ಫಿಟ್ ಆಗಿದೆ 'ಬಾಸ್'; ಅಕ್ಷಯ್ ರಿಯಲ್ ಸ್ಟಂಟ್ ಹೀರೊ?

By Nagaraja

ಬಾಲಿವುಡ್ ಸ್ಟಂಟ್ ಮಾಸ್ಟರ್ ಅಕ್ಷಯ್ ಕುಮಾರ್ ಅಭಿನಯದ 'ಬಾಸ್' ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿತ್ತು. ಎಲ್ಲ ಹಂತದಲ್ಲಿಯೂ ತಾವೊಬ್ಬ ಪ್ರತಿಭಾಶಾಲಿ ನಟ ಎಂಬುದನ್ನು ಮಗದೊಮ್ಮೆ ನಿರೂಪಿಸಿರುವ ಅಕ್ಷಯ್, ಸ್ಟಂಟ್ ದೃಶ್ಯಗಳನ್ನು ಯಾವುದೇ ಭಯವಿಲ್ಲದೆ ಚಿತ್ರಿಕರಿಸಿದ್ದಾರೆ.

ಚಿತ್ರದ ಶೀರ್ಷಿಕೆ ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಅಕ್ಷಯ್, ಚಿನ್ನದ ಬಣ್ಣದ ಹಳೆ ಮರ್ಸಿಡಿಸ್ ಬೆಂಝ್ ಕಾರೊಂದರಲ್ಲಿ ಸ್ಟಂಟ್ ಪ್ರದರ್ಶನ ನಡೆಸುತ್ತಾರೆ. ಕೇವಲ ಎರಡು ಚಕ್ರಗಳಲ್ಲಿ ನಿಂತಿರುವ ಬೆಂಝ್ ಕಾರಿನ ಮೇಲೆ ಅಕ್ಷಯ್ ಸಾಹಸ ಪ್ರದರ್ಶನ ನಿಜಕ್ಕೂ ಪ್ರಶಂಸನೀಯ.

ಚಿನ್ನದಂತಹ ಬೆಂಝ್ ಗಾಡಿಯಲ್ಲಿ ಅಕ್ಷಯ್ ಸ್ಟಂಟ್ ಶೋ

1990ರ ದಶಕದಲ್ಲಿ ಕಿಲಾಡಿ ಸರಪಣಿ ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯಗೊಂಡಿದ್ದ ಅಕ್ಷಯ್‌ ಅವರ ಬಾಸ್ ಚಿತ್ರಕ್ಕಾಗಿ ಯುರೋಪ್‌ನಿಂದ ಚಿನ್ನದ ಬಣ್ಣದ ಪುರಾತನ ಬೆಂಝ್ ಕಾರು ಆಮದು ಮಾಡಲಾಗಿತ್ತು.

ಚಿನ್ನದಂತಹ ಬೆಂಝ್ ಗಾಡಿಯಲ್ಲಿ ಅಕ್ಷಯ್ ಸ್ಟಂಟ್ ಶೋ

ಪ್ರಕಾಶಮಾನವಾಗಿ ಹೊಳೆಯುವ ಈ ಬೆಂಝ್ ಕಾರನ್ನು ಬಳಿಕ ಕಸ್ಟಮೈಸ್ಡ್ ಮಾಡಲಾಗಿತ್ತು. ಪ್ರಸ್ತುತ ಹಾಡು ಬಾಲಿವುಡ್ ಪ್ರೇಮಿಗಳಿಗೆ ಹೊಸ ಅನುಭವವಾಗಿತ್ತು.

ಚಿನ್ನದಂತಹ ಬೆಂಝ್ ಗಾಡಿಯಲ್ಲಿ ಅಕ್ಷಯ್ ಸ್ಟಂಟ್ ಶೋ

ಮರುಭೂಮಿಯಲ್ಲಿ ಚಿತ್ರಿಕರಿಸಲಾದ ಬಾಸ್ ಸಾಹಸ ಹಾಡು ಯುವ ಮನಸ್ಕರಲ್ಲಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೊಂದಡೆ ಚಿತ್ರದಲ್ಲಿ ಹುರುಳಿಲ್ಲ ಎಂಬ ಆರೋಪವನ್ನು ವಿಮರ್ಶಕರಿಂದ ಎದುರಿಸಬೇಕಾಗಿ ಬಂದಿದೆ.

ಚಿನ್ನದಂತಹ ಬೆಂಝ್ ಗಾಡಿಯಲ್ಲಿ ಅಕ್ಷಯ್ ಸ್ಟಂಟ್ ಶೋ

ಇನ್ನು ಕಾರಿನ ನಂಬರ್ ಪ್ಲೇಟ್ ಜಾಗದಲ್ಲಿ ಬಾಸ್ ಚಿತ್ರದ ಟ್ಯಾಗನ್ನು ಬಳಸಲಾಗಿದೆ. ಇದು ಹಾಡಿನಲ್ಲೇ ಶೀರ್ಷಿಕೆಗೆ ಇನ್ನು ಹೆಚ್ಚಿನ ಮೆರಗು ನೀಡುವಂತಾಗಿದೆ.

ಚಿನ್ನದಂತಹ ಬೆಂಝ್ ಗಾಡಿಯಲ್ಲಿ ಅಕ್ಷಯ್ ಸ್ಟಂಟ್ ಶೋ

ಬಲ್ಲ ಮೂಲಗಳ ಪ್ರಕಾರ ಸಾಮಾನ್ಯವಾಗಿ ಅಕ್ಷಯ್ ಕುಮಾರ್ ಸ್ಟಂಟ್‌ಗಳಿಗೆ ಯಾವುದೇ ಸಹಾಯಿಗಳನ್ನು ಬಳಸಿಕೊಳ್ಳುವುದಿಲ್ಲ. ಇಲ್ಲೂ ಅದನ್ನೇ ನಿರೂಪಿಸಿರುವ ಅಕ್ಷಯ್ ಎರಡು ಚಕ್ರಗಳಲ್ಲಿ ಚಳಿಸುವ ಕಾರಲ್ಲಿ ಸಾಹಸ ಪ್ರದರ್ಶನ ತೋರುವ ಮೂಲಕ ನೈಜ ಜೀವನದಲ್ಲೂ ಬಾಸ್ ಅನಿಸಿಕೊಂಡಿದ್ದಾರೆ.

ಚಿನ್ನದಂತಹ ಬೆಂಝ್ ಗಾಡಿಯಲ್ಲಿ ಅಕ್ಷಯ್ ಸ್ಟಂಟ್ ಶೋ

ಎರಡು ಚಕ್ರಗಳಲ್ಲಿ ನಿಂತಿರುವ ಗೋಲ್ಡನ್ ಬೆಂಝ್ ಕಾರಲ್ಲಿ ಅಕ್ಷಯ್ ಸಮತೋಲನ ಕಾಪಾಡಿರುವ ರೀತಿಯಂತೂ ಅದ್ಭುತವಾಗಿತ್ತು. ಹಾಗೆಯೇ ಕಾರು ಚಾಲನೆಗೆ ವಿಶೇಷವಾಗಿ ಪರಿಣತಿ ಪಡೆದ ಚಾಲಕರನ್ನು ನೇಮಕಗೊಳಿಸಲಾಗಿತ್ತು.

ಚಿನ್ನದಂತಹ ಬೆಂಝ್ ಗಾಡಿಯಲ್ಲಿ ಅಕ್ಷಯ್ ಸ್ಟಂಟ್ ಶೋ

ಅಂದ ಹಾಗೆ ಕರಾಟೆಯಲ್ಲಿ ಮಾರ್ಷಲ್ ಆರ್ಟ್‌ಗಾಗಿ ಬ್ಲ್ಯಾಕ್ ಬೆಲ್ಟ್ ವಿಜೇತರಾಗಿರುವ ಅಕ್ಷಯ್‌ಗೆ ಇದೇನು ಹೊಸತೇನಲ್ಲ ಬಿಡಿ. ಇದಕ್ಕಾಗಿಯೇ ಅಕ್ಷಯ್ ಸಿನಿ ಪ್ರೇಕ್ಷಕರ ಪ್ರೀತಿಯ ನಟ ಎನಿಸಿಕೊಂಡಿದ್ದಾರೆ.

ಫಿಟ್ ಆಗಿದೆ ಬಾಸ್- ವೀಡಿಯೋ ವೀಕ್ಷಿಸಿ

More from DriveSpark

Article Published On: Friday, October 25, 2013, 8:03 [IST]
English summary
Bollywood actor Akshay Kumar has done a superb stunt with golden Mercedes Benz in his newly movie Boss. Here is some interesting stunt images from movie Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+