ಗಣೇಶೋತ್ಸವಕ್ಕೆ 13 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದ ಅನಂತ್ ಅಂಬಾನಿ
ಪ್ರಪಂಚದಾದ್ಯಂತದ ಕೋಟ್ಯಾಧಿಪತಿಗಳು ಮತ್ತು ಬ್ರಿಟಿಷ್ ಐಷಾರಾಮಿ ಕಾರು ತಯಾರಕ ರೋಲ್ಸ್ ರಾಯ್ಸ್ ನಡುವಿನ ಪ್ರೇಮ ಸಂಬಂಧವು ಹೊಸದೇನಲ್ಲ. ಈ ಪ್ರಪಂಚದ ಹೆಚ್ಚಿನ ಬಿಲಿಯನೇರ್‌ಗಳು ರೋಲ್ಸ್ ರಾಯ್ಸ್ ಮೋಟಾರ್‌ಕಾರ್ಸ್‌ನ ಸೂಪರ್ ಐಷಾರಾಮಿ ಕಾರುಗಳಲ್ಲಿ ಓಡುತ್ತಾರೆ ಮತ್ತು ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಕೂಡ ಇದಕ್ಕೆ ಭಿನ್ನವಾಗಿಲ್ಲ.
ಅಂಬಾನಿ ಕುಟುಂಬವು ಹಲವಾರು ರೋಲ್ಸ್-ರಾಯ್ಸ್ ಕಾರುಗಳನ್ನು ಹೊಂದಿದ್ದಾರೆ. ಇತ್ತೀಚೆಗೆ, ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು 13.14 ಕೋಟಿ ರೂಪಾಯಿ ಮೌಲ್ಯದ ತಮ್ಮ ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಕುಲ್ಲಿನನ್ನಲ್ಲಿ ಗಣೇಶೋತ್ಸವ ಆಚರಣೆಗೆ ಬಂದಿದ್ದರು. ಅನಂತ್ ಅಂಬಾನಿ ತಮ್ಮ ರೋಲ್ಸ್ ರಾಯ್ಸ್ ಕಲ್ಲಿನಾನ್‌ನಲ್ಲಿ ಆಗಮಿಸುವ ಮತ್ತು ಹೊರಡುವ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ "ಕಾರ್ಸ್ ಫಾರ್ ಯೂ" ತಮ್ಮ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೊದಲ್ಲಿ, ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ (Anant Ambani) ಅವರು ತಮ್ಮ ಟಸ್ಕನ್ ಸನ್ ಹಳದಿ ಬಣ್ಣದ ರೋಲ್ಸ್ ರಾಯ್ಸ್ ಕುಲ್ಲಿನನ್‌ನಲ್ಲಿ(Rolls Royce Cullinan) ಆಗಮಿಸುತ್ತಿರುವುದನ್ನು ಕಾಣಬಹುದು. ಅನಂತ್ ತನ್ನ ಎಸ್‌ಯುವಿಯಿಂದ ಹೊರಬಂದ ನಂತರ ಅವನ ಭದ್ರತಾ ಸಿಬ್ಬಂದಿ ಸುತ್ತುವರೆದರು. ಬಿಜೆಪಿಯ ಮಾಜಿ ಶಾಸಕ ಆಶಿಶ್ ಶೇಲಾರ್ ಅವರು ಆಯೋಜಿಸಿದ್ದ ಗಣಪತಿ ಉತ್ಸವಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ವೀಡಿಯೊದಲ್ಲಿ, ಅನಂತ್ ಅಂಬಾನಿ ದೇವಸ್ಥಾನಕ್ಕೆ ಪ್ರವೇಶಿಸಿ ಗಣಪತಿ ವಿಗ್ರಹದ ಆಶೀರ್ವಾದವನ್ನು ಪಡೆದೆದಿದ್ದಾರೆ. ಇದನ್ನು ಅನುಸರಿಸಿ, ಅವರು ಆಶಿಶ್ ಶೆಲಾರ್ ಅವರಿಂದ ಕೆಲವು ಉಡುಗೊರೆಗಳನ್ನು ಸ್ವೀಕರಿಸುತ್ತಿರುವುದು ಕಂಡುಬಂದಿತು ಮತ್ತು ಇದರ ನಂತರ ಅವರು ದೇವಾಲಯದಿಂದ ಹೊರಡುತ್ತಾರೆ. ಅವನ ಸೆಕ್ಯುರಿಟಿ ಗಾರ್ಡ್‌ಗಳು ಅವನ ದಾರಿಯನ್ನು ತೆರವುಗೊಳಿಸುತ್ತಾರೆ ಮತ್ತು ಅವನು ತನ್ನ ರೋಲ್ಸ್ ರಾಯ್ಸ್ ಕಲ್ಲಿನನ್ ಎಸ್‍ಯುವಿ ಏರಿ ಹೊರಡರು.

ವೀಡಿಯೊದಲ್ಲಿ ಕಂಡುಬರುವ ರೋಲ್ಸ್ ರಾಯ್ಸ್ ಕುಲ್ಲಿನನ್‌ಗೆ ಸಂಬಂಧಿಸಿದಂತೆ, ಇದು ಕುಟುಂಬದ ಮೂರನೇ ಕುಲಿನನ್ ಆಗಿದೆ. ಒಟ್ಟಾರೆಯಾಗಿ, ಅಂಬಾನಿ ಕುಟುಂಬವು ನಾಲ್ಕು ರೋಲ್ಸ್ ರಾಯ್ಸ್ ಕುಲ್ಲಿನನ್‌ಗಳನ್ನು ಹೊಂದಿದೆ, ಆದರೆ ಇದು ಅತ್ಯಂತ ದುಬಾರಿಯಾಗಿದೆ ಮತ್ತು ಟಸ್ಕನ್ ಸನ್ ಹಳದಿ ಬಣ್ಣವನ್ನು ಹೊಂದಿದೆ. ವರದಿಗಳ ಪ್ರಕಾರ, ಕುಟುಂಬವು ಕೇವಲ ಈ ಬಣ್ಣಕ್ಕಾಗಿಯೇ ಹೆಚ್ಚುವರಿ 1 ಕೋಟಿ ರೂ. ಖರ್ಚು ಮಾಡಿದ್ದಾರೆ.
ಈ ನಿರ್ದಿಷ್ಟ ಕುಲಿನನ್ ಇತರ ವಿಶೇಷ ಕಸ್ಟಮ್ ಆಯ್ಕೆಗಳನ್ನು ಸಹ ಮಾಡಲಾಗಿದೆ. ಇದು ಒಟ್ಟಾರೆಯಾಗಿ ಈ ಕುಲ್ಲಿನನ್‌ಗೆ ಬೆಲೆಯನ್ನು ಸುಮಾರು 13.14 ಕೋಟಿ ರೂ. ಆಗಿಸಿದೆ. ಅಂಬಾನಿ ಕುಟುಂಬದ ಎಲ್ಲಾ ಕುಲ್ಲಿನಾನ್‌ಗಳು ಸ್ಟ್ಯಾಂಡರ್ಡ್ ಮಾಡೆಲ್‌ಗಳಾಗಿವೆ, ಇದು ಬೃಹತ್ 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V12 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.

ಈ ಎಂಜಿನ್ 571 ಬಿಹೆಚ್‍ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 8-ಸ್ಪೀಡ್ ZF ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಇನ್ನು ಈ ರೋಲ್ಸ್ ರಾಯ್ಸ್ ಕುಲ್ಲಿನನ್ ಎಸ್‍ಯುವಿಯು ಗಂಟೆಗೆ 250 ಕಿಮೀ ವೇಗದಲ್ಲಿ ಚಲಿಸುತ್ತದೆ.
ಮುಖೇಶ್ ಅಂಬಾನಿಯವರ ಕುಟುಂಬದ ಬಳಿ ಹಲವಾರು ದುಬಾರಿ ಮತ್ತು ಐಷಾರಾಮಿ ಕಾರುಗಳ ಸಂಗ್ರಹವಿದೆ. ಇದರಲಿ ಮರ್ಸಿಡಿಸ್ ಬೆಂಝ್ ಎಸ್ ಗಾರ್ಡ್, ರೋಲ್ಸ್ ರಾಯ್ಸ್ ಫಾಂಟಮ್ ಡ್ರಾಪ್ ಹೆಡ್ ಕೂಪೆ, ಬಿಎಂಡಬ್ಲ್ಯು 7 ಸೀರಿಸ್ ಹೈ ಸೆಕ್ಯೂರಿಟಿ, ರೋಲ್ಸ್ ರಾಯ್ಸ್ ಕಲಿನನ್, ಬೆಂಟ್ಲಿ ಬೆಂಟಾಯ್ಗ ಮತ್ತು ಲ್ಯಾಂಬೊರ್ಗಿನಿ ಉರುಸ್ ಸೇರಿದಂತೆ ಇನ್ನಿತರ ಐಷಾರಾಮಿ ಕಾರುಗಳು ಮತ್ತು ಸ್ಪೋರ್ಟ್ಸ್ ಕಾರುಗಳು ಸೇರಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








