Anirudh | ನಿನ್ನ ಸಂಗೀತಕ್ಕೆ ಅಭಿಮಾನಿಗಳಲ್ಲ, ನಾನೇ ಮರುಳಾಗಿದ್ದೇನೆ: 1.5 ಕೋಟಿಯ ಕಾರು ಗಿಫ್ಟ್

ನಟ ರಜಿನಿಕಾಂತ್ ಅವರ ಜೈಲರ್ ಸಿನಿಮಾಗೆ ಅದ್ಬುತ ಸಂಗೀತವನ್ನು ನೀಡಿ ಅಭಿಮಾನಿಗಳ ಹೃದಯ ಗೆದ್ದ ಸಂಗೀತ ನಿರ್ದೇಶಕ ಅನಿರುಧ್ ರವಿಚಂದರ್ (Anirudh Ravichander) ಅವರಿಗೆ ದುಬಾರಿ ಕಾರು ಉಡುಗೊರೆಯಾಗಿ ಸಿಕ್ಕಿದೆ. ಸನ್ ಗ್ರೂಪ್‌ನ ನಿರ್ಮಾಪಕ ಮತ್ತು ನಿರ್ದೇಶಕ ಕಲಾನಿತಿ ಮಾರನ್ ದುಬಾರಿ ಪೋರ್ಷೆ ಕಯೆನ್ನೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ತಮಿಳು ಚಿತ್ರ "ಜೈಲರ್" ಪ್ರಸ್ತುತ ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿ ಬ್ಲಾಕ್‌ಬಾಸ್ಟರ್ ಚಿತ್ರವನ್ನಾಗಿಸಿದ್ದಾರೆ. ವರದಿಗಳ ಪ್ರಕಾರ ಸಿನಿಮಾವು ವಿಶ್ವಾದ್ಯಂತ 600 ಕೋಟಿಗೂ ಹೆಚ್ಚು ಗಳಿಸಿದೆ. ಈ ವಿಜಯೋತ್ಸವವನ್ನು ಸಂಭ್ರಮಿಸುತ್ತಿರುವ ನಿರ್ಮಾಪಕರು ಸಿನಿಮಾದ ಪ್ರಮುಖರಿಗೆ ದುಬಾರಿ ಕಾರುಗಳನ್ನು ಗಿಫ್ಟ್ ನೀಡುತ್ತಿದ್ದಾರೆ.

anirudh-ravichander-received-gift-porsche-cayenne-car

ಈಗಾಗಲೇ ನಟ ರಜಿನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ಅವರಿಗೆ ದುಬಾರಿ ಬಿಎಂಡಬ್ಲ್ಯೂ ಹಾಗೂ ಪೋರ್ಷೆ ಕಾರುಗಳನ್ನು ನೀಡಿರುವ ಚಿತ್ರದ ನಿರ್ಮಾಪಕ ಕಲಾನಿತಿ ಮಾರನ್, ಈಗ ಅನಿರುಧ್‌ಗೆ ಪೋರ್ಷೆ ಕಯೆನ್ನೆ ಕಾರನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಸಂಗೀತವು ನಿರ್ಣಾಯಕ ಪಾತ್ರವನ್ನು ವಹಿಸಿದೆ. ಯಾವ ಮಟ್ಟಕ್ಕೆ ಅಂದ್ರೆ ಇವರು ಸಿನಿಮಾದಲ್ಲಿ ಕೊಟ್ಟ ಹಾಡುಗಳು ಮತ್ತು ಬಿಜಿಎಂ (background music) ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿವೆ.

ಜೈಲರ್ ಚಿತ್ರದಲ್ಲಿ ನಮ್ಮ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ನಟಿಸಿದ್ದು, ಇವರು ಕಾಣಿಸಿಕೊಳ್ಳುವ ಕೇವಲ ಐದು ನಿಮಿಷಗಳಿಗೆ ದೇಶದೆಲ್ಲೆಡೆ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ ಮುಖ್ಯ ಕಾರಣ ಅನಿರುಧ್ ಕೊಟ್ಟಿರುವ ಹಿನ್ನೆಲೆ ಸಂಗೀತ ಅಂದ್ರೆ ತಪ್ಪಾಗುವುದಿಲ್ಲ. ಈಗಾಗಲೇ ಸಿನಿಮಾ ನೋಡಿದವರು ಇದನ್ನು ಖಂಡಿತ ಒಪ್ಪುವುದರಲ್ಲಿ ಅನುಮಾನವಿಲ್ಲ.

anirudh-ravichander-received-gift-porsche-cayenne-car

ಇವರ ಅದ್ಬುತ ಸಂಗೀತಕ್ಕೆ ಅಭಿಮಾನಿಗಳಂತೆಯೇ ನಿರ್ಮಾಪಕರು ಕೂಡ ಮರುಳಾಗಿದ್ದಾರೆ. ಹಾಗಾಗಿಯೇ ಯಶಸ್ಸಿನ ಸಂಭ್ರಮವನ್ನು ಕಾರುಗಳ ಉಡುಗೊರೆ ಮೂಲಕ ತಿಳಿಸಿದ್ದಾರೆ. ಕಾರನ್ನು ಗಿಫ್ಟ್ ನೀಡುವ ವಿಡಿಯೋವನ್ನು ಸನ್ ಟಿವಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ ದುಬಾರಿ BMW X3, BMW iX ಮತ್ತು ಪೋರ್ಷೆ ಕಯೆನ್ನೆ ನಂತಹ ಮೂರು SUV ಗಳನ್ನು ನೋಡಬಹುದು.

ನಿರ್ಮಾಪಕರು ಈ ಮೂರು ಕಾರುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಇವುಗಳಲ್ಲಿ ಅನಿರುಧ್ ತಮ್ಮಿಷ್ಟದಂತೆ ಯಾವುದನ್ನಾದರೂ ಆಯ್ಕೆ ಮಾಡಬಹುದು. ಈ ಹಿಂದೆ ಚಲನಚಿತ್ರ ನಿರ್ಮಾಪಕರು ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ನೀಡುವುದನ್ನು ನಾವು ನೋಡಿದ್ದೇವೆ. ಆದರೇ ಇದೇ ಮೊದಲ ಬಾರಿಗೆ ನಿರ್ಮಾಪಕರು, ಉಡುಗೊರೆ ಸ್ವೀಕರಿಸುವವರಿಗೆ ಆಯ್ಕೆಯನ್ನು ನೀಡಿರುವುದು ಸಿನಿಮಾ ರಂಗವನ್ನು ಅಚ್ಚರಿಗೊಳಿಸಿದೆ.

anirudh-ravichander-received-gift-porsche-cayenne-car

ಅನಿರುಧ್ ಮೂರು ಕಾರುಗಳನ್ನು ಪರಿಶೀಲಿಸಿ ಪೋರ್ಷೆ ಕಯೆನ್ನೆಯನ್ನು ಆಯ್ಕೆ ಮಾಡಿಕೊಂಡು ಕಾರಿನಲ್ಲಿ ಒಂದು ರೌಂಡ್ ಹಾಕಿದ್ದಾರೆ. ಕಲಾನಿತಿ ಮಾರನ್ ಅವರು ಹಣದ ಚೆಕ್ ಕೂಡ ನೀಡಿದ್ದು, ಚೆಕ್‌ನಲ್ಲಿನ ನಿಖರವಾದ ಮೊತ್ತ ತಿಳಿದಿಲ್ಲ. ವರದಿಗಳ ಪ್ರಕಾರ, ಇದು "ಜೈಲರ್" ಚಿತ್ರದ ಲಾಭ ಹಂಚಿಕೆ ಚೆಕ್ ಆಗಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಒಂದನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಕಲಾನಿತಿ ಮಾರನ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಹೊಚ್ಚ ಹೊಸ BMW X7 ಐಷಾರಾಮಿ SUV ಅನ್ನು ಉಡುಗೊರೆಯಾಗಿ ನೀಡಿದರು. ಅವರಿಗೆ BMW i7 EV ಮತ್ತು X7 ನಡುವೆ ಆಯ್ಕೆಯನ್ನು ನೀಡಲಾಯಿತು. ರಜಿನಿ ಅವರು X7 SUV ಅನ್ನು ಆರಿಸಿಕೊಂಡಿದ್ದಾರೆ. ಇನ್ನು ನಿರ್ದೇಶಕ ನೆಲ್ಸನ್ ಅವರಿಗೂ ಇದೇ ರೀತಿಯ ಅಯ್ಕೆ ನೀಡಿದ್ದು, ಇವರು ಕೂಡ ಪೋರ್ಷೆ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅನಿರುಧ್ ಪಡೆದಿರುವ Porsche Cayenne ಪ್ರಪಂಚದಾದ್ಯಂತದ ಸೆಲೆಬ್ರಿಟಿಗಳಲ್ಲಿ ಜನಪ್ರಿಯ SUV ಆಗಿದೆ. ಈ ಕಾರು ಎಲ್ಲಾ ಆಧುನಿಕ ವೈಶಿಷ್ಟ್ಯಗಳಾದ ಲೆದರ್ ಅಪ್ಹೋಲ್ಸ್ಟರಿ, ಮಲ್ಟಿ-ಝೋನ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕಲ್ ಅಡ್ಜೆಸ್ಟಬಲ್ ಸೀಟುಗಳು, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ.

ಅತ್ಯಂತ ಶಕ್ತಿಶಾಲಿ SUV ಆಗಿದ್ದು, 3.0-ಲೀಟರ್ V6 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಇದು 348 Bhp ಪವರ್ ಮತ್ತು 500 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಎಕ್ಸ್ ಶೋ ರೂಂ ಬೆಲೆ 1.36 ಕೋಟಿ ರೂ. ಇದೆ. ಅನಿರುದ್ಧ್ ಅವರ ಗ್ಯಾರೇಜ್‌ನಲ್ಲಿ ಫೋರ್ಡ್ ಮಸ್ಟಾಂಗ್ ಸೇರಿದಂತೆ ಉತ್ತಮ ಕಾರುಗಳ ಸಂಗ್ರಹವಿದೆ.

More from DriveSpark

Article Published On: Tuesday, September 5, 2023, 13:43 [IST]
English summary
Anirudh ravichander received gift porsche cayenne car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+