ನೋಡ ನೋಡುತ್ತಿದ್ದಂತೆ ಬೈಕ್ ಸವಾರರ ಮೇಲೆ ಹರಿದ ಸರ್ಕಾರಿ ಬಸ್- ದುರಂತದಲ್ಲಿ ಮೂವರು ದುರ್ಮರಣ

ಬ್ರೇಕ್ ಫೇಲ್ ಆದ ಹಿನ್ನೆಲೆ ಸರ್ಕಾರಿ ಬಸ್ ಒಂದು ಬೈಕ್ ಸವಾರರ ಮೇಲೆ ಹರಿದ ಪರಿಣಾಮ ಮೂವರು ದುರಂತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

By Praveen

ಬ್ರೇಕ್ ಫೇಲ್ ಆದ ಹಿನ್ನೆಲೆ ಸರ್ಕಾರಿ ಬಸ್ ಒಂದು ಬೈಕ್ ಸವಾರರ ಮೇಲೆ ಹರಿದ ಪರಿಣಾಮ ಮೂವರು ದುರಂತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ನೋಡ ನೋಡುತ್ತಿದ್ದಂತೆ ಬೈಕ್ ಸವಾರರ ಮೇಲೆ ಹರಿದ ಸರ್ಕಾರಿ ಬಸ್

ಆಂಧ್ರಪ್ರದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ ಬ್ರೇಕ್‍ಫೇಲ್ ಆಗಿದ್ದರ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ.

ನೋಡ ನೋಡುತ್ತಿದ್ದಂತೆ ಬೈಕ್ ಸವಾರರ ಮೇಲೆ ಹರಿದ ಸರ್ಕಾರಿ ಬಸ್

ವಿಜಯವಾಡ ನಗರದ ಅಜೀತ್ ನಗರದ ಪ್ರಮುಖ ರಸ್ತೆಯಲ್ಲೇ ಈ ಅಪಘಾತ ಸಂಭವಿಸಿದ್ದು, ಹೋಟೆಲ್ ಒಂದರ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿವೆ. ಇದಲ್ಲದೇ ಅಪಘಾತದ ವಿಡಿಯೋ ನೋಡುಗರ ಮೈಜುಂ ಎನ್ನಿಸುವಂತೆ ಮಾಡಿವೆ.

Recommended Video

[Kannada] 2018 Hyundai Verna Indian Model Unveiled - DriveSpark
ನೋಡ ನೋಡುತ್ತಿದ್ದಂತೆ ಬೈಕ್ ಸವಾರರ ಮೇಲೆ ಹರಿದ ಸರ್ಕಾರಿ ಬಸ್

ಅಪಘಾತದಲ್ಲಿ ವಿಜಯವಾಡ ನಿವಾಸಿಗಳಾದ ಕುರ್ಶಿದ್(32), ಅಶ್ರತ್(12) ಎಂಬವರು ಮೃತ ಪಟ್ಟಿದ್ದು, ಘಟನೆಯಲ್ಲಿ ಇನ್ನೂ ಹಲವು ಜನರು ಗಾಯಗೊಂಡು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ನೋಡ ನೋಡುತ್ತಿದ್ದಂತೆ ಬೈಕ್ ಸವಾರರ ಮೇಲೆ ಹರಿದ ಸರ್ಕಾರಿ ಬಸ್

ಇನ್ನು ಅಪಘಾತವಾದ ಬಸ್ ವಿಜಯನಗರದ ವ್ಯಾಂಬಾಯ್ ನಿಲ್ದಾಣದಿಂದ ಪಂಡಿತ್ ನೆಹರು ಬಸ್ ನಿಲ್ದಾಣ ಮಾರ್ಗವಾಗಿ ಪ್ರಯಾಣ ಆರಂಭಿಸಿತ್ತು. ಆದ್ರೆ ಅಜೀತ್ ನಗರ ಫ್ಲೈ ಓವರ್ ಬಳಿ ಬಂದಾಗ ಬ್ರೇಕ್ ಫೇಲ್ ಆಗಿ ಆಟೋ, ಬೈಕ್ ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ನೋಡ ನೋಡುತ್ತಿದ್ದಂತೆ ಬೈಕ್ ಸವಾರರ ಮೇಲೆ ಹರಿದ ಸರ್ಕಾರಿ ಬಸ್

ಈ ವೇಳೆ ಮೂವರು ಬೈಕ್ ಸವಾರರು ಗಂಭೀರ ಗಾಯಗಳಾದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಟೋದಲ್ಲಿ ಇಬ್ಬರು ಮತ್ತು ಇನ್ನೊಂದು ಬೈಕ್‌ನಲ್ಲಿದ್ದ ಮತ್ತಿಬ್ಬರ ತಲೆಗೆ ಗಂಭೀರ ಗಾಯಗಳಾಗಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ನೋಡ ನೋಡುತ್ತಿದ್ದಂತೆ ಬೈಕ್ ಸವಾರರ ಮೇಲೆ ಹರಿದ ಸರ್ಕಾರಿ ಬಸ್

ಘಟನೆ ನಂತರ ಫ್ಲೈಓವರ್‍‌ನ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತಿದ್ದು, ಭೀಕರ ಅಪಘಾತದಲ್ಲಿ ಬಸ್‌ನಲ್ಲಿದ್ದ ನಿರ್ವಾಹಕ ಮತ್ತು ಕೆಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.

ನೋಡ ನೋಡುತ್ತಿದ್ದಂತೆ ಬೈಕ್ ಸವಾರರ ಮೇಲೆ ಹರಿದ ಸರ್ಕಾರಿ ಬಸ್

ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ವಿಜಯವಾಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

ಸಿಸಿಟಿವಿಯಲ್ಲಿ ದಾಖಲಾಗಿರುವ ಅಪಘಾತದ ದೃಶ್ಯ ಇಲ್ಲಿದೆ ನೋಡಿ.

Trending On DriveSpark Kannada:

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

More from DriveSpark

Article Published On: Friday, October 27, 2017, 18:38 [IST]
English summary
Read in Kannada about 3 killed as state run bus hits pedestrians, rams into vehicles in Vijayawada.
Read more on accident ಅಪಘಾತ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+