1960ರ ವಿಲ್ಲೀಸ್ ಜೀಪ್‌ನ ಜಾಹೀರಾತು ಪತ್ರವನ್ನು ಹಂಚಿಕೊಂಡ ಆನಂದ್ ಮಹಿಂದ್ರಾ

ದೇಶದ ಹಿರಿಯ ಉದ್ಯಮಿ ಮತ್ತು ಮಹಿಂದ್ರಾ & ಮಹಿಂದ್ರಾ ಅಧ್ಯಕ್ಷ ಆನಂದ್ ಮಹಿಂದ್ರಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಜನರೊಂದಿಗೆ ಸಂಪರ್ಕ ಸಾಧಿಸಲು ವಿವಿಧ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ, ಮಹಿಂದ್ರಾ 1960ರಲ್ಲಿ ಉತ್ಪಾದನೆ ಮಾಡಿದ್ದ ಜೀಪ್ ವಿಲ್ಲಿಸ್‌ನ ಹಳೆಯ ಬೆಲೆಯನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.

1960ರ ವಿಲ್ಲೀಸ್ ಜೀಪ್‌ನ ಜಾಹೀರಾತು ಪತ್ರವನ್ನು ಹಂಚಿಕೊಂಡ ಆನಂದ್ ಮಹಿಂದ್ರಾ

ಇದರಲ್ಲಿ ಜೀಪಿನ ಬೆಲೆ 12,421 ರೂ. ಎಂದು ಹೇಳಲಾಗಿದೆ. ಈ ಪೋಸ್ಟ್‌ ನಂತರ ಆನಂದ್ ಮಹಿಂದ್ರಾ ಅನುಯಾಯಿಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ವಾಸ್ತವವಾಗಿ, ಆನಂದ್ ಮಹಿಂದ್ರಾ 1960ರ ಜೀಪ್ ವಿಲ್ಲಿಸ್‌ನ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಮಹಿಂದ್ರಾ ಅಂಡ್ ಮಹಿಂದ್ರಾ ತನ್ನ ಜೀಪ್ ವಿಲ್ಲೀಸ್ ಬೆಲೆಯನ್ನು 200 ರೂ. ಕಡಿಮೆ ಮಾಡಿ 'ವಿಲ್ಲೀಸ್ ಮಾಡೆಲ್ ಸಿಜೆ 33 ಜೀಪ್'ನ ಹೊಸ ಬೆಲೆಯನ್ನು 12,421 ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ಮುದ್ರಣ ಮಾಡಿದ್ದ ಅಂದಿನ ಕಾಲದ ಪೋಸ್ಟರ್‌ ಅನ್ನು ಷೇರ್‌ ಮಾಡಿದ್ದಾರೆ.

1960ರ ವಿಲ್ಲೀಸ್ ಜೀಪ್‌ನ ಜಾಹೀರಾತು ಪತ್ರವನ್ನು ಹಂಚಿಕೊಂಡ ಆನಂದ್ ಮಹಿಂದ್ರಾ

ಈ ಬಗ್ಗೆ ಬರೆದುಕೊಂಡಿರುವ ಅವರು, "ನನ್ನ ಹಳೆಯ ಸ್ನೇಹಿತರೊಬ್ಬರು ತಮ್ಮ ಪತ್ರಾಗಾರದಿಂದ ಸಿಕ್ಕಂತಹ ಒಂದು ಮುದ್ರಣ ಜಾಹೀರಾತನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಅವರ ಕುಟುಂಬವು ದಶಕಗಳಿಂದ ಮಹಿಂದ್ರಾ ಕಾರುಗಳನ್ನು ಖರೀದಿಸುತ್ತಿದೆ. ಆಹಾ ಎಂತಹ ಒಳ್ಳೆಯ ಹಳೇ ದಿನಗಳವು ಎಂದು ಬರೆದುಕೊಂಡಿದ್ದಾರೆ.

1960ರ ವಿಲ್ಲೀಸ್ ಜೀಪ್‌ನ ಜಾಹೀರಾತು ಪತ್ರವನ್ನು ಹಂಚಿಕೊಂಡ ಆನಂದ್ ಮಹಿಂದ್ರಾ

ತಮಾಷೆಯ ಪ್ರತಿಕ್ರಿಯೆಗಳು

ಆನಂದ್ ಮಹಿಂದ್ರಾ ಅವರ ಈ ಪೋಸ್ಟ್‌ ಬಗ್ಗೆ ಜನರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ "ಈ ಬೆಲೆ ತುಂಬಾ ಉತ್ತಮವಾಗಿದೆ, ನಾವು ಈ ಬೆಲೆಯಲ್ಲಿ ವಾಹನವನ್ನು ಖರೀದಿಸಬಹುದೇ?" ಇದಕ್ಕೆ ಪ್ರತಿಕ್ರಿಯೆಯಾಗಿ ಮಹಿಂದ್ರಾ ಅವರು, ಪ್ರಸ್ತುತ ಈ ಮೊತ್ತದೊಂದಿಗೆ ಮಹಿಂದ್ರಾದ ಯಾವ ಅಕ್ಸೆಸೊರಿಯನ್ನು ನೀವು ಖರೀದಿಸಬಹುದು ಎಂಬುದನ್ನು ಕಂಡುಹಿಡಿಯಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ

1960ರ ವಿಲ್ಲೀಸ್ ಜೀಪ್‌ನ ಜಾಹೀರಾತು ಪತ್ರವನ್ನು ಹಂಚಿಕೊಂಡ ಆನಂದ್ ಮಹಿಂದ್ರಾ

ಇನ್ನೊಬ್ಬ ಬಳಕೆದಾರ "ಸರ್ ನನಗೆ 12,421 ರೂ. ಬೆಲೆಯಲ್ಲಿ ಎರಡನ್ನು ಬುಕ್ ಮಾಡಿ. ದಯವಿಟ್ಟು ಹಿಂದಿನ ಬೆಲೆಗೆ ಅದನ್ನು ವಿತರಿಸಿ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹಿಂದ್ರಾ, ಥಾರ್‌ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡು, ಈ ಬೆಲೆಯಲ್ಲಿ ಅಮೆಜಾನ್ ನಲ್ಲಿ ಮಾರಾಟವಾಗುವ ಮಹಿಂದ್ರಾಸ್ ಥಾರ್‌ನ 10 ಡೈ-ಕಾಸ್ಟ್‌ ಆಟಿಕೆಗಳನ್ನು ಖರೀದಿಸಬಹುದು ಎಂದು ತಮಾಷೆ ಮಾಡಿದ್ದಾರೆ.

1960ರ ವಿಲ್ಲೀಸ್ ಜೀಪ್‌ನ ಜಾಹೀರಾತು ಪತ್ರವನ್ನು ಹಂಚಿಕೊಂಡ ಆನಂದ್ ಮಹಿಂದ್ರಾ

1949ರ ವಿಲ್ಲೆ ಜೀಪುಗಳು

ಮಹಿಂದ್ರಾ & ಮಹಿಂದ್ರಾ ವಾಹನ ಉದ್ಯಮಕ್ಕೂ ಮೊದಲು ಯುಕೆ ಕಂಪನಿಗಳೊಂದಿಗೆ ಉಕ್ಕು ವ್ಯಾಪಾರ ಮಾಡುತ್ತಿದ್ದರು. ಅದೇ ವರ್ಷ, ಕಂಪನಿಯು ಭಾರತದಲ್ಲಿ ವಿಲ್ಲಿಸ್ ಜೀಪ್‌ಗಳನ್ನು ಉತ್ಪಾದಿಸಲು ಪರವಾನಗಿಯನ್ನು ಪಡೆಯಿತು.' ವಿಲ್ಲಿಸ್ ಸಿಜೆ33 ಜೀಪ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಿತು. ಇದು 4-ವೀಲ್ ಡ್ರೈವ್ ತಂತ್ರಜ್ಞಾನದೊಂದಿಗೆ ಬಂದ ದೇಶದ ಮೊದಲ ಆಫ್ ರೋಡರ್ ಕಾರು. ಕೆಲವು ವರ್ಷಗಳ ನಂತರ, ಮಹಿಂದ್ರಾ ವಿಲ್ಲೀಸ್ ಜೀಪಿನ ಪರವಾನಗಿಯನ್ನು ಜಪಾನಿನ ಕಂಪನಿಗೆ ಹಸ್ತಾಂತರಿಸಿತು.

Most Read Articles

Kannada
English summary
Anand mahindra shares jeep willys old price poster
Story first published: Thursday, March 10, 2022, 20:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X