ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಕಾರು ಮಾಲೀಕನ ವಿಡಿಯೋ ವೈರಲ್

Written By:

ಒನ್ ವೇ ನಲ್ಲಿ ಬರುತ್ತಿದ್ದ ಕಾರಿಗೆ ಬೈಕ್‌ ಸವಾರನೊಬ್ಬ ಅಡ್ಡಗಟ್ಟಿ ರಸ್ತೆ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾರು ಮಾಲೀಕನು ಬೈಕ್ ಸವಾರನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಹಲ್ಲೆ ಮಾಡುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಕಾರು ಮಾಲೀಕನ ವಿಡಿಯೋ ವೈರಲ್

ತನ್ನ ಕಾರು ನಿಲ್ಲಿಸಿದ ಎಂಬ ಕಾರಣಕ್ಕೆ ಬೈಕ್‌ ಸವಾರನ ಮೇಲೆ ಕಾರು ಮಾಲೀಕ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, ಕಾರು ಮಾಲೀಕನ ಗೂಂಡಾ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಕಾರು ಮಾಲೀಕನ ವಿಡಿಯೋ ವೈರಲ್

ಒನ್ ವೇ ನಲ್ಲಿ ಬರುವ ಮೂಲಕ ರಸ್ತೆ ನಿಯಮ ಉಲ್ಲಂಘಿಸಿದಲ್ಲದೆ ಎದುರಿಗೆ ಬಂದ ಬೈಕ್‌ಗೆ ಕಾರು ಮಾಲೀಕ ಡಿಕ್ಕಿ ಹೊಡೆಸಿದ್ದಾನೆ. ಇದನ್ನು ಪ್ರಶ್ನಿಸಿದ ಬೈಕ್ ಸವಾರನು ಒನ್ ವೇ ಬರುತ್ತಿರುವ ನಿಮ್ಮ ಕ್ರಮ ಸರಿ ಇಲ್ಲವೆಂದು ವಾದಿಸಿದ್ದಾನೆ.

Recommended Video - Watch Now!
[Kannada] Bajaj Pulsar NS200 ABS Launched In India - DriveSpark
ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಕಾರು ಮಾಲೀಕನ ವಿಡಿಯೋ ವೈರಲ್

ಇಷ್ಟಕ್ಕೆ ಸುಮ್ಮನಾಗದ ಕಾರು ಮಾಲೀಕನು ಬೈಕ್ ಸವಾರನಿಗೆ ಬಾಯಿಗೆ ಬಂದತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದರಿಂದ ಕೂಪಿಗೊಂಡ ಬೈಕ್ ಸವಾರ ಕೂಡಾ ಕಾರು ಮಾಲೀಕನ ಜೊತೆ ವಾಗ್ವಾದಕ್ಕೆ ಇಳಿದ್ದಾನೆ.

ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಕಾರು ಮಾಲೀಕನ ವಿಡಿಯೋ ವೈರಲ್

ಈ ವೇಳೆ ಬೈಕ್ ಮೇಲಿದ್ದ ಬೈಕ್ ಸವಾರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಕಾರು ಮಾಲೀಕ ತದನಂತರ ಬೈಕ್ ಮೇಲಿಂದ ಕೆಳಕ್ಕೆ ಕೆಡವಿದ್ದಾನೆ. ಈ ವೇಳೆ ಇಬ್ಬರ ಮಧ್ಯೆಯು ಮಾರಾಮಾರಿ ನಡೆದಿದ್ದು, ಈ ವೇಳೆ ಸಾರ್ವಜನಿಕರ ಮಧ್ಯಪ್ರವೇಶದಿಂದ ಜಗಳ ಶಮನವಾಗಿದೆ.

ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಕಾರು ಮಾಲೀಕನ ವಿಡಿಯೋ ವೈರಲ್

ಆದ್ರೆ ರಸ್ತೆ ನಿಯಮ ಉಲ್ಲಂಘಿಸಿದ್ದಲ್ಲದೇ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಕಾರು ಮಾಲೀಕನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ವಿಡಿಯೋದಲ್ಲಿನ ದೃಶ್ಯಗಳನ್ನು ಆಧರಿಸಿ ಭೋಪಾಲ್ ಪೊಲೀಸರು ಕಾರು ಮಾಲೀಕನ ವಿರುದ್ಧ ದೂರು ದಾಖಲಿಸಿದ್ದಾರೆ.

ರಸ್ತೆ ಮಧ್ಯೆಯೇ ಬೈಕ್ ಸವಾರನ ಮಧ್ಯೆ ಹಲ್ಲೆ ಮಾಡುತ್ತಿರುವ ಕಾರು ಮಾಲೀಕನ ವಿಡಿಯೋ ಇಲ್ಲಿದೆ ನೋಡಿ.

Trending On DriveSpark Kannada:

ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

English summary
Read in Kannada about Arrogant driver thrashes biker in Bhopal.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark