Ambani New Car: ಪ್ರಧಾನಿ ಕಾರಿನಷ್ಟೆ ಭದ್ರತೆ! ಸೇನೆ ಕೂಡ ನಾಶಪಡಿಸಲು ಸಾಧ್ಯವಿಲ್ಲ!

ಮುಖೇಶ್ ಅಂಬಾನಿ ಕುಟುಂಬಕ್ಕೆ ವಾಹನಗಳ ದಾಹ ಅಷ್ಟಿಷ್ಟಲ್ಲ. ತಮ್ಮ ಗ್ಯಾರೇಜ್‌ನಲ್ಲಿ ದುಬಾರಿ ಮತ್ತು ವಿದೇಶಿ ಕಾರುಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಹೀಗಾಗಿಯೇ ವಾಹನ ಜಗತ್ತಿನಲ್ಲಿ ಮುಖೇಶ್ ಅಂಬಾನಿ ಕುಟುಂಬದ ಹೆಸರು ಪದೆ ಪದೇ ಕೇಳಿ ಬರುತ್ತದೆ. Ambani New Car ಈಗ ಮತ್ತೊಂದು ದುಬಾರಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

ಅಂಬಾನಿ ಕುಟುಂಬದ ಹೆಚ್ಚಿನ ಸದಸ್ಯರು ಬೆಂಗಾವಲು ಪಡೆಯೊಂದಿಗೆ ಪ್ರಯಾಣಿಸುತ್ತಾರೆ. ಮುಖೇಶ್ ಅಂಬಾನಿ ದೇಶದ ಅತಿದೊಡ್ಡ ಉದ್ಯಮಿಯಾಗಿರುವ ಕಾರಣ ಬುಲೆಟ್ ಪ್ರೂಫ್ ವಾಹನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಜೊತೆಗೆ ಅವರ ಬೆಂಗಾವಲು ಪಡೆಗೂ ದುಬಾರಿ ಕಾರುಗಳನ್ನು ನೀಡಿರುವುದು ಎಲ್ಲರಿಗೂ ತಿಳಿದೆ ಇದೆ. ಇದೀಗ ಮುಂಬೈನಲ್ಲಿ ಬುಲ್ಲೆಟ್ ಪ್ರೂಫ್ Mercedes-Benz S680 ಗಾರ್ಡ್ ಸೆಡಾನ್‌ಲ್ಲಿ ಕಾಣಿಸಿಕೊಂಡಿದ್ದಾರೆ.

ambani-new-car-bullet-proof-mercedes-benz-s680

ವಿಶ್ವದ ಅತ್ಯಂತ ದುಬಾರಿ ಕಾರು ಮಾದರಿಗಳಲ್ಲಿ ಒಂದಾದ Mercedes-Benz S680 Guard ಸೆಡಾನ್ ಕಾರನ್ನು ಅವರು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಈ ಕಾರಿನ ಬೆಲೆ ಬರೋಬ್ಬರಿ 10 ಕೋಟಿ ರೂ.ಗೂ ಹೆಚ್ಚು ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಅವರ ಕುಟುಂಬದವರು ಕಾರಿನಲ್ಲಿ ಓಡಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅದರಲ್ಲೇನಿದೆ ಬಿಡಿ ಅವರ ಬಳಿ ದುಬಾರಿ ಕಾರುಗಳಿರುವುದು ಎಲ್ಲರಿಗೂ ತಿಳಿದೆ ಇದೆ ಅಂದುಕೊಂಡರೆ ತಪ್ಪು. ಈಗ ಅವರು ಕಾಣಿಸಿಕೊಂಡಿರುವ ಕಾರಿಗೆ ಹಲವು ವೈಶಿಷ್ಟ್ಯಗಳಿರುವುದರಿಂದಲೇ ಈಗ ಹೆಚ್ಚು ಚರ್ಚೆಯ ವಿಷಯವಾಗಿದೆ. ಈ ಕಾರು ಸಾಮಾನ್ಯ ಬುಲೆಟ್ ಪ್ರೂಫ್ ಕಾರಲ್ಲ, ಮೆಷಿನ್ ಗನ್‌ಗಳಿಂದ ದಾಳಿ ಮಾಡಿದ್ರೂ ಪ್ರಯಾಣಿಕರನ್ನು ರಕ್ಷಿಸುತ್ತದೆ.

ಈ ಕಾರು ಕೇವಲ ಗುಂಡೇಟಿನ ಹೊಡೆತವನ್ನು ಮಾತ್ರ ತಡೆದುಕೊಳ್ಳುತ್ತದೆ ಎಂದು ಭಾವಿಸಬೇಡಿ. ಈ ಕಾರಿಗೆ ಬೆಂಕಿ ಅವಘಡಗಳನ್ನು ತಪ್ಪಿಸುವ ಸೌಲಭ್ಯವನ್ನು ಸಹ ಒದಗಿಸಲಾಗಿದ್ದು, ಬಾಂಬ್ ದಾಳಿಗಳನ್ನು ಕೂಡ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಮರ್ಸಿಡಿಸ್ S 680 ಸೆಡಾನ್ ಹೊರಗಿನಿಂದ ಸಾಮಾನ್ಯ ಸೆಡಾನ್‌ನಂತೆ ಕಾಣುತ್ತದೆ.

ಶತ್ರುಗಳ ಗಮನವನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿಯೇ ಹಾಗೆ ವಿನ್ಯಾಸಗೊಳಿಸಲಾಗಿದೆ. ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಕಾರಣ ಹಾಗೂ ವ್ಯಾಪಾರ ಸ್ಪರ್ಧೆಯ ಕಾರಣದಿಂದಾಗಿ ಅವರಿಗೆ ಕೇಂದ್ರ ಸರ್ಕಾರದ ಝಡ್ ಪ್ಲಸ್ ರಕ್ಷಣೆ ನೀಡಲಾಗಿದೆ. ಒಂದು ಮಟ್ಟದಲ್ಲಿ ರಾಜ್ಯದ ಮುಖ್ಯಮಂತ್ರಿಗೆ ಒದಗಿಸುವ ಭದ್ರತೆಗೆ ಸಮಾನವಾದ ಭದ್ರತೆ ಒದಗಿಸಲಾಗುತ್ತದೆ.

ಇದು ಸಾಕಾಗುವುದಿಲ್ಲ ಎಂಬಂತೆ ಮುಕೇಶ್ ಅಂಬಾನಿ ಅವರು ಕಾರಿಗೆ ಹೆಚ್ಚುವರಿ ಭದ್ರತಾ ರಿಂಗ್ ಅನ್ನು ಕೂಡ ರಚಿಸಿಕೊಂಡಿದ್ದಾರೆ. ಅಂಬಾನಿಯವರ ಈ ಹೊಸ ಬೆಂಝ್ ಸಾಮಾನ್ಯ Mercedes-Benz S680 ಗಿಂತ ಹೆಚ್ಚು ತೂಕವಿದೆ. ಇದು 4 ಟನ್‌ಗಳಷ್ಟು ತೂಕವನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣ ದೇಹದ ಫಲಕಗಳನ್ನು ಹೆಚ್ಚು ಗಟ್ಟಿಮುಟ್ಟಾಗಿ ಮತ್ತು ಬಲವಾಗಿ ವಿನ್ಯಾಸಗೊಳಿಸಲಾಗಿದೆ.

ಸಾಮಾನ್ಯ ಎಸ್ ಕ್ಲಾಸ್ ನೀಡುವ ಎಲ್ಲಾ ಐಷಾರಾಮಿ ವೈಶಿಷ್ಟ್ಯಗಳನ್ನು ಕಾರು ನೀಡುತ್ತದೆ. S680 ಗಾರ್ಡ್ 6.0 ಲೀಟರ್ V12 ಎಂಜಿನ್‌ನೊಂದಿಗೆ ಸಜ್ಜುಗೊಂಡಿದ್ದು, 612 Ps ಪವರ್ ಮತ್ತು 830 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ವಿಡಿಯೋದಲ್ಲಿ ಕಾಣಿಸಿಕೊಂಡ ಅಂಬಾನಿ ಕಾರಿಗೆ ಬೆಂಗಾವಲು ಪಡೆಯಾಗಿ ರೇಂಜ್ ರೋವರ್, MG ಗ್ಲೋಸ್ಟರ್, Mercedes-Benz V-ಕ್ಲಾಸ್ MPV ಮತ್ತು ಫೋರ್ಡ್ ಎಂಡೀವರ್ ಕಾಣಿಸಿಕೊಂಡಿವೆ.

More from DriveSpark

Article Published On: Monday, July 24, 2023, 15:44 [IST]
English summary
Ambani new car bullet proof mercedes benz s680
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+