Tripti Dimri: ಅನಿಮಲ್ ನಟಿಯ ರೇಂಜ್ ಬದಲಾಯ್ತು, ಬಹುಕೋಟಿ ಕಾರು ಖರೀದಿ!

ಇತ್ತೀಚೆಗೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದ "ಅನಿಮಲ್" ಸಿನಿಮಾವು ಹಲವು ನಟ, ನಟಿಯರಿಗೆ ಹೆಸರು ತಂದುಕೊಟ್ಟಿದೆ. ಇದರಲ್ಲಿ ಮುಖ್ಯವಾಗಿ 'Tripti Dimri' ಬಗ್ಗೆ ಹೇಳಲೇಬೇಕು. ಇವರ ಪಾತ್ರ ಸಣ್ಣದಾದ್ರು ಎಲ್ಲರ ಗಮನಸೆಳೆದು ಈಗ ಸಿನಿಮಾ ರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅವರ ರೇಂಜ್ ಬದಲಾಗುತ್ತಿದ್ದಂತೆ ರೇಂಜ್ ರೋವರ್ ಖರೀಸಿದ್ದಾರೆ.

ಇತ್ತೀಚೆಗೆ ನಟಿ ತ್ರಿಪ್ತಿ ಡಿಮ್ರಿ ಹೊಸದಾಗಿ ಖರೀದಿಸಿದ Range Rover Sport ಕಾರಿನಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ ನಟಿ, ಸೆಕೆಂಡ್‌ ಹ್ಯಾಂಡ್ ಕಾರು ಖರೀಸಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ವೀಡಿಯೊದಲ್ಲಿ ಕಂಡುಬರುವ ರೇಂಜ್ ರೋವರ್ ಎಸ್‌ಯುವಿ ಹಿಂದಿನ ಜೆನ್ ಮಾದರಿಯಾಗಿದೆ. ಹೊಸ ಕಾರಾಗಿದ್ದರೆ ಪ್ರಸ್ತುತ ಜೆನ್ ಎಸ್‌ಯುವಿ ಆಗಿರುತ್ತಿತ್ತು. ಇದು ಸ್ಯಾಟಿನ್ ಬ್ಲಾಕ್ ಬಣ್ಣದ್ದಾಗಿದ್ದು, ಫ್ಯಾಕ್ಟರಿ ಪೇಂಟ್ ಆಗಿದೆಯೇ ಅಥವಾ ರೀಪೇಂಟ್ ಮಾಡಲಾಗಿದೆಯೇ ತಿಳಿದಿಲ್ಲ.

animal-movie-actress-tripti-dimri-bought-range-rover-suv

ಈ ಹಿಂದೆ ಸಾಮನ್ಯ ಡಸ್ಟರ್ ಹೊಂದಿದ್ದ ತ್ರಿಪ್ತಿ ಡಿಮ್ರಿ: ಈ ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿ ಖರೀದಿಸುವ ಮೊದಲು, ನಟಿ ಸ್ಟ್ಯಾಂಡರ್ಡ್ ರೆನಾಲ್ಟ್ ಡಸ್ಟರ್ ಅನ್ನು ಹೊಂದಿದ್ದರು. ಅವರು ಈ ಹಿಂದೆ ಹಲವು ಬಾರಿ ತಮ್ಮ ಡಸ್ಟರ್ ಕಾರಿನಲ್ಲಿ ಮುಂಬೈ ವಿಮಾನ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದರು.

ತ್ರಿಪ್ತಿ ಡಿಮ್ರಿ ಹಿಂದಿನ ತಲೆಮಾರಿನ ಡಸ್ಟರ್ ಫೇಸ್ ಲಿಫ್ಟ್ ಆವೃತ್ತಿಯಾಗಿದ್ದು, ಔಟ್ ಬ್ಯಾಕ್ ಬ್ರಾಂಜ್ ಬಣ್ಣದ ಕಾರನ್ನು ಹೊಂದಿದ್ದರು. ಸದ್ಯಕ್ಕೆ, ಈ ಮಾದರಿಯನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿದ್ದು, ಅದರ ಸ್ಥಾನವನ್ನು ಶೀಘ್ರದಲ್ಲೇ ಹೊಸ ರೆನಾಲ್ಟ್ ಡಸ್ಟರ್ ತುಂಬಲಿದೆ. ಇದು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷ ಆರಂಭದಲ್ಲಿ ಬಿಡುಗಡೆಯಾಗಬಹುದು.

animal-movie-actress-tripti-dimri-bought-range-rover-suv

ನಟಿಯ ರೇಂಜ್ ರೋವರ್ ವಿಶೇಷತೆಗಳು: ಕಂಪನಿಯು ಹಿಂದಿನ ಜೆನ್ ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿ ಅನ್ನು ಹೊಸ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲ್ಯಾಂಪ್‌ಗಳು, ಹೊಸ ಫ್ರಂಟ್ ಗ್ರಿಲ್ ಮತ್ತು ಹೊಸ ಬಾನೆಟ್ ವಿನ್ಯಾಸಗಳೊಂದಿಗೆ ಪರಿಷ್ಕೃತ ಫ್ರಂಟ್ ಎಂಡ್ ಸ್ಟೈಲಿಂಗ್ ನೊಂದಿಗೆ ನೀಡಿದೆ.

ಇಂಟೀರಿಯರ್ ಬಗ್ಗೆ ಹೇಳುವುದಾದ್ರೆ, ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೊಸ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಆಪ್ಷನಲ್ ಹೆಡ್ಸ್ - ಅಪ್ ಡಿಸ್ ಪ್ಲೇ ಇದೆ. ಇದು ಆಪ್ಷನಲ್ ಎಕ್ಸಿಕ್ಯೂಟಿವ್ - ಕ್ಲಾಸ್ ಸೀಟಿಂಗ್, ಗೆಸ್ಚರ್ - ಕಂಟ್ರೋಲ್ ಸನ್-ಬ್ಲೈಂಡ್ಸ್, 4 - ಝೋನ್ ಕ್ಲೈಮೆಟ್ ಕಂಟ್ರೋಲ್ ಮತ್ತು ಮೆರಿಡಿಯನ್ ಸ್ಟಿರಿಯೊವನ್ನು ಹೊಂದಿದೆ.

animal-movie-actress-tripti-dimri-bought-range-rover-suv

ಪವರ್ ಟ್ರೇನ್ ಬಗ್ಗೆ ಹೇಳುವುದಾದರೆ, ಹಿಂದಿನ ಜೆನ್ ರೇಂಜ್ ರೋವರ್ ಸ್ಪೋರ್ಟ್ ಮತ್ತು ಸ್ಟ್ಯಾಂಡರ್ಡ್ ರೇಂಜ್ ರೋವರ್ ನಾಲ್ಕು ಎಂಜಿನ್ ಆಯ್ಕೆಗಳೊಂದಿಗೆ ಬರಲಿವೆ. ಎಂಟ್ರಿ ಲೆವೆಲ್ ಡೀಸೆಲ್ ಎಂಜಿನ್ 3.0-ಲೀಟರ್, ವಿ6 ಯುನಿಟ್ ಆಗಿದ್ದು, 255 ಬಿಹೆಚ್‌ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

4.4 ಲೀಟರಿನ ವಿ8 ಎಂಜಿನ್ 335 ಬಿಹೆಚ್‌ಪಿ ಪವರ್ ಹಾಗೂ 740 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 3.0 ಲೀಟರಿನ ಸೂಪರ್ ಚಾರ್ಜ್ಡ್ ವಿ6 ಎಂಜಿನ್ 335 ಬಿಹೆಚ್‌ಪಿ ಪವರ್ ಹಾಗೂ 450 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ರೇಂಜ್ ರೋವರ್ ನ ಹೈ ಪರ್ಫಾಮೆನ್ಸ್ ಟಾಪ್-ಎಂಡ್ ರೂಪಾಂತರಗಳು 5.0-ಲೀಟರ್, ಸೂಪರ್ ಚಾರ್ಜ್ಡ್ ವಿ 8 ಪೆಟ್ರೋಲ್ ಎಂಜಿನ್‌ ಜೊತೆಗೆ 518 ಬಿಹೆಚ್‌ಪಿ ಪವರ್ ಮತ್ತು 625 ಎನ್ಎಂ ಟಾರ್ಕ್ ನೊಂದಿಗೆ ಬರುತ್ತವೆ.

animal-movie-actress-tripti-dimri-bought-range-rover-suv

ಎಲ್ಲಾ ಎಂಜಿನ್‌ಗಳು 8 - ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್, 4 - ವ್ಹೀಲ್ ಡ್ರೈವ್ ಮತ್ತು 7 - ಡ್ರೈವಿಂಗ್ ಮೋಡ್‌ಗಳನ್ನು ಪಡೆದಿವೆ. ರೇಂಜ್ ರೋವರ್ ಈ ತಲೆಮಾರಿನ ಜನಪ್ರಿಯ ಎಸ್‌ಯುವಿಯನ್ನು ಏರ್ ಸಸ್ಪೆಂಷನ್ ನೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಿದೆ.

More from DriveSpark

Article Published On: Wednesday, March 27, 2024, 13:21 [IST]
English summary
Animal movie actress tripti dimri bought range rover suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+