ವಿಮಾನ, ಸೂಪರ್ ಕಾರ್ ಬಳಿಕವೀಗ 'ಕಬಾಲಿ' ಡಬಲ್ ಡೆಕ್ಕರ್ ಬಸ್

Written By:

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿರುವಂತೆಯೇ ಪ್ರಚಾರದ ಅಬ್ಬರ ಭುಗಿಲು ಮುಟ್ಟುತ್ತಿದೆ. ಭಾರತೀಯ ಚಿತ್ರರಂಗದಲ್ಲೇ ಭಾರಿ ಸಂಚಲನ ಮೂಡಿಸಿರುವ ಕಬಾಲಿ ಚಿತ್ರವು ಇದೇ ಬರುವ ಜುಲೈ 22ರಂದು ತೆರೆ ಕಾಣಲಿದೆ.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ! ಮುಂದಕ್ಕೆ ಓದಿ

ಕಬಾಲಿ ಚಿತ್ರಕ್ಕಾಗಿ ಏರ್ ಏಷ್ಯಾ ಸಂಸ್ಥೆಯು ವಿಶೇಷ ವಿಮಾನಗಳನ್ನು ಮೀಸಲಿಟ್ಟಿರುವುದನ್ನು ನಾವು ವರದಿ ಮಾಡಿರುತ್ತೇವೆ. ತದಾ ಬಳಿಕ ಹೊಸೂರು ತಳಹದಿಯ ಮಾರುತಿ ಡೀಲರ್ ವೊಂದು ಅತಿ ವಿಶೇಷ ಕಬಾಲಿ ವಿಶೇಷ ಎಡಿಷನ್ ಬಿಡುಗಡೆಗೊಳಿಸಿತ್ತು. ಇಲ್ಲಿಗೂ ಕಬಾಲಿ ಜ್ವರ ಕೊನೆಗೊಂಡಿರಲಿಲ್ಲ. ಅತ್ತ ಮಲೇಷ್ಯಾದಲ್ಲಿ ಲಂಬೋರ್ಗಿನಿ ಸೂಪರ್ ಕಾರಿಗೂ ಕಬಾಲಿ ಬಣ್ಣ ಬಳಿಯಲಾಗಿತ್ತು. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಕಬಾಲಿ ಡಬಲ್ ಡೆಕ್ಕರ್ ಬಸ್ ಈಗ ಜನ ಮನ್ನಣೆಗೆ ಪಾತ್ರವಾಗಿದೆ.

ವಿಮಾನ, ಸೂಪರ್ ಕಾರ್ ಬಳಿಕವೀಗ 'ಕಬಾಲಿ' ಡಬಲ್ ಡೆಕ್ಕರ್ ಬಸ್

ರಜನಿಗೆ ಸರಿಸಾಟಿ ರಜನಿ ಮಾತ್ರ ಎಂಬುದು ಮಗದೊಮ್ಮೆ ಸಾಬೀತುಗೊಂಡಿದೆ. ಮುಂಬೈನಲ್ಲಿ ಡಬಲ್ ಡೆಕ್ಕರ್ ಬಸ್ಸೊಂದು ಕಬಾಲಿ ಗ್ರಾಫಿಕ್ಸ್ ಗಳಿಂದ ರಾರಾಜಿಸುತ್ತಿದೆ.

ವಿಮಾನ, ಸೂಪರ್ ಕಾರ್ ಬಳಿಕವೀಗ 'ಕಬಾಲಿ' ಡಬಲ್ ಡೆಕ್ಕರ್ ಬಸ್

ರಜನಿಕಾಂತ್ ಮತ್ತು ಕಬಾಲಿ ಚಿತ್ರದ ಮೇಲಿನ ಅಪಾರ ಪ್ರೀತಿಯಿಂದ ಫಾಕ್ಸ್ ಸ್ಟಾರ್ ಸ್ಟುಡಿಯೋ, ಅತಿ ವಿಶಿಷ್ಟ ಕಬಾಲಿ ಬಸ್ಸನ್ನು ಬಿಡುಗಡೆ ಮಾಡಿದೆ.

ವಿಮಾನ, ಸೂಪರ್ ಕಾರ್ ಬಳಿಕವೀಗ 'ಕಬಾಲಿ' ಡಬಲ್ ಡೆಕ್ಕರ್ ಬಸ್

ವಾಡಾಲಾ ಬಸ್ ನಿಲ್ದಾಣದಿಂದ ಆರಂಭಿಸುವ ಪ್ರಯಾಣವು ಅರೋರಾ ಥಿಯೇಟರ್, ಸೇನಾ ಭವನ್, ಬಾಂದ್ರಾ ಲಿಂಕಿಂಗ್ ರಸ್ತೆ, ಸಿಟಿ ಮಾಲ್ ಹಾದಿಯಾಗಿ ಇನ್ ಓರ್ಬಿಟ್ ಮಲಾಡ್ ತಲುಪಲಿದೆ.

ವಿಮಾನ, ಸೂಪರ್ ಕಾರ್ ಬಳಿಕವೀಗ 'ಕಬಾಲಿ' ಡಬಲ್ ಡೆಕ್ಕರ್ ಬಸ್

ಬಲ್ಲ ಮೂಲಗಳ ಪ್ರಕಾರ ಅರೋರಾ ಥಿಯೇಟರ್ ರಜನಿ ಅಭಿಮಾನಿಗಳ ಬಹು ದೊಡ್ಡ ಬಳಗವಿದೆ. ಈಗ ಬಹುನಿರೀಕ್ಷಿತ ಕಬಾಲಿ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ವಿಮಾನ, ಸೂಪರ್ ಕಾರ್ ಬಳಿಕವೀಗ 'ಕಬಾಲಿ' ಡಬಲ್ ಡೆಕ್ಕರ್ ಬಸ್

ಕಬಾಲಿ ಚಿತ್ರ ಬಿಡುಗಡೆಗೂ ಮುನ್ನ ಬಂದಿರುವ ಟೀಸರ್ ಯೂಟ್ಯೂಬ್ ದಾಖಲೆ ವೀಕ್ಷಣೆಗೆ ಪಾತ್ರವಾಗಿದೆ. ಎಲ್ಲರ ಬಾಯಲ್ಲೂ ರಜನಿ ಅವರಿಂದ ಮಾತ್ರ ಇಂತಹದೊಂದು ದಾಖಲೆ ಮಾಡಲು ಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿದೆ.

ವಿಮಾನ, ಸೂಪರ್ ಕಾರ್ ಬಳಿಕವೀಗ 'ಕಬಾಲಿ' ಡಬಲ್ ಡೆಕ್ಕರ್ ಬಸ್

ಕಬಾಲಿ ಚಿತ್ರವನ್ನು ಬರಮಾಡಿಕೊಳ್ಳಲು ರಜನಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರನ್ವಯ ಬೆಂಗಳೂರು ಮತ್ತ ಚೆನ್ನೈ ತಳಹದಿಯ ಕೆಲವು ಖಾಸಗಿ ಸಂಸ್ಥೆಗಳು ರಜೆಯನ್ನು ಘೋಷಿಸಿದೆ.

ವಿಮಾನ, ಸೂಪರ್ ಕಾರ್ ಬಳಿಕವೀಗ 'ಕಬಾಲಿ' ಡಬಲ್ ಡೆಕ್ಕರ್ ಬಸ್

ಇನ್ನೊಂದೆಡೆ ಕಬಾಲಿ ಚಿತ್ರ ಆನ್ ಲೈನ್ ನಲ್ಲಿ ಸೋರಿಕೆಯಾಗಿರುವ ಸುದ್ದಿ ಹರಡಿದ್ದು, ಚಿತ್ರತಂಡದಲ್ಲಿ ಭೀತಿಯನ್ನು ಹರಡಿದೆ.

ಇವನ್ನೂ ಓದಿ...

ಎಲ್ಲೆಡೆ 'ಕಬಾಲಿ'ಮಯ; ಬೆಂಗಳೂರಿನಿಂದ ಸೂಪರ್ ಸ್ಟಾರ್ ತರಹನೇ ಹಾರಾಡಿ!

ಇವನ್ನೂ ಓದಿ...

ಸೂಪರ್ ಕಾರಿಗೂ ವ್ಯಾಪಿಸಿದ ರಜನಿ ಕಬಾಲಿ ಹವಾ

ಇವನ್ನೂ ಓದಿ...

ರಜನಿ ಸ್ಟೈಲ್‌ನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಬಾಲಿ ಎಡಿಷನ್

English summary
Rajini’s Kabali now on a double decker bus
Story first published: Tuesday, July 19, 2016, 17:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark