ಬಾಲಿವುಡ್ 'ಸಿಂಗಂ' ಅಜಯ್ ದೇವಗನ್ ಕೈ ಸೇರಿದ 54 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು ಯಾವುದು ಗೊತ್ತಾ.?
ತಮಿಳಿನಲ್ಲಿ ಬಿಡುಗಡೆಗೊಂಡು ಹೆಚ್ಚು ಜನಪ್ರಿಯವಾದ 'ಸಿಂಗಂ' ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದ ಬಾಲಿವುಡ್ ನಟ ಅಜಯ್ ದೇವಗನ್ ಒಂದು ಟ್ವಿ ಶೋನಲ್ಲಿ ಐಷಾರಾಮಿ ಕಾರನ್ನು ಗೆದ್ದು, ಈ ಕುರಿತಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಾದರೆ ಅಜಯ್ ದೇವಗನ್ ಅವರ ಕೈ ಸೇರಿದ ಆ ಕಾರು ಯಾವುದು ಎಂದು ತಿಳಿಯಲು ಮುಂದಕ್ಕೆ ಓದಿರಿ...

ಕಾಮಿಡಿ ಟೈಮಿಂಗ್ ಮತ್ತು ಹಲವಾರು ಆಕ್ಷನ್ ಸಿನಿಮಾಗಳಿಂದ ಬಾಲಿವುಡ್‍ನಲ್ಲಿ ಫ್ಯಾನ್‍ಬೇಸ್ ಹೊಂದಿರುವ ನಟಿ ಕಾಜೊಲ್‍ರವದ ಪತಿಯಾದ ಅಜಯ್ ದೇವಗನ್ ಅವರು ಕರಣ್ ಜೋಹಾರ್ ನಡೆಸಿಕೊಡುವ ಟೀವಿ ಶೋ 'ಕಾಫಿ ವಿಥ್ ಕರಣ್' ಸೀಸನ್ 6ನಲ್ಲಿ ಹಮ್ಮಿಕೊಂಡ ಆನ್ಸ್ವರ್ ಆಫ್ ದಿ ಸೀಸನ್ ಎಂಬ ಪುನಸ್ಕಾರದಲ್ಲಿ ಆಡಿ ಸಂಸ್ಥೆಯ ಎ5 ಸ್ಪೋರ್ಟ್‍ಬ್ಯಾಕ್ ಕಾರನ್ನು ಗೆದ್ದಿದ್ದಾರೆ.

ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಆಡಿ ತನ್ನ 2ನೇ ತಲೆಮಾರಿನ ಎ5 ಸ್ಪೋರ್ಟ್ ಬ್ಯಾಕ್ ಕಾರು ಆವೃತ್ತಿಗಳನ್ನು 2017ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ವಿನೂತನ ಕಾರುಗಳ ಆರಂಭಿಕ ಬೆಲೆಯೂ ರೂ.50.02 ಲಕ್ಷಕ್ಕೆ ಹಾಗೂ ಉನ್ನತ ಮಾದರಿಯೂ ರೂ.70.60 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಆಡಿ ಎ5 ಸ್ಪೋರ್ಟ್‍ಬ್ಯಾಕ್ ಕಾರಿನ ಬಗ್ಗೆ ಹೇಳುವುದಾದರೆ ಈ ಕಾರಿನಲ್ಲಿ 3ಡಿ ಹೆಡ್‌ಲ್ಯಾಂಪ್‌ಗಳು, ಸ್ಯಾಟಿನ್ ಫಿನಿಶ್ ವಿಂಗ್ ಕನ್ನಡಿಗಳು, ಪ್ಲಾಟಿನಂ ಸಿಂಗಲ್ ಫ್ರೇಮ್ ಗ್ರೀಲ್‌ನಂತಹ ವಿಶಿಷ್ಠ ವಿನ್ಯಾಸಗಳು ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳಿಗೆ ಹೊಸ ಲುಕ್ ನೀಡುವಂತಿದ್ದು, ಬಾಹ್ಯ ಶೈಲಿಯು ಕೂಡಾ ಆಕರ್ಷಣೆಗೆ ಕಾರಣವಾಗಿದೆ.

ಇವುಗಳ ಜೊತೆಗೆ ಎಲ್ಇಡಿ ಟೈಲ್‍ಲ್ಯಾಂಪ್ಸ್, ಡೈನಾಮಿಕ್ ಟರ್ನ್ ಇಂಡಿಕೇಟರ್ಸ್, 18 ಇಂಚಿನ ಲಾಯ್ ವ್ಹೀಲ್ಸ್, ಪ್ಯಾನರಾಮಿಕ್ ಗ್ಲಾಸ್ ರೂಫ್, ಹೆಡ್‍ಲ್ಯಾಂಪ್ ವಾಷರ್ಸ್, 3 ಜೋನ್ ಕ್ಲೈಮೇಟ್ ಕಂಟ್ರೋಲ್, ಲೆಧರ್‍ನಿಂದ ಸಜ್ಜುಗೊಳಿಸಲಾದ ಸ್ಟೀರಿಂಗ್ ವ್ಹೀಲ್ಸ್, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟ್ ಸೇರಿದಂತೆ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಹೀಗಾಗಿ ದೂರದ ಪ್ರಯಾಣಗಳಿಗೆ ಅನುಕೂಲವಾಗುವಂತೆ ಕಾರಿನ ಒಳ ವಿನ್ಯಾಸಗಳನ್ನು ಕೈಗೊಳ್ಳಲಾಗಿದ್ದು, ಡ್ಯಾಶ್ ಬೋರ್ಡ್, ಸೀಟುಗಳ ವಿನ್ಯಾಸ, ಸಭ್ಯತೆಯ ಹೆಡ್ ರೂಮ್, ಲೆಗ್ ರೂಮ್, ಸುಧಾರಿತ ಇನ್ಫೋಟೈನ್‌ಮೆಂಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.

ಕಾರಿನ ಮಾದರಿಗಳು
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎ 5 ಸ್ಪೋರ್ಟ್ ಬ್ಯಾಕ್ ಮತ್ತು ಎ 5 ಕ್ಯಾಬ್ರಿಯೊಲೆಟ್ ಆವೃತ್ತಿಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, ತಾಂತ್ರಿಕ ವಿಭಾಗದಲ್ಲಿ ಅಲ್ಪ ಬದಲಾವಣೆ ಹೊಂದಿವೆ.
MOST READ: ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍ಟಿಒ ಹೇಳಿದ್ದೇನು.?

ಎಂಜಿನ್ ಸಾಮರ್ಥ್ಯ
ಸಧ್ಯ ಆಡಿ ಎ5 ಸ್ಪೋರ್ಟ್‍ಬ್ಯಾಕ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಕೇವಲ ಡೀಸೆಲ್ ಮಾದರಿಯಲ್ಲಿ ಲಭ್ಯವಿದ್ದು, ಈ ಕಾರು 2.0 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 188ಬಿಹೆಚ್‍ಪಿ ಮತ್ತು 400ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಎಂಜಿನ್ ಅನ್ನು 7 ಸ್ಪೀಡ್ ಡ್ಯುಯಲ್ ಕ್ಲಚ್ ಟಿಪ್ಟಾನಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜೊತೆಗೆ ಆಲ್ ವೀಲ್ಹ್ ಡ್ರೈವ್ ತಂತ್ರಜ್ಞಾನವನ್ನು ಕೂಡಾ ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳಲ್ಲಿ ಒದಗಿಸಲಾಗಿದ್ದು, ಕೇವಲ 4.7 ಸೇಕೆಂಡುಗಳಲ್ಲಿ 100 ಕಿಮಿ ವೇಗ ಪಡೆಯುವ ಮೂಲಕ ಗಂಟೆಗೆ 200 ಕಿಮಿ ಸಾಗಬಲ್ಲವು ಎಂದು ಅಂದಾಜಿಸಲಾಗಿದೆ.

ಈ ಹಿನ್ನೆಲೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕಂಫರ್ಟ್, ಆಟೋ ಮತ್ತು ಡೈನಾಮಿಕ್ ಮೂಡ್‌ಗಳಲ್ಲಿ ಕಾರು ಚಾಲನೆ ಮಾಡಬಹುದಾಗಿದೆ. ಜೊತೆಗೆ ಹೊಸ ಕಾರುಗಳಲ್ಲಿ 6 ಏರ್‌ಬ್ಯಾಗ್ ಸೌಲಭ್ಯವನ್ನು ಒದಗಿಸಿರುವುದು ಅಪಘಾತ ಸಂದರ್ಭಗಳಲ್ಲಿ ತೀವ್ರ ಹಾನಿಯನ್ನು ತಡೆಗಟ್ಟಬಲ್ಲವು.
MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಅಜಯ್ ದೇವಗನ್‍ರವರ ಕಾರ್ ಕಲೆಕ್ಷನ್‍ಗಳಿವು
ಕಳೆದ ವಾರವಷ್ಟೆ ಅಜಯ್ ದೇವಗನ್‍ರವರು ಆಡಿ ಎ5 ಸ್ಪೋರ್ಟ್‍ಬ್ಯಾಕ್ ಕಾರನ್ನು ಪಡೆದುಕೊಂಡಿದ್ದು, ಇದರ ಜೊತೆಗೆ ಮಸೆರೆಟ್ಟಿಕ್ವಾಟ್ರೊಪೊರ್ಟೆ, ಲ್ಯಾಂಡ್ ರೋವರ್ ರೇಂಜ್ ರೋವರ್ ವೌಗ್, ಮರ್ಸಿಡೀಸ್-ಬೆಂಝ್ ಬಿ-ಕ್ಲಾಸ್, ಬಿಎಂಡಬ್ಲ್ಯೂ ಝೆಡ್4, ಮಿನಿ ಕೂಪರ್ ಎಸ್, ಮರ್ಸಿಡೀಸ್ ಬೆಂಝ್- ಜಿಎಲ್-ಕ್ಲಾಸ್ ಮತ್ತು ಆಡೀ ಕ್ಯೂ7 ಅನ್ನು ಹೊಂದಿದ್ದಾರೆ. ಈ ಕಾರುಗಳನ್ನು ಕೇವಲ ಅವರು ಮಾತರ ಬಳಸುತ್ತಾರ ಎಂದು ಕೇಳಬೇಡಿ. ಇವುಗಳನ್ನು ಕಾಜೊಲ್‍ರವರು ಕೂಡಾ ಆಗಾಗ ಬಳಸುತ್ತಾರಂತೆ.


Click it and Unblock the Notifications








