ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಜನರಿಗಾಗಿ ಕೆಲಸ ಮಾಡುವುದು ಸರ್ಕಾರಗಳ ಜವಾಬ್ದಾರಿ. ಸರ್ಕಾರಗಳು ಜನರಿಗೆ ಪ್ರಯೋಜನವಾಗುವಂತಹ ಕೆಲಸಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಲೇ ಇರುತ್ತಾರೆ. ಸರ್ಕಾರಗಳು ಕೈಗೊಳ್ಳುವ ಕೆಲವು ಕ್ರಮಗಳು ಕೆಲವರಿಗೆ ಅನಾನುಕೂಲವನ್ನುಂಟು ಮಾಡಿದರೆ, ಕೆಲವರಿಗೆ ಪ್ರಯೋಜನಕಾರಿಯಾಗುತ್ತವೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಕರೋನಾ ವೈರಸ್ ಹರಡುವಿಕೆ ಕಾರಣಕ್ಕೆ ಜಾರಿಗೊಳಿಸಲಾದ ಕ್ರಮಗಳು.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಈ ನಿಟ್ಟಿನಲ್ಲಿ ಎನ್‌ಡಬ್ಲ್ಯುಕೆಆರ್‌ಟಿಸಿ ಎಂದು ಕರೆಯಲ್ಪಡುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಬಸ್‌ಗಳಲ್ಲಿ ಪೋಸ್ಟರ್‌ಗಳನ್ನು ಹಾಕಿದೆ. ಈ ಪೋಸ್ಟರ್‌ಗಳಲ್ಲಿ ಸರ್ಕಾರಿ ಬಸ್ ನಿರ್ವಾಹಕರನ್ನು ಚಿಲ್ಲರೆ ನೀಡುವಂತೆ ಒತ್ತಾಯಿಸುವುದು, ಸರ್ಕಾರಿ ನೌಕರನನ್ನು ಕೆಲಸ ಮಾಡದಂತೆ ತಡೆಯುವಂತೆ ಆಗುತ್ತದೆ ಎಂದು ಹೇಳಿದೆ.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಪದೇ ಪದೇ ಚಿಲ್ಲರೆ ನೀಡುವಂತೆ ಒತ್ತಾಯಿಸುವ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಲಾಗುತ್ತದೆ. ಆರೋಪ ಸಾಬೀತಾದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎನ್‌ಡಬ್ಲ್ಯುಕೆಆರ್‌ಟಿಸಿ, ಕರ್ನಾಟಕದ ಒಟ್ಟು 6 ಜಿಲ್ಲೆಗಳಲ್ಲಿ ಬಸ್ ಸೇವೆಯನ್ನು ನೀಡುತ್ತದೆ. ಈ 6 ಜಿಲ್ಲೆಗಳು ಸುಮಾರು 4,428 ಗ್ರಾಮಗಳನ್ನು ಹೊಂದಿವೆ. ಈ ಎಲ್ಲಾ ಗ್ರಾಮಗಳಿಗೂ ಈಗ ಜಾರಿಗೆ ತಂದಿರುವ ಹೊಸ ಕಾನೂನು ಅನ್ವಯವಾಗಲಿದೆ.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಕರ್ನಾಟಕದಲ್ಲಿ ಮಾತ್ರವಲ್ಲದೆ ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಹಾಗೂ ಕಂಡಕ್ಟರ್‌ಗಳ ನಡುವೆ ಚಿಲ್ಲರೆ ವಿಚಾರಕ್ಕೆ ಜಗಳವಾಗುವುದು ಸಹಜ ಸಂಗತಿಯಾಗಿದೆ. ಕೆಲವೊಮ್ಮೆ ಈ ಜಗಳಗಳು ವಿಕೋಪಕ್ಕೂ ತಿರುಗಿವೆ. ಇದರಿಂದ ಕೆಲವು ನಿಮಿಷ ಪ್ರಯಾಣ ತಡವಾದರೂ ರಸ್ತೆ ಬದಿಯಲ್ಲಿ ಬಸ್ ನಿಲ್ಲಿಸಿ ಬಸ್ ನಿಂದ ಇಳಿಯಬೇಕಾದವರಿಗೆ ನಿರ್ವಾಹಕರು ಚಿಲ್ಲರೆ ನೀಡುತ್ತಾರೆ.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಇಂತಹ ಘಟನೆಗಳನ್ನು ಹಲವು ನಗರಗಳಲ್ಲಿ ಪ್ರತಿ ನಿತ್ಯ ಕಾಣಬಹುದು. ನಮ್ಮ ಬೆಂಗಳೂರಿನಲ್ಲಿ ಸಂಚರಿಸುವ ಬಸ್ಸುಗಳ ನಿರ್ವಾಹಕರು ಎಲ್ಲರಿಗೂ ಟಿಕೆಟ್ ನೀಡಲು ಹಾಗೂ ಚಿಲ್ಲರೆ ನೀಡಲು ಈ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ. ಈ ಹೊಸ ನಿಯಮದಿಂದ ಇನ್ನು ಮುಂದೆ ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವವರು ತಾವು ಕೊಳ್ಳುವ ಟಿಕೆಟಿಗೆ ಸರಿಯಾದ ಚಿಲ್ಲರೆ ಕೊಂಡೊಯ್ಯುವುದು ಕಡ್ಡಾಯವಾಗಿದೆ.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಆದರೆ ಕರ್ನಾಟಕದ ವಾಯವ್ಯ ಗ್ರಾಮಗಳಲ್ಲಿ ಈ ನಿಯಮ ಜಾರಿಗೊಳಿಸಿರುವುದು ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ. ಈ ಪ್ರಕಟಣೆಯು ಪ್ರಯಾಣಿಕರಿಗೆ ಸರಿಯಾದ ಚಿಲ್ಲರೆ ತರಲು ಕಾರಣವಾಗಿದ್ದರೂ, ಈ ಪ್ರದೇಶದ ಬಹುತೇಕ ಪ್ರಯಾಣಿಕರು ಎನ್‌ಡಬ್ಲ್ಯುಕೆಆರ್‌ಟಿಸಿಯ ಈ ಪ್ರಕಟಣೆ ನೋಡಿ ಅಚ್ಚರಿಗೊಂಡಿರುವುದು ಸುಳ್ಳಲ್ಲ. ಬಾಗಲಕೋಟೆ ಭಾಗದಲ್ಲಿ ಪ್ರತಿ ನಿತ್ಯ ಸರ್ಕಾರಿ ಬಸ್‌ಗಳನ್ನು ಬಳಸುವ ಪ್ರಯಾಣಿಕರೊಬ್ಬರು, ಬಸ್ ಹತ್ತುವ ಮೊದಲು ನನ್ನ ಬಳಿ ಸರಿಯಾದ ಟಿಕೆಟ್ ಮೊತ್ತವಿದೆಯೇ ಎಂದು ಒಮ್ಮೆ ನನ್ನ ಪರ್ಸ್ ಪರಿಶೀಲಿಸಿದೆ.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಸರಿಯಾದ ಟಿಕೆಟ್ ಮೊತ್ತವಿದೆ ಎಂದು ತಿಳಿದ ನಂತರ ನನ್ನ ಪ್ರಯಾಣವನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ. ಸರಿಯಾಗಿ ಚಿಲ್ಲರೆ ಇಟ್ಟುಕೊಳ್ಳದೇ ಚಿಲ್ಲರೆ ನೀಡುವಂತೆ ನಿರ್ವಾಹಕರನ್ನು ಒತ್ತಾಯಿಸುವವರನ್ನು 3 ವರ್ಷ ಜೈಲಿಗೆ ಕಳುಹಿಸುವ ನಿರ್ಧಾರದಿಂದ ಪ್ರಯಾಣಿಕರು ಇನ್ನು ಮುಂದೆ ಸರ್ಕಾರಿ ಬಸ್ ಗಳ ಬದಲು ಖಾಸಗಿ ಬಸ್‌ಗಳಿಗೆ ಆದ್ಯತೆ ನೀಡುತ್ತಾರೆ.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಈ ಬಗ್ಗೆ ಹೇಳಿಕೆ ನೀಡಿರುವ ಎನ್‌ಡಬ್ಲ್ಯುಕೆಆರ್‌ಟಿಸಿ ಸಂಸ್ಥೆಯು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 21 ರ ಅಡಿಯಲ್ಲಿ, ಸುಪ್ರೀಂ ಕೋರ್ಟ್ ಎನ್‌ಡಬ್ಲ್ಯುಕೆಆರ್‌ಟಿಸಿ ಚಾಲಕರು ಹಾಗೂ ಕಂಡಕ್ಟರ್‌ಗಳನ್ನು ಸಾರ್ವಜನಿಕ ಸೇವಕರು ಎಂದು ಗುರುತಿಸಿದೆ. ಅವರ ಕೆಲಸಕ್ಕೆ ಅಡ್ಡಿಪಡಿಸುವುದು ಅಥವಾ ಚಾಲಕನ ಮೇಲೆ ದಾಳಿ ಮಾಡುವುದು ಅಥವಾ ಕಂಡಕ್ಟರ್ ಕೆಲಸ ಮಾಡದಂತೆ ತಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಇದು ಐಪಿಸಿ ಸೆಕ್ಷನ್ 186 ರ ಅಡಿಯಲ್ಲಿ ಕನಿಷ್ಠ 3 ತಿಂಗಳ ಜೈಲು ಶಿಕ್ಷೆ ಹಾಗೂ ಸೆಕ್ಷನ್ 332 ಮತ್ತು 335 ರ ಅಡಿಯಲ್ಲಿ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಹೊಂದಿರುತ್ತದೆ ಎಂದು ತಿಳಿಸಿದೆ. ಬಸ್‌ಗಳಲ್ಲಿ ಚಿಲ್ಲರೆ ಸಂಬಂಧಿತ ಜಗಳಗಳನ್ನು ತಪ್ಪಿಸಲು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ನಗದು ರಹಿತ ವಹಿವಾಟುಗಳನ್ನು ತರಲು ಉತ್ಸುಕವಾಗಿದೆ. ಈಗ ಪ್ರತಿಯೊಬ್ಬರ ಬಳಿಯೂ ಮೊಬೈಲ್ ಇದ್ದರೂ ಮೊಬೈಲ್ ಫೋನ್ ಮೂಲಕ ಡಿಜಿಟಲ್ ವಹಿವಾಟು ನಡೆಸುವವರ ಸಂಖ್ಯೆ ಕಡಿಮೆ ಎಂಬುದು ಗಮನಾರ್ಹ.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಬಸ್ಸುಗಳಲ್ಲಿ ಡಿಜಿಟಲ್ ಟಿಕೆಟ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ಆಗ ಮಾತ್ರ ಬಸ್‌ಗಳಲ್ಲಿ ಚಿಲ್ಲರೆ ಸಂಬಂಧಿತ ಜಗಳಗಳನ್ನು ತಡೆಯಬಹುದು. ನಮ್ಮ ರಾಜ್ಯದ ಸರ್ಕಾರಿ ಬಸ್ಸುಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ಬರಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದು.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಕೆಲವು ತಿಂಗಳುಗಳ ಹಿಂದೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಎನ್‌ಇಕೆಆರ್‌ಟಿಸಿ) ತನ್ನ ಬಸ್‌ಗಳನ್ನು ಕೋವಿಡ್ 19 ಮೊಬೈಲ್ ಲಸಿಕೆ ಕೇಂದ್ರಗಳಾಗಿ ಪರಿವರ್ತಿಸಿ ದೂರದ ಹಳ್ಳಿಗಳನ್ನು ತಲುಪುತ್ತಿತ್ತು. ಕೆಲವು ಗ್ರಾಮಗಳಲ್ಲಿ ಯಾವುದೇ ಆಸ್ಪತ್ರೆಗಳಾಗಲಿ ಅಥವಾ ಲಸಿಕೆ ಕೇಂದ್ರಗಳಾಗಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಬಸ್ಸುಗಳನ್ನೇ ಲಸಿಕಾ ಕೇಂದ್ರಗಳಾಗಿ ಪರಿವರ್ತಿಸಲಾಗಿತ್ತು.

ಚಿಲ್ಲರೆ ವಿಷಯಕ್ಕೆ ಜೈಲಿಗಟ್ಟಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ನಿಯಮ

ಎನ್‌ಕೆಆರ್‌ಟಿಸಿ ಕೇವಲ 24 ಗಂಟೆಗಳಲ್ಲಿ ಎರಡು ಬಸ್‌ಗಳನ್ನು ಲಸಿಕೆ ಕೇಂದ್ರಗಳಾಗಿ ಪರಿವರ್ತಿಸಿತ್ತು. ಈ ಬಸ್ಸುಗಳು ಯಾವುದೇ ಆಸ್ಪತ್ರೆಗಿಂತ ಕಡಿಮೆಯಿರಲಿಲ್ಲ. ನೋಂದಣಿ ಮಾಡಲು, ಲಸಿಕೆ ನೀಡಲು ಹಾಗೂ ವಿಶ್ರಾಂತಿ ಪಡೆಯಲು ಈ ಬಸ್ಸಿನಲ್ಲಿ ಪ್ರತ್ಯೇಕ ಸ್ಥಳ ಕಲ್ಪಿಸಲಾಗಿತ್ತು.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Asking change in nwkrtc buses will send passengers to jail details
Story first published: Friday, December 10, 2021, 13:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X