ಈ ಆಫರ್ ಅನ್ವಯ ಈಗ ಕೇವಲ 786 ರು.ಗಳಲ್ಲಿ ಬೆಂಗಳೂರಿನಿಂದ ಗೋವಾ, ಕೊಚ್ಚಿ, ಪುಣೆ, ವಿಶಾಖಪಟ್ಟಣಂ ಪ್ರಯಾಣಿಸಬಹುದಾಗಿದೆ. 2016 ಜುಲೈ 10ರ ವರೆಗೆ ಬುಕ್ಕಿಂಗ್ ತೆರೆದುಕೊಳ್ಳಲಿದ್ದು, ಮುಂದಿನ ವರ್ಷ ಫೆಬ್ರವರಿ 1ರಿಂದ ಎಪ್ರಿಲ್ 30 ಅವಧಿಯಲ್ಲಿ ಹಾರಾಡಬಹುದಾಗಿದೆ.

ಎಲ್ಲೆಡೆ 'ಕಬಾಲಿ'ಮಯ; ಬೆಂಗಳೂರಿನಿಂದ 'ಸೂಪರ್ ಸ್ಟಾರ್' ತರಹನೇ ಹಾರಾಡಿ!

ಮಗದೊಂದು ಆಫರ್ ಪ್ರಕಾರ ಬೆಂಗಳೂರು ಅಥವಾ ಕೊಚ್ಚಿ ಅಥವಾ ಚೆನ್ನೈನಿಂದ ಬ್ಯಾಂಕಾಂಕ್ ಗೆ ಕೇವಲ 3999 ರು.ಗಳಲ್ಲಿ ಪ್ರಯಾಣಿಸಬಹುದಾಗಿದೆ. ಈ ಆಫರ್ ಸಹ ಜುಲೈ 10ರ ವರೆಗೆ ಮುಂದುವರಿಯಲಿದ್ದು, ಸೆಪ್ಟೆಂಬರ್ 30ರ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಎಲ್ಲೆಡೆ 'ಕಬಾಲಿ'ಮಯ; ಬೆಂಗಳೂರಿನಿಂದ 'ಸೂಪರ್ ಸ್ಟಾರ್' ತರಹನೇ ಹಾರಾಡಿ!

ಇನ್ನು ಚೆನ್ನೈ, ಕೊಚ್ಚಿ, ತಿರುಚಿರಪಳ್ಳಿಯಿಂದ ಕೌಲಾಂಲಪುರಕ್ಕೆ ಕೇವಲ 3.899 ರು.ಗಳಲ್ಲಿ ಹಾರಾಡಬಹುದಾಗಿದೆ. ಈ ಆಫರ್ ಜುಲೈ 10ರಂದು ಕೊನೆಗೊಳ್ಳಲಿದ್ದು, ನವೆಂಬರ್ 24ರ ವರೆಗೆ ಹಾರಾಡಬಹುದಾಗಿದೆ.

ಎಲ್ಲೆಡೆ 'ಕಬಾಲಿ'ಮಯ; ಬೆಂಗಳೂರಿನಿಂದ 'ಸೂಪರ್ ಸ್ಟಾರ್' ತರಹನೇ ಹಾರಾಡಿ!

ಸೂಪರ್ ಸ್ಟಾರ್ ರಜನಿ ಅಭಿನಯದ ಕಬಾಲಿ ಚಿತ್ರ ಜುಲೈ 22ರಂದು ದೇಶದ್ಯಾಂತ ತೆರೆ ಕಾಣುವ ನಿರೀಕ್ಷೆಯಿದೆ. ಪಾ ರಂಜಿತ್ ಚಿತ್ರದ ನಿರ್ದೇಶಕರಾಗಿದ್ದು, ನಟಿ ರಾಧಿಕಾ ಆಪ್ಟೆ ಪ್ರಮುಖ ಕಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from DriveSpark

Article Published On: Tuesday, July 5, 2016, 12:07 [IST]
English summary
Air Asia starts special flights for Kabali promotion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+